ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ತ್ರಿಪುರಾ ಮುಖ್ಯಮಂತ್ರಿ ಡಾ.ಮಾಣಿಕ್ ಸಹಾ ಅವರೊಂದಿಗೆ ಸಮಾಲೋಚನೆ ಮತ್ತು ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ತ್ರಿಪುರಾದ ನನ್ನ ಸಹೋದರಿಯರು ಮತ್ತು ಸಹೋದರರ ಜತೆ ಮೋದಿ ಸರ್ಕಾರ ಸ್ಥಿರವಾಗಿ ನಿಲ್ಲಲಿದೆ
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಸ್ಥಳೀಯ ರಾಜ್ಯ ಸರ್ಕಾರಕ್ಕೆ ನೆರವು ನೀಡಲು ದೋಣಿಗಳು ಮತ್ತು ಹೆಲಿಕಾಪ್ಟರ್ ಗಳು ಮಾತ್ರವಲ್ಲದೆ ಎನ್ ಡಿಆರ್ ಎಫ್ ತಂಡಗಳನ್ನು ರವಾನಿಸಿದ ಕೇಂದ್ರ ಸರ್ಕಾರ
ಅಗತ್ಯಕ್ಕೆ ತಕ್ಕಂತೆ ಕೇಂದ್ರದಿಂದ ಸಾಧ್ಯವಾದ ಎಲ್ಲಾ ನೆರವಿನ ಭರವಸೆ ನೀಡಿದ ಗೃಹ ಸಚಿವರು
Posted On:
22 AUG 2024 12:35PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತ್ರಿಪುರಾದ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ ಅವರೊಂದಿಗೆ ಮಾತನಾಡಿದರು ಮತ್ತು ರಾಜ್ಯದ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದರು.
ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ, “ಸಿಎಂ ತ್ರಿಪುರಾ, ಡಾ. ಮಾಣಿಕ್ ಸಹಾ ಅವರೊಂದಿಗೆ ಮಾತನಾಡಿದೆ ಮತ್ತು ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯ ಕುರಿತು ಚರ್ಚಿಸಲಾಯಿತು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸ್ಥಳೀಯ ಸರ್ಕಾರಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರವು ದೋಣಿಗಳು ಮತ್ತು ಹೆಲಿಕಾಪ್ಟರ್ ಸೇರಿದಂತೆ ಎನ್ ಡಿಆರ್ ಎಫ್ ನ ತಂಡಗಳನ್ನು ರಾಜ್ಯಕ್ಕೆ ರವಾನಿಸಿದೆ. ಅಗತ್ಯಕ್ಕೆ ತಕ್ಕಂತೆ ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವಿನ ಭರವಸೆ ನೀಡಲಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ತ್ರಿಪುರಾದಲ್ಲಿನ ನಮ್ಮ ಸಹೋದರಿಯರು ಮತ್ತು ಸಹೋದರರೊಂದಿಗೆ ಮೋದಿ ಸರ್ಕಾರ ದೃಢವಾಗಿ ನಿಲ್ಲುತ್ತದೆ’’ ಎಂದು ಹೇಳಿದ್ದಾರೆ.
*****
(Release ID: 2047638)
Visitor Counter : 35
Read this release in:
Telugu
,
English
,
Urdu
,
Marathi
,
Hindi
,
Hindi_MP
,
Manipuri
,
Bengali-TR
,
Assamese
,
Gujarati
,
Tamil