ಪ್ರಧಾನ ಮಂತ್ರಿಯವರ ಕಛೇರಿ

ಸಿಂಗಾಪುರದ ಉದ್ಯಮಿಗಳ ಜೊತೆ ಪ್ರಧಾನಮಂತ್ರಿಯವರ ಸಂವಾದ

Posted On: 05 SEP 2024 4:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೂಡಿಕೆ ನಿಧಿಗಳು, ಮೂಲಸೌಕರ್ಯ, ಉತ್ಪಾದನೆ, ಇಂಧನ, ಸುಸ್ಥಿರತೆ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಸಿಂಗಾಪುರದ ವಿವಿಧ ಕ್ಷೇತ್ರಗಳ ಪ್ರಮುಖ ಸಿಇಒಗಳ ಗುಂಪಿನೊಂದಿಗೆ ಸಂವಾದ ನಡೆಸಿದರು. ಸಿಂಗಾಪುರದ ಉಪ ಪ್ರಧಾನ ಮಂತ್ರಿ ಘನತೆವೆತ್ತ ಶ್ರೀ ಗಾನ್ ಕಿಮ್ ಯೋಂಗ್ ಮತ್ತು ಗೃಹ ವ್ಯವಹಾರಗಳು ಮತ್ತು ಕಾನೂನು ಸಚಿವರಾದ ಘನತೆವೆತ್ತ ಶ್ರೀ ಕೆ.ಷಣ್ಮುಗಂ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಭಾರತದಲ್ಲಿ ಸಿಂಗಾಪುರದ ಉದ್ಯಮಿಗಳ ಹೂಡಿಕೆಯ ಹೆಜ್ಜೆಗುರುತನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಭಾರತ ಮತ್ತು ಸಿಂಗಾಪುರದ ನಡುವೆ ಆರ್ಥಿಕ ಸಹಕಾರವನ್ನು ಉತ್ತೇಜಿಸುವಲ್ಲಿ ಸಿಂಗಾಪುರದ ಉದ್ಯಮದ ಪ್ರಮುಖರು ವಹಿಸಿದ ಪಾತ್ರವನ್ನು ಪ್ರಶಂಸಿಸಿದರು. ಭಾರತದೊಂದಿಗಿನ ಅವರ ಸಹಯೋಗವನ್ನು ಇನ್ನಷ್ಟು ಸುಲಭಗೊಳಿಸಲು, ಸಿಂಗಾಪುರದಲ್ಲಿ ಇನ್ವೆಸ್ಟ ಇಂಡಿಯಾ ಕಚೇರಿಯನ್ನು ಸ್ಥಾಪಿಸುವುದಾಗಿ ಪ್ರಧಾನಿ ಘೋಷಿಸಿದರು. ಭಾರತ-ಸಿಂಗಪುರ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸುವುದು ದ್ವಿಪಕ್ಷೀಯ ಆರ್ಥಿಕ ಸಂಬಂಧಗಳಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಭಾರತವು ಪರಿವರ್ತನಾಶೀಲ ಪ್ರಗತಿಯನ್ನು ಸಾಧಿಸಿದೆ ಮತ್ತು ಅದರ ರಾಜಕೀಯ ಸ್ಥಿರತೆ, ನೀತಿ ಭವಿಷ್ಯ, ವ್ಯವಹಾರವನ್ನು ಸುಲಭಗೊಳಿಸುವುದು ಮತ್ತು ಸುಧಾರಣೆ ಆಧಾರಿತ ಆರ್ಥಿಕ ಕಾರ್ಯಸೂಚಿಯ ಬಲವನ್ನು ಪರಿಗಣಿಸಿ ಅದೇ ಹಾದಿಯಲ್ಲಿ ಮುಂದುವರಿಯುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಭಾರತದ ಪ್ರಭಾವಶಾಲಿ ಬೆಳವಣಿಗೆಯ ಕಥೆ, ಅದರ ಕೌಶಲ್ಯಭರಿತ ಪ್ರತಿಭಾಶಕ್ತಿ ಮತ್ತು ವಿಶಾಲವಾದ ಮಾರುಕಟ್ಟೆ ಅವಕಾಶಗಳ ಕುರಿತು ಮಾತನಾಡಿದ ಅವರು, ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತವು ಶೇ.17 ರಷ್ಟು ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ, ಭಾರತ್ ಸೆಮಿಕಂಡಕ್ಟರ್ ಮಿಷನ್ ಮತ್ತು 12 ಹೊಸ ಕೈಗಾರಿಕಾ ಸ್ಮಾರ್ಟ್ ಸಿಟಿಗಳ ಸ್ಥಾಪನೆಯಂತಹ ಕಾರ್ಯಕ್ರಮಗಳ ಮೂಲಕ ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವಿವಿಧ ಉಪಕ್ರಮಗಳ ಕುರಿತು ಪ್ರಧಾನಿ ಮಾತನಾಡಿದರು. ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತದಲ್ಲಿನ ಅವಕಾಶಗಳನ್ನು ಪರಿಗಣಿಸುವಂತೆ ಅವರು ಉದ್ಯಮಿಗಳಿಗೆ ಕರೆ ನೀಡಿದರು. ಪುಟಿದೇಳುವ ಪೂರೈಕೆ ಸರಪಳಿಗಳನ್ನು ಹುಡುಕುತ್ತಿರುವ ವ್ಯವಹಾರಗಳಿಗೆ ಭಾರತವು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಪ್ರಧಾನಿ ಹೇಳಿದರು. ತಮ್ಮ ಮೂರನೇ ಅವಧಿಯಲ್ಲಿ ಭಾರತವು ಮೂಲಸೌಕರ್ಯ ಅಭಿವೃದ್ಧಿಯ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸಲಿದೆ ಎಂದು ಭರವಸೆ ನೀಡಿದ ಪ್ರಧಾನಿ, ರೈಲ್ವೆ, ರಸ್ತೆಗಳು, ಬಂದರುಗಳು, ನಾಗರಿಕ ವಿಮಾನಯಾನ, ಕೈಗಾರಿಕಾ ಪಾರ್ಕ್‌ ಗಳು ಮತ್ತು ಡಿಜಿಟಲ್ ಸಂಪರ್ಕ ಕ್ಷೇತ್ರಗಳಲ್ಲಿನ ಹೊಸ ಅವಕಾಶಗಳ ಕುರಿತು ಸಿಇಒ ಗಳಿಗೆ ತಿಳಿಸಿದರು.

