ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಶ್ರೀ ಜುಯಲ್ ಒರಾಮ್ ಅವರಿಂದ ಮುಂದಿನ 100 ದಿನಗಳ ಕಾಲ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ  ಯೋಜನೆಗಳು ಮತ್ತು ಪ್ರಮುಖ ಉಪಕ್ರಮಗಳ ಪ್ರಗತಿಯ ಪರಿಶೀಲನೆ ಮಾಡಲಿದ್ದಾರೆ

Posted On: 17 JUL 2024 6:05PM by PIB Bengaluru

ಇಂದು ಹೊಸ ದೆಹಲಿಯಲ್ಲಿ ದಿನವಿಡೀ ನಡೆದ ಸಭೆಯಲ್ಲಿ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಜುಯಲ್ ಒರಾಮ್ ಮತ್ತು ರಾಜ್ಯ ಸಚಿವ ಶ್ರೀ ದುರ್ಗಾದಾಸ್ ಉಯ್ಕೆ  ಅವರು ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಮುಂದಿನ 100 ದಿನಗಳ ಸಚಿವಾಲಯದ ಪ್ರಮುಖ ಉಪಕ್ರಮಗಳ ಕುರಿತು ಕಾರ್ಯತಂತ್ರ ರೂಪಿಸಿದರು.

ಸಚಿವಾಲಯದ ಯೋಜನೆಗಳು ಮತ್ತು ಉಪಕ್ರಮಗಳ ಬಗ್ಗೆ ಸಮಗ್ರವಾದ ಪ್ರಸ್ತುತಿಯೊಂದಿಗೆ ಸಭೆಯು ಪ್ರಾರಂಭವಾಯಿತು, ನಂತರ ಬಜೆಟ್ ನ ಅವಲೋಕನ ನಡೆಯಿತು.

ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಯೋಜನೆಗಳು ಮತ್ತು ಉಪಕ್ರಮಗಳು:

•    ಬುಡಕಟ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆಗಳು
•    ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN)
•    ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ (PMAAGY)
•    ಏಕಲವ್ಯ ಮಾದರಿ ವಸತಿ ಶಾಲೆಗಳು (EMRS)
•    ಜೀವನೋಪಾಯ ಯೋಜನೆಗಳು
•    ಸಂವಿಧಾನದ ಅನುಚ್ಛೇದ 275 (1) ರ ಅಡಿಯಲ್ಲಿ ಅನುದಾನಗಳು
•    ಬುಡಕಟ್ಟು ಸಂಶೋಧನಾ ಸಂಸ್ಥೆಗಳಿಗೆ (TRI) ಬೆಂಬಲ
•    ಸ್ವಯಂಸೇವಾ ಸಂಸ್ಥೆಗಳಿಗೆ (NGOs) ಬೆಂಬಲ
•    ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ಪ್ರಮುಖ ಉಪಕ್ರಮಗಳು ಮತ್ತು
•    ಸಚಿವಾಲಯದ ವಿವಿಧ ವಿಭಾಗಗಳು ನಿರ್ವಹಿಸುವ ಇತರ ಪೂರಕ ವಿಷಯಗಳು

ಶ್ರೀ ಒರಾಮ್ ಅವರು ಸಮಗ್ರ ಮತ್ತು ಸಮಾನ ಸಮಾಜವನ್ನು ಬೆಳೆಸುವಲ್ಲಿ ಈ ಉಪಕ್ರಮಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಶ್ರೀ ಉಯ್ಕೆ ಅವರು ಈ ಮಾತುಗಳನ್ನೆ ಪುನರುಚ್ಚರಿಸಿ, ಈ ಉಪಕ್ರಮಗಳನ್ನು ಮುಂದಕ್ಕೆ ಕೊಂಡೊಯ್ಯಲು ಅಗತ್ಯವಾದ  ಜಂಟಿ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಕಾರ್ಯದರ್ಶಿ (ಬುಡಕಟ್ಟು ವ್ಯವಹಾರಗಳು) ಶ್ರೀ ವಿಭು ನಾಯರ್ ಅವರು ಹಿರಿಯ ಅಧಿಕಾರಿಗಳೊಂದಿಗೆ  ಸಕಾಲಿಕ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಅಮೂಲ್ಯವಾದ ಮಾಹಿತಿ ಮತ್ತು ವಿವರವಾದ ಯೋಜನೆಗಳನ್ನು ಒದಗಿಸಿದರು.

ಬುಡಕಟ್ಟು ಸಮುದಾಯದ ಸಬಲೀಕರಣಕ್ಕಾಗಿ ವಿವರಿಸಲಾದ ಗುರಿಗಳಿಗಾಗಿ ದಣಿವರಿಯಿಲ್ಲದೆ ಕೆಲಸ ಮಾಡುವ ಸಚಿವಾಲಯದ ಒಮ್ಮತದ ಬದ್ಧತೆಯೊಂದಿಗೆ ಸಭೆಯು ಮುಕ್ತಾಯವಾಯಿತು.

 

*****



(Release ID: 2033915) Visitor Counter : 6