ರಕ್ಷಣಾ ಸಚಿವಾಲಯ
azadi ka amrit mahotsav

ಬಿಇಎಂಎಲ್ ಲಿಮಿಟೆಡ್ ನೊಂದಿಗೆ ಒಪ್ಪಂದಕ್ಕೆ ಭಾರತೀಯ ನೌಕಾಪಡೆ ಅಂಕಿತ


ಸಾಗರ ಉಪಕರಣಗಳು ಮತ್ತು ವ್ಯವಸ್ಥೆಗಳ ಸ್ವದೇಶೀಕರಣವನ್ನು ಹೆಚ್ಚಿಸಲು ಭಾರತೀಯ ನೌಕಾಪಡೆ ಮತ್ತು ಬಿಇಎಂಎಲ್ ಲಿಮಿಟೆಡ್ ಕೈಜೋಡಿಸಿವೆ

Posted On: 21 AUG 2024 11:57AM by PIB Bengaluru

ಭಾರತೀಯ ನೌಕಾಪಡೆಯ ನಿರ್ಣಾಯಕ ಸಾಗರ ಎಂಜಿನಿಯರಿಂಗ್ ಉಪಕರಣಗಳ ಸ್ವದೇಶಿಕರಣಕ್ಕೆ ಹೆಚ್ಚಿನ ಬಲ ಒದಗಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ 'ಶೆಡ್ಯೂಲ್ ಎ' ಕಂಪನಿ ಮತ್ತು ಭಾರತದ ಪ್ರಮುಖ ರಕ್ಷಣಾ ಮತ್ತು ಹೆವಿ ಎಂಜಿನಿಯರಿಂಗ್ ತಯಾರಕ ಸಂಸ್ಥೆಗಳಲ್ಲಿ ಒಂದಾದ ಬಿಇಎಂಎಲ್ ಲಿಮಿಟೆಡ್  24ರ ಆಗಸ್ಟ್ 20 ರಂದು ಭಾರತೀಯ ನೌಕಾಪಡೆಯೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ.

ಭಾರತೀಯ ನೌಕಾಪಡೆಯ ಎಸಿಒಎಂ (ಡಿ &ಆರ್) ರಿಯರ್ ಅಡ್ಮಿರಲ್ ಕೆ ಶ್ರೀನಿವಾಸ್ ಮತ್ತು ಬಿಇಎಂಎಲ್ ರಕ್ಷಣಾ ನಿರ್ದೇಶಕ ಶ್ರೀ ಅಜಿತ್ ಕುಮಾರ್ ಶ್ರೀವಾಸ್ತವ್ ನಡುವೆ ಹೊಸದಿಲ್ಲಿಯ ನೌಕಾ ಪ್ರಧಾನ ಕಚೇರಿಯಲ್ಲಿ ತಿಳಿವಳಿಕೆ ಒಡಂಬಡಿಕೆಗೆ  ಸಹಿ ಹಾಕಲಾಯಿತು. ಈ ಉಪಕ್ರಮವು ನಿರ್ಣಾಯಕ ಸಾಗರ ಎಂಜಿನಿಯರಿಂಗ್ ಉಪಕರಣಗಳು ಮತ್ತು ವ್ಯವಸ್ಥೆಗಳ ಸ್ಥಳೀಯ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ, ಪರೀಕ್ಷೆ ಮತ್ತು ಉತ್ಪನ್ನ ಬೆಂಬಲಕ್ಕಾಗಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ  ಪ್ರಮುಖ ಹೆಜ್ಜೆಯಾಗಿದೆ.

ಭಾರತ ಸರ್ಕಾರದ ಆತ್ಮನಿರ್ಭರ ಭಾರತ್ ಉಪಕ್ರಮದೊಂದಿಗೆ ಜೋಡಿಸಲಾದ ಈ ಪಾಲುದಾರಿಕೆಯು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಬಲಪಡಿಸುವ ಮತ್ತು ವಿದೇಶಿ ಒಇಎಂಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

 

*****


(Release ID: 2047445) Visitor Counter : 48