ಹಣಕಾಸು ಸಚಿವಾಲಯ
ಕಳೆದ ಕೆಲವು ವರ್ಷಗಳಲ್ಲಿ ಆರೋಗ್ಯ ಸಂರಕ್ಷಣೆಯು ಹೆಚ್ಚು ಕೈಗೆಟಕುವ ಮತ್ತು ಪ್ರವೇಶಿಸಬಹುದಾದ ವಲಯವಾಗಿದೆ
2020ರಲ್ಲಿ ಸರ್ಕಾರದ ಆರೋಗ್ಯ ವೆಚ್ಚದ (ಜಿಎಚ್ಇ) ಪೈಕಿ ಪ್ರಾಥಮಿಕ ಆರೋಗ್ಯ ಸಂರಕ್ಷಣಾ ವಲಯದ ವೆಚ್ಚದ ಪಾಲು 55.9%ಗೆ ಏರಿಕೆಯಾಗಿದೆ
2020 ರಲ್ಲಿ ಶಿಶು ಮರಣ ದರ ಪ್ರತಿ ಲಕ್ಷದಲ್ಲಿ 28ಕ್ಕೆ ಇಳಿದಿದೆ; ತಾಯಂದಿರ ಮರಣ ದರ ಪ್ರತಿ ಲಕ್ಷ ಶಿಶು ಜನನಗಳಲ್ಲಿ 97ಕ್ಕೆ ಇಳಿಕೆ
Posted On:
22 JUL 2024 2:45PM by PIB Bengaluru
ರಾಷ್ಟ್ರೀಯ ಆರೋಗ್ಯ ಖಾತೆ(ಎನ್ಎಚ್ಎ)ಗಳ ಅಂದಾಜು ವರದಿಯ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ದೇಶದ ಜನತೆಗೆ ಕೈಗೆಟುಕುವ ದರಕ್ಕೆ ಆರೋಗ್ಯ ಸೇವೆ ಸಿಗುತ್ತಿದೆ ಮತ್ತು ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಈ ಸೇವೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮಂಡಿಸಿದ 2023-2024ನೇ ಸಾಲಿನ ಆರ್ಥಿಕ ಸಮೀಕ್ಷೆಯಿಂದ ಈ ಅಂಶ ಹೊರಮೂಡಿದೆ.
ಇತ್ತೀಚಿನ ಎನ್ಎಚ್ಎ ಅಂದಾಜು ವರದಿಗಳ ಪ್ರಕಾರ, 2020ರಲ್ಲಿ ಒಟ್ಟು ಜಿಡಿಪಿಯಲ್ಲಿ ಸರ್ಕಾರದ ಆರೋಗ್ಯ ವೆಚ್ಚ(ಜಿಎಚ್ಇ)ದ ಪಾಲು ಮತ್ತು ಒಟ್ಟು ಆರೋಗ್ಯ ವೆಚ್ಚದಲ್ಲಿ ಜಿಎಚ್ಇ ಪಾಲು ಹೆಚ್ಚಳ ಆಗಿರುವುದನ್ನು ಸಮೀಕ್ಷೆ ಹೈಲೈಟ್ ಮಾಡಿದೆ.
ಇದಲ್ಲದೆ, ವರ್ಷಗಳ ನಂತರದಲ್ಲಿ, ಪ್ರಾಥಮಿಕ ಆರೋಗ್ಯ ಸಂರಕ್ಷಣೆ ವೆಚ್ಚದ ಪಾಲು 2015ರಲ್ಲಿ ಇದ್ದ ಸರ್ಕಾರದ ಆರೋಗ್ಯ ವೆಚ್ಚ(ಜಿಎಚ್ಇ)ದ 51.3%ರಿಂದ 2020ರಲ್ಲಿ ಜಿಎಚ್ಇಯ 55.9%ಗೆ ಏರಿಕೆ ಕಂಡಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಆರೋಗ್ಯ ಸಂರಕ್ಷಣೆಯ ಪಾಲು 2015 ರಲ್ಲಿ ಇದ್ದ ಜಿಎಚ್ಇಯ 73.2%ರಿಂದ 2020ರಲ್ಲಿ 85.5%ಗೆ ಏರಿಕೆ ಕಂಡಿದೆ. ಮತ್ತೊಂದೆಡೆ, ಖಾಸಗಿ ಆರೋಗ್ಯ ವೆಚ್ಚ ಕ್ಷೇತ್ರದ ಪ್ರಾಥಮಿಕ ಮತ್ತು ಮಾಧ್ಯಮಿಕ ಆರೋಗ್ಯ ಸಂರಕ್ಷಣೆಯ ಪಾಲು ಇದೇ ಅವಧಿಯಲ್ಲಿ 83.0%ರಿಂದ 73.7%ಗೆ ಇಳಿದಿದೆ, ಇದು ಹೆಚ್ಚುತ್ತಿರುವ ತೃತೀಯ ರೋಗಗಳ ಹೊರೆ ಮತ್ತು ಪ್ರಾಥಮಿಕ ಆರೋಗ್ಯ ಸಂರಕ್ಷಣೆಗಾಗಿ ಜನರು ಸರ್ಕಾರಿ ಸೌಲಭ್ಯಗಳನ್ನು ವ್ಯಾಪಕವಾಗಿ ಬಳಸುತ್ತಿರುವುದು ಕಾರಣವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ಆರೋಗ್ಯದ ಮೇಲಿನ ಜನರಿಂದ ಆಗಿರುವ ಸಾಮಾಜಿಕ ಭದ್ರತಾ ವೆಚ್ಚಗಳ ಗಮನಾರ್ಹ ಹೆಚ್ಚಳವನ್ನು ಸಮೀಕ್ಷೆ ಗಮನಿಸಿದೆ. ಸಾಮಾಜಿಕ ಭದ್ರತಾ ವೆಚ್ಚ ಪ್ರಮಾಣವು 2015ರಲ್ಲಿ ಇದ್ದ 5.7%ರಿಂದ 2020ರಲ್ಲಿ 9.3%ಗೆ ಏರಿಕೆ ಕಂಡಿದೆ. 2015 ಮತ್ತು 2020ರ ನಡುವೆ ಒಟ್ಟು ಆರೋಗ್ಯ ವೆಚ್ಚ(ಟಿಎಚ್ಇ)ದ ಶೇಕಡಾವಾರು ವೆಚ್ಚದಲ್ಲಿ ನೇರ ಪಾವತಿ ಹಣದ ವೆಚ್ಚ(ಒಒಪಿಇ) ಕುಸಿತ ಕಂಡುಬಂದಿದೆ.
