ಹಣಕಾಸು ಸಚಿವಾಲಯ

ಭಾರತದ ಸೇವಾ ಲ್ಯಾಂಡ್ ಸ್ಕೇಪ್ ದೇಶೀಯ ಸೇವೆಗಳ ವಿತರಣೆ ಮತ್ತು ರಫ್ತುಗಳ ವೈವಿಧ್ಯೀಕರಣದಲ್ಲಿ ತ್ವರಿತ ತಂತ್ರಜ್ಞಾನ-ಚಾಲಿತ ಪರಿವರ್ತನೆಗೆ ಸಾಕ್ಷಿಯಾಗಿದೆ


ಭಾರತೀಯ ರೈಲ್ವೆ ಪ್ರಯಾಣಿಕರ ದಟ್ಟಣೆಯು ವರ್ಷದಿಂದ ವರ್ಷಕ್ಕೆ 5.2% ರಷ್ಟು ಏರಿಕೆಯಾಗಿ ಸುಮಾರು 673 ಕೋಟಿಗೆ ತಲುಪಿದೆ. 2024ರ ಹಣಕಾಸು ವರ್ಷದಲ್ಲಿ 158.8 ಕೋಟಿ ಟನ್ ತಲುಪಿದ ಸರಕು ಸಾಗಣೆಯು ವರ್ಷದಿಂದ ವರ್ಷಕ್ಕೆ 5.3% ಹೆಚ್ಚಳವನ್ನು ಕಂಡಿದೆ

ಭಾರತ ವಾಯುಯಾನ ಕ್ಷೇತ್ರವು ವರ್ಷದಿಂದ ವರ್ಷಕ್ಕೆ 15% ವಿಮಾನ ಪ್ರಯಾಣಿಕರ ಹೆಚ್ಚಳ ಮತ್ತು ವರ್ಷದಿಂದ ವರ್ಷಕ್ಕೆ 7% ಸರಕುಗಳ ಹೆಚ್ಚಳದೊಂದಿಗೆ ಗಣನೀಯವಾಗಿ ಬೆಳೆದು, 2024ರ ಹಣಕಾಸು ವರ್ಷದಲ್ಲಿ 37.6 ಕೋಟಿ ವಿಮಾನ ಪ್ರಯಾಣಿಕರು ಮತ್ತು 33.7 ಟನ್ ಸರಕುಗಳ ವಹಿವಾಟಿಗೆ ತಲುಪಲಿದೆ

2023ರಲ್ಲಿ 92 ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರ ಆಗಮನದೊಂದಿಗೆ ಪ್ರವಾಸೋದ್ಯಮವು ವರ್ಷದಿಂದ ವರ್ಷಕ್ಕೆ 43.5% ಹೆಚ್ಚಳವನ್ನು ಕಂಡಿದೆ

ಹಣಕಾಸು ವರ್ಷ - 2023ರಲ್ಲಿ ಭಾರತದಲ್ಲಿ ವಸತಿ ರಿಯಲ್ ಎಸ್ಟೇಟ್ ಮಾರಾಟವು 2013ಕ್ಕಿಂತ ಅಧಿಕವಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇಕಡಾ 33ರಷ್ಟು ಬೆಳವಣಿಗೆ ಕಾಣುತ್ತಿದೆ

2014ರಲ್ಲಿ ಸುಮಾರು 2,000ದಷ್ಟಿದ್ದ  ಭಾರತ ತಂತ್ರಜ್ಞಾನ ನವೋದ್ಯಮಗಳು 2023ರಲ್ಲಿ ಸರಿಸುಮಾರು 31,000ಕ್ಕೆ ಏರಿವೆ

ಭಾರತೀಯ ಇ-ಕಾಮರ್ಸ್ ಉದ್ಯಮವು 2030ರ ವೇಳೆಗೆ 350 ಬಿಲಿಯನ್ ಡಾಲರ್ ವಹಿವಾಟು ದಾಟುವ ನಿರೀಕ್ಷೆಯಿದೆ

ಮಾರ್ಚ್ 2014ರಲ್ಲಿ ಶೇಕಡಾ 75.2ರಷ್ಟಿದ್ದ ಒಟ್ಟಾರೆ ಟೆಲಿ ಸಾಂದ್ರತೆಯು ಮಾರ್ಚ್ 2024ರಲ್ಲಿ ಶೇಕಡಾ 85.7ಕ್ಕೆ ಏರಿದೆ

