ಹಣಕಾಸು ಸಚಿವಾಲಯ

ಪುಟಿದೇಳುವ ಆರ್ಥಿಕತೆಗೆ ಆರೋಗ್ಯ ಕ್ಷೇತ್ರವೇ ನಿರ್ಣಾಯಕ ಅಥವಾ ಪ್ರಮುಖ - ಆರ್ಥಿಕ ಸಮೀಕ್ಷೆ 2024


ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿಗಳ ಜನ ಆರೋಗ್ಯ ಯೋಜನೆ(ಎಬಿ-ಪಿಎಂಜೆಎವೈ)ಗೆ ಮಹಿಳೆಯರೇ 49% ಫಲಾನುಭವಿಗಳು: ಸಮೀಕ್ಷೆ ಗುರುತಿಸಿದೆ

ಏಮ್ಸ್ ದಿಯೋಘರ್‌ನಲ್ಲಿ 10,000ನೇ ಜನೌಷಧಿ ಕೇಂದ್ರದ ಉದ್ಘಾಟನೆ

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿ 64.86 ಕೋಟಿ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಗಳನ್ನು (ಅಭಾ) ಸೃಜಿಸಲಾಗಿದೆ

Posted On: 22 JUL 2024 2:47PM by PIB Bengaluru

ದೀರ್ಘಾವಧಿಯ ಅಂಶಗಳೊಂದಿಗೆ ಅಂತರ್ ಸಂಪರ್ಕಿಸಲಾದ ಉತ್ತಮ ಆರೋಗ್ಯ ವ್ಯವಸ್ಥೆಯು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಜವಾಬ್ದಾರಿ ಹೊತ್ತಿರುವ  ಪುಟಿದೇಳುವ ಆರ್ಥಿಕತೆಗೆ ಅತ್ಯಗತ್ಯ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮಂಡಿಸಿದ 2023-24ರ ಸಾಲಿನ ಆರ್ಥಿಕ ಸಮೀಕ್ಷೆ ಪ್ರತಿಪಾದಿಸಿದೆ.

ಎಲ್ಲಾ ಅಭಿವೃದ್ಧಿ ನೀತಿಗಳಲ್ಲಿ ತಡೆಗಟ್ಟುವ ಮತ್ತು ಉತ್ತೇಜನಾಕಾರಕ ಆರೋಗ್ಯ ಸಂರಕ್ಷಣೆಯ ದೃಷ್ಟಿಕೋನ, ಗುಣಮಟ್ಟದ ಆರೋಗ್ಯ ಸೇವೆಗಳಿಗೆ ಸಾರ್ವತ್ರಿಕ ಪ್ರವೇಶ ಕಲ್ಪಿಸಿ ಎಲ್ಲಾ ವಯೋಮಾನದವರ ಆರೋಗ್ಯ ಮತ್ತು ಯೋಗಕ್ಷೇಮ ಖಾತರಿಪಡಿಸುವ ಸರ್ಕಾರದ ಬದ್ಧತೆಗೆ ಅನುಗುಣವಾಗಿ, ಸಮೀಕ್ಷೆಯು 'ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸಂರಕ್ಷಣೆ' ಖಚಿತಪಡಿಸುವ ಸರ್ಕಾರದ ಪ್ರಮುಖ ಉಪಕ್ರಮಗಳು ಮತ್ತು ಯೋಜನೆಗಳನ್ನು ಎತ್ತಿ ತೋರಿಸಿದೆ.

  • ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿಗಳ ಜನ ಆರೋಗ್ಯ ಯೋಜನೆ(ಎಬಿ-ಪಿಎಂಜೆಎವೈ): 2024 ಜುಲೈ 8ಕ್ಕೆ ಅನ್ವಯವಾಗುವಂತೆ, 34.73 ಕೋಟಿ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು  ಸೃಜಿಸಲಾಗಿದೆ. 2ನೇ ಮತ್ತು 3ನೇ ಹಂತದ ಆಸ್ಪತ್ರೆ ಚಿಕಿತ್ಸೆ ಪಡೆಯಲು ಬಯಸುವ ಹಿಂದುಳಿದ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ. ವೆಚ್ಚದ ಆರೋಗ್ಯ ವಿಮಾ ರಕ್ಷಣೆ ಒದಗಿಸುವ ಗುರಿಯನ್ನು ಇದು ಹೊಂದಿದೆ. ದೇಶಾದ್ಯಂತ 7.37 ಕೋಟಿ ಆಸ್ಪತ್ರೆ ದಾಖಲಾತಿಗಳನ್ನು ಯೋಜನೆ ವ್ಯಾಪ್ತಿಗೆ ತರಲಾಗಿದೆ. ಗಮನಾರ್ಹವಾಗಿ, ಈ ಯೋಜನೆಯ ಫಲಾನುಭವಿಗಳಲ್ಲಿ 49% ಮಹಿಳೆಯರು ಇದ್ದಾರೆ.
  • ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು: ಈ ಯೋಜನೆಯು ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆ ದರಕ್ಕಿಂತ 50-90% ಕಡಿಮೆ ದರದಲ್ಲಿ ಒದಗಿಸುವ ಗುರಿ ಹೊಂದಿದೆ. ಯೋಜನೆಯಡಿ, ಕಳೆದ ವರ್ಷ ಏಮ್ಸ್ ದಿಯೋಘರ್‌ನಲ್ಲಿ 10,000ನೇ ಜನೌಷಧಿ ಕೇಂದ್ರ  ಉದ್ಘಾಟಿಸಲಾಯಿತು. 1965 ಔಷಧಗಳು ಮತ್ತು 293 ಶಸ್ತ್ರಚಿಕಿತ್ಸಾ ಉಪಕರಣಗಳು ಈ ಕೇಂದ್ರಗಳಲ್ಲಿ ಲಭ್ಯವಿದೆ.
  • ಅಮೃತ್(ಕೈಗೆಟುಕುವ ದರದಲ್ಲಿ ಔಷಧಿಗಳು ಮತ್ತು ಚಿಕಿತ್ಸೆಗಾಗಿ ವಿಶ್ವಾಸಾರ್ಹ ಇಂಪ್ಲಾಂಟ್ಸ್): 300ಕ್ಕಿಂತ ಹೆಚ್ಚಿನ ಅಮೃತ್ ಔಷಧಾಲಯಗಳು ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಗಂಭೀರ ಕಾಯಿಲೆಗಳಿಗೆ ಸಹಾಯಧನದ ಔಷಧಗಳನ್ನು ಒದಗಿಸುವುದು ಇವುಗಳ ಗುರಿಯಾಗಿದೆ.
  • ಆಯುಷ್ಮಾನ್ ಭಾವ ಅಭಿಯಾನ: 2023 ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಲಾಯಿತು, ಈ ಅಭಿಯಾನವು ದೇಶದಾದ್ಯಂತ ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಆಯ್ದ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ. ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ನಾಗರಿಕರಿಗೆ ತಿಳಿಸುತ್ತದೆ.

ಅಭಿಯಾನ ಸಮಯದಲ್ಲಿ ಸಾಧಿಸಿದ ಶ್ಲಾಘನೀಯ ಮೈಲಿಗಲ್ಲುಗಳು:

