ಹಣಕಾಸು ಸಚಿವಾಲಯ

ಭಾರತದ ಬೆಳವಣಿಗೆಗೆ ಸೇವಾ ವಲಯದ ಗಣನೀಯ ಪ್ರಮಾಣದ ಕೊಡುಗೆ ಮುಂದುವರಿದಿದ್ದು, 2024ರ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಆರ್ಥಿಕತೆಯ ಗಾತ್ರದ ಶೇಕಡಾ 55ರಷ್ಟಿದೆ


ತಾತ್ಕಾಲಿಕ ಅಂದಾಜಿನ ಪ್ರಕಾರ, ಸೇವಾ ವಲಯವು 2024ನೇ ಆರ್ಥಿಕ ವರ್ಷದಲ್ಲಿ ಶೇಕಡಾ 7.6ರಷ್ಟು ಬೆಳವಣಿಗೆ ಹೊಂದಿದೆ ಎಂದು ಅಂದಾಜಿಸಲಾಗಿದೆ: ಆರ್ಥಿಕ ಸಮೀಕ್ಷೆ 2024

ಮಾರ್ಚ್ 2024ರಲ್ಲಿ ಸೇವಾ ಪಿಎಂಐ(ಖರೀದಿ ವ್ಯವಸ್ಥಾಪಕರ ಸೂಚ್ಯಂಕ) ಶೇ.61.2ಕ್ಕೆ ಏರಿಕೆಯಾಗಿದ್ದು, ಸುಮಾರು 14 ವರ್ಷಗಳಲ್ಲಿ ವಲಯದ ಅತ್ಯಂತ ಗಮನಾರ್ಹ ಮಾರಾಟ ಮತ್ತು ಉದ್ಯಮ ಚಟುವಟಿಕೆಯ ವಿಸ್ತರಣೆಗಳಲ್ಲಿ ಒಂದು

Posted On: 22 JUL 2024 2:30PM by PIB Bengaluru

“ಕಳೆದ ಮೂರು ದಶಕಗಳಲ್ಲಿ ಹಲವು ಬದಲಾವಣೆಗಳ ನಂತರ, ಸೇವಾ ವಲಯವು ಭಾರತದ ಆರ್ಥಿಕ ಬೆಳವಣಿಗೆಯ ಭದ್ರಕೋಟೆಯಾಗಿ ನಿಂತಿದೆ. ನೀತಿ ಮತ್ತು ಕಾರ್ಯವಿಧಾನದ ಸುಧಾರಣೆಗಳು, ಭೌತಿಕ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್, ಎಲ್ಲಾ ಮಹತ್ವದ ಉದ್ಯಮ, ವೈಯಕ್ತಿಕ, ಹಣಕಾಸು ಮತ್ತು ಮೂಲಸೌಕರ್ಯ ಆಧಾರಿತ ಸೇವೆಗಳು ಕೋವಿಡ್ ಸಾಂಕ್ರಾಮಿಕ ರೋಗದ ನಷ್ಟ ಮತ್ತು ಸಂಕಷ್ಟದಿಂದ ಬಲವಾಗಿ ಹೊರಹೊಮ್ಮಿವೆ. ರೂಪಾಂತರವು ಆನ್‌ಲೈನ್‌ನಂತಹ ಡಿಜಿಟಲ್ ಸೇವೆಗಳತ್ತ ತ್ವರಿತ-ಗತಿಗೆ ಬೆಳವಣಿಗೆ ಹೊಂದಿ ಬದಲಾಗಿದೆ. ಇತ್ತೀಚೆಗೆ ಹಣ ಪಾವತಿಗಳು, ಇ-ಕಾಮರ್ಸ್ ಮತ್ತು ಮನರಂಜನಾ ಪ್ಲಾಟ್‌ಫಾರ್ಮ್‌ಗಳು, ಹಾಗೆಯೇ ಇತರ ಉತ್ಪಾದಕ ಚಟುವಟಿಕೆಗಳಲ್ಲಿ ಹೈಟೆಕ್ ಆಧಾರಿತ ಸೇವೆಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದೆ'' ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2023-2024 ರಲ್ಲಿ ಉಲ್ಲೇಖಿಸಿದರು. 

