ಜವಳಿ ಸಚಿವಾಲಯ

ತಾಂತ್ರಿಕ ಜವಳಿ ಕ್ಷೇತ್ರದಲ್ಲಿ 4 ನವೋದ್ಯಮ (ಸ್ಟಾರ್ಟ್-ಅಪ್‌) ಗಳನ್ನು ಕೇಂದ್ರ ಸರ್ಕಾರ ಅನುಮೋದಿಸುತ್ತದೆ


ಎನ್‌.ಐ.ಟಿ. ಸೇರಿದಂತೆ 5 ಶಿಕ್ಷಣ ಸಂಸ್ಥೆಗಳು ತಾಂತ್ರಿಕ ಜವಳಿ ಶಿಕ್ಷಣದ ಪಠ್ಯವನ್ನು ಪರಿಚಯಿಸಲಿವೆ

Posted On: 27 AUG 2024 7:06PM by PIB Bengaluru

ನವದೆಹಲಿಯ ಉದ್ಯೋಗ ಭವನದಲ್ಲಿ ಇಂದು ನಡೆದ ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ಅಡಿಯಲ್ಲಿ 8 ನೇ ಸಶಕ್ತ ಕಾರ್ಯಕ್ರಮ ಸಮಿತಿ (ಇಪಿಸಿ) ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ಅವರು ವಹಿಸಿದ್ದರು.  

'ತಾಂತ್ರಿಕ ಜವಳಿಗಳಲ್ಲಿ ಮಹತ್ವಾಕಾಂಕ್ಷೆಯ ಆವಿಷ್ಕಾರಕರ (ಗ್ರೇಟ್)' ಯೋಜನೆಯಡಿಯಲ್ಲಿ ಸಂಶೋಧನೆ ಮತ್ತು ಉದ್ಯಮಶೀಲತೆಗಾಗಿ ಪ್ರತಿಯೊಂದಕ್ಕೂ 50 ಲಕ್ಷ ರೂಪಾಯಿಗಳ ಅನುದಾನದೊಂದಿಗೆ ಸಮಿತಿಯು ಅಂದಾಜು ಅನುದಾನದೊಂದಿಗೆ 4 ನವೋದ್ಯಮ (ಸ್ಟಾರ್ಟ್-ಅಪ್‌)ಗಳನ್ನು ಅನುಮೋದಿಸಿದೆ.5 ಶಿಕ್ಷಣ ಸಂಸ್ಥೆಗಳಿಗೆ 'ತಾಂತ್ರಿಕ ಜವಳಿಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸಕ್ರಿಯಗೊಳಿಸಲು ಸಾಮಾನ್ಯ ಮಾರ್ಗಸೂಚಿಗಳು' ಅಡಿಯಲ್ಲಿ ತಾಂತ್ರಿಕ ಜವಳಿ ಶಿಕ್ಷಣವನ್ನು ಪರಿಚಯಿಸಲು  20 ಕೋಟಿ  ರೂಪಾಯಿ ಅಂದಾಜು ಅನುದಾನಕ್ಕೂ ಸಮಿತಿ ಅನುಮೋದನೆ ನೀಡಿದೆ.

ಈ ಅನುಮೋದಿತ ನವೋದ್ಯಮ (ಸ್ಟಾರ್ಟ್-ಅಪ್) ಯೋಜನೆಗಳು ಸಂಯುಕ್ತಗಳು, ಸುಸ್ಥಿರ ಜವಳಿ ಮತ್ತು ಸ್ಮಾರ್ಟ್ ಜವಳಿಗಳ ಪ್ರಮುಖ ಕಾರ್ಯತಂತ್ರದ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿವೆ.  ಅನುಮೋದಿತ ಶಿಕ್ಷಣ ಸಂಸ್ಥೆಗಳು ಜಿಯೋ ಟೆಕ್ಸಟೈಲ್ಸ್, ಜಿಯೋಸಿಂಥೆಟಿಕ್ಸ್, ಕಾಂಪೋಸಿಟ್ಸ್, ಸಿವಿಲ್ ಸ್ಟ್ರಕ್ಚರ್ಸ್, ಇತ್ಯಾದಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮತ್ತು ತಾಂತ್ರಿಕ ಜವಳಿಗಳ ಅನ್ವಯಗಳಲ್ಲಿ ಹೊಸ ಬಿ.ಟೆಕ್ ಕೋರ್ಸ್‌ಗಳನ್ನು ಪರಿಚಯಿಸಲು ಪ್ರಸ್ತಾಪಿಸಿವೆ.

 

*****



(Release ID: 2049286) Visitor Counter : 20