Posted On: 22 JUL 2024 2:27PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2023-2024ರ ಆರ್ಥಿಕ ಸಮೀಕ್ಷೆಯು ಪ್ರಮುಖ ಸೇವೆಗಳ ವಲಯವಾರು ಕಾರ್ಯಕ್ಷಮತೆಯನ್ನು ಚರ್ಚಿಸುತ್ತಾ, "ಎರಡು ಮಹತ್ವದ ರೂಪಾಂತರಗಳು ಭಾರತದ ಸೇವೆಗಳ ಲ್ಯಾಂಡ್ ಸ್ಕೇಪ್ ಅನ್ನು ಮರುರೂಪಿಸುತ್ತಿವೆ. ಅವುಗಳೆಂದರೆ, ದೇಶೀಯ ಸೇವಾ ವಿತರಣೆಯ ತ್ವರಿತ ತಂತ್ರಜ್ಞಾನ-ಚಾಲಿತ ರೂಪಾಂತರ ಮತ್ತು ಭಾರತದ ಸೇವಾ ರಫ್ತುಗಳ ವೈವಿಧ್ಯೀಕರಣ" ಎಂದು ಒತ್ತಿಹೇಳಿದ್ದಾರೆ.

ಭಾರತ ಸೇವಾ ವಲಯವು ವ್ಯಾಪಕ ಶ್ರೇಣಿಯ ಆರ್ಥಿಕ ಚಟುವಟಿಕೆಗಳನ್ನು ಒಳಗೊಂಡಿದ್ದು, ಇದನ್ನು ವಿಶಾಲವಾಗಿ ಎರಡು ವರ್ಗಗಳಾಗಿ ವಿಂಗಡಿಸಬಹುದಾಗಿದೆ, ಅವುಗಳೆಂದರೆ:

    1. ಸಂಪರ್ಕ-ತೀವ್ರ ಸೇವೆಗಳು (ಭೌತಿಕ ಸಂಪರ್ಕ ಆಧಾರಿತ ಸೇವೆಗಳು): ಈ ವಲಯವು ವ್ಯಾಪಾರ, ಆತಿಥ್ಯ, ಸಾರಿಗೆ, ರಿಯಲ್ ಎಸ್ಟೇಟ್, ಸಾಮಾಜಿಕ, ಸಮುದಾಯ ಮತ್ತು ವೈಯಕ್ತಿಕ ಸೇವೆಗಳನ್ನು ಒಳಗೊಂಡಿದೆ.
      2. ಅಸಂಪರ್ಕ-ತೀವ್ರ ಸೇವೆಗಳು (ಮಾಹಿತಿ ತಂತ್ರಜ್ಞಾನ ಸೇವೆಗಳು, ಟೆಕ್ ಸ್ಟಾರ್ಟ್ಅಪ್ ಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು): ಈ ವಲಯವು ಹಣಕಾಸು, ಮಾಹಿತಿ ತಂತ್ರಜ್ಞಾನ, ವೃತ್ತಿಪರ, ಸಂವಹನ, ಪ್ರಸಾರ ಮತ್ತು ಸಂಗ್ರಹಣಾ ಸೇವೆಗಳನ್ನು ಒಳಗೊಂಡಿದೆ. ಇದು ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ಸೇವೆಗಳನ್ನು ಕೂಡಾ ಒಳಗೊಂಡಿದೆ.

 

ಭೌತಿಕ ಸಂಪರ್ಕ ಆಧಾರಿತ ಸೇವೆಗಳು:

ರೈಲುಗಳು, ಬಸ್ಸುಗಳು, ಟ್ಯಾಕ್ಸಿಗಳು ಮತ್ತು ವಿಮಾನಯಾನಗಳ ಮೂಲಕ ಪ್ರಯಾಣಿಕರ ಸಾಗಣೆಯಿಂದ ಹಿಡಿದು ಹಡಗು ಕಂಪನಿಗಳು, ಸರಕು ರವಾನೆದಾರರು ಮತ್ತು ಕೊರಿಯರ್ ಸೇವೆಗಳಿಂದ ಅನುಕೂಲಕರವಾದ ಸರಕು ಸಾಗಣೆಯವರೆಗೆ ವೈವಿಧ್ಯಮಯ ಮೂಲಸೌಕರ್ಯ ಜಾಲಗಳಲ್ಲಿ ಸರಕುಗಳು, ಜನರು ಮತ್ತು ಮಾಹಿತಿಯ ತಡೆರಹಿತ ಚಲನೆಯನ್ನು ನೀಡಲಾಗುವ ಸೇವೆಗಳು ಈ ಅಸಂಖ್ಯಾತ ಸೇವೆಗಳಲ್ಲಿ ಸೇರಿವೆ.


             1. ರಸ್ತೆ ಮಾರ್ಗಗಳು: ಭಾರತದಲ್ಲಿ ಸರಕುಗಳನ್ನು ಗಣನೀಯವಾಗಿ ರಸ್ತೆಯ ಮೂಲಕ ಸಾಗಿಸಲಾಗುತ್ತದೆ. ಅದರಂತೆ, ವಿವಿಧ ಉಪಕ್ರಮಗಳ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರ ಅನುಕೂಲವನ್ನು ಹೆಚ್ಚಿಸಲಾಗಿದೆ:
                •    ಟೋಲ್ ಡಿಜಿಟಲೀಕರಣವು ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು 2014ರಲ್ಲಿದ್ದ 734 ಸೆಕೆಂಡುಗಳಿಂದ 2024ರಲ್ಲಿ 47 ಸೆಕೆಂಡುಗಳಿಗೆ ತೀವ್ರವಾಗಿ ಕಡಿಮೆ ಮಾಡಿದೆ.
          •    ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಂಜಿನಿಯರಿಂಗ್ (ರಸ್ತೆಗಳು ಮತ್ತು ವಾಹನಗಳು), ಜಾರಿ, ತುರ್ತು ಆರೈಕೆ ಮತ್ತು ಶಿಕ್ಷಣ ಎಂಬ ಸಮಗ್ರ '4ಇ' ಕಾರ್ಯತಂತ್ರವನ್ನು ರೂಪಿಸಿದೆ.
                •   ನೆಟ್ವರ್ಕ್ ಯೋಜನೆ ಮತ್ತು ದಟ್ಟಣೆಯ ಅಂದಾಜುಗಳಿಗಾಗಿ ಸರ್ಕಾರವು ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಪೋರ್ಟಲ್ ಅನ್ನು ಬಳಸಿಕೊಂಡಿದೆ.

 

           2. ಭಾರತೀಯ ರೈಲ್ವೆ: ರೈಲು ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ವಿಕಸಿತ ಭಾರತದ ಸಾಮರ್ಥ್ಯ ನಿರ್ಮಾಣಕ್ಕಾಗಿ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಭಾರತೀಯ ರೈಲ್ವೆಯು ಅನೇಕ ಸೇವೆಗಳನ್ನು ಆಯೋಜಿಸಿದೆ.
            •    ಭಾರತೀಯ ರೈಲ್ವೆಯಲ್ಲಿ ಪ್ರಾರಂಭವಾದ ಪ್ರಯಾಣಿಕರ ದಟ್ಟಣೆಯು ಹಣಕಾಸು ವರ್ಷ 2024ರಲ್ಲಿ 673 ಕೋಟಿ ಆಗಿದೆ (ತಾತ್ಕಾಲಿಕ ವಾಸ್ತವಿಕವಾಗಿ). ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ದಟ್ಟಣೆಯು ಸುಮಾರು 5.2 ಪ್ರತಿಶತದಷ್ಟು ಹೆಚ್ಚಾಗಿದೆ.
        •    ಭಾರತೀಯ ರೈಲ್ವೆಯು 2024ರ ಹಣಕಾಸು ವರ್ಷದಲ್ಲಿ (ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಹೊರತುಪಡಿಸಿ) 158.8 ಕೋಟಿ ಟನ್ ಆದಾಯ ಗಳಿಸುವ ಸರಕುಗಳನ್ನು ಸಾಗಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 5.3ರಷ್ಟು ಹೆಚ್ಚಳವನ್ನು ತೋರಿಸುತ್ತದೆ.
            •    ಪ್ರಯಾಣಿಕರ ಅನುಭವವನ್ನು ಉತ್ತಮ ಗೊಳಿಸಲು, ಭಾರತೀಯ ರೈಲ್ವೆಯು 6108 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯಗಳನ್ನು ಒದಗಿಸಿದೆ. ಇದು ಗ್ರಾಮೀಣ ಮತ್ತು ನಗರ ನಾಗರಿಕರ ನಡುವಿನ ಡಿಜಿಟಲ್ ಅಂತರವನ್ನು ಕಡಿಮೆ ಮಾಡುತ್ತದೆ.

 

        3. ಬಂದರುಗಳು, ಜಲಮಾರ್ಗಗಳು ಮತ್ತು ಹಡಗು: ಬಂದರು ವಲಯವು ದೈನಂದಿನ ಹಡಗು ಮತ್ತು ಸರಕು ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಸಾಗರ್ ಸೇತು ಅಪ್ಲಿಕೇಶನ್ ಅನ್ನು ಬಳಸಿಕೊಳ್ಳುತ್ತಿದೆ. ಇದು ಎಲ್ಲಾ ಜಲಮಾರ್ಗ ಸಾಗಾಣಿಕಾ ಕಾರ್ಯಕ್ರಮಗಳ ಕೇಂದ್ರ ಬಿಂದುವಾಗಿದೆ.
        •    ಸಾಗರ್ ಸೇತು ಭಾರತದ ಎಲ್ಲಾ 13 ಪ್ರಮುಖ ಬಂದರುಗಳು, 22 ಪ್ರಮುಖವಲ್ಲದ ಬಂದರುಗಳು ಮತ್ತು 28 ಖಾಸಗಿ ಟರ್ಮಿನಲ್ ಗಳಿಗೆ ಸಂಯೋಜಿಸಲ್ಪಟ್ಟಿದೆ.
    •    ರಾಷ್ಟ್ರೀಯ ಜಲಮಾರ್ಗಗಳಲ್ಲಿ ರಿವರ್ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಒತ್ತು ನೀಡಲಾಗಿದೆ. 2024ರ ಹಣಕಾಸು ವರ್ಷದಲ್ಲಿ ರಾತ್ರಿಯ ಕ್ರೂಸ್ ಪ್ರವಾಸಗಳಲ್ಲಿ ಶೇಕಡಾ 100ರಷ್ಟು ಏರಿಕೆ ಕಂಡುಬಂದಿದೆ.

 

       4. ವಾಯುಮಾರ್ಗಗಳು: ಪ್ರಪಂಚದಲ್ಲಿ ಭಾರತವು ಮೂರನೇ ಅತಿದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆಯಾಗಿದ್ದು, ಭಾರತದ ವಾಯುಯಾನ ಕ್ಷೇತ್ರವು ಗಣನೀಯ ಬೆಳವಣಿಗೆಯನ್ನು ತೋರಿಸಿದೆ. ಭಾರತೀಯ ವಿಮಾನ ನಿಲ್ದಾಣಗಳಲ್ಲಿ ನಿರ್ವಹಿಸಲಾದ ಒಟ್ಟು ವಿಮಾನ ಪ್ರಯಾಣಿಕರಲ್ಲಿ ಶೇಕಡಾ 15ರಷ್ಟು ಹೆಚ್ಚಳದೊಂದಿಗೆ 2024ರ ಹಣಕಾಸು ವರ್ಷದಲ್ಲಿ 37.6 ಕೋಟಿಯನ್ನು ತಲುಪಿದೆ.
        •    2024ರ ಹಣಕಾಸು ವರ್ಷದಲ್ಲಿ ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆಯು ಶೇ.13ರಷ್ಟು ಏರಿಕೆಯಾಗಿ 30.6 ಕೋಟಿಗೆ ತಲುಪಿದ್ದರೆ, ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ದಟ್ಟಣೆಯು ಶೇ.22ರಷ್ಟು ಏರಿಕೆಯಾಗಿ 7 ಕೋಟಿಗೆ ತಲುಪಿದೆ.
        •    ಭಾರತೀಯ ವಿಮಾನ ನಿಲ್ದಾಣಗಳಲ್ಲಿ ನಿರ್ವಹಿಸಲಾದ ವಾಯು ಸರಕು 2024ರ ಹಣಕಾಸು ವರ್ಷದಲ್ಲಿ ಶೇ.7ರಷ್ಟು ಏರಿಕೆಯಾಗಿ 33.7 ಲಕ್ಷ ಟನ್ ಗಳಿಗೆ ತಲುಪಿದೆ.
    •    ಕೇಂದ್ರ ಸರ್ಕಾರವು ದೇಶಾದ್ಯಂತ 21 ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು ಅನುಮೋದಿಸಿ, ಪ್ರಬುದ್ದ ಬಂಡವಾಳ ವೆಚ್ಚ ಯೋಜನೆಯ ಬೆಂಬಲದೊಂದಿಗೆ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸ ಟರ್ಮಿನಲ್ ಕಟ್ಟಡಗಳನ್ನು ಕಾರ್ಯಗತಗೊಳಿಸಿದೆ.
   •    ಪ್ರಾದೇಶಿಕ ಸಮಾನತೆಯನ್ನು ಉತ್ತೇಜಿಸಲು, 2016ರಲ್ಲಿ ಪ್ರಾರಂಭಿಸಲಾದ 'ಉಡೇ ದೇಶ್ ಕಾ ಆಮ್ ನಾಗರಿಕ್' (ಉಡಾನ್) ಯೋಜನೆಯು, ಪ್ರಾರಂಭದಿಂದ 85 ಕಾಯ್ದಿರಿಸದ ಮತ್ತು ಕಡಿಮೆ ಸೇವೆಯ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ವಿವಿಧ 579 ಪ್ರಾದೇಶಿಕ ಸಂಪರ್ಕ ಯೋಜನಾ ಮಾರ್ಗಗಳಲ್ಲಿ 141 ಲಕ್ಷಕ್ಕೂ ಹೆಚ್ಚು ದೇಶೀಯ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ.
       •    ಡಿಜಿ ಯಾತ್ರೆಯಂತಹ ಉಪಕ್ರಮಗಳು ತಂತ್ರಜ್ಞಾನದ ಮೂಲಕ ದಕ್ಷತೆಯನ್ನು ಹೆಚ್ಚಿಸುತ್ತಿವೆ.
      •    ದೇಶದ ಪೈಲಟ್ ಗಳಲ್ಲಿ ಮಹಿಳೆಯರ ಪಾಲು ಶೇ.15ರಷ್ಟಿದ್ದು, ಇದು ಜಾಗತಿಕ ಸರಾಸರಿಗಿಂತ ಮೂರು ಪಟ್ಟು ಹೆಚ್ಚಾಗಿದೆ. 2023ರಲ್ಲಿ, ಒಟ್ಟು 1622 ವಾಣಿಜ್ಯ ಪೈಲಟ್ ಪರವಾನಗಿಗಳನ್ನು ನೀಡಲಾಗಿದ್ದು, ಅದರಲ್ಲಿ 18 ಪ್ರತಿಶತವನ್ನು ಮಹಿಳೆಯರಿಗೆ ನೀಡಲಾಗಿದೆ.

 

      5. ಪ್ರವಾಸೋದ್ಯಮ: ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ವೇಗವಾಗಿ ವಿಸ್ತರಿಸುತ್ತಿದ್ದು, ವಿಶ್ವ ಆರ್ಥಿಕ ವೇದಿಕೆಯ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ - 2024ರಲ್ಲಿ ಭಾರತವು 39ನೇ ಸ್ಥಾನದಲ್ಲಿದೆ.
    •    ಸಾಂಕ್ರಾಮಿಕ ರೋಗದ ನಂತರದ ಪುನರುಜ್ಜೀವನದ ಸಕಾರಾತ್ಮಕ ಚಿಹ್ನೆಗಳನ್ನು ತೋರಿಸುತ್ತಾ, ಪ್ರವಾಸೋದ್ಯಮ ಉದ್ಯಮವು 2023ರಲ್ಲಿ 92 ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿದೆ. ಇದು ಶೇಕಡಾ 43.5ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.
       •    ಭಾರತವು ಪ್ರವಾಸೋದ್ಯಮದ ಮೂಲಕ 2.3 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ವಿದೇಶಿ ವಿನಿಮಯವನ್ನು ಗಳಿಸಿ ಗಮನಾರ್ಹ ಮುನ್ನಡೆ ಸಾಧಿಸಿದೆ. ಇದು ಶೇಕಡಾ 65.7ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.
   •  ಸ್ವದೇಶ ದರ್ಶನ 2.0, 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 55 ತಾಣಗಳನ್ನು ಗುರಿಯಾಗಿಸಿಕೊಂಡು ಸಮಗ್ರ ಪ್ರವಾಸೋದ್ಯಮ ತಾಣ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ.

