ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬ್ರೂನೈ ದಾರಸ್ಸುಲಮ್ ಮತ್ತು ಸಿಂಗಾಪುರ ಭೇಟಿಗೆ ಮುನ್ನ ಪ್ರಧಾನಮಂತ್ರಿಗಳ ನಿರ್ಗಮನ ಹೇಳಿಕೆ (2024 ಸೆಪ್ಟೆಂಬರ್ 3 ರಿಂದ 5)

Posted On: 03 SEP 2024 7:32AM by PIB Bengaluru

ಬ್ರೂನೈ ದಾರಸ್ಸುಲಮ್ ಗೆ ಮೊಟ್ಟ ಮೊದಲ ದ್ವಿಪಕ್ಷೀಐ ಭೇಟಿಗಾಗಿ ಇಂದು ನಾನು ತೆರಳುತ್ತಿದ್ದೇನೆ. ನಮ್ಮ ರಾಜತಾಂತ್ರಿಕ ಸಂಬಂಧದ 40ನೇ ವರ್ಷಾಚರಭೆ ಆಚರಿಸುತ್ತಿರುವ ಈ ಹೊತ್ತಿನಲ್ಲಿ, ನಮ್ಮ ಐತಿಹಾಸಿಕ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾನು ದೊರೆ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಮತ್ತು ರಾಜಕುಟುಂಬದ ಇತರ ಗೌರವಾನ್ವಿತ ಸದಸ್ಯರೊಂದಿಗೆ ಚರ್ಚೆಯನ್ನು ಎದುರು ನೋಡುತ್ತಿದ್ದೇನೆ.

ಬ್ರೂನೈ ಭೇಟಿ ಬಳಿಕ ನಾನು ಸೆಪ್ಟೆಂಬರ್ 4 ರಂದು ಸಿಂಗಾಪುರಕ್ಕೆ ಪ್ರಯಾಣಿಸಲಿದ್ದೇನೆ. ಅಲ್ಲಿನ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಪ್ರಧಾನಮಂತ್ರಿ ಲಾರೆನ್ಸ್ ವಾಂಗ್, ಹಿರಿಯ ಸಚಿವರಾದ ಲೀ ಸೀಯೆನ್ ಲೂಂಗ್ ಮತ್ತು ನಿವೃತ್ತ ಹಿರಿಯ ಸಚಿವರಾದ ಗೋ ಚೋಕ್ ತಾಂಗ್ ಅವರ ಭೇಟಿಯ ಅವಕಾಶಕ್ಕೆ ಎದುರು ನೋಡುತ್ತಿದ್ದೇನೆ. ಸಿಂಗಾಪುರದ ವ್ಯಾಪಾರ ಸಮುದಾಯದ ನಾಯಕರನ್ನೂ ನಾನು ಭೇಟಿಯಾಗಲಿದ್ದೇನೆ. 

ಸಿಂಗಾಪುರದೊಂದಿಗಿನ ನಮ್ಮ ಕಾರ್ಯತಂತ್ರ ಪಾಲುದಾರಿಕೆ ಅದರಲ್ಲೂ ವಿಶೇಷವಾಗಿ ಸುಧಾರಿತ ಉತ್ಪಾದನೆ, ಡಿಜಿಟಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಬಾಂಧವ್ಯವನ್ನು ಇನ್ನಷ್ಟು ಆಳವಾಗಿಸುವತ್ತ ಪ್ರಮುಖವಾಗಿ ಚರ್ಚೆ ನಡೆಸಲು ಎದುರು ನೋಡುತ್ತಿದ್ದೇನೆ.

ನಮ್ಮ ಆಕ್ಟ್ ಈಸ್ಟ್ ನೀತಿ ಮತ್ತು ಇಂಡೋ-ಪೆಸಿಫಿಕ್ ಮುನ್ನೋಟದಲ್ಲಿ ಎರಡೂ ದೇಶಗಳು ಪ್ರಮುಖ ಪಾಲುದಾರ ರಾಷ್ಟ್ರಗಳಾಗಿವೆ. ನನ್ನ ಭೇಟಿಯು ಬ್ರೂನೈ, ಸಿಂಗಾಪುರ ಮತ್ತು ಆಸಿಯಾನ್ ಪ್ರದೇಶದ ಬಹುಭಾಗಗಳಲ್ಲಿ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲಿದೆ ಎಂದು ನನಗೆ ವಿಶ್ವಾಸವಿದೆ.

 

*****


(Release ID: 2051362) Visitor Counter : 80