ಭಾರತದಲ್ಲಿ ಹೂಡಿಕೆ ಅವಕಾಶಗಳನ್ನು ಪರಿಗಣಿಸಲು ಮತ್ತು ದೇಶದಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸಲು ಸಿಂಗಾಪುರದ ಉದ್ಯಮಿಗಳನ್ನು ಪ್ರಧಾನಿ ಆಹ್ವಾನಿಸಿದರು.

ಕೆಳಗಿನ ಉದ್ಯಮಿಗಳು ವ್ಯವಹಾರ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದರು:

ಕ್ರ.ಸಂ

ಹೆಸರು

ಹುದ್ದೆ

  1.  

ಲಿಮ್ ಮಿಂಗ್ ಯಾನ್

ಅಧ್ಯಕ್ಷರು, ಸಿಂಗಾಪುರ ವ್ಯಾಪಾರ ಒಕ್ಕೂಟ

  1.  

ಕೊಕ್ ಪಿಂಗ್ ಸೂನ್

ಸಿಇಒ, ಸಿಂಗಾಪುರ ವ್ಯಾಪಾರ ಒಕ್ಕೂಟ

  1.  

ಗೌತಮ್ ಬ್ಯಾನರ್ಜಿ

 

ಅಧ್ಯಕ್ಷರು, ಭಾರತ ಮತ್ತು ದಕ್ಷಿಣ ಏಷ್ಯಾ ವ್ಯಾಪಾರ ಸಮೂಹ,

ಹಿರಿಯ ಎಂಡಿ ಸಿಂಗಾಪುರ ವ್ಯಾಪಾರ ಒಕ್ಕೂಟ

ಮತ್ತು ಅಧ್ಯಕ್ಷರು,

ಬ್ಲಾಕ್ ಸ್ಟೋನ್ ಸಿಂಗಾಪುರ

  1.  

ಲಿಮ್ ಬೂನ್ ಹೆಂಗ್

ಅಧ್ಯಕ್ಷರು, ಟೆಮಾಸೆಕ್ ಹೋಲ್ಡಿಂಗ್ಸ್

  1.  

