ಪರಿಸರ ಮತ್ತು ಅರಣ್ಯ ಸಚಿವಾಲಯ
ವಾಯು ಗುಣಮಟ್ಟ, ಹವಾಮಾನ ಬದಲಾವಣೆ, ಅರಣ್ಯಗಳು, ನೈಸರ್ಗಿಕ ಸಂಪನ್ಮೂಲಗಳು, ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ವನ್ಯಜೀವಿಗಳ ಕುರಿತು ಭಾರತ ಮತ್ತು ಭೂತಾನ ನಡುವೆ ದ್ವಿಪಕ್ಷೀಯ ಸಭೆ ನಡೆಯಿತು
Posted On:
12 JUL 2024 11:38AM by PIB Bengaluru
ಭೂತಾನ ಸರ್ಕಾರದ ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವ ಶ್ರೀ ಜೆಮ್ ತ್ಶೆರಿಂಗ್ ನೇತೃತ್ವದ ಭೂತಾನ ರಾಯಲ್ ಸರ್ಕಾರದ ನಿಯೋಗವು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವ ಶ್ರೀ ಕೀರ್ತಿ ವರ್ಧನ್ ಸಿಂಗ್ ಅವರನ್ನು ಭೇಟಿ ಮಾಡಿ ಹವಾಮಾನ ಬದಲಾವಣೆ, ಅರಣ್ಯಗಳು, ನೈಸರ್ಗಿಕ ಸಂಪನ್ಮೂಲಗಳು, ವನ್ಯಜೀವಿ ಮತ್ತು ನವೀಕರಿಸಬಹುದಾದ ಶಕ್ತಿ, ಹಾಗೂ ವಾಯು ಗುಣಮಟ್ಟಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿತು.
ಭಾರತದ ಜಾಗತಿಕ ಉಪಕ್ರಮವಾದ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ ಗೆ ಸೇರ್ಪಡೆಗೊಂಡ ಭೂತಾನ್ ಸಚಿವರಿಗೆ ಕೇಂದ್ರ ಸಚಿವ ಶ್ರೀ ಕೀರ್ತಿ ವರ್ಧನ್ ಸಿಂಗ್ ಅವರು ಧನ್ಯವಾದಗಳನ್ನು ತಿಳಿಸಿದರು. ಎರಡೂ ದೇಶಗಳು ಒಂದೇ ಭೌಗೋಳಿಕತೆ, ಪರಿಸರ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಸಾಮಾನ್ಯ ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ ಎಂದು ಸಚಿವರು ಹೇಳಿದರು. ಹವಾಮಾನ ಬದಲಾವಣೆಯು ಎರಡೂ ದೇಶಗಳಿಗೆ ಸಾಮಾನ್ಯ ಕಾಳಜಿಯಾಗಿದೆ ಎಂದು ಸಚಿವರು ಹೇಳಿದರು.
ಏಪ್ರಿಲ್ 2024 ರಲ್ಲಿ ಪಾರೊದಲ್ಲಿ ಟೈಗರ್ ಲ್ಯಾಂಡ್ ಸ್ಕೇಪ್ ಕಾನ್ಫರೆನ್ಸ್ ಗಾಗಿ ಸಸ್ಟೈನಬಲ್ ಫೈನಾನ್ಸ್ ಅನ್ನು ಯಶಸ್ವಿಯಾಗಿ ಏರ್ಪಡಿಸುವ ಬಗ್ಗೆ ಶ್ರೀ ತ್ಶೆರಿಂಗ್ ಅವರು ಮಾಹಿತಿ ನೀಡಿದರು. ಭೂತಾನ್ ಈಗಾಗಲೇ ಇಂಗಾಲದ ಋಣಾತ್ಮಕ ದೇಶವಾಗಿದೆ ಮತ್ತು ಜಲವಿದ್ಯುತ್ನಿಂದ ತನ್ನ ಇಂಧನ ಆವಶ್ಯಕತೆಯ ಪ್ರಮುಖ ಪಾಲನ್ನು ಪಡೆಯುತ್ತದೆ ಎಂದು ಶ್ರೀ ತ್ಶೆರಿಂಗ್ ಅವರು ಹೇಳಿದ್ದಾರೆ.
ಹವಾಮಾನ ಬದಲಾವಣೆ, ವಾಯು ಗುಣಮಟ್ಟ, ಅರಣ್ಯ, ವನ್ಯಜೀವಿ ನಿರ್ವಹಣೆ ಮತ್ತು ಪರಿಸರ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಎರಡೂ ದೇಶದವರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ ಜಂಟಿ ಕಾರ್ಯಾ ನಿರತ ತಂಡದ (ವರ್ಕಿಂಗ್ ಗ್ರೂಪ್) ಸಭೆ ನಡೆಸಲು ಭಾರತ ಸೂಚಿಸಿದೆ.
*****
(Release ID: 2032730)
Visitor Counter : 55