 

      6. ರಿಯಲ್ ಎಸ್ಟೇಟ್: ರಿಯಲ್ ಎಸ್ಟೇಟ್ ಮತ್ತು ವಸತಿಗಳ ಮಾಲೀಕತ್ವವು ಕಳೆದ ದಶಕದಲ್ಲಿ ಒಟ್ಟಾರೆ ಮೌಲ್ಯವರ್ಧನೆಯ ಶೇಕಡಾ 7ಕ್ಕಿಂತ ಹೆಚ್ಚಾಗಿದೆ. ಇದು ಆರ್ಥಿಕತೆಯಲ್ಲಿ ಅದರ ಅವಿಭಾಜ್ಯ ಪಾತ್ರವನ್ನು ಎತ್ತಿ ಹಿಡಿಯುತ್ತದೆ.
      •    2023ರಲ್ಲಿ, ಭಾರತದಲ್ಲಿ ವಸತಿ ರಿಯಲ್ ಎಸ್ಟೇಟ್ ಮಾರಾಟವು 2013ಕ್ಕಿಂತ ಗರಿಷ್ಠ ಮಟ್ಟದಲ್ಲಿದೆ, ವರ್ಷದಿಂದ ವರ್ಷಕ್ಕೆ ಇದು ಶೇಕಡಾ 33ರಷ್ಟು ಬೆಳವಣಿಗೆಯನ್ನು ಕಂಡಿದೆ, ಅಗ್ರ ಎಂಟು ನಗರಗಳಲ್ಲಿ ಒಟ್ಟು 4.1 ಲಕ್ಷ ಯುನಿಟ್ ಗಳ ಮಾರಾಟವಾಗಿದೆ.
     •    ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆ, ಸರಕು ಮತ್ತು ಸೇವಾ ತೆರಿಗೆ, ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಮತ್ತು ದಿವಾಳಿ ಮತ್ತು ದಿವಾಳಿತನ, ಪಿಎಂಎವೈ (ಯು) -ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯ ಬಡ್ಡಿ ಸಹಾಯಧನದಂತಹ ನೀತಿ ಸುಧಾರಣೆಗಳು ವಸತಿ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗಿವೆ.
    •    ಕ್ರಿಸಿಲ್ (ಕ್ರೆಡಿಟ್ ರೇಟಿಂಗ್ ಇನ್ಫಾರ್ಮೇಶನ್ ಸರ್ವೀಸಸ್ ಆಫ್ ಇಂಡಿಯಾ ಲಿಮಿಟೆಡ್) ವರದಿಯ ಪ್ರಕಾರ, ಭಾರತದಲ್ಲಿ ಗೃಹ ಸಾಲ ಮಾರುಕಟ್ಟೆಯು 2018ರ ಹಣಕಾಸು ವರ್ಷದಿಂದ 2023ರ ಹಣಕಾಸು ವರ್ಷದವರೆಗೆ ಸುಮಾರು 13 ಪ್ರತಿಶತದಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರದಲ್ಲಿ ಬೆಳೆದಿದೆ. ಭಾರತದಲ್ಲಿ ಗೃಹ ಸಾಲ ಮಾರುಕಟ್ಟೆಯು ಶೇಕಡಾ 13ರಿಂದ 15ರಷ್ಟು ವಾರ್ಷಿಕ ಬೆಳವಣಿಗೆಯ ದರದಲ್ಲಿ ಬೆಳೆಯುವುದನ್ನು ಮುಂದುವರಿಸುವ ನಿರೀಕ್ಷೆಯಿದೆ. ಇದು 2026ರ ಹಣಕಾಸು ವರ್ಷದ ವೇಳೆಗೆ 42 ಲಕ್ಷ ಕೋಟಿ ರೂ.ಗಳಿಂದ 44 ಲಕ್ಷ ಕೋಟಿ ರೂ.ಗೆ ತಲುಪುವ ನಿರೀಕ್ಷೆಯಿದೆ.

 

ಮಾಹಿತಿ ತಂತ್ರಜ್ಞಾನ ಸೇವೆಗಳು, ಟೆಕ್ ಸ್ಟಾರ್ಟ್ ಅಪ್ ಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು:

