ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೇಶದ ರೈತರ ಸಬಲೀಕರಣಕ್ಕೆ ಸರ್ಕಾರ ಬದ್ಧ – ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

Posted On: 11 AUG 2024 4:50PM by PIB Bengaluru

ದೆಹಲಿಯಲ್ಲಿಂದು 109 ಹೊಸ ಬೆಳೆ ತಳಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರದ ರೈತರ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.  ಹವಾಮಾನ ಸ್ನೇಹಿ ಮತ್ತು ಹೆಚ್ಚಿನ ಇಳುವರಿಯ ತಳಿಗಳು ರೈತರ ಆದಾಯವನ್ನು ವೃದ್ಧಿಸಬಹುದಾಗಿದೆ ಎಂದೂ ಸಹ ಅವರು ತಿಳಿಸಿದ್ದಾರೆ.

ನೈಸರ್ಗಿಕ ಕೃಷಿಯತ್ತ ರೈತರು ಒಲವು ತೋರುತ್ತಿರುವ ಬಗ್ಗೆ ಪ್ರಧಾನಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ.  ರೈತರ ಅನುಭವಗಳನ್ನು ಆಲಿಸಿದ ಅವರು ನೈಸರ್ಗಿಕ ಕೃಷಿಯ ಅನುಕೂಲಗಳ ಬಗ್ಗೆ ವಿವರವಾಗಿ ಚರ್ಚಿಸಿದರು.

ಪ್ರಧಾನಮಂತ್ರಿಗಳ ಎಕ್ಸ್‌ ಪೋಸ್ಟ್‌ ಹೀಗಿದೆ:

“ನಾವು ನಮ್ಮ ರೈತ ಸಹೋದರು – ಸಹೋದರಿಯರನ್ನು ಸಶಕ್ತರಾಗಿಸಲು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ 109 ಹೊಸ ಬೆಳೆ ತಳಿಗಳನ್ನು ಇಂದು ದೆಹಲಿಯಲ್ಲಿ ಬಿಡುಗಡೆ ಮಾಡುವ ಸುಸಂದರ್ಭ ಒದಗಿ ಬಂದಿದೆ. ಹವಾಮಾನ ಸ್ನೇಹಿ ಮತ್ತು ಹೆಚ್ಚಿನ ಇಳುವರಿ ನೀಡುವ ಈ ತಳಿಗಳಿಂದ ಅನ್ನದಾತರ ಆದಾಯವೂ ಹೆಚ್ಚಾಗಲಿದೆ”

“ನಮ್ಮ ರೈತ ಸಹೋದರ- ಸಹೋದರಿಯರು ಅತಿ ಶೀಘ್ರವಾಗಿಯೇ ನೈಸರ್ಗಿಕ ಕೃಷಿಯತ್ತ ಪರಿವರ್ತನೆ ಹೊಂದುತ್ತಿರುವುದು ನನಗೆ ಸಂತೋಷದ ವಿಷಯವಾಗಿದೆ. ಇಂದು ಅವರ ಅನುಭವಗಳನ್ನು ಅವರಿಂದಲೇ ತಿಳಿಯುವ ಅವಕಾಶ ದೊರೆಯಿತು. ಈ ಸಂದರ್ಭದಲ್ಲಿ ನೈಸರ್ಗಿಕ ಕೃಷಿಯ ಅನುಕೂಲಗಳ ಬಗ್ಗೆ ವಿವರವಾಗಿ ಚರ್ಚಿಸಿದೆವು.”
 

 

 

*****


(Release ID: 2044415) Visitor Counter : 35