  • 16.96 ಲಕ್ಷ ಯೋಗಕ್ಷೇಮ, ಯೋಗ ಮತ್ತು ಧ್ಯಾನ ಕಲಾಪಗಳು; 1.89 ಕೋಟಿ ಟೆಲಿ ಸಮಾಲೋಚನೆಗಳನ್ನು ನಡೆಸಲಾಗಿದೆ
  • 11.64 ಕೋಟಿ ಜನರು ಉಚಿತ ಔಷಧ ಪಡೆದಿದ್ದಾರೆ. 9.28 ಕೋಟಿ ಜನರು ಉಚಿತ ಡಯಾಗ್ನೋಸ್ಟಿಕ್ ಸೇವೆಗಳನ್ನು ಪಡೆದಿದ್ದಾರೆ.
  • 82.10 ಲಕ್ಷ ತಾಯಂದಿರು ಪ್ರಸವಪೂರ್ವ ತಪಾಸಣೆ(ಎಎನ್ ಸಿ) ಮಾಡಿಸಿಕೊಂಡಿದ್ದಾರೆ, 90.15 ಲಕ್ಷ ಮಕ್ಕಳು ಲಸಿಕೆ ಪಡೆದಿದ್ದಾರೆ
  • 34.39 ಕೋಟಿ ಜನರು ಏಳು ವಿಧದ ತಪಾಸಣೆ(ಟಿಬಿ, ಅಧಿಕ ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಕಣ್ಣಿನ ಪೊರೆ) ಮಾಡಿಸಿಕೊಂಡಿದ್ದಾರೆ.
  • 2 ಕೋಟಿ ರೋಗಿಗಳಿಗೆ ಸಾಮಾನ್ಯ ಹೊರರೋಗಿಗಳ ವಿಭಾಗದಲ್ಲಿ ತಪಾಸಣೆ, ಚಿಕಿತ್ಸಾ ಸಮಾಲೋಚನೆ ನಡೆಸಲಾಗಿದೆ. 90.69 ಲಕ್ಷ ರೋಗಿಗಳು ತಜ್ಞವೈದ್ಯರಿಂದ ಒಪಿಡಿ ಸೌಲಭ್ಯ ಪಡೆದಿದ್ದಾರೆ. 65,094 ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು 1,96,156 ಸಣ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ.
  • 13.48 ಕೋಟಿ ಎಬಿಎಚ್ಎ ಖಾತೆಗಳನ್ನು ತೆರೆಯಲಾಗಿದೆ. 9.50 ಕೋಟಿ ಆಯುಷ್ಮಾನ್ ಕಾರ್ಡ್‌ಗಳನ್ನು ಸೃಜಿಸಲಾಗಿದೆ, 1.20 ಲಕ್ಷ ಆಯುಷ್ಮಾನ್ ಸಭೆಗಳನ್ನು ಆಯೋಜಿಸಲಾಗಿದೆ.
  • 25.25 ಲಕ್ಷ ಆರೋಗ್ಯ ಮೇಳಗಳಲ್ಲಿ 20.66 ಕೋಟಿ ರೋಗಿಗಳ ತಪಾಸಣೆ(31 ಮಾರ್ಚ್ 2024ಕ್ಕೆ ಅನ್ವಯವಾಗುವಂತೆ) ಮಾಡಿ, ಚಿಕಿತ್ಸೆ ನೀಡಲಾಗಿದೆ.

 

  • ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ): 2021ರಲ್ಲಿ ಆರಂಭವಾದ ಈ ಯೋಜನೆಯು ದೇಶದಾದ್ಯಂತ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆ ರೂಪಿಸುವ ಗುರಿ ಹೊಂದಿದೆ. ಈ ಯೋಜನೆಯಡಿ, 64.86 ಕೋಟಿ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ(ಎಬಿಎಚ್ಎ)ಗಳನ್ನು ತೆರೆಯಲಾಗಿದೆ. 3.06 ಲಕ್ಷ ಆರೋಗ್ಯ ಸೌಲಭ್ಯ ನೋಂದಣಿ ಮಾಡಲಾಗಿದೆ. 4.06 ಲಕ್ಷ ಆರೋಗ್ಯ ವೃತ್ತಿಪರರನ್ನು ನೋಂದಾಯಿಸಲಾಗಿದೆ, 39.77 ಕೋಟಿ ಆರೋಗ್ಯ ದಾಖಲೆಗಳನ್ನು ಎಬಿಎಚ್ಎಯೊಂದಿಗೆ ಲಿಂಕ್ ಮಾಡಲಾಗಿದೆ.
  • -ಸಂಜೀವನಿ: 2019ರಲ್ಲಿ ಆರಂಭಿಸಲಾಯಿತು. ದೂರದ ಪ್ರದೇಶಗಳಲ್ಲಿ ವರ್ಚುವಲ್ ವೈದ್ಯರ ಸಮಾಲೋಚನೆಗಾಗಿ ಟೆಲಿಮೆಡಿಸಿನ್‌ಗಾಗಿ ಈ ಯೋಜನೆಯು 128 ಸಂದರ್ಭಗಳಲ್ಲಿ 26.62 ಕೋಟಿ ರೋಗಿಗಳಿಗೆ 1.25 ಲಕ್ಷ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದೆ. ಇದೀಗ ಆಯುಷ್ಮಾನ್ ಆರೋಗ್ಯ ಮಂದಿರ(ಸ್ಪೋಕ್ಸ್)ಗಳ ಹೆಸರಿನಲ್ಲಿ 2024 ಜುಲೈ 9ರ ವರೆಗೆ 15,857 ಹಬ್ ಗಳ ಮೂಲಕ ಸೇವೆ ಒದಗಿಸಿದೆ.

 

*****



(Release ID: 2036479) Visitor Counter : 35