ದೇಶದ ಸೇವಾ ವಲಯವು ಭಾರತದ ಬೆಳವಣಿಗೆಗೆ ಗಮನಾರ್ಹ ಕೊಡುಗೆಯನ್ನು ನೀಡುತ್ತಿದೆ.ಈ 2024ನೇ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟಾರೆ ಆರ್ಥಿಕತೆಯ ಗಾತ್ರದ ಸುಮಾರು ಶೇಕಡಾ 55ರಷ್ಟು ಸೇವಾ ವಲಯ ಹೊಂದಿದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಮಹತ್ವದ ದೇಶೀಯ ಬೇಡಿಕೆ, ಕ್ಷಿಪ್ರ ನಗರೀಕರಣ, ಇ-ಕಾಮರ್ಸ್ ವೇದಿಕೆಗಳ ವಿಸ್ತರಣೆಯು ಲಾಜಿಸ್ಟಿಕ್ಸ್, ಡಿಜಿಟಲ್ ಸಂಬಂಧಿತ ಸೇವೆಗಳಿಗೆ ಹೆಚ್ಚಿನ ಅಗತ್ಯತೆಗಳನ್ನು ಸೃಷ್ಟಿಸಿದೆ, ಇದು ಸೇವಾ ಕ್ಷೇತ್ರದಲ್ಲಿ ದೇಶೀಯ ಬೇಡಿಕೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ. ಇನ್ನಷ್ಟು ವಿಸ್ತಾರವಾಗಿ ಹೇಳಬೇಕೆಂದರೆ ಆರ್ಥಿಕ ಸಮೀಕ್ಷೆಯು, ಸಶಕ್ತ ವಾತಾವರಣವನ್ನು ಸೃಷ್ಟಿಸುವ ಮೂಲಕ, ಹೂಡಿಕೆಯನ್ನು ಉತ್ತೇಜಿಸುವ, ಕೌಶಲ್ಯಗಳನ್ನು ಹೆಚ್ಚಿಸುವ ಮತ್ತು ಮಾರುಕಟ್ಟೆ ಪ್ರವೇಶವನ್ನು ಸುಗಮಗೊಳಿಸುವ ಮೂಲಕ ಭಾರತದ ಸೇವೆಗಳ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವಲ್ಲಿ ಸರ್ಕಾರವು ನಿರ್ಣಾಯಕ ಪಾತ್ರವನ್ನು ವಹಿಸಿದೆ.

ಸೇವಾ ವಲಯದಲ್ಲಿ ಒಟ್ಟು ಮೌಲ್ಯವರ್ಧನೆ (GVA)

ಕಳೆದೊಂದು ದಶಕದಲ್ಲಿ ಒಟ್ಟಾರೆ ಒಟ್ಟು ಮೌಲ್ಯವರ್ಧನೆಗೆ ಸೇವಾ ವಲಯದ ಕೊಡುಗೆ ಗಣನೀಯವಾಗಿ ಹೆಚ್ಚಿದೆ. ಜಾಗತಿಕವಾಗಿ, ಭಾರತದ ಸೇವಾ ವಲಯವು ಶೇಕಡಾ 6ಕ್ಕಿಂತ ಹೆಚ್ಚು ನೈಜ ಬೆಳವಣಿಗೆಯನ್ನು ಕಂಡಿದೆ ಮತ್ತು 2022ರಲ್ಲಿ ವಿಶ್ವದ ವಾಣಿಜ್ಯ ಸೇವೆಗಳ ರಫ್ತುಗಳಲ್ಲಿ ಸೇವಾ ವಲಯದಿಂದ ಶೇಕಡಾ 4.4ರಷ್ಟು ಒಳಗೊಂಡಿವೆ.

 


 