ಲಿಮ್ ಚೌ ಕಿಯಾಟ್

ಸಿಇಒ, ಜಿಐಸಿ ಪ್ರೈವೇಟ್ ಲಿಮಿಟೆಡ್

  1.  

ಪಿಯೂಷ್ ಗುಪ್ತಾ

ಸಿಇಒ ಮತ್ತು ನಿರ್ದೇಶಕ, ಡಿಬಿಎಸ್ ಗ್ರೂಪ್

  1.  

ಗೋ ಚೂನ್ ಫೋಂಗ್

ಸಿಇಒ, ಸಿಂಗಾಪುರ್ ಏರ್ಲೈನ್ಸ್

  1.  

ವಾಂಗ್ ಕಿಮ್ ಯಿನ್

ಗ್ರೂಪ್ ಅಧ್ಯಕ್ಷ ಮತ್ತು ಸಿಇಒ, ಸೆಂಬ್ಕಾರ್ಪ್ ಇಂಡಸ್ಟ್ರೀಸ್ ಲಿಮಿಟೆಡ್

  1.  

ಲೀ ಚೀ ಕೂನ್

ಗ್ರೂಪ್ ಸಿಇಒ, ಕ್ಯಾಪಿಟಾಲ್ಯಾಂಡ್ ಇನ್ವೆಸ್ಟ್‌ಮೆಂಟ್

 

  1.  

ಓಂಗ್ ಕಿಮ್ ಪಾಂಗ್

ಗ್ರೂಪ್ ಸಿಇಒ, ಪಿ ಎಸ್‌ ಎ ಇಂಟರ್ನ್ಯಾಷನಲ್

  1.  

ಕೆರ್ರಿ ಮೋಕ್

ಸಿಇಒ, ಎಸ್‌ ಎ ಟಿ ಎಸ್ ಲಿಮಿಟೆಡ್

  1.  

ಬ್ರೂನೋ ಲೋಪೆಜ್

ಅಧ್ಯಕ್ಷರು ಮತ್ತು ಗ್ರೂಪ್ ಸಿಇಒ, ಎಸ್‌ ಟಿ ಟೆಲಿಮೀಡಿಯಾ ಗ್ಲೋಬಲ್ ಡಾಟಾ ಸೆಂಟರ್ಸ್

  1.  

ಸೀನ್ ಚಿಯಾವೊ

ಗ್ರೂಪ್ ಸಿಇಒ, ಸುರ್ಬಾನಾ ಜುರಾಂಗ್

  1.  

ಯಾಮ್ ಕುಮ್ ವೆಂಗ್

ಸಿಇಒ, ಚಾಂಗಿ ಏರ್‌ಪೋರ್ಟ್ ಗ್ರೂಪ್

  1.  

ಯುವೆನ್ ಕುವಾನ್ ಮೂನ್

ಸಿಇಒ, ಸಿಂಗ್‌ ಟೆಲ್

  1.  

ಲೋಹ್ ಬೂನ್ ಚೈ

ಸಿಇಒ, ಎಸ್‌ ಜಿ ಎಕ್ಸ್‌ ಗ್ರೂಪ್

  1.  

ಮಾರ್ಕಸ್ ಲಿಂ

ಸಹ-ಸ್ಥಾಪಕ ಮತ್ತು ಸಿಇಒ, Ecosoftt

  1.  

ಕ್ವೆಕ್ ಕ್ವಾಂಗ್ ಮೆಂಗ್

ಪ್ರಾದೇಶಿಕ ಸಿಇಒ, ಭಾರತ, ಮ್ಯಾಪ್ಟ್ರೀ ಇನ್ವೆಸ್ಟ್ಮೆಂಟ್ಸ್ ಪ್ರೈವೆಟ್ ಲಿಮಿಟೆಡ್

  1.  

ಲೋ ಚಿನ್ ಹುವಾ

ಸಿಇಒ& ಇಡಿ, ಕೆಪ್ಪೆಲ್ ಲಿಮಿಟೆಡ್

  1.  

ಫುವಾ ಯೋಂಗ್ ಟಾಟ್

ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್, ಎಚ್‌ ಟಿ ಎಲ್ ಇಂಟರ್ನ್ಯಾಷನಲ್

 

*****



(Release ID: 2052498) Visitor Counter : 15