ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ವತಿಯಿಂದ ಲಲಿತ ಕಲಾ ಅಕಾಡೆಮಿಯಲ್ಲಿ ವಿಭಜನೆಯ ಕರಾಳ ಸಂಸ್ಮರಣಾ ದಿನದಂದು ಫೋಟೋ ಪ್ರದರ್ಶನದ ಆಯೋಜನೆ


ಪ್ರದರ್ಶನವು ವೈಯಕ್ತಿಕ ಕಥೆಗಳು, ಅಪಾರ ನೋವು ಮತ್ತು 1947 ರ ವಿಭಜನೆಯ ಶಾಶ್ವತ ದುಶ್ಪರಿಣಾಮವನ್ನು ತೋರಿಸುತ್ತದೆ

Posted On: 14 AUG 2024 4:14PM by PIB Bengaluru

ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್,  (ಕೇಂದ್ರ ಮಾಹಿತಿ ಸಂಸ್ಥೆ) ವಾರ್ತಾ ಮತ್ತು ಪ್ರಸಾರ ಸಚಿವಾಲಯವು "ವಿಭಜನೆಯ ವಿಭಜನೆಯ ಕರಾಳ ಸಂಸ್ಮರಣಾ ದಿನ"ವನ್ನು ಆಚರಿಸುವ ಮೂಲಕ ಆಯೋಜಿಸಲಾದ ಪ್ರದರ್ಶನವನ್ನು ಇಂದು ನವದೆಹಲಿಯ ಲಲಿತ್ ಕಲಾ ಅಕಾಡೆಮಿಯಲ್ಲಿ (ಎಲ್ ಕೆ ಎ) ಉದ್ಘಾಟಿಸಲಾಯಿತು. ಪ್ರದರ್ಶನವು ಆಗಸ್ಟ್ 14, 2024 ರಿಂದ ಆಗಸ್ಟ್ 17, 2024 ರವರೆಗೆ ಎಲ್ ಕೆ ಎ (ನೆಲ ಮಹಡಿ ಗ್ಯಾಲರಿ), ಕೋಪರ್ನಿಕಸ್ ಮಾರ್ಗ, ನವದೆಹಲಿಯಲ್ಲಿ ನಡೆಯಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಈ ಪ್ರದರ್ಶನವು 1947 ರ ದೇಶದ ವಿಭಜನೆಯ ವೈಯಕ್ತಿಕ ಕಥೆಗಳು, ಅಪಾರ ನೋವು ಮತ್ತು ಅಸಂಖ್ಯಾತ ಜನರ ಜೀವನದ ಮೇಲೆ ಬೀರಿದ ಶಾಶ್ವತವಾದ ಪ್ರಭಾವವನ್ನು ಬೆಳಕಿಗೆ ತರಲು ಪ್ರಯತ್ನಿಸುತ್ತದೆ. ಈ ಪ್ರದರ್ಶನವು ಕಷ್ಟವನ್ನು ಅನುಭವಿಸಿದವರ ನೆನಪುಗಳನ್ನು ಗೌರವಿಸಲು ಮತ್ತು ಈ ಐತಿಹಾಸಿಕ ಘಟನೆಯ ಸಂಕೀರ್ಣತೆಗಳು ಮತ್ತು ಪ್ರಾಣ ಹಾನಿಗಳ   ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ಪ್ರದರ್ಶನವು ಐತಿಹಾಸಿಕ ಛಾಯಾಚಿತ್ರಗಳು, ವೀಡಿಯೊಗಳು ಮತ್ತು ಸಂವಾದಾತ್ಮಕ ಪ್ರದರ್ಶನಗಳನ್ನು ಪ್ರದರ್ಶಿಸುತ್ತದೆ, ವಿಷಯದ ಒಳನೋಟಗಳನ್ನು ಒದಗಿಸುತ್ತದೆ.

ಪ್ರದರ್ಶನವು ಗತಕಾಲದ ಪ್ರತಿಬಿಂಬ ಮಾತ್ರವಲ್ಲದೆ ಭವಿಷ್ಯದ ಪೀಳಿಗೆಗೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನರಿಗೆ, ಸಹಾನುಭೂತಿ, ಸಾಮರಸ್ಯ ಮತ್ತು ಏಕತೆಯಿಂದ ಭವಿಷ್ಯವನ್ನು ಹೇಗೆ ನಿರ್ಮಿಸುವುದು ಎಂಬುದರ ಕುರಿತು ಅರ್ಥಪೂರ್ಣ ಸಂವಾದದಲ್ಲಿ ತೊಡಗಿಸಿಕೊಳ್ಳಲು ಒಂದು ಅವಕಾಶವಾಗಿದೆ. ಇದು ಶಾಲಾ ಪಠ್ಯಕ್ರಮ ಮತ್ತು ಮೌಲ್ಯಗಳೊಂದಿಗೆ ಜೋಡಿಸಲಾದ ಮೌಲ್ಯಯುತವಾದ ಶೈಕ್ಷಣಿಕ ಅನುಭವವನ್ನು ಒದಗಿಸುತ್ತದೆ. ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಸಿಬಿಸಿ ಕಲಾವಿದರು ವಿವಿಧ ದೇಶಭಕ್ತಿ ಗೀತೆಗಳ ಪ್ರದರ್ಶನದ ಮೂಲಕ  ಪ್ರೇಕ್ಷಕರನ್ನು ರಂಜಿಸಿದರು.

 

*****


(Release ID: 2045485) Visitor Counter : 33