ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಮಿಶ್ರ 10 ಮೀಟರ್‌ ಏರ್‌ ಪಿಸ್ತೂಲ್‌ ತಂಡ ಸ್ಪರ್ಧೆಯಲ್ಲಿ ಮನು ಭಾಕರ್‌ ಮತ್ತು ಸರಬ್ಜೋತ್‌ ಸಿಂಗ್‌ ಕಂಚಿನ ಪದಕ ಗೆದ್ದಿದ್ದಾರೆ


2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 2ನೇ ಪದಕ

Posted On: 30 JUL 2024 4:10PM by PIB Bengaluru

2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳಾದ ಮನು ಭಾಕರ್‌ ಮತ್ತು ಸರಬ್ಜೋತ್‌ ಸಿಂಗ್‌ ಕಂಚಿನ ಪದಕ ಗೆದ್ದಿದ್ದಾರೆ. ಮಿಶ್ರ 10 ಮೀಟರ್‌ ಏರ್‌ ಪಿಸ್ತೂಲ್‌ ತಂಡ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ13 ಶಾಟ್‌ಗಳ ನಂತರ ಇವರಿಬ್ಬರು ಕೊರಿಯಾ ಗಣರಾಜ್ಯವನ್ನು 16-10 ಅಂಕಗಳಿಂದ ಸೋಲಿಸಿದರು.

ಅಂತಿಮ ಸುತ್ತಿನಲ್ಲಿಅವರ ಅತ್ಯುತ್ತಮ ಪ್ರದರ್ಶನವು ಗಮನಾರ್ಹ ಅಭಿಯಾನವನ್ನು ಕೊನೆಗೊಳಿಸಿತು, ಅವರ ಹೆಸರುಗಳಿಗೆ ಮತ್ತು ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಹೆಮ್ಮೆಯ ಸಾಧನೆಯನ್ನು ಸೇರಿಸಿತು. ಇದು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮನು ಗೆದ್ದ ಎರಡನೇ ಕಂಚಿನ ಪದಕವಾಗಿದೆ.

 

ಸರಬ್ಜೋತ್‌ ಸಿಂಗ್‌ 2019ರಿಂದ ಖೇಲೋ ಇಂಡಿಯಾ ಕ್ರೀಡಾಪಟುವಾಗಿದ್ದಾರೆ ಮತ್ತು 4 ಖೇಲೋ ಇಂಡಿಯಾ ಕ್ರೀಡಾಕೂಟಗಳಲ್ಲಿಭಾಗವಹಿಸಿದ್ದಾರೆ ಮತ್ತು ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ ಕ್ರೀಡಾಪಟುವಾಗಿದ್ದಾರೆ. ಮನು ಭಾಕರ್‌ ಖೇಲೋ ಇಂಡಿಯಾ ಕ್ರೀಡಾಕೂಟದ ಮಾಜಿ ಸ್ಪರ್ಧಿಯಾಗಿದ್ದು, ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ ಅಥ್ಲೀಟ್‌ ಆಗಿದ್ದಾರೆ.

 

 

ಅರ್ಹತಾ ಸುತ್ತು:

10 ಮೀಟರ್‌ ಏರ್‌  ಪಿಸ್ತೂಲ್‌ ಮಿಶ್ರ ಅರ್ಹತಾ ಸುತ್ತಿನಲ್ಲಿಮನು ಭಾಕರ್‌ ಮತ್ತು ಸರಬ್ಜೋತ್‌ ಸಿಂಗ್‌ ಒಟ್ಟು 580 ಅಂಕಗಳನ್ನು ಗಳಿಸುವ ಮೂಲಕ ತಮ್ಮ ನಿಖರತೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಿದರು. ಈ ಪ್ರಭಾವಶಾಲಿ ಪ್ರದರ್ಶನವು ಅವರನ್ನು ಅಗ್ರ ಸ್ಪರ್ಧಿಗಳಲ್ಲಿ ಒಬ್ಬರನ್ನಾಗಿ ಮಾಡಿತು, ಜತೆಗೆ ಕಂಚಿನ ಪದಕದ ಶೂಟ್‌-ಆಫ್‌ನಲ್ಲಿಸ್ಥಾನವನ್ನು ಗಳಿಸುವಂತೆ ಮಾಡಿತು.

