ಹಣಕಾಸು ಸಚಿವಾಲಯ
azadi ka amrit mahotsav g20-india-2023

ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ದರ (ಎಲ್ಎಫ್‌ಪಿಆರ್) 2017-2018ರಲ್ಲಿ ಶೇಕಡಾ 23.3 ರಿಂದ 2022-2023ರಲ್ಲಿ ಶೇಕಡಾ 37ಕ್ಕೆ ಏರಿದೆ


ʻಪಿಎಂ ಜನ್‌ಧನ್ʼ ಯೋಜನೆಯ ಖಾತೆಗಳಲ್ಲಿ ಶೇಕಡಾ 55.6ರಷ್ಟನ್ನು ಮಹಿಳೆಯರು ಹೊಂದಿದ್ದಾರೆ

8.3 ದಶಲಕ್ಷ ʻಸ್ವಸಹಾಯ ಗುಂಪುʼಗಳ ರಚನೆಯೊಂದಿಗೆ, ʻದೀನ್ ದಯಾಳ್ ಅಂತ್ಯೋದಯ ಯೋಜನೆ(ಎನ್ಆರ್‌ಎಲ್ಎಂ) ವ್ಯಾಪ್ತಿಗೆ 89 ದಶಲಕ್ಷ ಮಹಿಳೆಯ ಸೇರ್ಪಡೆ

ʻಪಿಎಂ ಮುದ್ರಾʼ ಯೋಜನೆಯಡಿ ಮಹಿಳೆಯರಿಗೆ 68 ಪ್ರತಿಶತ ಸಾಲ ಮಂಜೂರು

ʻಸ್ಟ್ಯಾಂಡ್ ಅಪ್ ಇಂಡಿಯಾʼ ಅಡಿಯಲ್ಲಿ 77.7 ಪ್ರತಿಶತ ಫಲಾನುಭವಿಗಳು ಮಹಿಳೆಯರು

Posted On: 22 JUL 2024 2:41PM by PIB Bengaluru

2023-2024ನೇ ಸಾಲಿನ ಆರ್ಥಿಕ ಸಮೀಕ್ಷೆಯು ಮಹಿಳಾ ಆರ್ಥಿಕ ಸಬಲೀಕರಣವನ್ನು ಎತ್ತಿ ತೋರಿದೆ. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಮಹಿಳೆಯರಿಗೆ ಹೆಚ್ಚಿನ ಪ್ರವೇಶ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಇನ್ನಿತರ ಉಪಕ್ರಮಗಳಿಂದಾಗಿ ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2023-2024ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

2017-18ರಲ್ಲಿ ಶೇ.23.3ರಷ್ಟಿದ್ದ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಪ್ರಮಾಣ (ಎಲ್ಎಫ್‌ಪಿಆರ್) 2022-2023ರಲ್ಲಿ ಶೇ.37ಕ್ಕೆ ಏರಿಕೆಯಾಗಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ʻಪ್ರಧಾನ ಮಂತ್ರಿ ಜನ್ ಧನ್ ಯೋಜನೆʼ (ಪಿಎಂಜೆಡಿವೈ) 52.3 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಅನುಕೂಲ ಮಾಡಿಕೊಟ್ಟಿದೆ, ಈ ಪೈಕಿ ಮೇ 2024 ರ ವೇಳೆಗೆ ಒಟ್ಟು ಖಾತೆದಾರರಲ್ಲಿ ಶೇಕಡಾ 55.6 ರಷ್ಟು ಮಹಿಳೆರಾಗಿದ್ದಾರೆ.

