ಗೃಹ ವ್ಯವಹಾರಗಳ ಸಚಿವಾಲಯ

ಏಷ್ಯನ್‌ ವಿಪತ್ತು ಸನ್ನದ್ಧತೆ ಕೇಂದ್ರದ (ಎಡಿಪಿಸಿ) ಅಧ್ಯಕ್ಷರಾಗಿ ಭಾರತ ಅಧಿಕಾರ ವಹಿಸಿಕೊಂಡಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಡಿಯಲ್ಲಿ, ವಿಪತ್ತು ಅಪಾಯ ತಗ್ಗಿಸುವ (ಡಿಆರ್‌ಆರ್‌) ಕ್ಷೇತ್ರದಲ್ಲಿಭಾರತವು ಜಾಗತಿಕ ಮತ್ತು ಪ್ರಾದೇಶಿಕ ನಾಯಕತ್ವದ ಪಾತ್ರವನ್ನು ವಹಿಸುತ್ತಿದೆ

ಭಾರತವು ಡಿಆರ್‌ಆರ್‌ನಲ್ಲಿಹಲವಾರು ಜಾಗತಿಕ ಉಪಕ್ರಮಗಳನ್ನು ಕೈಗೊಂಡಿದೆ, ವಿಶೇಷವಾಗಿ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಅಂತಾರಾಷ್ಟ್ರೀಯ ಒಕ್ಕೂಟವನ್ನು (ಸಿಡಿಆರ್‌ಐ) ಸ್ಥಾಪಿಸಿದೆ

Posted On: 26 JUL 2024 3:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಡಿಯಲ್ಲಿ, ವಿಪತ್ತು ಅಪಾಯ ತಗ್ಗಿಸುವ (ಡಿರ್‌ಆರ್‌) ಕ್ಷೇತ್ರದಲ್ಲಿ ಭಾರತವು ಜಾಗತಿಕ ಮತ್ತು ಪ್ರಾದೇಶಿಕ ನಾಯಕತ್ವದ ಪಾತ್ರವನ್ನು ವಹಿಸುತ್ತಿದೆ. ಈ ದಿಕ್ಕಿನಲ್ಲಿ ಭಾರತವು ಹಲವಾರು ಜಾಗತಿಕ ಉಪಕ್ರಮಗಳನ್ನು ಕೈಗೊಂಡಿದೆ, ವಿಶೇಷವಾಗಿ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಅಂತಾರಾಷ್ಟ್ರೀಯ ಒಕ್ಕೂಟವನ್ನು (ಸಿಡಿಆರ್‌ಐ) ಸ್ಥಾಪಿಸುವುದು.

ಭಾರತ ಸರ್ಕಾರದ ಪ್ರತಿನಿಧಿಯಾಗಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಸದಸ್ಯ ಮತ್ತು ಎಚ್‌ಒಡಿ ಶ್ರೀ ರಾಜೇಂದ್ರ ಸಿಂಗ್‌ ಅವರು 2024-25ನೇ ಸಾಲಿನ ಏಷ್ಯನ್‌ ವಿಪತ್ತು ಸನ್ನದ್ಧತೆ ಕೇಂದ್ರದ (ಎಡಿಪಿಸಿ) ಅಧ್ಯಕ್ಷ ರಾಗಿ ಥಾಯ್ಲೆಂಡ್‌ ಬ್ಯಾಂಕಾಕ್‌ನಲ್ಲಿಗುರುವಾರ ಅಧಿಕಾರ ವಹಿಸಿಕೊಂಡರು. ಎಡಿಪಿಸಿ ಏಷ್ಯಾ ಮತ್ತು ಪೆಸಿಫಿಕ್‌ ಪ್ರದೇಶದಲ್ಲಿವಿಪತ್ತು ಅಪಾಯವನ್ನು ಕಡಿಮೆ ಮಾಡಲು ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಸಹಕಾರ ಮತ್ತು ಅನುಷ್ಠಾನಕ್ಕಾಗಿ ಸ್ವಾಯತ್ತ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಭಾರತ ಮತ್ತು ಎಂಟು ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಕಾಂಬೋಡಿಯಾ, ಚೀನಾ, ನೇಪಾಳ, ಪಾಕಿಸ್ತಾನ, ಫಿಲಿಪೈನ್ಸ್‌, ಶ್ರೀಲಂಕಾ ಮತ್ತು ಥಾಯ್ಲೆಂಡ್‌ ಎಡಿಪಿಸಿಯ ಸ್ಥಾಪಕ ಸದಸ್ಯ ರಾಷ್ಟ್ರಗಳಾಗಿವೆ.

ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ2024ರ ಜುಲೈ 25ರಂದು ನಡೆದ ಎಡಿಪಿಸಿಯ 5ನೇ ಟ್ರಸ್ಟಿ ಮಂಡಳಿ (ಬಿಒಟಿ) ಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿತ್ತು.

 

*****



(Release ID: 2037784) Visitor Counter : 7