ಸರ್ಕಾರದ ಪ್ರಮುಖ ಬೆಂಬಲ:

ಸರಬ್ಜೋತ್‌ ಸಿಂಗ್‌

ಪ್ಯಾರಿಸ್‌ ಒಲಿಂಪಿಕ್‌ ಋುತುವಿನ ಸಮಯದಲ್ಲಿಸರಬ್ಜೋತ್‌ ಸಿಂಗ್‌ಗಾಗಿ ಭಾರತ ಸರ್ಕಾರದ ಪ್ರಮುಖ ಮಧ್ಯಸ್ಥಿಕೆಗಳು ಸೇರಿವೆ:
              * ತರಬೇತಿ ಮತ್ತು ಸ್ಪರ್ಧೆಯ ಬೆಂಬಲ: 2023ರ ಜನವರಿ 17ರಿಂದ ಫೆಬ್ರವರಿ 18 ರವರೆಗೆ, ಅವರ ತರಬೇತುದಾರರೊಂದಿಗೆ ತರಬೇತಿ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಹಾಯವನ್ನು ನೀಡಲಾಯಿತು.
              * ವೈಯಕ್ತಿಕ ತರಬೇತುದಾರ ಬೆಂಬಲ: 2024ರ ಜುಲೈ 10 ರಿಂದ ಆಗಸ್ಟ್‌ 1ರವರೆಗೆ ಚಾಟೌರಾಕ್ಸ್‌ನಲ್ಲಿ ನಡೆದ ವೋಲ್ಮೆರೇಂಜ್‌ ಒಟಿಸಿ ಮತ್ತು ಪ್ಯಾರಿಸ್‌ ಒಜಿ 2024ನಲ್ಲಿ ಭಾಗವಹಿಸಲು ಅವರ ವೈಯಕ್ತಿಕ ತರಬೇತುದಾರ ಶ್ರೀ ಅಭಿಷೇಕ್‌ ರಾಣಾ ಅವರ ವೆಚ್ಚಗಳಿಗೆ ಆರ್ಥಿಕ ಸಹಾಯವನ್ನು ನಿಗದಿಪಡಿಸಲಾಗಿದೆ.

ಪಡೆದ ಆರ್ಥಿಕ ನೆರವು:

* ಟಾಫ್ಸ್‌ ಅಡಿಯಲ್ಲಿ:  20,24,928
* ತರಬೇತಿ ಮತ್ತು ಸ್ಪರ್ಧೆಗಳ ವಾರ್ಷಿಕ ಕ್ಯಾಲೆಂಡರ್‌ (ಎಸಿಟಿಸಿ) ಅಡಿಯಲ್ಲಿ:  1,26,20,970

ಪ್ರಮುಖ ಸಾಧನೆಗಳು:

       * ಏಷ್ಯನ್‌ ಗೇಮ್ಸ್‌ (2022): ತಂಡ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ.
    * ಏಷ್ಯನ್‌ ಚಾಂಪಿಯನ್‌ಷಿಪ್‌, ಕೊರಿಯಾ (2023): 10 ಮೀಟರ್‌ ಏರ್‌ ಪಿಸ್ತೂಲ್‌ ವೈಯಕ್ತಿಕ ಸ್ಪರ್ಧೆಯಲ್ಲಿಕಂಚಿನ ಪದಕ, ಭಾರತಕ್ಕೆ ಒಲಿಂಪಿಕ್ಸ್‌ 2024 ಕೋಟಾ ಸ್ಥಾನವನ್ನು ಭದ್ರಪಡಿಸಿದೆ.
       * ವಿಶ್ವಕಪ್‌, ಭೋಪಾಲ್‌ (2023): ವೈಯಕ್ತಿಕ ಸ್ಪರ್ಧೆಯಲ್ಲಿಚಿನ್ನದ ಪದಕ.
       * ವಿಶ್ವಕಪ್‌, ಬಾಕು (2023): ಮಿಶ್ರ ತಂಡ ಸ್ಪರ್ಧೆಯಲ್ಲಿಚಿನ್ನದ ಪದಕ.
    * ಜೂನಿಯರ್‌ ವಿಶ್ವಕಪ್‌, ಸುಹ್ಲ್‌(2022): ತಂಡ ಸ್ಪರ್ಧೆಯಲ್ಲಿಚಿನ್ನ ಮತ್ತು ವೈಯಕ್ತಿಕ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿಎರಡು ಬೆಳ್ಳಿ  ಪದಕಗಳು.
      * ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌, ಲಿಮಾ (2021): ತಂಡ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿಎರಡು ಚಿನ್ನದ ಪದಕಗಳು.

