ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ರಿಸೆಟ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ನಿವೃತ್ತ ಕ್ರೀಡಾ ಪಟುಗಳಿಗೆ ಕರೆ ನೀಡಿದ ಡಾ. ಮನ್ಸುಖ್ ಮಾಂಡವಿಯ


ತಮ್ಮ ಸಾಧನೆಗಳಿಂದ ರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡಿದ ನಮ್ಮ ನಿವೃತ್ತ ಕ್ರೀಡಾಪಟುಗಳನ್ನು ಗುರುತಿಸುವ ಮತ್ತು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಿಸೆಟ್ ಕಾರ್ಯಕ್ರಮವು ಪ್ರಮುಖ ಹೆಜ್ಜೆಯಾಗಿದೆ: ಕೇಂದ್ರ ಸಚಿವ 

Posted On: 13 SEP 2024 3:55PM by PIB Bengaluru

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಹೊಸದಾಗಿ ಪ್ರಾರಂಭಿಸಲಾದ "ನಿವೃತ್ತ ಕ್ರೀಡಾಪಟುಗಳ ಸಬಲೀಕರಣ ತರಬೇತಿ" (ರಿಸೆಟ್) ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಮತ್ತು ದೇಶದ ಕ್ರೀಡಾ ಪರಿಸರ ವ್ಯವಸ್ಥೆಗೆ ಸಕ್ರಿಯವಾಗಿ ಕೊಡುಗೆ ನೀಡಲು ಭಾರತದಾದ್ಯಂತ ನಿವೃತ್ತ ಕ್ರೀಡಾಪಟುಗಳಿಗೆ ಕರೆ ನೀಡಿದ್ದಾರೆ.  ಈ ಉಪಕ್ರಮವನ್ನು ಡಾ. ಮಾಂಡವೀಯ ಅವರು ಇಂದು ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಚಾಲನೆ ಮಾಡಿದರು.

ಕ್ರೀಡಾ ರಂಗದಲ್ಲಿ ಕೇಂದ್ರ ಸರ್ಕಾರದ ಬದ್ಧತೆಯನ್ನು ಎತ್ತಿ ಹಿಡಿದ ಡಾ.ಮಾಂಡವೀಯ ಅವರು, “ರಿಸೆಟ್ ಕಾರ್ಯಕ್ರಮವು ತಮ್ಮ ಸಾಧನೆಗಳ ಮೂಲಕ ರಾಷ್ಟ್ರವನ್ನು ಹೆಮ್ಮೆಪಡಿಸಿದ ನಮ್ಮ ನಿವೃತ್ತ ಕ್ರೀಡಾಪಟುಗಳನ್ನು ಗುರುತಿಸುವ ಮತ್ತು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಎಲ್ಲಾ ನಿವೃತ್ತ ಕ್ರೀಡಾಪಟುಗಳು ತಮ್ಮ ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ನಾವು ಕೋರುತ್ತೇನೆ.  ರಾಷ್ಟ್ರದ ಕ್ರೀಡಾ ಸಮುದಾಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಮತ್ತು ರಾಷ್ಟ್ರದ ಕ್ರೀಡಾ ಪರಂಪರೆಗೆ ಕೊಡುಗೆ ನೀಡುವುದನ್ನು ಮುಂದುವರಿಸಿ." ಎಂದು ಹೇಳಿದರು.

ನಿವೃತ್ತ ಕ್ರೀಡಾಪಟುಗಳನ್ನು ಸಂಪೂರ್ಣವಾಗಿ ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಡಾ. ಮಾಂಡವೀಯ ಅವರು ಈ‌ ಸಂದರ್ಭದಲ್ಲಿ ಪುನರುಚ್ಚರಿಸಿದರು. ವಿಶೇಷವಾಗಿ ಗೊತ್ತುಪಡಿಸಿದ ಜಾಲತಾಣದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಬಳಸಿಕೊಳ್ಳುವಂತೆ ಸಚಿವರು ಒತ್ತಾಯಿಸಿದರು.

