ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ರೆಪ್ಕೋ ಬ್ಯಾಂಕ್ ಲಾಭಾಂಶದ ರೂ. 19.08 ಕೋಟಿ ಚೆಕ್ ಅನ್ನು ನವದೆಹಲಿಯಲ್ಲಿ ನೀಡಿತು
ಭಾರತ ಸರ್ಕಾರವು ಹೊಂದಿರುವ 76.32 ಕೋಟಿ ಷೇರು ಬಂಡವಾಳದ ಮೇಲೆ @ 25% ಡಿವಿಡೆಂಡ್ ಚೆಕ್ ಆಗಿದೆ
ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ರೆಪ್ಕೊ ಬ್ಯಾಂಕ್ ಭಾರತ ಸರ್ಕಾರದ ಒಂದು ಉದ್ಯಮವಾಗಿದೆ. ರೆಪ್ಕೊ ಬ್ಯಾಂಕ್ ನ ವಾರ್ಷಿಕ ವ್ಯವಹಾರ ರೂ.20,000 ಕೋಟಿ ದಾಟಿದೆ
Posted On:
23 AUG 2024 10:19AM by PIB Bengaluru
ರೆಪ್ಕೋ ಬ್ಯಾಂಕ್ ನವದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಲಾಭಾಂಶದ 19.08 ಕೋಟಿ ರೂ. ಚೆಕ್ ನೀಡಿತು
2023-24 ರ ಆರ್ಥಿಕ ವರ್ಷಕ್ಕೆ ಭಾರತ ಸರ್ಕಾರವು ಹೊಂದಿರುವ 76.32 ಕೋಟಿ ಷೇರು ಬಂಡವಾಳದ ಮೇಲೆ @ 25% ಡಿವಿಡೆಂಡ್ ರೂಪದಲ್ಲಿ ರೂ.19.08 ಕೋಟಿ ಮೌಲ್ಯದ ಚೆಕ್ ಅನ್ನು ರೆಪ್ಕೋ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಇ. ಸಂತಾನಂ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಒ.ಎಂ. ಗೋಕುಲ್ ಹಸ್ತಾಂತರ ಮಾಡಿದರು. ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ, ಮತ್ತು ವಿಶೇಷ ಕರ್ತವ್ಯದ ಅಧಿಕಾರಿ (ಒ.ಎಸ್.ಡಿ), ಕೇಂದ್ರ ಗೃಹ ಸಚಿವಾಲಯದ ಶ್ರೀ ಗೋವಿಂದ್ ಮೋಹನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರೆಪ್ಕೊ ಬ್ಯಾಂಕ್ ಭಾರತ ಸರ್ಕಾರದ ಉದ್ಯಮವಾಗಿದ್ದು, ಗೃಹ ವ್ಯವಹಾರಗಳ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ. ಆರ್ಥಿಕ ವರ್ಷ 2023-24 ರ ಅವಧಿಯಲ್ಲಿ ಬ್ಯಾಂಕ್ ವ್ಯವಹಾರ ಸಮಿಶ್ರವಾಗಿ 11%ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇಂದು ರೆಪ್ಕೊ ಬ್ಯಾಂಕ್ ರೂ.20,000 ಕೋಟಿಯ ವ್ಯವಹಾರವನ್ನು ದಾಟಿದೆ, ಇದು ಗಮನಾರ್ಹ ಸಾಧನೆಯಾಗಿದೆ.
*****
(Release ID: 2048112)
Visitor Counter : 45
Read this release in:
Telugu
,
English
,
Urdu
,
Marathi
,
Hindi
,
Bengali-TR
,
Manipuri
,
Assamese
,
Punjabi
,
Gujarati
,
Tamil