ಮನು ಭಾಕರ್‌

ಪ್ಯಾರಿಸ್‌ ಒಲಿಂಪಿಕ್‌ ಋುತುವಿನಲ್ಲಿ ಸಮಯದಲ್ಲಿ ಮನು ಭಾಕರ್‌ಗಾಗಿ ಭಾರತ ಸರ್ಕಾರದ ಪ್ರಮುಖ ಮಧ್ಯಸ್ಥಿಕೆಗಳು ಸೇರಿವೆ:
       * ಮದ್ದುಗುಂಡು ಮತ್ತು ಶಸ್ತ್ರಾಸ್ತ್ರ ಸೇವೆ: ಮದ್ದುಗುಂಡು ಮತ್ತು ಶಸ್ತ್ರಾಸ್ತ್ರ ಸೇವೆ, ಪೆಲೆಟ್‌ ಮತ್ತು ಮದ್ದುಗುಂಡು ಪರೀಕ್ಷೆ ಮತ್ತು ಬ್ಯಾರೆಲ್‌ ಆಯ್ಕೆಗೆ ನೆರವು ನೀಡಲಾಯಿತು.
     * ತರಬೇತಿ ಬೆಂಬಲ: ಒಲಿಂಪಿಕ್ಸ್‌ ಸಿದ್ಧತೆಗಾಗಿ ಲಕ್ಸೆಂಬರ್ಗ್‌ ನಲ್ಲಿ ವೈಯಕ್ತಿಕ ತರಬೇತುದಾರ ಶ್ರೀ ಜಸ್ಪಾಲ್‌ ರಾಣಾ ಅವರೊಂದಿಗೆ ತರಬೇತಿಗೆ ನೆರವು ನೀಡಲಾಯಿತು.

ಪಡೆದ ಆರ್ಥಿಕ ನೆರವು:

* ಟಿಒಪಿಎಸ್ ಅಡಿಯಲ್ಲಿ: 28,78,634 ರೂ.
* ಎಸಿಟಿಸಿ ಅಡಿಯಲ್ಲಿ: 1,35,36,155 ರೂ.

ಪ್ರಮುಖ ಸಾಧನೆಗಳು:

* ಏಷ್ಯನ್‌  ಗೇಮ್ಸ್‌  (2022) ನಲ್ಲಿ25 ಮೀಟರ್‌ ಪಿಸ್ತೂಲ್‌ ತಂಡದಲ್ಲಿ ಚಿನ್ನದ ಪದಕ
* ಬಾಕುವಿನಲ್ಲಿ(2023) ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ25 ಮೀಟರ್‌ ಪಿಸ್ತೂಲ್‌ ತಂಡದಲ್ಲಿ ಚಿನ್ನದ ಪದಕ
* ಚಾಂಗ್ವಾನ್‌ನಲ್ಲಿ(2023) ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ಯಾರಿಸ್‌ ಗೇಮ್ಸ್‌ 2024ಗೆ ಕೋಟಾ ಸ್ಥಾನ
* ಭೋಪಾಲ್‌ (2023) ವಿಶ್ವಕಪ್‌ನಲ್ಲಿ25 ಮೀಟರ್‌ ಪಿಸ್ತೂಲ್‌ನಲ್ಲಿ ಕಂಚಿನ ಪದಕ
* ಕೈರೋದಲ್ಲಿನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ(2022) 25 ಮೀಟರ್‌ ಪಿಸ್ತೂಲ್‌ನಲ್ಲಿ ಬೆಳ್ಳಿ ಪದಕ
* ಚೆಂಗ್ಡು (2021)ನ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ10 ಮೀಟರ್‌ ಏರ್‌ ಪಿಸ್ತೂಲ್‌ ವೈಯಕ್ತಿಕ ಮತ್ತು ಮಹಿಳಾ ತಂಡ ಸ್ಪರ್ಧೆಯಲ್ಲಿಎರಡು ಚಿನ್ನದ ಪದಕಗಳು

 

*****



(Release ID: 2039297) Visitor Counter : 56