ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಫಾಕ್ಸ್ ಕಾನ್ ಅಧ್ಯಕ್ಷ ಶ್ರೀ ಯಂಗ್ ಲಿಯು ಅವರ ಭೇಟಿ 

प्रविष्टि तिथि: 14 AUG 2024 5:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹಾನ್ ಹೈ ತಂತ್ರಜ್ಞಾನ ಸಮೂಹ (ಫಾಕ್ಸ್ ಕಾನ್) ಅಧ್ಯಕ್ಷ ಶ್ರೀ ಯಂಗ್ ಲಿಯು ಅವರನ್ನು ಭೇಟಿಯಾದರು. ಭವಿಷ್ಯದ ವಲಯಗಳಲ್ಲಿ ಭಾರತ ನೀಡಬಲ್ಲ ಅದ್ಭುತ ಅವಕಾಶಗಳ ಬಗ್ಗೆ ಬೆಳಕುಚೆಲ್ಲುತ್ತಾ ಶ್ರೀ ಮೋದಿ ಅವರು ಭಾರತದಲ್ಲಿ ಫಾಕ್ಸ್ ಕಾನ್ ನ ಹೂಡಿಕೆ ಯೋಜನೆಗಳ ಬಗ್ಗೆ ಚರ್ಚಿಸಿದರು.  

ಪ್ರಧಾನಮಂತ್ರಿಗಳು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ : 

“ಹಾನ್ ಹೈ ತಂತ್ರಜ್ಞಾನ ಸಮೂಹ (ಫಾಕ್ಸ್ ಕಾನ್) ಅಧ್ಯಕ್ಷ ಶ್ರೀ ಯಂಗ್ ಲಿಯು ಅವರ ಭೇಟಿ ಹರ್ಷದಾಯಕ. ಭವಿಷ್ಯದ ವಲಯಗಳಲ್ಲಿ ಭಾರತ ನೀಡಬಲ್ಲ ಉಜ್ವಲ ಅವಕಾಶಗಳ ಬಗ್ಗೆ ನಾನು ತಿಳಿಸಿದೆ. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಅವರ ಹೂಡಿಕೆ ಯೋಜನೆಗಳ ಬಗ್ಗೆ ನಾವುಗಳು ಉತ್ತಮ ಚರ್ಚೆ ನಡೆಸಿದೆವು.”

 

 

*****


(रिलीज़ आईडी: 2045891) आगंतुक पटल : 69
इस विज्ञप्ति को इन भाषाओं में पढ़ें: Odia , English , Urdu , हिन्दी , Marathi , Manipuri , Bengali , Assamese , Punjabi , Gujarati , Tamil , Telugu , Malayalam