ಕೋವಿಡ್ ಸಾಂಕ್ರಾಮಿಕಕ್ಕೆ ಒಂದು ದಶಕ, ಸೇವಾ ವಲಯದ ನೈಜ ಬೆಳವಣಿಗೆ ದರವು ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಸ್ಥಿರವಾಗಿ ಮೀರಿತ್ತು. ಕೋವಿಡ್ ನಂತರದ, ಸೇವಾ ವಲಯದ ಬೆಳವಣಿಗೆಯು, ಸಂಪರ್ಕ-ರಹಿತ ಸೇವೆಗಳು, ಪ್ರಾಥಮಿಕವಾಗಿ ಹಣಕಾಸು, ಮಾಹಿತಿ ತಂತ್ರಜ್ಞಾನ ಮತ್ತು ವೃತ್ತಿಪರ ಸೇವೆಗಳಿಂದ ಉತ್ತೇಜಿತವಾಗಿದ್ದು, ಆರ್ಥಿಕ ವರ್ಷ 2023-24ರಲ್ಲಿ ಒಟ್ಟಾರೆ ಜಿವಿಎ ಬೆಳವಣಿಗೆಯನ್ನು ಮೀರಿಸಿದೆ, ತಾತ್ಕಾಲಿಕ ಅಂದಾಜಿನ ಪ್ರಕಾರ, 2024ನೇ ಆರ್ಥಿಕ ವರ್ಷದಲ್ಲಿ ಸೇವಾ ವಲಯವು ಶೇಕಡಾ 7.6ರಷ್ಟು ಬೆಳವಣಿಗೆಯನ್ನು ಹೊಂದಿದೆ ಎಂದು ಸಮೀಕ್ಷೆಯು ಹೇಳುತ್ತದೆ. ಪ್ರಸಕ್ತ ಹಣಕಾಸು ವರ್ಷದ ಒಟ್ಟು ಜಿಎಸ್ ಟಿ ಸಂಗ್ರಹವು 20.18 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇಕಡಾ 11.7 ರಷ್ಟು ಹೆಚ್ಚಳವಾಗಿದೆ, ಇದು ದೃಢವಾದ ದೇಶೀಯ ವ್ಯಾಪಾರ ಚಟುವಟಿಕೆಯನ್ನು ಸೂಚಿಸುತ್ತದೆ. 

ಖರೀದಿ ವ್ಯವಸ್ಥಾಪಕರ ಸೂಚ್ಯಂಕ (PMI)- ಸೇವೆಗಳು

ದೇಶದ ಸೇವಾ ವಲಯದಲ್ಲಿನ ವ್ಯಾಪಾರ ಚಟುವಟಿಕೆಯು ಕೋವಿಡ್ ಸಾಂಕ್ರಾಮಿಕ ಮತ್ತು ಪ್ರಪಂಚದಾದ್ಯಂತದ ಇತರ ಅಡೆತಡೆಗಳನ್ನು ಮೀರಿದೆ. ಕಳೆದ ಮಾರ್ಚ್ 2024 ರಲ್ಲಿ, ಸೇವಾ ವಲಯದ ಪಿಎಂಐ ದರ ಶೇಕಡಾ 61.2 ಕ್ಕೆ ಏರಿಕೆಯಾಗಿತ್ತು, ಇದು ಕಳೆದ ಸುಮಾರು 14 ವರ್ಷಗಳಲ್ಲಿ ಕ್ಷೇತ್ರದ ಅತ್ಯಂತ ಮಹತ್ವದ ಮಾರಾಟ ಮತ್ತು ವ್ಯಾಪಾರ ಚಟುವಟಿಕೆಯ ವಿಸ್ತರಣೆಗಳಲ್ಲಿ ಒಂದಾಗಿದೆ. ಚಾರ್ಟ್ XI.6 (ಕೆಳಗೆ) ತೋರಿಸಿದಂತೆ, ಆಗಸ್ಟ್ 2021 ರಿಂದ ಸೇವೆಗಳ ಪಿಎಂಐ 50 ಕ್ಕಿಂತ ಹೆಚ್ಚಿದೆ, ಇದು ಕಳೆದ 35 ತಿಂಗಳುಗಳ ನಿರಂತರ ವಿಸ್ತರಣೆಯನ್ನು ಸೂಚಿಸುತ್ತದೆ.