ʻಸ್ವಸಹಾಯ ಗುಂಪುʼಗಳ ಕಾರ್ಯಕ್ರಮವಾದ ʻದೀನ್ ದಯಾಳ್ ಅಂತ್ಯೋದಯ ಯೋಜನೆʼಯು(ಎನ್ಆರ್‌ಎಲ್‌ಎಂ) 8.3 ದಶಲಕ್ಷ ʻಸ್ವಸಹಾಯ ಗುಂಪುʼಗಳ ಅಡಿಯಲ್ಲಿ 89 ದಶಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಿದೆ. ಇದು ಮಹಿಳಾ ಸಬಲೀಕರಣ, ಸ್ವಾಭಿಮಾನ ವರ್ಧನೆ, ವ್ಯಕ್ತಿತ್ವ ವಿಕಸನ, ಸಾಮಾಜಿಕ ರಕ್ಷಣೆ, ಉತ್ತಮ ಶಿಕ್ಷಣ, ಗ್ರಾಮ ಸಂಸ್ಥೆಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆ ಹಾಗೂ ಸರ್ಕಾರಿ ಯೋಜನೆಗಳಿಗೆ ಉತ್ತಮ ಪ್ರವೇಶದ ವಿಷಯದಲ್ಲಿ ಪರಿಣಾಮ ಬೀರಿದೆ ಎಂದು ಸಮೀಕ್ಷೆಯು ಒತ್ತಿ ಹೇಳಿದೆ.

ʻಸ್ಟಾರ್ಟಪ್‌ ಅಪ್ ಮತ್ತು ಸ್ಟ್ಯಾಂಡಪ್‌ ಇಂಡಿಯಾʼದಿಂದ ಮಹಿಳಾ ಉದ್ಯಮಶೀಲತೆಗೆ ದೊರೆತ ಉತ್ತೇಜನವನ್ನು ಸಮೀಕ್ಷೆಯು ಉಲ್ಲೇಖಿಸಿದೆ. ʻಪ್ರಧಾನ ಮಂತ್ರಿ ಮುದ್ರಾ ಯೋಜನೆʼ(ಪಿಎಂಎಂವೈ) ಅಡಿಯಲ್ಲಿ ಸುಮಾರು 68 ಪ್ರತಿಶತದಷ್ಟು ಸಾಲಗಳನ್ನು ಮಹಿಳಾ ಉದ್ಯಮಿಗಳಿಗೆ ಮಂಜೂರು ಮಾಡಲಾಗಿದೆ ಮತ್ತು ಮೇ 2024ರ ವೇಳೆಗೆ ʻಸ್ಟ್ಯಾಂಡ್ ಅಪ್ ಇಂಡಿಯಾʼ ಯೋಜನೆಯಡಿ ಶೇಕಡಾ 77.7ರಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದಾರೆ ಎಂದು ಸಮೀಕ್ಷೆ ಗಮನಸೆಳೆದಿದೆ. ಡಿಜಿಟಲ್ ಇಂಡಿಯಾದ ಆಶಯವನ್ನು ಸಾಕಾರಗೊಳಿಸಲು ಜಾರಿಗೊಳಿಸಲಾದ ʻಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನʼದ(ಪಿಎಂಜಿದಿಶಾ) ಫಲಾನುಭವಿಗಳಲ್ಲಿ ಜುಲೈ 2023ರ ಹೊತ್ತಿಗೆ ಶೇಕಡಾ 53 ಕ್ಕಿಂತ ಹೆಚ್ಚು ಮಂದಿ ಮಹಿಳೆಯರೇ ಇದ್ದಾರೆ.

ಆರ್ಥಿಕ ಸಮೀಕ್ಷೆಯು ಮಹಿಳೆಯರಲ್ಲಿ ಆಸ್ತಿ ಮಾಲೀಕತ್ವದ ಮಹತ್ವವನ್ನು ಗುರುತಿಸಿದೆ. ʻಪಿಎಂ ಆವಾಸ್ ಯೋಜನೆʼಯಡಿ ನಿರ್ಮಿಸಲಾದ ಮನೆಗಳ ಮೇಲೆ ಮಹಿಳಾ ಮಾಲೀಕತ್ವದ ಅಗತ್ಯವನ್ನು ಸಮೀಕ್ಷೆಯು ಒತ್ತಿ ಹೇಳಿದೆ.

 

*****



(Release ID: 2035055) Visitor Counter : 54