ಪ್ರಧಾನ ಮಂತ್ರಿಯವರ ಕಛೇರಿ
ಶ್ರೀಮತಿ ಅಬೆ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಬಲವಾದ ಭಾರತ-ಜಪಾನ್ ಬಾಂಧವ್ಯವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
प्रविष्टि तिथि:
06 SEP 2024 8:51PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಜಪಾನಿನ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರ ಪತ್ನಿ ಶ್ರೀಮತಿ ಅಬೆ ಅವರನ್ನು ಭೇಟಿ ಮಾಡಿದರು. ಈ ಭೇಟಿಯಲ್ಲಿ, ಶ್ರೀ ಮೋದಿಯವರು ದಿವಂಗತ ಪ್ರಧಾನಿ ಶಿಂಜೋ ಅಬೆ ಅವರೊಂದಿಗಿನ ತಮ್ಮ ಆಪ್ತ ವೈಯಕ್ತಿಕ ಸ್ನೇಹವನ್ನು ಪ್ರೀತಿಯಿಂದ ಸ್ಮರಿಸಿದರು. ಭಾರತ-ಜಪಾನ್ ಸಂಬಂಧಗಳ ಸಾಮರ್ಥ್ಯದ ಬಗ್ಗೆ ಅಬೆ ಸಾನ್ ಅವರ ಬಲವಾದ ನಂಬಿಕೆಯನ್ನು ಎತ್ತಿ ಹಿಡಿದಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಭಾರತದೊಂದಿಗಿನ ಶ್ರೀಮತಿ ಅಬೆ ಅವರ ನಿರಂತರ ಒಡನಾಟಕ್ಕೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ;
"ಇಂದು ಮಧ್ಯಾಹ್ನ ಶ್ರೀಮತಿ ಅಬೆ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರೊಂದಿಗಿನ ನನ್ನ ಆಪ್ತ ವೈಯಕ್ತಿಕ ಸ್ನೇಹವನ್ನು ಸ್ಮರಿಸುತ್ತೇನೆ. ಭಾರತ-ಜಪಾನ್ ಸಂಬಂಧಗಳ ಸಾಮರ್ಥ್ಯದ ಬಗ್ಗೆ ಅಬೆ ಸ್ಯಾನ್ ಅವರ ನಂಬಿಕೆ ನಮಗೆ ಶಾಶ್ವತ ಶಕ್ತಿಯ ಊರ್ಜಾ ಮೂಲವಾಗಿದೆ. ಭಾರತದೊಂದಿಗೆ ಶ್ರೀಮತಿ ಅಬೆ ಅವರ ನಿರಂತರ ಒಡನಾಟವನ್ನು ನಾನು ಆಳವಾಗಿ ಪ್ರಶಂಸಿಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ.
*****
(रिलीज़ आईडी: 2053092)
आगंतुक पटल : 74
इस विज्ञप्ति को इन भाषाओं में पढ़ें:
Bengali
,
Odia
,
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam