ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav g20-india-2023

ಮುಂದಿನ ದಶಕವನ್ನು ಪ್ರವೇಶಿಸಲು ಸ್ವಚ್ಛ ಭಾರತ ಮಿಷನ್ ಸಜ್ಜು 


ಮುಂದಿನ 15 ದಿನಗಳಲ್ಲಿ 5 ಲಕ್ಷ ಕೊಳಕಾದ ತಾಣಗಳನ್ನು ಸ್ವಚ್ಛಗೊಳಿಸಲು ರಾಜ್ಯಗಳು ಮುಂದು, ಕೇಂದ್ರದ ಅಂದಾಜಿನ 2 ಲಕ್ಷವನ್ನು ಮೀರಿ ದೇಶವು ದಾಖಲೆ ಬರೆಯಲು ಸಿದ್ಧ

ಲಕ್ಷಾಂತರ ಜನರ ಸ್ವಯಂಪ್ರೇರಿತ ಪ್ರಯತ್ನದಿಂದ ವಿಶಿಷ್ಟ ಅಭಿಯಾನ ಆರಂಭ

Posted On: 17 SEP 2024 2:57PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2014ರಲ್ಲಿ ಸ್ವಚ್ಛ ಭಾರತ ಮಿಷನ್ ಗೆ ಚಾಲನೆ ನೀಡಿದ್ದಾಗ ಕೆಲವರು ಮಾತ್ರ ಪರಿವರ್ತನಾತ್ಮಕ ಪರಿಣಾಮಗಳ ಬಗ್ಗೆ ನಿರೀಕ್ಷಿಸಿದ್ದರು. ನಡವಳಿಕೆ ಬದಲಾವಣೆಯ ಕರೆ ಜಾಗತಿಕ ಮಾನ್ಯತೆ ಉಪಕ್ರಮವಾಗಿ ಬದಲಾವಣೆಯಾಗಿದೆ, ನವಜಾತ ಶಿಶು ಮರಣ ಮತ್ತು ರೋಗಗಳು ತಗ್ಗಿವೆ, ಬಾಲಕಿಯರ ಶಾಲಾ ಹಾಜರಾತಿ ಹೆಚ್ಚಿದೆ, ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳು ತಗ್ಗಿವೆ ಮತ್ತು ಜೀವನೋಪಾಯ ಸುಧಾರಿಸಿದೆ, ಸ್ವಚ್ಛ ಭಾರತ ಮಿಷನ್ ತನ್ನ 10ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹಿ ಸೇವಾ -ಎಸ್ ಎಚ್ ಎಸ್) 2024 ಅಭಿಯಾನವು 'ಸ್ವಭಾವ ಸ್ವಚ್ಛತಾ - ಸಂಸ್ಕಾರ ಸ್ವಚ್ಛತಾ' ಎಂಬ ಘೋಷ ವ್ಯಾಕ್ಯವನ್ನು ಅಳವಡಿಸಿಕೊಂಡಿದೆ. ರಾಜಸ್ಥಾನದ ಜುಂಜುನುವಿನಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಮುಖ್ಯ ಅತಿಥಿ, ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಎಂ.ಎಲ್. ಖಟ್ಟರ್, ಸಚಿವರು, ರಾಜಸ್ಥಾನದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಶ್ರೀ ಅವಿನಾಶ್ ಗೆಹ್ಲೋಟ್ ಮತ್ತು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 