ಸೇವಾ ವಲಯದಲ್ಲಿ ಉದ್ಯಮ

ಕೋವಿಡ್ ಸಾಂಕ್ರಾಮಿಕ ನಂತರದ, ಸೇವಾ ವಲಯದಲ್ಲಿ ರಫ್ತುಗಳು ಸ್ಥಿರವಾದ ವೇಗವನ್ನು ಕಾಯ್ದುಕೊಂಡಿವೆ. 2024ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ರಫ್ತುಗಳಲ್ಲಿ ಶೇಕಡಾ 44ರಷ್ಟು ಇವೆ. ಸೇವೆಗಳ ರಫ್ತುಗಳಲ್ಲಿ ಭಾರತವು ಐದನೇ ಸ್ಥಾನದಲ್ಲಿದೆ, ಐರೋಪ್ಯ ಒಕ್ಕೂಟಗಳು(ಇನ್ಟ್ರಾ-ಇಯು ಉದ್ಯಮ ಹೊರತುಪಡಿಸಿ), ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಚೀನಾ ಮೊದಲ ನಾಲ್ಕು ಸ್ಥಾನಗಳಲ್ಲಿವೆ. 
ಬಹುರಾಷ್ಟ್ರೀಯ ಸಂಸ್ಥೆಗಳಿಂದ ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (GCCs) ಆದ್ಯತೆಯ ತಾಣವಾಗಿ ಬೆಳೆಯುತ್ತಿರುವ ಭಾರತದ ಖ್ಯಾತಿಯು ಸಾಫ್ಟ್‌ವೇರ್ ಮತ್ತು ವ್ಯಾಪಾರ ಸೇವೆಗಳ ರಫ್ತುಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಜಾಗತಿಕವಾಗಿ ಡಿಜಿಟಲ್ ವಿತರಣಾ ಸೇವೆಗಳ ರಫ್ತಿನಲ್ಲಿ ಭಾರತದ ಪಾಲು 2019 ರಲ್ಲಿ ಶೇಕಡಾ 4.4 ರಷ್ಟಿದ್ದರೆ, 2023 ರಲ್ಲಿ ಶೇಕಡಾ 6ಕ್ಕೆ ಏರಿಕೆಯಾಗಿದೆ. ಸೇವಾ ರಫ್ತುಗಳಲ್ಲಿನ ಈ ಏರಿಕೆಯು, ಆಮದುಗಳಲ್ಲಿನ ಕುಸಿತದೊಂದಿಗೆ, ಆರ್ಥಿಕ ವರ್ಷ 2024ರ ಅವಧಿಯಲ್ಲಿ ನಿವ್ವಳ ಸೇವೆಗಳ ರಶೀದಿಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು, ಇದು ಭಾರತದ ಚಾಲ್ತಿ ಖಾತೆ ಕೊರತೆಯನ್ನು ತಗ್ಗಿಸಲು ಸಹಾಯ ಮಾಡಿತು.

 

ಸೇವಾ ವಲಯದ ಚಟುವಟಿಕೆಗಳಿಗೆ ಹಣಕಾಸು ಮೂಲಗಳು

ಸೇವಾ ವಲಯವು ತನ್ನ ಹಣಕಾಸಿನ ಅಗತ್ಯಗಳನ್ನು ದೇಶೀಯವಾಗಿ ಪೂರೈಸುತ್ತದೆ

1. ದೇಶೀಯ ಬ್ಯಾಂಕುಗಳು ಮತ್ತು ಬಂಡವಾಳ ಮಾರುಕಟ್ಟೆಗಳಿಂದ ಸಾಲ: 2024ರ ಆರ್ಥಿಕ ವರ್ಷದಲ್ಲಿ ಸೇವಾ ವಲಯದಲ್ಲಿ ಸಾಲದ ಒಳಹರಿವಿನ ಮೇಲ್ಮುಖ ಪಥವನ್ನು ಕಂಡಿತು, ಏಪ್ರಿಲ್ 2023 ರಿಂದ ವರ್ಷದಿಂದ ವರ್ಷಕ್ಕೆ ಪ್ರತಿ ತಿಂಗಳು ಶೇಕಡಾ 20ರ ಬೆಳವಣಿಗೆ ದರಗಳನ್ನು ಮೀರಿದೆ.


 

2. ಅಂತಾರಾಷ್ಟ್ರೀಯವಾಗಿ ವಿದೇಶಿ ನೇರ ಹೂಡಿಕೆ (FDI) ಮತ್ತು ಬಾಹ್ಯ ವಾಣಿಜ್ಯ ಸಾಲಗಳ (ECBs) ಮೂಲಕ: 2024ನೇ ಆರ್ಥಿಕ ವರ್ಷದಲ್ಲಿ ಒಟ್ಟು ಬಾಹ್ಯ ವಾಣಿಜ್ಯ ಸಾಲ (ECB) ಒಳಹರಿವಿನಲ್ಲಿ ಸೇವಾ ವಲಯವು ಶೇಕಡಾ 53ರಷ್ಟು ಪಾಲನ್ನು ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ವಲಯವು 14.9 ಶತಕೋಟಿ ಡಾಲರ್ ಒಳಹರಿವುಗಳನ್ನು ಪಡೆದುಕೊಂಡಿತು, ಇದರಿಂದಾಗಿ 58.3 ರಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆ ದಾಖಲಿಸಿದೆ.

 

*****
 



(Release ID: 2035200) Visitor Counter : 7