ರಾಷ್ಟ್ರಪತಿಗಳ ಕಾರ್ಯಾಲಯ
'ಅಮೃತ್ ಉದ್ಯಾನ' ದ ವಾರ್ಷಿಕ ಬೇಸಿಗೆ ಆವೃತ್ತಿ- 2024: ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿಗಳು ಭಾಗಿ
ಅಮೃತ್ ಉದ್ಯಾನವು ಆಗಸ್ಟ್ 16 ರಿಂದ ಸೆಪ್ಟೆಂಬರ್ 15 ರವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ
ಆಗಸ್ಟ್ 29 ರಂದು ಕ್ರೀಡಾಪಟುಗಳಿಗೆ ಮತ್ತು ಸೆಪ್ಟೆಂಬರ್ 5ರಂದು ಶಿಕ್ಷಕರ ವೀಕ್ಷಣೆಗೆ ಮೀಸಲು
प्रविष्टि तिथि:
14 AUG 2024 1:20PM by PIB Bengaluru
ಇಂದು ಆಗಸ್ಟ್ 14ರಂದು ನಡೆದ ಅಮೃತ್ ಉದ್ಯಾನದ ವಾರ್ಷಿಕ ಬೇಸಿಗೆ ಕಾಲದ ಆವೃತ್ತಿ, 2024 ರ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಭಾಗವಹಿಸಿದ್ದರು.
ಅಮೃತ್ ಉದ್ಯಾನವು ನಿರ್ವಹಣೆಯ ದಿನವಾಗಿರುವ ಸೋಮವಾರ ಹೊರತುಪಡಿಸಿ ಸಾರ್ವಜನಿಕರಿಗೆ ವೀಕ್ಷಣೆಗೆ ಆಗಸ್ಟ್ 16 ರಿಂದ ಸೆಪ್ಟೆಂಬರ್ 15ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ (ಕೊನೆಯ ಪ್ರವೇಶ - ಸಂಜೆ 5.15ಕ್ಕೆ) ತೆರೆದಿರುತ್ತದೆ.
ರಾಷ್ಟ್ರೀಯ ಕ್ರೀಡಾ ದಿನ ಅಂಗವಾಗಿ ಆಗಸ್ಟ್ 29 ನ್ನು ಕ್ರೀಡಾಪಟುಗಳಿಗೆ ಮತ್ತು ಸೆಪ್ಟೆಂಬರ್ 5 ಶಿಕ್ಷಕರ ದಿನದಂದು ಶಿಕ್ಷಕರ ವೀಕ್ಷಣೆಗೆ ವಿಶೇಷವಾಗಿ ಮೀಸಲಿಡಲಾಗಿದೆ.
ಉದ್ಯಾನ ಪ್ರವೇಶಕ್ಕೆ ನೋಂದಣಿ ಕಡ್ಡಾಯವಾಗಿದ್ದು, ಪ್ರವೇಶ ಉಚಿತವಾಗಿದೆ. ಸಂದರ್ಶಕರು ರಾಷ್ಟ್ರಪತಿ ಭವನದ ವೆಬ್‌ಸೈಟ್ (https://visit.rashtrapatibhavan.gov.in/) ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಸಾರ್ವಜನಿಕರು ಗೇಟ್ ಸಂಖ್ಯೆ 35ರಲ್ಲಿ ಹೊರಗೆ ಇರಿಸಲಾಗಿರುವ ಸ್ವಯಂ ಸೇವಾ ಕಿಯೋಸ್ಕ್ ಮೂಲಕ ನೋಂದಾಯಿಸಿಕೊಳ್ಳಬಹುದು.
ನಾರ್ತ್ ಅವೆನ್ಯೂ ರಸ್ತೆಯ ಬಳಿ ಇರುವ ರಾಷ್ಟ್ರಪತಿ ಭವನದ ಗೇಟ್ ನಂ. 35 ರಿಂದ ಪ್ರವೇಶವಿರುತ್ತದೆ. ಸಂದರ್ಶಕರ ಅನುಕೂಲಕ್ಕಾಗಿ ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೋ ನಿಲ್ದಾಣದಿಂದ ಗೇಟ್ ನಂ.35 ರವರೆಗೆ ಉಚಿತ ಬಸ್ ಸೇವೆಯೂ ಲಭ್ಯವಿರುತ್ತದೆ.
*****
(रिलीज़ आईडी: 2045233)
आगंतुक पटल : 77