ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಮಹಿಳೆಯರ ವಿರುದ್ಧದ ಹಿಂಸಾಚಾರವನ್ನು ʼಅಸ್ವಸ್ಥತೆಯ ರೋಗಲಕ್ಷಣʼ ಎನ್ನುವುದನ್ನು  ಎಂದು ಬಲವಾಗಿ ಖಂಡಿಸಿರಿ -  ಉಪರಾಷ್ಟ್ರಪತಿ ಖಂಡನೆ


ನಮ್ಮ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮನಸ್ಸಿನಲ್ಲಿರುವ ಭಯವು ದೇಶಕ್ಕೆ ಚಿಂತೆಯ ವಿಷಯವಾಗಿದೆ  - ಉಪರಾಷ್ಟ್ರಪತಿ

ಲಿಂಗ ಆಧಾರಿತ ವೇತನ ಅಸಮಾನತೆಗಳು ಕೊನೆಗೊಳ್ಳಬೇಕು ಎಂದು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು

ಉಪರಾಷ್ಟ್ರಪತಿಗಳು ಎಲ್ಲ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು
 
ಏಕರೂಪ ನಾಗರಿಕ ಸಂಹಿತೆಯು ಮಹಿಳೆಯರಿಗೆ ನ್ಯಾಯದ ಒದಗಿಸುತ್ತದೆ ಎಂದು ಶ್ರೀ ಧನಕರ್  ಒತ್ತಿ ಹೇಳಿದರು 

"ಸಾಕು ಇನ್ನು ಸಾಕು" ಎನ್ನುವ ರಾಷ್ಟ್ರಪತಿಗಳ ಕರೆಗೆ ಓಗೊಡುವಂತೆ ಉಪರಾಷ್ಟ್ರಪತಿಗಳು ನಾಗರಿಕರನ್ನು ಒತ್ತಾಯಿಸಿದರು

Posted On: 30 AUG 2024 3:23PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಮಹಿಳೆಯರ ಮೇಲಿನ ದೌರ್ಜನ್ಯವನ್ನು ʼಅಸ್ವಸ್ಥತೆಯ ರೋಗಲಕ್ಷಣʼ ಎನ್ನುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಂದು ದೆಹಲಿಯ ವಿಶ್ವವಿದ್ಯಾನಿಲಯದ ಭಾರತಿ ಕಾಲೇಜಿನಲ್ಲಿ 'ವಿಕಸಿತ ಭಾರತದಲ್ಲಿ ಮಹಿಳೆಯರ ಪಾತ್ರ' ಎನ್ನುವ ವಿಷಯದ ಕುರಿತು ವಿದ್ಯಾರ್ಥಿಗಳು ಮತ್ತು ಭೋದಕರನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು “ನಾನು ದಿಗ್ಭ್ರಮೆಗೊಂಡಿದ್ದೇನೆ; ಸುಪ್ರೀಂ ಕೋರ್ಟ್ ಬಾರ್ ನ ಸದಸ್ಯರು ಮತ್ತು ಸಂಸದರು ಹೀಗೆ ಹೇಳಿದ್ದಕ್ಕೆ ನನಗೆ ಬೇಸರವಾಗಿದೆ ಮತ್ತು ಅವರು ಹೀಗೆ ಹೇಳುತ್ತಾರೆಯೇ? ʼಅಸ್ವಸ್ಥತೆಯ ರೋಗಲಕ್ಷಣʼ ಮತ್ತು ಅಂತಹ ಘಟನೆಗಳು ಸಾಮಾನ್ಯವಾಗಿವೆ ಎಂದು ಸೂಚಿಸುತ್ತದೆ? ನಾಚಿಕೆಗೇಡು! ಇಂತಹ ಪರಿಸ್ಥಿತಿಯನ್ನು ಖಂಡಿಸಲು ಪದಗಳು ಕಡಿಮೆ. ಇದು ಆ ಉನ್ನತ ಸ್ಥಾನಕ್ಕೆ ಮಾಡಿದ ದೊಡ್ಡ ಅನ್ಯಾಯವಾಗಿದೆ.

