ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

100 ಮಿಲಿಯನ್ ಫಾಲೋವರ್ಸ್ ದಾಟಿದ ಪ್ರಧಾನಮಂತ್ರಿ ಯವರ X ಖಾತೆ

Posted On: 14 JUL 2024 10:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಖಾತೆಯು ಸಾಮಾಜಿಕ ಮಾಧ್ಯಮವಾದ ' X'ನಲ್ಲಿ ನೂರು ಮಿಲಿಯನ್ ಅನುಸಾರಕರನ್ನು ದಾಟಿದೆ.  ಅವರು ಈ ವೇದಿಕೆಯಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವ ನಾಯಕರಾಗಿ ಮುಂದುವರೆದಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿ;

"X ನಲ್ಲಿ ನೂರು ಮಿಲಿಯನ್! 

ಈ ರೋಮಾಂಚಕ ಮಾಧ್ಯಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಂತೋಷವಾಗುತ್ತಿದೆ. ಚರ್ಚೆ, ಅಭಿಪ್ರಾಯಗಳ ವಿನಿಮಯ, ಒಳನೋಟ, ಜನರ ಆಶೀರ್ವಾದ, ರಚನಾತ್ಮಕ ಟೀಕೆ ಮತ್ತು ಇತರವುಗಳನ್ನು ವಿನಿಮಯ ಮಾಡಿಕೊಳ್ಳಲು ಹರ್ಷಿತನಾಗಿದ್ದೇನೆ. 

ಭವಿಷ್ಯದಲ್ಲಿಯೂ ಅಷ್ಟೇ ಫಲದಾಯಕ ಸಮಯ ವಿನಿಮಯವನ್ನು ನಿರೀಕ್ಷಿಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ.
 

 

 

*****



(Release ID: 2033200) Visitor Counter : 38