ರಿಸೆಟ್ ಕಾರ್ಯಕ್ರಮ, ನಿವೃತ್ತ ಕ್ರೀಡಾಪಟುಗಳನ್ನು ಅವರ ವೃತ್ತಿಜೀವನದ ವೃತ್ತಿಪರ ಕೊಡುಗೆಗಳ ಬೆಳವಣಿಗೆಯನ್ನು ಬೆಂಬಲಿಸಲು ನೂತನವಾಗಿ ವಿನ್ಯಾಸಗೊಳಿಸಲಾಗಿದೆ, ತಲೆಮಾರುಗಳ ನಡುವಿನ ಅಂತರವನ್ನು ಸೇತುವೆ ನೀಗುವ  ಗುರಿಯನ್ನು ಹೊಂದಿದೆ. ನಿವೃತ್ತ ಕ್ರೀಡಾಪಟುಗಳ ಕೌಶಲ್ಯ ಮತ್ತು ಅನುಭವವನ್ನು ದೇಶದ ಯುವ ಮಹತ್ವಾಕಾಂಕ್ಷಿ ಕ್ರೀಡಾ ಪ್ರತಿಭೆಗಳಿಗೆ ಪ್ರಯೋಜನವನ್ನು ನೀಡುತ್ತದೆ.  

20-50 ವರ್ಷ ವಯಸ್ಸಿನ ನಿವೃತ್ತ ಕ್ರೀಡಾಪಟುಗಳಿಗೆ , ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿರುವ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅಥವಾ ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದಲ್ಲಿ ಮನ್ನಣೆಯನ್ನು ಸಾಧಿಸಿದವರಿಗೆ ಈ ಅವಕಾಶ ಮುಕ್ತವಾಗಿದೆ. ರಿಸೆಟ್ ಕಾರ್ಯಕ್ರಮವನ್ನು ಲಕ್ಷ್ಮೀಬಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಶನ್ (ಎಲ್‌.ಎನ್‌.ಐ.ಪಿ.ಇ) ಸಹಯೋಗದೊಂದಿಗೆ ಕಾರ್ಯಗತಗೊಳಿಸಲಾಗುತ್ತದೆ. ಇದು ಸ್ವಯಂ-ಗತಿಯ ಆನ್‌ಲೈನ್ ಕಲಿಕೆ, ಆನ್-ಗ್ರೌಂಡ್ ತರಬೇತಿ ಮತ್ತು ಇಂಟರ್ನ್‌ ಶಿಪ್‌ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಯಶಸ್ವಿಯಾಗಿ ಪೂರ್ಣಗೊಂಡ ನಂತರ ಒದಗಿಸಲಾದ ಪ್ಲೇಸ್‌ ಮೆಂಟ್ ನೆರವು ಮತ್ತು ಉದ್ಯಮಶೀಲತಾ ಮಾರ್ಗದರ್ಶನ ದೊರೆಯುತ್ತದೆ.

ರಿಸೆಟ್ ಕಾರ್ಯಕ್ರಮಕ್ಕಾಗಿ ಅರ್ಜಿಯನ್ನು https://lnipe.edu.in/resetprogram/ ಜಾಲತಾಣದಲ್ಲಿ ಸಲ್ಲಿಸಬಹುದು ಮತ್ತು ಸರಿಯಾದ ಮೌಲ್ಯಮಾಪನದ ನಂತರ ಅಭ್ಯರ್ಥಿಯ ಕೋರ್ಸ್ ಪ್ರಾರಂಭವಾಗುತ್ತದೆ.

ಈ ಉಪಕ್ರಮವು ನಿವೃತ್ತ ಕ್ರಿಡಾಪಟುಗಳ ವೃತ್ತಿಜೀವನದ ಅಮೂಲ್ಯ ವೃತ್ತಿಪರ ಅನುಭವವನ್ನು ಬಳಸಿಕೊಳ್ಳುವ ಹಾಗೂ ಭವಿಷ್ಯದ ಚಾಂಪಿಯನ್‌ ಗಳನ್ನು, ಗುರುತಿಸಿ, ಪೋಷಿಸುವುದು ಮತ್ತು ಭಾರತದಲ್ಲಿ ಕ್ರೀಡೆಯ ಬೆಳವಣಿಗೆಗೆ ಕೊಡುಗೆ ನೀಡುವುದು ಮುಂತಾದ ಗುರಿಯನ್ನು ಹೊಂದಿದೆ. 

ಹೆಚ್ಚಿನ ಮಾಹಿತಿಗಾಗಿ: CLICK HERE.

 

*****


(Release ID: 2054825) Visitor Counter : 35