ಎಸ್ ಎಚ್ ಎಸ್ 2024 ರ ಮೂರು ಸ್ತಂಭಗಳ ಅಡಿಯಲ್ಲಿ, ದೇಶಾದ್ಯಂತ ಸುಮಾರು 11 ಲಕ್ಷಕ್ಕೂ ಅಧಿಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಸುಮಾರು 5 ಲಕ್ಷ ಶುಚಿತ್ವದ ಗುರಿ ಘಟಕಗಳು- ಸ್ವಚ್ಛತಾ ಲಕ್ಷಿತ್ ಏಕಾಯಿಗಳನ್ನು ಸಾಮೂಹಿಕ ಸ್ವಚ್ಛತಾ ಆಂದೋಲನಗಳಿಗಾಗಿ ಗುರುತಿಸಲಾಗಿದೆ. ಹದಿನೈದು ದಿನಗಳಲ್ಲಿ, ಸ್ವಚ್ಛತಾ ಮೇ ಜನ್ ಭಾಗಿದಾರಿ ಕಾರ್ಯಕ್ರಮಗಳನ್ನು ಸಹ ಯೋಜಿಸಲಾಗುತ್ತಿದೆ. ಈವರೆಗೆ, ತಾಯಿ ಹೆಸರಿನಲ್ಲಿ ಒಂದು ಗಿಡ ನೆಡಿ (ಏಕ್ ಪೆಡ್ ಮಾ ಕೆ ನಾಮ್)  ಕಾರ್ಯಕ್ರಮಗಳ ಅಡಿಯಲ್ಲಿ 36 ಸಾವಿರ ಮರ ನೆಡುವ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ರಾಷ್ಟ್ರಾದ್ಯಂತ 70,000 ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳಲ್ಲಿ ಸಫಾಯಿ ಮಿತ್ರರು ಭಾಗವಹಿಸಲಿದ್ದಾರೆ. ನಾಗರಿಕರು ಈ ಎಸ್ ಎಚ್ ಎಸ್ ಸೇವಾ ಚಟುವಟಿಕೆಗಳನ್ನು ಆನ್‌ ಲೈನ್‌ ಪೋರ್ಟಲ್ ಮೂಲಕ ಟ್ರ್ಯಾಕ್‌ ಮಾಡಬಹುದು https://swachhatahiseva.gov.in/ .

ಕಳೆದ ದಶಕದಲ್ಲಿ, ಸ್ವಚ್ಛ ಭಾರತ ಮಿಷನ್ ನಾಗರಿಕರು, ಸಂಸ್ಥೆಗಳು, ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಿರಂತರ ಬದ್ಧತೆಯ ಮೂಲಕ ಹಳ್ಳಿಗಳು ಮತ್ತು ನಗರಗಳನ್ನು ಪರಿವರ್ತಿಸಿದೆ, ಇವೆಲ್ಲವೂ ಸ್ವಚ್ಛತೆಯ ಹಂಚಿಕೆಯ ದೃಷ್ಟಿಯಿಂದ ಒಂದಾಗಿವೆ. ದೇಶದಾದ್ಯಂತ ಈ ಹಿಂದೆ ಸುರಕ್ಷಿತ ನೈರ್ಮಲ್ಯದ ಕೊರತೆ ಎದುರಿಸುತ್ತಿದ್ದ ಸುಮಾರು 12 ಕೋಟಿ ಕುಟುಂಬಗಳಿಗೆ ಈಗ ಶೌಚಾಲಯಗಳನ್ನು ಒದಗಿಸಲಾಗಿದೆ.