ಕಳೆದ ದಶಕದಲ್ಲಿ, ಮಾಹಿತಿ ಮತ್ತು ಕಂಪ್ಯೂಟರ್ ಸಂಬಂಧಿತ ಸೇವೆಗಳು ಹೆಚ್ಚು ಮಹತ್ವದ ವಿಷಯಗಳಾಗಿದ್ದು, ಒಟ್ಟು ವರ್ಧಿತ ಮೌಲ್ಯವರ್ಧನೆಯಲ್ಲಿ ಅವುಗಳ ಪಾಲು 2013ರ ಹಣಕಾಸು ವರ್ಷದಲ್ಲಿ ಶೇಕಡಾ 3.2ರಿಂದ 2023ರ ಹಣಕಾಸು ವರ್ಷದಲ್ಲಿ ಶೇಕಡಾ 5.9ಕ್ಕೆ ಏರಿದೆ. ಸಾಂಕ್ರಾಮಿಕ-ಪ್ರೇರಿತ ಆರ್ಥಿಕ ಕುಸಿತದ ಹೊರತಾಗಿಯೂ, ಈ ವಲಯವು 2021ರ ಹಣಕಾಸು ವರ್ಷದಲ್ಲಿ ಶೇಕಡಾ 10.4ರಷ್ಟು ನೈಜ ಬೆಳವಣಿಗೆಯನ್ನು ಸಾಧಿಸಿದೆ. ಐಟಿ ಸೇವೆಗಳು ಪ್ರವರ್ಧಮಾನಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ, ಭಾರತವು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಮತ್ತು ಟೆಕ್ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯ ವಿಸ್ತರಣೆಯನ್ನು ಬೆಂಬಲಿಸಿದೆ.

ಭಾರತದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳು ಗಮನಾರ್ಹವಾಗಿ ಬೆಳೆದಿವೆ. 2015ರ ಆರ್ಥಿಕ ವರ್ಷದಲ್ಲಿ 1,000ಕ್ಕೂ ಹೆಚ್ಚಿನ ಕೇಂದ್ರಗಳಿಂದ 2023ರ ಆರ್ಥಿಕ ವರ್ಷದ ವೇಳೆಗೆ 2,740ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ ಏರಿದೆ. ಈ ಕೇಂದ್ರಗಳು ಉತ್ತಮ ಗುಣಮಟ್ಟದ ಉದ್ಯೋಗವನ್ನು ಒದಗಿಸುವ ಮೂಲಕ ಆರ್ಥಿಕ ಬೆಳವಣಿಗೆಗೂ ಕೊಡುಗೆ ನೀಡುತ್ತಿವೆ. ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳಿಂದ ಬರುವ ಆದಾಯವು 2015ರ ಹಣಕಾಸು ವರ್ಷದಲ್ಲಿ 19.4 ಬಿಲಿಯನ್ ಡಾಲರ್ ನಿಂದ 2023ರ ಹಣಕಾಸು ವರ್ಷದಲ್ಲಿ 46 ಬಿಲಿಯನ್ ಡಾಲರ್ ಗೆ ಏರಿದೆ. ಇದು ಶೇಕಡಾ 11.4ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರದಲ್ಲಿ ಬೆಳೆಯುತ್ತಿದೆ.

ಭಾರತದಲ್ಲಿ ತಂತ್ರಜ್ಞಾನ ಸ್ಟಾರ್ಟ್ ಅಪ್ ಗಳು 2014ರಲ್ಲಿ ಸುಮಾರು 2,000ದಿಂದ 2023ರಲ್ಲಿ ಸುಮಾರು 31,000ಕ್ಕೆ ಗಮನಾರ್ಹವಾಗಿ ಏರಿದೆ. ನಾಸ್ಕಾಮ್ (ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ ಅಂಡ್ ಸರ್ವಿಸ್ ಕಂಪನಿಗಳ) ಪ್ರಕಾರ, ಈ ವಲಯವು 2023ರಲ್ಲಿ ಸರಿಸುಮಾರು 1000 ಹೊಸ ಟೆಕ್ ಸ್ಟಾರ್ಟ್ಅಪ್ ಗಳ ಪ್ರಾರಂಭಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ, ನಾಸ್ಕಾಮ್ ಪ್ರಕಾರ, ಭಾರತದ ಟೆಕ್ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದ್ದು, ಯುಎಸ್ಎ ಮತ್ತು ಯುಕೆಗಿಂತ ಗಣನೀಯವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಡೀಪ್ ಟೆಕ್ ಸ್ಟಾರ್ಟ್ ಅಪ್ ನೀತಿ, ಡ್ರೋನ್ ಶಕ್ತಿ ಕಾರ್ಯಕ್ರಮ ಮತ್ತು ಎಲೆಕ್ಟ್ರಿಕ್ ವಾಹನ (ಇವಿ)-ಸಂಬಂಧಿತ ಬಂಡವಾಳ ಸರಕುಗಳು ಮತ್ತು ಯಂತ್ರೋಪಕರಣಗಳಿಗೆ ಕಸ್ಟಮ್ ಸುಂಕ ವಿನಾಯಿತಿಗಳೊಂದಿಗೆ ಭಾರತ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಸ್ಟಾರ್ಟ್ ಅಪ್ ಇಂಡಿಯಾ ಉಪಕ್ರಮ ಮತ್ತು ಸ್ಟಾರ್ಟ್ ಅಪ್ ಕೇಂದ್ರಗಳು ಟೆಕ್ ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೆ ಸಹಾಯ ಮಾಡಿವೆ. ನವೋದ್ಯಮಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಆಳವಾದ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ವೇಗಗೊಳಿಸಿ ಬಲಪಡಿಸುವುದು, ದೇಶೀಯ ಬಂಡವಾಳದ ಹರಿವನ್ನು ಬಲಪಡಿಸುವುದು ಮತ್ತು ಸ್ಟಾರ್ಟ್ ಅಪ್ ಇಂಡಿಯಾದಂತಹ ಉಪಕ್ರಮಗಳನ್ನು ಬಳಸಿಕೊಳ್ಳುವುದು ಮುಂತಾದ ಉದ್ದೇಶಿತ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.

          1. ದೂರಸಂಪರ್ಕ: ಭಾರತದಲ್ಲಿ ಒಟ್ಟಾರೆ ಟೆಲಿ ಸಾಂದ್ರತೆ (ಪ್ರತಿ 100 ಜನರಿಗೆ ದೂರವಾಣಿಗಳ ಸಂಖ್ಯೆ) ಮಾರ್ಚ್ 2014ರಲ್ಲಿ ಶೇಕಡಾ 75.2ರಿಂದ ಮಾರ್ಚ್ 2024ರಲ್ಲಿ ಶೇಕಡಾ 85.7ಕ್ಕೆ ಏರಿದೆ.
           •    ಇಂಟರ್ನೆಟ್ ಚಂದಾದಾರರು ಮಾರ್ಚ್ 2014ರಲ್ಲಿ 25.1 ಕೋಟಿಯಿಂದ ಮಾರ್ಚ್ 2024ರಲ್ಲಿ 95.4 ಕೋಟಿಗೆ ಏರಿದ್ದಾರೆ, ಅದರಲ್ಲಿ 91.4 ಕೋಟಿ ಜನರು ವೈರ್ ಲೆಸ್ ಫೋನ್ ಗಳ ಮೂಲಕ ಇಂಟರ್ನೆಟ್ ಬಳಸುತ್ತಿದ್ದಾರೆ.
             •    ಮಾರ್ಚ್ 2024ರಲ್ಲಿ ಇಂಟರ್ನೆಟ್ ಸಾಂದ್ರತೆಯು ಶೇಕಡಾ 68.2ಕ್ಕೆ ಏರಿದೆ.
           •    ಡೇಟಾದ ವೆಚ್ಚವು ಗಣನೀಯವಾಗಿ ಕುಸಿದಿದ್ದು, ಪ್ರತಿ ಚಂದಾದಾರರಿಗೆ ಸರಾಸರಿ ವೈರ್ ಲೆಸ್ ಡೇಟಾ ಬಳಕೆಯನ್ನು ವ್ಯಾಪಕವಾಗಿ ನೀಡಲಾಗುತ್ತಿದೆ.
         •    ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ 5ಜಿ ನೆಟ್ ವರ್ಕ್ ಗಳಲ್ಲಿ ಒಂದಾಗಿದ್ದು, ಭಾರತದ 5ಜಿ ಪೋರ್ಟಲ್ ಭಾರತದ 5 ಜಿ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಟೆಲಿಕಾಂ ವಲಯದಲ್ಲಿ ನಾವೀನ್ಯತೆ, ಸಹಯೋಗ ಮತ್ತು ಜ್ಞಾನ ಹಂಚಿಕೆಯನ್ನು ಉತ್ತೇಜಿಸುತ್ತದೆ.

 

2. ಇ-ಕಾಮರ್ಸ್: ಭಾರತೀಯ ಇ-ಕಾಮರ್ಸ್ ಉದ್ಯಮವು 2030ರ ವೇಳೆಗೆ 350 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆಯಿದೆ.

 

*****



(Release ID: 2035428) Visitor Counter : 5