 

ಇಂತಹ ಅತಿರೇಕದ ಹೇಳಿಕೆಗಳು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ನೋವನ್ನು ವ್ಯಕ್ತಿಪಡಿಸಿದ ಉಪರಾಷ್ಟ್ರಪತಿಗಳು  ಈ ಹೇಳಿಕೆಗಳು ಮಹಿಳೆಯರು ಮತ್ತು ಹೆಣ್ಣುಮಕ್ಕಳ ನೋವನ್ನು ಕ್ಷುಲ್ಲಕಗೊಳಿಸುವಂತಿದೆ ಎಂದು ಹೇಳಿದರು. ಪಕ್ಷದ ಹಿತಾಸಕ್ತಿಗಾಗಿ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ನೀವು ಇದನ್ನು ಹೇಳುತ್ತೀರಾ? ಇಂತಹ ಅಸಹ್ಯಕರ ಅನ್ಯಾಯವನ್ನು ಪ್ರಚಾರ ಮಾಡಲು ನೀವು ನಿಮ್ಮ ಅಧಿಕಾರವನ್ನು ಬಳಸುತ್ತೀರಾ? ಮನುಕುಲಕ್ಕೆ ಇದಕ್ಕಿಂತ ದೊಡ್ಡ ಅನ್ಯಾಯ ಮತ್ತೊಂದಿರಬಹುದೇ? ನಮ್ಮ ಹೆಣ್ಣುಮಕ್ಕಳ ಸಂಕಟವನ್ನು ನಾವು ಕ್ಷುಲ್ಲಕಗೊಳಿಸಬೇಕೇ? ಇಲ್ಲ ಇನ್ನು ಮುಂದೆ ಇಲ್ಲ.” ಎಂದು ಹೇಳಿದರು. 

 

"ಸಾಕು ಇನ್ನು ಸಾಕು" ಎನ್ನುವ ರಾಷ್ಟ್ರಪತಿಗಳ ಕರೆಗೆ ಓಗೊಡುವಂತೆ ಉಪರಾಷ್ಟ್ರಪತಿ ನಾಗರಿಕರಿಗೆ ಮನವಿ ಮಾಡಿದರು, "ರಾಷ್ಟ್ರಪತಿಗಳ ಹೇಳಿದರು ʼಸಾಕು ಇನ್ನು ಸಾಕುʼ  ಎಂದು ನಾವು ಈ ಕರೆಯನ್ನು ನಾವು ದೇಶದ ಘೋಷಣೆ ಮಾಡೋಣ. ಇದರಲ್ಲಿ ಎಲ್ಲರೂ  ಭಾಗವಹಿಸಬೇಕೆಂದು ನಾನು ಬಯಸುತ್ತೇನೆ. ಯಾವುದೇ ಹೆಣ್ಣು ಅಥವಾ ಮಹಿಳೆ ಬಲಿಯಾಗದಂತಹ ವ್ಯವಸ್ಥೆಯನ್ನು ನಾವು ರಚಿಸುತ್ತೇವೆ ಎಂದು ಸಂಕಲ್ಪ ಮಾಡೋಣ. ನಾವು ಪರಿಹರಿಸೋಣ, ವ್ಯವಸ್ಥೆಯನ್ನು ರಚಿಸೋಣ, ಇನ್ನು ಮುಂದೆ ಈ ವಿಷಯದಲ್ಲಿ ನೀವು ಹುಡುಗಿ ಅಥವಾ ಮಹಿಳೆಯನ್ನು ಬಲಿಪಶು ಮಾಡಿದಾಗ ಶೂನ್ಯ ಅವಕಾಶ, ಶೂನ್ಯ ಸಹಿಷ್ಣುತೆ ಇರುವುದು.
ನೀವು ನಮ್ಮ ನಾಗರಿಕತೆಗೆ ಹಾನಿ ಮಾಡುತ್ತಿದ್ದೀರಿ, ನೀವು ರಾಕ್ಷಸರಂತೆ ವರ್ತಿಸುತ್ತಿದ್ದೀರಿ.  ನೀವು ಅನಾಗರಿಕತೆಯನ್ನು ಅತ್ಯಂತ ಕ್ರೂರ ಮಟ್ಟಕ್ಕೆ ಪ್ರದರ್ಶಿಸುತ್ತಿದ್ದೀರಿ. ಯಾವುದೂ ಅಡ್ಡ ಬರಬಾರದು ಮತ್ತು  ದೇಶದ ಪ್ರತಿಯೊಬ್ಬರೂ ಭಾರತದ ರಾಷ್ಟ್ರಪತಿಯವರ  ವಿವೇಕಯುತ, ಸಮಯೋಚಿತ ಎಚ್ಚರಿಕೆಯ ಮಾತನ್ನು ಪಾಲಿಸಬೇಕೆಂದು ನಾನು ಬಯಸುತ್ತೇನೆ.”