ಈ ಎಲ್ಲಾ ಬೆಳವಣಿಗೆಗಳಿಗೆ ವ್ಯತಿರಿಕ್ತವಾಗಿ, ಸಮೀಕ್ಷೆಯು ಪ್ರಮುಖ ಆರೋಗ್ಯ ಸೂಚಕಗಳಾದ ಶಿಶು ಮರಣ ದರ(ಐಎಂಆರ್)ವನ್ನು ನಿಯಂತ್ರಣಕ್ಕೆ ತರುವ ಸುಧಾರಣೆಗಳನ್ನು ಜಾರಿಗೆ ಮಾಡುವ ಅಗತ್ಯವಿದೆ ಎಂದು ಸಮೀಕ್ಷೆ ಒತ್ತು ನೀಡಿದೆ. 2013ರಲ್ಲಿ ಪ್ರತಿ 1000 ಜನನಗಳಿಗೆ 39 ಶಿಶು ಮರಣಗಳು ಸಂಭವಿಸುತ್ತಿದ್ದವು. ಅದು 2020ರಲ್ಲಿ 1000 ಜನನಗಳಿಗೆ ಶಿಶು ಮರಣ ಪ್ರಮಾಣ 28ಕ್ಕೆ ಇಳಿಕೆ ಕಂಡಿದೆ. ಅಂತೆಯೇ, 2014ರಲ್ಲಿ ಪ್ರತಿ 1 ಲಕ್ಷ ಶಿಶು ಜನನಗಳಲ್ಲಿ ತಾಯಂದಿರ ಮರಣ ಪ್ರಮಾಣ(ಎಂಎಂಆರ್) 167 ಇತ್ತು, ಅದು 2020ರಲ್ಲಿ ಪ್ರತಿ 1 ಲಕ್ಷ ಶಿಶು ಜನನಗಳಲ್ಲಿ 97ಕ್ಕೆ ಇಳಿಕೆ ಕಂಡಿದೆ ಎಂದು ಸಮೀಕ್ಷೆ ತಿಳಿಸಿದೆ.
ಮುಂದುವರಿದು ಸಮೀಕ್ಷೆಯು, ಮುಂದಿನ ದಿನಗಳಲ್ಲಿ ದೇಶದ ಆರೋಗ್ಯ ಮತ್ತು ರೋಗ ಕ್ಷೇತ್ರಕ್ಕೆ ನಿರ್ಣಾಯಕವಾಗಿರುವ 2 ಪ್ರವೃತ್ತಿಗಳನ್ನು ಶಿಫಾರಸು ಮಾಡಿದೆ. ಮೊದಲನೆಯದಾಗಿ, ಆರೋಗ್ಯಕರ ಆಹಾರ ಸೇವನೆ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಆದ್ಯತೆ ನೀಡುವಂತೆ ಸಮೀಕ್ಷೆಯು ಸರ್ಕಾರ ಮತ್ತು ಸಾರ್ವಜನಿಕರಿಗೆ ಸಲಹೆ ನೀಡಿದೆ. ಎರಡನೆಯದಾಗಿ, ಸಾರ್ವಜನಿಕ ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ, ಆರೋಗ್ಯಕ್ಕೆ ಸಂಬಂಧಿಸಿದ ರಾಷ್ಟ್ರೀಯ ಕಾರ್ಯಕ್ರಮಗಳು 'ಕನಿಷ್ಠ ಪ್ರತಿರೋಧದ ಹಾದಿ' ಮೂಲಕ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕಾದರೆ, ರಾಜ್ಯ ಮತ್ತು ಸ್ಥಳೀಯ ಮಟ್ಟದ ಆಡಳಿತಗಳು ಪ್ರಮುಖ ಮತ್ತು ನಿರ್ಣಾಯಕ ಪಾತ್ರ ನಿರ್ವಹಿಸಬೇಕು ಎಂದು ಸಮೀಕ್ಷೆ ಪ್ರತಿಪಾದಿಸಿದೆ.
*****
(Release ID: 2036473)
Visitor Counter : 66
Read this release in:
English
,
Urdu
,
Marathi
,
Hindi
,
Hindi_MP
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam