ಗೃಹ ವ್ಯವಹಾರಗಳ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ರೈತರ ಹಿತಾಸಕ್ತಿಯನ್ನು ಪ್ರಮುಖವಾಗಿರಿಸಿದೆ ಮತ್ತು ರೈತರಿಗೆ ನ್ಯಾಯಯುತ ಬೆಲೆ ಸಿಗುವುದನ್ನು ಖಚಿತಪಡಿಸಿಕೊಳ್ಳಲು ರಫ್ತುಗಳನ್ನು ಹೆಚ್ಚಿಸುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು
ರಫ್ತು ಹೆಚ್ಚಿಸುವ ಮೂಲಕ, ರೈತರು ತಮ್ಮ ಬೆಳೆಗಳಿಗೆ ಗರಿಷ್ಠ ಬೆಲೆಯನ್ನು ಗಳಿಸಲು ಸಾಧ್ಯವಾಗುತ್ತದೆ
ಈರುಳ್ಳಿಯ ಮೇಲಿನ ಕನಿಷ್ಠ ರಫ್ತು ಬೆಲೆಯನ್ನು ತೆಗೆದುಹಾಕುವ ಮತ್ತು ರಫ್ತು ಸುಂಕವನ್ನು ಶೇ.40 ರಿಂದ ಶೇ. 20 ಕ್ಕೆ ಇಳಿಸುವ ನಿರ್ಧಾರವು ಈರುಳ್ಳಿ ರಫ್ತು ಹೆಚ್ಚಿಸುತ್ತದೆ ಮತ್ತು ಈರುಳ್ಳಿ ಉತ್ಪಾದಿಸುವ ರೈತರ ಆದಾಯವನ್ನು ಹೆಚ್ಚಿಸುತ್ತದೆ
ಬಾಸ್ಮತಿ ಅಕ್ಕಿಯ ಮೇಲಿನ ಎಂಇಪಿಯನ್ನು ಕೊನೆಗೊಳಿಸುವ ನಿರ್ಧಾರವು ಬಾಸ್ಮತಿ ಅಕ್ಕಿ ಉತ್ಪಾದಿಸುವ ರೈತರಿಗೆ ರಫ್ತು ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಲು ಅನುವು ಮಾಡಿಕೊಡುತ್ತದೆ
ಕಚ್ಚಾ ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಶೇಕಡ 12.5 ರಿಂದ 32.5 ಕ್ಕೆ ಮತ್ತು ಅವುಗಳ ಸಂಸ್ಕರಿಸಿದ ತೈಲಗಳ ಮೇಲಿನ ಸುಂಕವನ್ನು ಶೇಕಡ 13.75 ರಿಂದ 35.75 ಕ್ಕೆ ಹೆಚ್ಚಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ
ನರೇಂದ್ರ ಮೋದಿ ಸರ್ಕಾರದ ನಿರ್ಧಾರದಿಂದ ಭಾರತದ ಸೋಯಾಬೀನ್ ರೈತರು ತಮ್ಮ ಬೆಳೆಗಳಿಗೆ ಉತ್ತಮ ಬೆಲೆಗಳನ್ನು ಪಡೆಯುತ್ತಾರೆ ಮತ್ತು ಅವರ ಆದಾಯ ಹೆಚ್ಚಾಗುತ್ತದೆ
Posted On:
14 SEP 2024 4:43PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ರಫ್ತುಗಳನ್ನು ಹೆಚ್ಚಿಸುತ್ತಿದೆ, ಇದು ಅವರ ಉತ್ಪನ್ನಗಳಿಗೆ ಗರಿಷ್ಠ ಮೌಲ್ಯವನ್ನು ಗಳಿಸಲು ಅನುವು ಮಾಡಿಕೊಡುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದ್ದಾರೆ.
'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿರುವ ಶ್ರೀ ಅಮಿತ್ ಶಾ ಅವರು ರೈತರ ಕಲ್ಯಾಣವನ್ನು ಪ್ರಮುಖವಾಗಿಟ್ಟುಕೊಂಡು, ನರೇಂದ್ರ ಮೋದಿ ಸರ್ಕಾರವು ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಉಲ್ಲೇಖಿಸಿದ್ದಾರೆ:
1. ಈರುಳ್ಳಿ ಮೇಲಿನ ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ತೆಗೆದುಹಾಕಲು ಮತ್ತು ರಫ್ತು ಸುಂಕವನ್ನು ಶೇ.40 ರಿಂದ ಶೇ. 20ಕ್ಕೆ ಇಳಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಇದು ಈರುಳ್ಳಿ ರಫ್ತು ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ಈರುಳ್ಳಿ ಉತ್ಪಾದಿಸುವ ರೈತರಿಗೆ ಆದಾಯ ಹೆಚ್ಚಾಗುತ್ತದೆ.
2. ಬಾಸ್ಮತಿ ಅಕ್ಕಿಯ ಮೇಲಿನ ಎಂಇಪಿಯನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ, ಇದು ಬಾಸ್ಮತಿ ಅಕ್ಕಿ ಉತ್ಪಾದಿಸುವ ರೈತರಿಗೆ ರಫ್ತು ಮಾಡಲು ಮತ್ತು ಹೆಚ್ಚಿನ ಲಾಭವನ್ನು ಗಳಿಸಲು ಅನುವು ಮಾಡಿಕೊಡುತ್ತದೆ.
3. ಹೆಚ್ಚುವರಿಯಾಗಿ, ಕಚ್ಚಾ ತಾಳೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳ ಆಮದಿನ ಮೇಲಿನ ಸುಂಕವನ್ನು ಶೇ.12.5 ರಿಂದ ಶೇ. 32.5 ಕ್ಕೆ ಮತ್ತು ಅವುಗಳ ಸಂಸ್ಕರಿಸಿದ ತೈಲಗಳ ಮೇಲಿನ ಸುಂಕವನ್ನು ಶೇ. 13.75 ರಿಂದ ಶೇ. 35.75 ಕ್ಕೆ ಹೆಚ್ಚಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಇದು ಭಾರತೀಯ ಸೋಯಾಬೀನ್ ರೈತರು ತಮ್ಮ ಬೆಳೆಗಳಿಗೆ ಉತ್ತಮ ಬೆಲೆಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ, ಇದರಿಂದಾಗಿ ಅವರ ಆದಾಯವನ್ನು ಹೆಚ್ಚಿಸುತ್ತದೆ.
*****
(Release ID: 2055001)
Visitor Counter : 47