ಹಣಕಾಸು ಸಚಿವಾಲಯ
ವಿದ್ಯುತ್ ಸಂಗ್ರಹಣೆಗಾಗಿ ಪಂಪ್ ಮಾಡಲಾದ ಯೋಜನೆಗೆ ಉತ್ತೇಜನ ನೀಡುವ ನೀತಿ ಜಾರಿಗೆ ಕ್ರಮ
ಸೌರ ಕೋಶಗಳು [ಸೆಲ್ ಗಳು] ಮತ್ತು ಫಲಕಗಳ ಉತ್ಪಾದನೆಗೆ ಬಳಸಲು ವಿನಾಯಿತಿ ಪಡೆದ ಬಂಡಾಳ ಸರಕುಗಳ ಪಟ್ಟಿಯ ವಿಸ್ತರಣೆಗೆ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪ
ಎಯುಎಸ್ಇ ತಂತ್ರಜ್ಞಾನ ಬಳಸಿಕೊಂಡು ಪೂರ್ಣ ಪ್ರಮಾನದಲ್ಲಿ 800 ಮೆಗಾವ್ಯಾಟ್ ವಾಣಿಜ್ಯ ವಿದ್ಯುತ್ ಸ್ಥಾವರ ಸ್ಥಾಪಿಸಲು ಎನ್.ಟಿ.ಪಿ.ಸಿ ಮತ್ತು ಬಿಎಚ್ಇಲ್ ನಡುವೆ ಜಂಟಿ ಉದ್ಯಮ ಸ್ಥಾಪನೆ
ಪಿಎಂ ಸೂರ್ಯಘರ್ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು 1.28 ಕೋಟಿಗೂ ಅಧಿಕ ನೋಂದಣಿಗಳು ಮತ್ತು 14 ಲಕ್ಷ ಅರ್ಜಿಗಳು
Posted On:
23 JUL 2024 12:52PM by PIB Bengaluru
ಉದ್ಯೋಗ, ಪ್ರಗತಿ ಮತ್ತು ಪರಿಸರ ಸುಸ್ಥಿರತೆಯಲ್ಲಿರುವ ಅಸಮತೋಲವನ್ನು ನಿವಾರಿಸಲು, ಇಂಧನ ವಲಯದಲ್ಲಿ ಸೂಕ್ತ ಪರಿವರ್ತನೆ ತರಲು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸೂಕ್ತ ಕ್ರಮಗಳನ್ನು ಪ್ರಕಟಿಸಿದ್ದಾರೆ. ಸಂಸತ್ತಿನಲ್ಲಿ 2024 – 25 ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಉನ್ನತ ಸುಸ್ಥಿರ ಮತ್ತು ಸಮರ್ಥ ಆರ್ಥಿಕ ಪ್ರಗತಿಯ ಸಂಪನ್ಮೂಲವನ್ನು ನಿರ್ಮಿಸಲು, ಲಭ್ಯತೆಗೆ ಅನುಗುಣವಾಗಿ ಇಂಧನ ಭದ್ರತೆಯನ್ನು ಸ್ಥಾಪಿಸುವ, ಪ್ರವೇಶಿಸುವ, ಕೈಗೆಟುವ ರೀತಿಯಲ್ಲಿ ಇದು ಇರಲಿದೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ಸಚಿವರು ಈ ಕೆಳಕಂಡ ಕ್ರಮಗಳನ್ನು ಪ್ರಕಟಿಸಿದ್ದಾರೆ.
ಪಂಪ್ ಮಾಡಿ ಸಂಗ್ರಹಿಸುವ ನೀತಿ
ವಿದ್ಯುತ್ ಸಂಗ್ರಹಣೆಯಲ್ಲಿ ಪಂಪ್ ಮಾಡಿ ವಿದ್ಯುತ್ ಕ್ರೋಢೀಕರಿಸುವ ನೀತಿಗೆ ಉತ್ತೇಜನ ನೀಡುವುದಾಗಿ ಹಣಕಾಸು ಸಚಿವರು ಹೇಳಿದರು. ಒಟ್ಟಾರೆ ಇಂಧನ ಮಿಶ್ರಣದಲ್ಲಿ ಅದರ ಬದಲಾವಣೆಗಳು, ಮರುಕಳಿಸುವ ಸ್ವಭಾವದೊಂದಿಗೆ ನವೀಕರಿಸಬಹುದಾದ ಇಂಧನದಲ್ಲಿ ಬೆಳೆಯುತ್ತಿರುವ, ಸುಗಮವಾಗಿ ಸಂಯೋಜನೆ ಮಾಡಲು ಇದರಿಂದ ಅನುಕೂಲವಾಗಲಿದೆ.
ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಇಂಧನ ಕ್ಷೇತ್ರದ ಪರಿವರ್ತನೆಗಾಗಿ ಸಂಕಿರ್ಣದಾಯಕ ಬದಲಾವಣೆ ತರಲು ಹೋರಾಟ ಮಾಡುವುದು ಅಗತ್ಯವಾಗಿದೆ. ದೇಶದಲ್ಲಿ ಸೌರ ಕೋಶಗಳು ಮತ್ತು ಫಲಕಗಳ ತಯಾರಿಕೆಯಲ್ಲಿ ಬಳಸಲು ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಯನ್ನು ವಿಸ್ತರಿಸುವುದಾಗಿ ಹಣಕಾಸು ಸಚಿವರು ಪ್ರಕಟಿಸಿದರು. ಇದಲ್ಲದೇ ಸೌರ ಗಾಜುಗಳು ಮತ್ತು ತಾಮ್ರದ ಅಂತರ್ ಸಂಪರ್ಕಿತ ದೇಶೀಯ ಉತ್ಪಾದನಾ ಸಾಮರ್ಥ್ಯದ ದೃಷ್ಟಿಯಿಂದ 2024 – 25 ರ ಸಾಲಿನ ಬಜೆಟ್ ನಲ್ಲಿ ಅಬಕಾರಿ ಸುಂಕದ ವಿನಾಯಿಗಳನ್ನು ವಿಸ್ತರಿಸದಿರಲು ನಿರ್ಧರಿಸಲಾಗಿದೆ.
ಸಣ್ಣ ಮತ್ತು ಮಾದರಿ ಅಣು ರಿಯಾಕ್ಟರ್ ಗಳ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ
ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಯಿಂದ ಅಣು ಇಂಧನ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಹಣಕಾಸು ಸಚಿವರು ಒತ್ತಿ ಹೇಳಿದ್ದಾರೆ. ಈ ಅನ್ವೇಷಣೆಗಾಗಿ ಸರ್ಕಾರ [1] ಭಾರತ್ ಸಣ್ಣ ರಿಯಾಕ್ಟರ್ ಗಳನ್ನು ಸ್ಥಾಪಿಸಲು, [2] ಪರಮಾಣು ಶಕ್ತಿಗಾಗಿ ಹೊಸ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಖಾಸಗಿ ವಲಯದೊಂದೊಗೆ ಪಾಲುದಾರಿಕೆಗೆ ಒತ್ತು ನೀಡಲಾಗಿದೆ. ಮಧ್ಯಂತರ ಬಜೆಟ್ ನಲ್ಲಿ ಪ್ರಕಟಿಸಿದ ಆರ್ ಅಂಡ್ ಡಿ ನಿಧಿಯನ್ನು ಈ ವಲಯಕ್ಕೆ ಲಭ್ಯವಾಗುವಂತೆ ಮಾಡಲಾಗುವುದು.
ಅತ್ಯಾಧುನಿಕ ಅಲ್ಟ್ರಾ ಸೂಪರ್ ಕ್ರಿಟಿಕಲ್ ಉಷ್ಣ ವಿದ್ಯುತ್ ಘಟಕಗಳು
ದೇಶೀಯ ಅತ್ಯಾಧುನಿಕ ಅಲ್ಟ್ರಾ ಸೂಪರ್ ಕ್ರಿಟಿಕಲ್ [ಎಯುಎಸ್ಸಿ] ಉಷ್ಣ ವಿದ್ಯುತ್ ಘಟಕಗಳು ಅತಿ ಹೆಚ್ಚು ಸಾಮರ್ಥ್ಯ ಹೊಂದಿದ್ದು, ಇದರ ಅಭಿವೃದ್ಧಿ ಪೂರ್ಣಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವರು ತಿಳಿಸಿದರು. ಎಯುಎಸ್ಇ ತಂತ್ರಜ್ಞಾನ ಬಳಸಿಕೊಂಡು ಪೂರ್ಣ ಪ್ರಮಾಣದಲ್ಲಿ 800 ಮೆಗಾವ್ಯಾಟ್ ವಾಣಿಜ್ಯ ಸ್ಥಾವರ ಸ್ಥಾಪಿಸಲು ಎನ್.ಟಿ.ಪಿ.ಸಿ ಮತ್ತು ಬಿಎಚ್ಇಲ್ ನಡುವೆ ಅಗತ್ಯ ಹಣಕಾಸಿನ ನೆರವಿನೊಂದಿಗೆ ಜಂಟಿ ಉದ್ಯಮ ಸ್ಥಾಪಿಸಲಾಗಿದೆ. ಈ ಸ್ಥಾವರಗಳಿಗೆ ಉನ್ನತ ದರ್ಜೆಯ ಉಕ್ಕು ಮತ್ತು ಇತರೆ 15 ಸುಧಾರಿತ ಸಾಮಗ್ರಿಗಳ ಉತ್ಪಾದನೆಗೆ, ಸ್ಥಳೀಯ ಸಾಮರ್ಥ್ಯದ ಅಭಿವೃದ್ಧಿಯಿಂದ ಆರ್ಥಿಕತೆಗೆ ಬಲವಾದ ಹೆಚ್ಚಿನ ಪ್ರಯೋಜನಗಳನ್ನು ನೀಡಲಾಗುತ್ತದೆ ಎಂದು ಅವರು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.