ನಮ್ಮ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮನಸ್ಸಿನಲ್ಲಿರುವ ಭಯವು, ದೇಶಕ್ಕೆ ಚಿಂತೆಯ   ವಿಷಯವಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು. ‘ಮಹಿಳೆ ಮತ್ತು ಹೆಣ್ಣುಮಕ್ಕಳು ಸುರಕ್ಷಿತವಲ್ಲದ ಸಮಾಜ ಸುಸಂಸ್ಕೃತವಲ್ಲ ಸಮಾಜವಲ್ಲ. ಆ ಪ್ರಜಾಪ್ರಭುತ್ವವೂ ಕಳಂಕಿತವಾಗುತ್ತ ದೆ; ಇದು ನಮ್ಮ ಅಭಿವೃದ್ಧಿಗೆ ದೊಡ್ಡ ಅಡಚಣೆಯಾಗಿದೆ. 

“ನಮ್ಮ ಹುಡುಗಿಯರು ಮತ್ತು ಮಹಿಳೆಯರ ಮನಸ್ಸಿನಲ್ಲಿರುವ ಭಯವು ಕಳವಳಕ್ಕೆ ಕಾರಣವಾಗಿದೆ, ಇದು ದೇಶಕ್ಕೆ ಚಿಂತೆಯ ವಿಷಯವಾಗಿದೆ.  ಭಾರತದಂತಹ ದೇಶದಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಹೇಗೆ ಅಸುರಕ್ಷಿತರಾಗಿರಲು ಸಾಧ್ಯ? ಅವರ ಘನತೆಗೆ ಹೇಗೆ ಹಾನಿಯಾಗುತ್ತದೆ?..ಆಸ್ಪತ್ರೆಯಲ್ಲಿ ಒಬ್ಬ ವೈದ್ಯೆ ಇತರರ ಜೀವ ಉಳಿಸುವ ಮಾನವೀಯತೆಯ ಸೇವೆಯಲ್ಲಿರುವಾಗ?” ಎಂದು ಉಪರಾಷ್ಟ್ರಪತಿಗಳು  ಒತ್ತಿ ಹೇಳಿದರು. ಹುಡುಗಿಯರು ಮತ್ತು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯದ ಅಗತ್ಯವನ್ನು ಒತ್ತಿಹೇಳುತ್ತಾ, ಶ್ರೀ ಧನಕರ್ ಅವರು ಅವರು “ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಆರ್ಥಿಕವಾಗಿ ಸ್ವತಂತ್ರರಾಗಿರಲು ಕರೆ ನೀಡುತ್ತೇನೆ. ನಿಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊರಹಾಕಲು ಇದು ಸರ್ವೋತ್ಕೃಷ್ಟವಾಗಿ ಮುಖ್ಯವಾಗಿದೆ” ಎಂದು ಒತ್ತಿ ಹೇಳಿದರು.

 

“ಹೆಣ್ಣುಮಕ್ಕಳು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾಲುದಾರರು. ಅವರು ಗ್ರಾಮೀಣ ಆರ್ಥಿಕತೆ, ಕೃಷಿ-ಆರ್ಥಿಕತೆ ಮತ್ತು ಅನೌಪಚಾರಿಕ ಆರ್ಥಿಕತೆಯ ಬೆನ್ನೆಲುಬು ಮತ್ತು ಬೆಂಬಲವನ್ನು ರೂಪಿಸುತ್ತಾರೆ” ಎಂದು ಅವರು ಹೇಳಿದರು.

