ಪ್ರಧಾನ ಮಂತ್ರಿಯವರ ಕಛೇರಿ

ದಾಖಲೆಯ ಅನಿಲ ಉತ್ಪಾದನೆಗಾಗಿ ದೇಶದ ನಾಗರಿಕರನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 04 AUG 2024 9:27PM by PIB Bengaluru

ಅನಿಲ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಹೊಸ ದಾಖಲೆಗಾಗಿ ದೇಶದ ಜನತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಧಿಸುವಲ್ಲಿ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆಯು ಬಹಳ ಮುಖ್ಯವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
 
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಎಕ್ಸ್ ಖಾತೆಯ ಸಂದೇಶದಲ್ಲಿ “ದೇಶವು ಅನಿಲ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಸಾಧಿಸಿದೆ” ಎಂದು ತಿಳಿಸಿದರು. “2020-21ರಲ್ಲಿ ಅನಿಲ ಉತ್ಪಾದನೆಯು 28.7 ಬಿಸಿಎಂ (ಬಿಲಿಯನ್‌ ಕ್ಯೂಬಿಕ್‌ ಮೀಟರ್) ಆಗಿತ್ತು. 2023-24ರಲ್ಲಿ ಇದು 36.43 ಬಿಸಿಎಂಗೆ ಏರಿಕೆಯಾಯಿತು. 2026 ರಲ್ಲಿ ಅನಿಲ ಉತ್ಪಾದನೆಯು 45.3 ಬಿಸಿಎಂ ಆಗಲಿದೆ” ಎಂಬ ಅಂದಾಜು ಮಾಹಿತಿಯನ್ನು ಕೇಂದ್ರ ಸಚಿವರು ತಮ್ಮ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರ ಎಕ್ಸ್ ಖಾತೆಯ ಸಂದೇಶಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿಯವರು ಈ ರೀತಿ ಸಂದೇಶ ನೀಡಿದ್ದಾರೆ;

“ಈ ಸಾಧನೆಗಾಗಿ ದೇಶವಾಸಿಗಳಿಗೆ ಅನೇಕ ಅಭಿನಂದನೆಗಳು!

ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಧಿಸುವಲ್ಲಿ ಇಂಧನ ಕ್ಷೇತ್ರದಲ್ಲಿ ನಮ್ಮ ಸ್ವಾವಲಂಬನೆ ಬಹಳ ಮುಖ್ಯ. "ಅನಿಲ ಉತ್ಪಾದನೆಯ ಈ ದಾಖಲೆಯು ಈ ದಿಕ್ಕಿನಲ್ಲಿ ನಮ್ಮ ಬದ್ಧತೆಯ ನೇರ ಪುರಾವೆಯಾಗಿದೆ."

 


*****



(Release ID: 2042076) Visitor Counter : 11