‘ಹಾರ್ಡ್ ಟು ಅಬೆಟ್’ ಕೈಗಾರಿಕೆಗಳಿಗೆ ಮಾರ್ಗಸೂಚಿ
ಕಠಿವಾಣದ ಕೈಗಾರಿಕೆಗಳನ್ನು ‘ಇಂಧನ ದಕ್ಷತೆಯ’ ಗುರಿಗಳಿಂದ ‘ಹೊರ ಸೂಸುವ ಗುರಿಗಳಿಗೆ’ ವರ್ಗಾಯಿಸಲು ಮಾರ್ಗಸೂಚಿಯನ್ನು ರೂಪಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಈ ಕೈಗಾರಿಕೆಗಳನ್ನು ಪ್ರಸ್ತುತ “ಫರ್ಮಾಮ್, ಅಚೀವ್ ಮತ್ತು ಟ್ರೇಡ್’ ಮೋಡ್ ಗೆ ಪರಿವರ್ತಿಸಲು ಸೂಕ್ತ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಘೋಷಿಸಿದರು.
ಸಾಂಪ್ರದಾಯಿಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಬೆಂಬಲ
ಹಿತ್ತಾಳೆ, ಸೆರಾಮಿಕ್ ಸೇರಿದಂತೆ 60 ಕ್ಲಸ್ಟರ್ ಗಳಲ್ಲಿ ಸಾಂಪ್ರದಾಯಿಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಹೂಡಿಕೆಗೆ ಇಂಧನ ಲೆಕ್ಕ ಪರಿಶೋಧನೆಯನ್ನು ಸುಗಮಗೊಳಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇವುಗಳನ್ನು ಶುದ್ಧ ಇಂಧನದ ಸ್ವರೂಪಗಳಿಗೆ ವರ್ಗಾಯಿಸಲು ಮತ್ತು ಇಂಧನ ದಕ್ಷತೆಯ ಕ್ರಮಗಳ ಅನುಷ್ಠಾನಕ್ಕೆ ತರಲು ಹಣಕಾಸಿನ ಬೆಂಬಲ ಒದಗಿಸಲಾಗುವುದು. ಮುಂದಿನ ಹಂತದಲ್ಲಿ ಇನ್ನೂ 100 ಕ್ಲಸ್ಟರ್ ಗಳಲ್ಲಿ ಈ ಯೋಜನೆಯನ್ನು ಪುನರಾವರ್ತಿಸಲಾಗುವುದು ಎಂದು ಹೇಳಿದರು.
ಪಿಎಂ ಸೂರ್ಯಘರ್ ಯೋಜನೆಯಡಿ ಉಚಿತ ವಿದ್ಯುತ್
ಮಧ್ಯಂತರ ಬಜೆಟ್ ನಲ್ಲಿ ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯನ್ನು ಪ್ರಕಟಿಸಿದ್ದು, ಒಂದು ಕೋಟಿ ಮನೆಗಳ ಮೇಲ್ಛಾವಣಿ ಮೇಲೆ ಸೌರ ಫಲಕಗಳ ಮೂಲಕ ಪ್ರತಿ ತಿಂಗಳು ಗರಿಷ್ಠ 300 ಯೂನಿಟ್ ವಿದ್ಯುತ್ ಒದಗಿಸುವುದಾಗಿ ತಿಳಿಸಲಾಗಿತ್ತು. ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು 1.28 ಕೋಟಿಗೂ ಅಧಿಕ ನೋಂದಣಿಗಳು ಮತ್ತು 14 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಯೋಜನೆಗೆ ಗಣನೀಯ ಪ್ರತಿಕ್ರಿಯೆ ದೊರೆತಿದೆ. ಈ ಯೋಜನೆಗೆ ಸರ್ಕಾರ ಮತ್ತಷ್ಟು ಬೆಂಬಲ ನೀಡಲಿದೆ ಎಂದು ಹಣಕಾಸು ಸಚಿವರು ಹೇಳಿದರು.
*****
(Release ID: 2036459)
Visitor Counter : 63