 

ಲಿಂಗ ಆಧಾರಿತ ಅಸಮಾನತೆಗಳನ್ನು ಹೋಗಲಾಡಿಸುವುದು; ಸಮಾಜದಲ್ಲಿ ಮಹಿಳೆಯರಿಗೆ ವೇತನ ಮತ್ತು ಅವಕಾಶಗಳ ವಿಷಯದಲ್ಲಿ ಅಸ್ತಿತ್ವದಲ್ಲಿರುವ ಲಿಂಗ ಅಸಮಾನತೆಯನ್ನು ಉಪರಾಷ್ಟ್ರಪತಿಗಳು ಎತ್ತಿ ತೋರಿಸಿದರು. "ಆದರೆ ಇಂದು ಲಿಂಗ ಅಸಮಾನತೆ ಇಲ್ಲ ಎಂದು ನಾವು ಹೇಳಬಹುದೇ? ಸಮಾನ ವಿದ್ಯಾರ್ಹತೆ ಇದ್ದರೂ ವಿಭಿನ್ನ ವೇತನ, ಉತ್ತಮ ವಿದ್ಯಾರ್ಹತೆ ಇದ್ದರೂ ಸಮಾನ ಅವಕಾಶಗಳಿಲ್ಲ. ಆ ಮನಸ್ಥಿತಿ ಬದಲಾಗಬೇಕು. ಪರಿಸರ ವ್ಯವಸ್ಥೆಯು ಸಮಾನವಾಗಿರಬೇಕು, ಅಸಮಾನತೆಗಳನ್ನು ಕೊನೆಗೊಳ್ಳಬೇಕು, ”ಎಂದು ಶ್ರೀ ಧನಕರ್ ಹೇಳಿದರು.

 

ಭಾರತದ ಪ್ರಸ್ತುತ ಅಭಿವೃದ್ಧಿ ಪಯಣದ ಮೇಲೆ ಬೆಳಕು ಚೆಲ್ಲುತ್ತಾ ಉಪರಾಷ್ಟ್ರಪತಿಗಳು , ಮಹಿಳೆಯರ ಸಂಪೂರ್ಣ ಭಾಗವಹಿಸುವಿಕೆ ಇಲ್ಲದೆ ಈ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. “ಹೆಣ್ಣುಮಕ್ಕಳು ಮತ್ತು ಮಹಿಳೆಯರ ಭಾಗವಹಿಸುವಿಕೆ ಇಲ್ಲದೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶ ಎಂದು ಭಾವಿಸುವ ಚಿಂತನೆಯೇ ತಾರ್ಕಿಕವಲ್ಲ. ಅವರು ಶಕ್ತಿ ಮತ್ತು ಪ್ರತಿಭೆಯನ್ನು ಹೊಂದಿದ್ದಾರೆ. ನಿಮ್ಮ ಪಾಲ್ಗೊಳ್ಳುವಿಕೆಯೊಂದಿಗೆ, ಅಭಿವೃದ್ಧಿ ಹೊಂದಿದ ಭಾರತದ ಕನಸು 2047ಕ್ಕಿತ ಮೊದಲೇ ನನಸಾಗುತ್ತದೆ.” ಎಂದು ಅವರು ಹೇಳಿದರು.

 