ಎಸ್ ಎಸ್ ಎಸ್ 2024 ಕಾರ್ಯಕ್ರಮದ ಅಂಗವಾಗಿ  ರಾಜಸ್ಥಾನದ ಜುಂಜುನುವಿನಲ್ಲಿ ಗೌರವಾನ್ವಿತ ಉಪರಾಷ್ಟ್ರಪತಿಗಳು ದೇಶಾದ್ಯಂತ ಸ್ವಚ್ಛತೆ ಮತ್ತು ಪರಿವರ್ತನೆಗಾಗಿ 5 ಲಕ್ಷಕ್ಕೂ ಅಧಿಕ ಸ್ವಚ್ಛತೆಯ ಗುರಿ ಘಟಕಗಳನ್ನು ಗುರುತಿಸಿರುವುದನ್ನು ಶ್ಲಾಘಿಸಿದರು ಮತ್ತು ಇಂತಹ ಕಾರ್ಯಕ್ರಮಗಳಲ್ಲಿ ವ್ಯಾಪಕ ಜನರು ಭಾಗವಹಿಸಬೇಕೆಂದು ಕರೆ ನೀಡಿದರು. ಶ್ರೀ ಜಗದೀಪ್ ಧನಕರ್ ಅವರು ಮೋಡ ಪಹಾರ್‌ನಲ್ಲಿ  13.18 ಕೋಟಿ ರೂ. ಮೊತ್ತದ 65 ಟಿಪಿಡಿ ಸಾಮರ್ಥ್ಯದ ಆರ್‌ಡಿಎಫ್ ಮತ್ತು ಕಾಂಪೋಸ್ಟ್ ಸ್ಥಾವರದ ಸಮಗ್ರ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಸ್ವಚ್ಛ ಭಾರತ ಮಿಷನ್ - ನಗರ ಅಡಿಯಲ್ಲಿ ಜುಂಜುನು ಜನರಿಗೆ ಸಮರ್ಪಿಸಿದರು. ಬಗ್ಗರ್ ರಸ್ತೆಯಲ್ಲಿ 500 ಕಿಲೋವ್ಯಾಟ್ ಸೌರಶಕ್ತಿ ಘಟಕವನ್ನು ಸಹ ಇದೇ ವೇಳೆ ಉದ್ಘಾಟಿಸಲಾಯಿತು. 

ಕೇಂದ್ರ ಸಚಿವ ಎಂ.ಎಲ್ ಖಟ್ಟರ್ ಅವರೊಂದಿಗೆ 200 ಕ್ಕೂ ಅಧಿಕ ಎನ್‌ಸಿಸಿ ಕೆಡೆಟ್‌ಗಳು ಮತ್ತು 100 ಮೇರಾ ಯುವ (ಎಂವೈ) ಭಾರತ ಸ್ವಯಂಸೇವಕರು ಜುಂಜುನುವಿನಲ್ಲಿ ಸ್ವಚ್ಛತಾ ಗುರಿ ಘಟಕಗಳು (ಸಿಟಿಯು) ಸ್ಥಳದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸೇರುವುದರೊಂದಿಗೆ ದಿನದ ಕಾರ್ಯಕ್ರಮ  ಆರಂಭವಾಯಿತು. ಬಳಿಕ 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನದ ಅಡಿಯಲ್ಲಿ ಮರ ನೆಡುವ ಸಮಾರಂಭ ಮತ್ತು ಎಸ್ ಎಚ್ ಎಸ್ 2024 ಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಭಾರತ ಸ್ವಚ್ಛತೆಯ ಮನೋಭಾವದಲ್ಲಿ ಜಾಗತಿಕ ಉದಾಹರಣೆಯಾಗಿದೆ, ಹೂಡಿಕೆ ಮತ್ತು ಅವಕಾಶಗಳಿಗೆ ಅತ್ಯಾಕರ್ಷಕ ಹಾಗೂ ನೆಚ್ಚಿನ ತಾಣವಾಗಿದೆ. ಸರ್ಕ್ಯುಲರ್ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಿ ಮಾತನಾಡಿದ ಅವರು, ಹಿಂದೆ ನಾವು ತ್ಯಾಜ್ಯದ ಸುತ್ತ ಸುತ್ತುವರಿದಿದ್ದೆವು, ಆದರೆ ಇದೀಗ ತ್ಯಾಜ್ಯವು ನಮ್ಮ ಆರ್ಥಿಕತೆಯಲ್ಲಿ ಸಬಲೀಕರಣ ಸಾಧನವಾಗಿದೆ’’ ಎಂದರು. ಗೌರವಾನ್ವಿತ ಉಪರಾಷ್ಟ್ರಪತಿ ಅವರು ಮೈ ಭಾರತ್ ಉಪಕ್ರಮವನ್ನು ಶ್ಲಾಘಿಸಿದರು, ಅದರಡಿ ಸುಮಾರು 1.5 ಕೋಟಿ ಯುವ ಜನತೆ ವಿಕಸಿತ ಭಾರತ ಸಾಕಾರಕ್ಕೆ ಕೈ ಜೋಡಿಸಲು ಮುಂದೆ ಬಂದಿದ್ದಾರೆ, ಅವರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛ ಭಾರತ್ ಆಂದೋಲನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ವಿಕಸಿತ ಭಾರತದ ಈ ಅಭಿವೃದ್ಧಿ ಪಯಣಕ್ಕೆ ವಿಶೇಷವಾಗಿ ಸ್ವಚ್ಛತಾ ಮೂಲಕ ಕೊಡುಗೆ ನೀಡಲು ಮತ್ತು ಸೇರ್ಪಡೆಯಾಗುವಂತೆ ಎಲ್ಲಾ ನಾಗರಿಕರಿಗೆ ಅವರು ಕರೆ ನೀಡಿದರು.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ಇಂಧನ ಸಚಿವ ಶ್ರೀ ಎಂ.ಎಲ್‌. ಖಟ್ಟರ್‌ ತಮ್ಮ ಭಾಷಣದಲ್ಲಿ ಈ ವರ್ಷದ ಅಭಿಯಾನದಲ್ಲಿ “ಸ್ವಚ್ಛತೆಯನ್ನು ಸ್ವಭಾವ ಮತ್ತು ಸಂಸ್ಕಾರ’ದ ಧೇಯವನ್ನು ಅಳವಡಿಸಿಕೊಳ್ಳಲಾಗಿದ್ದು, ವೈಯಕ್ತಿಕ ಹೊಣೆಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಒಂದು ದಶಕದ ಸಾಧನೆಗಳನ್ನು ಗುರುತಿಸುವ ಅಭಿಯಾನವು ಜಾಗತಿಕ ಮಾದರಿಯಾಗುವ ಮತ್ತು ಸ್ವಚ್ಛ ಭಾರತಕ್ಕೆ ಬದ್ಧತೆಯನ್ನು ಪುನರುಚ್ಚರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಎಸ್‌ಎಚ್‌ಎಸ್ ಅಭಿಯಾನದ ಮಹತ್ವವನ್ನು ಒತ್ತಿ ಹೇಳಿದ ಅವರು, ಎಸ್‌ಬಿಎಂ ತನ್ನ ಮುಂದಿನ ಮೈಲಿಗಲ್ಲಿನತ್ತ ದೃಷ್ಟಿ ಹಾಯಿಸುತ್ತಿದ್ದಂತೆ, ವಿವಿಧ ಭೌಗೋಳಿಕ ಪ್ರದೇಶಗಳಿಂದ ಲಕ್ಷಾಂತರ ನಾಗರಿಕರು ಸ್ವಚ್ಛತಾ ಶ್ರಮದಾನದ ಕ್ರಿಯೆಯಲ್ಲಿ ಸೇರುತ್ತಾರೆ ಎಂದು ಅವರು ಉಲ್ಲೇಖಿಸಿದರು.

