ಹಣಕಾಸು ಸಚಿವಾಲಯ
azadi ka amrit mahotsav

‘ಎಲ್ಲರನ್ನೊಳಗೊಂಡ ಮತ್ತು ಸಮಗ್ರ ಸಂಪನ್ಮೂಲ ಅಭಿವೃದ್ದಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಶುದ್ಧತೆಯ ವಿಧಾನ  


ಜನ, ನಿರ್ದಿಷ್ಟವಾಗಿ ರೈತರು, ಯುವಕರು, ಮಹಿಳೆಯರು ಮತ್ತು ಬಡವರ ಸರ್ವಾಂಗೀಣ, ಸರ್ವ ವ್ಯಾಪಕ ಹಾಗೂ ಎಲ್ಲರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧ

ಪಿಎಂ ವಿಶ್ವಕರ್ಮ, ಪಿಎಂ ಸ್ವನಿಧಿ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಜೊತೆಯಾಗಿ ಹೆಜ್ಜೆ ಹಾಕಬೇಕು

Posted On: 23 JUL 2024 12:52PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಎಲ್ಲರನ್ನೊಳಗೊಂಡ ಧೋರಣೆಯನ್ನು ಅಳವಡಿಸಿಕೊಳ್ಳಲು “ಶುದ್ಧತ್ವದ ವಿಧಾನ”ವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಸಂಸತ್ತಿನಲ್ಲಿಂದು ಅವರು 2024 – 25 ನೇ ಸಾಲಿನ ಬಜೆಟ್ ಮಂಡಿಸಿದರು. ನಿರ್ದಿಷ್ಟವಾಗಿ ಉದ್ಯೋಗ ಕೇಂದ್ರೀತವಲ್ಲದೇ ಕೌಶಲ್ಯ, ಸಣ್ಣ, ಸೂಕ್ಷ್ಮ, ಮಧ್ಯಮ ಉದ್ಯಮ ವಲಯ ಹಾಗೂ ಮಧ್ಯಮ ವರ್ಗದವರ ಸಮಗ್ರ ಮತ್ತು ಎಲ್ಲರನ್ನೊಳಗೊಂಡ ಅಭಿವೃದ್ಧಿಗೆ ಕೇಂದ್ರ ಬಜೆಟ್ ಒತ್ತು ನೀಡುತ್ತದೆ ಎಂದರು.

‘ಅಭಿವೃದ್ಧಿ ಹೊಂದಿದ ಭಾರತ’ಕ್ಕಾಗಿ ಮಧ್ಯಂತರ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವರು ನೀಲ ನಕ್ಷೆ ಸಿದ್ಧಪಡಿಸಿದ್ದರು. ಇಂದು ಇದಕ್ಕಾಗಿ ಮಾರ್ಗ ನಕ್ಷೆಯನ್ನು ರೂಪಿಸಿದ್ದಾರೆ. 2024 – 25 ನೇ ಸಾಲಿನ ಬಜೆಟ್ ನಲ್ಲಿ ಎಲ್ಲರನ್ನೊಳಗೊಂಡ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರಿಗೂ ಅವಕಾಶಗಳನ್ನು ಕಲ್ಪಿಸಲು 9 ಆದ್ಯತೆಗಳ ಸೃಜನೆಗೆ ಒತ್ತು ನೀಡಿದ್ದಾರೆ. ಈ ಗುರಿಗಳನ್ನು ಸಾಧಿಸಲು ನಿರಂತರ ಪ್ರಯತ್ನಗಳನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪರಿವರ್ತನಾತ್ಮಕ ಬದಲಾವಣೆಗಳಿಗಾಗಿ 2024 – 25 ನೇ ಸಾಲಿನ ಬಜೆಟ್ ನಲ್ಲಿ 9 ವಿಷಯಾಧಾರಿತ ಗುರಿಗಳನ್ನು ನಿಗದಿಪಡಿಸಲಾಗಿದೆ. ಪುಟಿದೇಳುವ ಕೃಷಿ ಮತ್ತು ಉತ್ಪಾದಕತೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ದಿ, ಎಲ್ಲರನ್ನೊಳಗೊಂಡ ಮಾನವಾಭಿವೃದ್ದಿ ಹಾಗೂ ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರಾಭಿವೃದ್ದಿ, ಇಂಧನ ಭದ್ರತೆ, ಮೂಲ ಸೌಕರ್ಯ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ, ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಗುರುತಿಸಲಾಗಿದೆ. ಸರ್ಕಾರ ಜನ, ವಿಶೇಷವಾಗಿ ರೈತರು, ಯುವಕರು, ಮಹಿಳೆಯರು ಮತ್ತು ಬಡವರ ಸರ್ವಾಂಗೀಣ, ಸರ್ವವ್ಯಾಪಿ ಮತ್ತು ಎಲ್ಲರನ್ನೊಳಗೊಳ್ಳುವ ಅಭಿವೃದ್ಧಿಗೆ ಬದ್ಧವಾಗಿದೆ. ಇದಕ್ಕಾಗಿ ಎಲ್ಲಾ ಅರ್ಹರನ್ನು ವಿವಿಧ ಯೋಜನೆಗಳ ವ್ಯಾಪ್ತಿಗೆ ತಂದು ಅವರ ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯವನ್ನು ಸಮಗ್ರವಾಗಿ ಜಾರಿಗೊಳಿಸಲು “ಶುದ್ಧತೆಯ ವಿಧಾನ”ವನ್ನು ಅನುರಿಸಲಾಗುವುದು. ಇದರಿಂದ ಅವರ ಸಾಮರ್ಥ್ಯ ಸುಧಾರಣೆಗಾಗಿ ಸಬಲೀಕರಣಗೊಳಿಸುವ ಸಾಮರ್ಥ್ಯ ವೃದ್ದಿಯಾಗಲಿದೆ ಎಂದು ಹೇಳಿದರು.

ಪರಿಣಾಮಕಾರಿ ಅನುಷ್ಠಾನದ ಮೇಲೆ ಕೇಂದ್ರೀಕರಿಸುವ ಮೂಲಕ ಈ ಆದ್ಯತೆಯ ಮೇಲೆ ನೀಡಿದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಕರಕುಶಲ ಕರ್ಮಿಗಳು, ಕುಶಲ ಕರ್ಮಿಗಳು, ಸ್ವ-ಸಹಾಯ ಗುಂಪುಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳು, ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸಲು ಉದ್ದೇಶಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಪಿಎಂ ವಿಶ್ವಕರ್ಮ ಯೋಜನೆ, ಪಿಎಂ ಸ್ವನಿಧಿ, ರಾಷ್ಟ್ರೀಯ ಜೀವನೋಪಾಯ ಮಿಷನ್, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳು ಜೊತೆಯಾಗಿ ಹೆಜ್ಜೆಹಾಕಬೇಕು ಎಂದರು.

 

*****



(Release ID: 2036463) Visitor Counter : 50