ಏಕರೂಪ ನಾಗರಿಕ ಸಂಹಿತೆಯ ಅಗತ್ಯದ ಬಗ್ಗೆ ಗಮನ ಸೆಳೆದ ಉಪರಾಷ್ಟ್ರಪತಿಗಳು, “ಏಕರೂಪ ನಾಗರಿಕ ಸಂಹಿತೆ ಸಾಂವಿಧಾನಿಕ ಆದೇಶವಾಗಿದೆ. ಇದು ನಿರ್ದೇಶನ ತತ್ವಗಳಲ್ಲಿದೆ. ಇದು ವಿಳಂಬವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಅಭಿಪ್ರಾಯಪಟ್ಟಿದೆ, ಆದರೆ ಏಕರೂಪ ನಾಗರಿಕ ಸಂಹಿತೆ ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿತ್ತು, ಇದು ನಿಮಗೆ ಸಣ್ಣ ಪ್ರಮಾಣದ ನ್ಯಾಯದ ಪ್ರಯೋಜನವಾಗಲಿದೆ. ಇದರ ಅರ್ಥವೇನೆಂದು ಗಮನಿಸಿ. ಇದು ಹಲವಾರು ವಿಧಗಳಲ್ಲಿ ಸಹಾಯ ಮಾಡುತ್ತದೆ, ಮುಖ್ಯವಾಗಿ ಇದು ನಿಮಗೆ, ಮಹಿಳೆಯರಿಗೆ ಸಹಾಯ ಮಾಡುತ್ತದೆ.” ಎಂದು ಹೇಳಿದರು.

 

ಆಡಳಿತದಲ್ಲಿ ಮಹಿಳಾ ಪ್ರಾತಿನಿಧ್ಯದಲ್ಲಿನ ಗಮನಾರ್ಹ ಪ್ರಗತಿಯನ್ನು ಶ್ಲಾಘಿಸಿದ ಶ್ರೀ ಧನಕರ್, "ಸಂಸತ್ತು, ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯು ಕ್ರಾಂತಿಕಾರಿ  ಬದಲಾವಣೆ ಉಂಟುಮಾಡುತ್ತದೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ಸೂಕ್ತವಾದ ಜನರು ಇರುವುದನ್ನು ಖಚಿತಪಡಿಸುತ್ತದೆ” ಎಂದು ಅವರು ಹೇಳಿದರು. 

 ಸರ್ಕಾರಿ ಉದ್ಯೋಗಗಳತ್ತ ಯುವಕರ ನಿರಂತರ ಗಮನಹರಿಸುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಧನಕರ್, "ಹುಡುಗ ಮತ್ತು ಹುಡುಗಿಯರಿಗೆ ಹಲವಾರು ಅವಕಾಶಗಳಿರುವುದನ್ನು ನಾನು ನೋಡಿದ್ದೇನೆ ಮತ್ತು ಅನುಭವಿಸಿದ್ದೇನೆ, ಆದರೂ ಸರ್ಕಾರಿ ಉದ್ಯೋಗಗಳ ಗೀಳಿನ ಬಗ್ಗೆ ತುಂಬಾ ನೋವಿದೆ " ಎಂದು ಹೇಳಿದರು. ತರಬೇತಿಯ ವಾಣಿಜ್ಯೀಕರಣವನ್ನು ಟೀಕಿಸಿದ ಅವರು, "ಸಿಲೋಗಳನ್ನು ತೊಡೆದುಹಾಕಲು" ಮತ್ತು ಲಭ್ಯವಿರುವ ಹೇರಳವಾದ ಅವಕಾಶಗಳನ್ನು ಅನ್ವೇಷಿಸಲು ಯುವಕರನ್ನು ಒತ್ತಾಯಿಸಿದರು. 

ದೇಶದ ಹಿತಾಸಕ್ತಿ, ವಿಶೇಷವಾಗಿ ದೇಶ ವಿರೋಧಿ ನಿರೂಪಣೆಗಳಿಗೆ ಸವಾಲುಗಳನ್ನು ನಿರೀಕ್ಷಿಸುವ ಮತ್ತು ತಟಸ್ಥಗೊಳಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಶ್ರೀ ಧನಕರ್, "ಜಗತ್ತು ನಮ್ಮನ್ನು ಹೊಗಳುತ್ತಿದೆ, ಆದರೆ ಕೆಲವರು ನಕಾರಾತ್ಮಕತೆಯನ್ನು ಹರಡುತ್ತಾರೆ. ಅವರು ತಮ್ಮ ಸ್ವಂತ ಹಿತಾಸಕ್ತಿಗಳಿಗಿಂತ ದೇಶದ ಹಿತಾಸಕ್ತಿಯೇ  ಹೆಚ್ಚು ಎಂದುಕೊಂಡಿದ್ದಾರೆಯೇ?" ದೇಶ, ದೇಶದ ಹಿತಾಸಕ್ತಿ ಮತ್ತು ಅಭಿವೃದ್ಧಿಯ ವಿಷಯಕ್ಕೆ ಬಂದರೆ ನಾವು ರಾಜಕೀಯ, ಪಕ್ಷಪಾತ ಮತ್ತು ಸ್ವಹಿತಾಸಕ್ತಿಗಳನ್ನು ಬದಿಗಿಡಬೇಕು ಎಂದು ಅವರು ಎಲ್ಲಾ ನಾಗರಿಕರಿಗೆ ಮನವಿ ಮಾಡಿದರು.

 ಹವಾಮಾನ ಬದಲಾವಣೆಯಿಂದ ಉಂಟಾದ ಅಸ್ತಿತ್ವದ ಬೆದರಿಕೆಯನ್ನು ತಿಳಿಸುತ್ತಾ, ಶ್ರೀ ಧನಕರ್ ಅವರು ನಮ್ಮ ಭೂಮಿಯನ್ನು ರಕ್ಷಿಸಲು ತಕ್ಷಣದ ಕ್ರಮವನ್ನು ತೆಗೆದುಕೊಳ್ಳುವ ತುರ್ತುಸ್ಥಿತಿಯ ಬಗ್ಗೆ ಒತ್ತಿಹೇಳಿದರು. 'ಏಕ್ ಪೆಡ್ ಮಾ ಕೆ ನಾಮ್' (ಒಂದು ಮರ ಮಾತೆಯ ಹೆಸರಿನಲ್ಲಿ) ಉಪಕ್ರಮಕ್ಕಾಗಿ ಪ್ರಧಾನಮಂತ್ರಿಯವರ ಕರೆಯ ಬಗ್ಗೆ ಹೇಳಿದ ಅವರು, ಪ್ರತಿಯೊಬ್ಬರೂ ತಮ್ಮ ತಾಯಿ ಮತ್ತು ಅಜ್ಜಿಯ ಗೌರವಾರ್ಥವಾಗಿ ಮರಗಳನ್ನು ನೆಡಬೇಕೆಂದು ಒತ್ತಾಯಿಸಿದರು. ಉಪಕ್ರಮದ ಬೆಳೆಯುತ್ತಿರುವ ಪರಿಣಾಮವನ್ನು ಒತ್ತಿಹೇಳುತ್ತಾ, ಈ ಉದಾತ್ತ ಉದ್ದೇಶಕ್ಕೆ ಸೇರಲು ಅವರು ನಾಗರಿಕರಿಗೆ ಕರೆ ನೀಡಿದರು. "ನನ್ನನ್ನು ನಂಬಿರಿ, ಪ್ರಧಾನ ಮಂತ್ರಿಯವರ ಕರೆಗೆ ನಿಜವಾದ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ ನೀವು ಅದನ್ನು ಮಾಡಿದಾಗ ಮತ್ತು ನಿಯಮಿತವಾಗಿ ಮಾಡಿದಾಗ, ಫಲಿತಾಂಶವು ಗಮನಾರ್ಹವಾಗಿರುತ್ತದೆ" ಎಂದು ಅವರು ಹೇಳಿದರು.

 

ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಯೋಗೇಶ್ ಸಿಂಗ್, ದೆಹಲಿ ವಿಶ್ವವಿದ್ಯಾಲಯದ ಭಾರತಿ ಕಾಲೇಜಿನ ಅಧ್ಯಕ್ಷರಾದ  ಪ್ರೊ. ಕವಿತಾ ಶರ್ಮಾ, ದೆಹಲಿ ವಿಶ್ವವಿದ್ಯಾಲಯದ ಭಾರತಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಲೋನಿ ಗುಪ್ತಾ, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಇತರ ಗಣ್ಯರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಪೂರ್ಣ ಭಾಷಣಕ್ಕಾಗಿ ಇಲ್ಲಿ ನೋಡಿರಿ : https://pib.gov.in/PressReleasePage.aspx?PRID=2050045

 

*****


(Release ID: 2051272) Visitor Counter : 28