ರಾಜಸ್ಥಾನದಲ್ಲಿ ಎಸ್ ಎಚ್ ಎಸ್ 2024 ಕ್ಕೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದ ಸಫಾಯಿಮಿತ್ರರು, ಶಾಸಕರು, ಮೇಯರ್‌ಗಳು, ವಿರೋಧ ಪಕ್ಷದ ನಾಯಕರು ಮತ್ತು ಪೌರಾ ಆಯುಕ್ತರುಗಳು ಗೌರವಾನ್ವಿತ ಉಪರಾಷ್ಟ್ರಪತಿ ಅವರೊಂದಿಗೆ ಆನ್‌ಲೈನ್ ಸಂವಾದ ನಡೆಸಿದರು. ಎಸ್ ಎಚ್ ಎಸ್ ಗೆ ಚಾಲನೆ ನೀಡುವ ಕಾರ್ಯಕ್ರಮದ ಪ್ರಮುಖ ಮುಖ್ಯಾಂಶವೆಂದರೆ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಮತ್ತು ರಾಜಸ್ಥಾನದ ಪ್ರತಾಪ್ತಗಢ್‌ನ ಸಫಾಯಿಮಿತ್ರರಾದ ತರುಣ್ ದಾವ್ರೆ ನಡುವಿನ ಸಂವಾದದಲ್ಲಿ ಅವರು ದಾವ್ರೆ ಕುಟುಂಬವನ್ನು ನವದೆಹಲಿಯಲ್ಲಿ ಭೇಟಿ ಮಾಡಲು ಆಹ್ವಾನಿಸಿದರು ಮತ್ತು ಶ್ರೀ ತರುಣ್ ದಾವ್ರೆ ಅವರ ಮಗಳು ಮತ್ತು ಎಸ್‌ಟಿಸಿಯ ಎರಡನೇ ವರ್ಷದ ವಿದ್ಯಾರ್ಥಿನಿ ಪೂರ್ವಾ ದಾವ್ರೆ ಅವರಿಗೆ ಒಂದು ವಾರದ ಇಂಟರ್ನ್‌ಶಿಪ್ ಅವಕಾಶ ನೀಡಿದರು.  ಅದೇ ರೀತಿಯಲ್ಲಿ ಗೌರವಾನ್ವಿತ ಉಪರಾಷ್ಟ್ರಪತಿಗಳು ತಮ್ಮ ಅತಿಥಿಯಾಗಿ ಭಾರತೀಯ ಸಂಸತ್ತಿಗೆ ಭೇಟಿ ನೀಡುವಂತೆ ಲಂಬಿ ಅಹಿರ್ ಗ್ರಾಮದ ಸರಪಂಚ ಶ್ರೀಮತಿ ನೀರು ಯಾದವ್ ಅವರನ್ನು ಆಹ್ವಾನಿಸಿದರು.

ಗೌರವಾನ್ವಿತ ಉಪರಾಷ್ಟ್ರಪತಿಗಳು ಸಫಾಯಿ ಮಿತ್ರರನ್ನು ಸನ್ಮಾನಿಸುವುದರೊಂದಿಗೆ ಮತ್ತು ನಮಸ್ತೆ ಯೋಜನೆಯಡಿಯಲ್ಲಿ ಪಿಎಂಎವೈ ಪ್ರಯೋಜನಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು ಮತ್ತು ಕಿಟ್‌ಗಳನ್ನು ವಿತರಿಸುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಗೌರವಾನ್ವಿತ ಉಪರಾಷ್ಟ್ರಪತಿ ಮಿಷನ್‌ನಡಿ ಪ್ರತಿ ವರ್ಷವು ಮಾಡಿದ ಕೆಲಸವು ಇದುವರೆಗಿನ ಒಂದು ದಶಕದಲ್ಲಿ ಮಾಡಿದ ಕೆಲಸಕ್ಕೆ ಸಮನಾಗಿರುವಂತೆ ಕೆಲಸದ ಪ್ರಮಾಣದಲ್ಲಿ ಗಣನೀಯ ಏರಿಕೆಯನ್ನು ಕಾಣಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.

ಜುಂಜುನುದಲ್ಲಿ ರಾಷ್ಟ್ರೀಯ ಅಭಿಯಾನದೊಂದಿಗೆ ಸ್ವಚ್ಛ ಭಾರತ ಮಿಷನ್ ನ ಒಂದು ದಶಕದ ಆಚರಣೆಗೆ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಇಂದು 19 ಮುಖ್ಯಮಂತ್ರಿಗಳು, 9 ರಾಜ್ಯಪಾಲರು ಮತ್ತು 16 ಕೇಂದ್ರ ಸಚಿವರು ದೇಶಾದ್ಯಂತ ಸ್ವಚ್ಛತಾ ಚಟುವಟಿಕೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

*****



(Release ID: 2056012) Visitor Counter : 26