ಪ್ರಧಾನ ಮಂತ್ರಿಯವರ ಕಛೇರಿ
2030 ರವರೆಗಿನ ಅವಧಿಗೆ ರಷ್ಯಾ-ಭಾರತ ಆರ್ಥಿಕ ಸಹಕಾರದ ಕಾರ್ಯತಂತ್ರದ ಕ್ಷೇತ್ರಗಳ ಅಭಿವೃದ್ಧಿ ಕುರಿತ ನಾಯಕರ ಜಂಟಿ ಹೇಳಿಕೆ
Posted On:
09 JUL 2024 9:49PM by PIB Bengaluru
2024ರ ಜುಲೈ 8-9 ರಂದು ಮಾಸ್ಕೋದಲ್ಲಿ ನಡೆದ ರಷ್ಯಾ ಮತ್ತು ಭಾರತದ ನಡುವಿನ 22ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯ ನಂತರ, ರಷ್ಯಾ ಒಕ್ಕೂಟದ ಅಧ್ಯಕ್ಷ ಘನತೆವೆತ್ತ ಶ್ರೀ ವ್ಲಾದಿಮಿರ್ ಪುಟಿನ್ ಮತ್ತು ಭಾರತ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು
ದ್ವಿಪಕ್ಷೀಯ ಪ್ರಾಯೋಗಿಕ ಸಹಕಾರ ಮತ್ತು ರಷ್ಯಾ-ಭಾರತ ವಿಶೇಷ ಅಭಿವೃದ್ಧಿ ಹಾಗು ವಿಶೇಷ ಕಾರ್ಯತಂತ್ರದ ಸಹಭಾಗಿತ್ವದ ಅಭಿವೃದ್ಧಿಯ ಪ್ರಸ್ತುತ ವಿಷಯಗಳ ಬಗ್ಗೆ ಸಮಗ್ರವಾದ/ ವಿವರವಾದಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡ ನಂತರ,
ಪರಸ್ಪರ ಗೌರವ ಮತ್ತು ಸಮಾನತೆಯ ತತ್ವಗಳಿಗೆ ದೃಢವಾಗಿ ಬದ್ಧವಾಗಿರುವುದು, ಪರಸ್ಪರ ಲಾಭದಾಯಕ ಮತ್ತು ದೀರ್ಘಕಾಲೀನ ಆಧಾರದ ಮೇಲೆ ಎರಡೂ ದೇಶಗಳ ಸಾರ್ವಭೌಮ ಅಭಿವೃದ್ಧಿ, ರಷ್ಯಾ-ಭಾರತ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸುವ ಮೂಲಕ
ದ್ವಿಪಕ್ಷೀಯ ಸಂವಾದವನ್ನು ಆಳಗೊಳಿಸಲು ಹೆಚ್ಚುವರಿ ವೇಗ ನೀಡುವ ಪ್ರಯತ್ನದ ಭಾಗವಾಗಿ ಭಾರತ ರಷ್ಯಾ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಉತ್ತೇಜಿಸುವ ಮೂಲಕ ,
ಉಭಯ ದೇಶಗಳ ನಡುವೆ ಸರಕು ಮತ್ತು ಸೇವೆಗಳ ವ್ಯಾಪಾರದ ಕ್ರಿಯಾತ್ಮಕ ಚಲನಶೀಲ ಬೆಳವಣಿಗೆಯ ಪ್ರವೃತ್ತಿಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಮತ್ತು 2030 ರ ವೇಳೆಗೆ ಅದರ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳವನ್ನು ಖಚಿತಪಡಿಸಿಕೊಳ್ಳುವ ಆಶಯದಿಂದ
ಈ ಕೆಳಗಿನ ಘೋಷಣೆಯನ್ನು ಮಾಡಲಾಗಿದೆ.
ರಷ್ಯಾ ಒಕ್ಕೂಟ ಮತ್ತು ಭಾರತ ಗಣರಾಜ್ಯದ ನಡುವಿನ ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಇನ್ನು ಮುಂದೆ "ಪಕ್ಷಗಳು" ಎಂದು ಕರೆಯಲಾಗುತ್ತದೆ, ಇದನ್ನು ಈ ಕೆಳಗಿನ ಒಂಬತ್ತು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಂತೆ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ:
1. ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದ ಸುಂಕೇತರ/ತೆರಿಗೆಯೇತರ ವ್ಯಾಪಾರ ಅಡೆತಡೆಗಳನ್ನು ತೆಗೆದುಹಾಕುವ ಆಕಾಂಕ್ಷೆ. ಇಎಇಯು-ಭಾರತ ಮುಕ್ತ ವ್ಯಾಪಾರ ಪ್ರದೇಶವನ್ನು ಸ್ಥಾಪಿಸುವ ಸಾಧ್ಯತೆ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರದ ಉದಾರೀಕರಣ ಕ್ಷೇತ್ರದಲ್ಲಿ ಮಾತುಕತೆಯ ಮುಂದುವರಿಕೆ. ಸಮತೋಲಿತ ದ್ವಿಪಕ್ಷೀಯ ವ್ಯಾಪಾರವನ್ನು ಸಾಧಿಸಲು ಭಾರತದಿಂದ ಸರಕುಗಳ ಪೂರೈಕೆಯನ್ನು ಹೆಚ್ಚಿಸುವುದು ಸೇರಿದಂತೆ 2030 ರ ವೇಳೆಗೆ 100 ಬಿಲಿಯನ್ ಯುಎಸ್ಡಿಗಿಂತ ಹೆಚ್ಚಿನ ಪರಸ್ಪರ ವ್ಯಾಪಾರ ಪ್ರಮಾಣವನ್ನು/ಗಾತ್ರವನ್ನು ಸಾಧಿಸುವುದು (ಪರಸ್ಪರ ಒಪ್ಪಿದಂತೆ). ವಿಶೇಷ ಹೂಡಿಕೆ ಆಡಳಿತಗಳ ಚೌಕಟ್ಟಿನೊಳಗೆ. ಪಕ್ಷಗಳ ಹೂಡಿಕೆ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವುದು.
2. ರಾಷ್ಟ್ರೀಯ ಕರೆನ್ಸಿಗಳನ್ನು ಬಳಸಿಕೊಂಡು ದ್ವಿಪಕ್ಷೀಯ ಇತ್ಯರ್ಥ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು. ಪರಸ್ಪರ ಇತ್ಯರ್ಥಗಳಲ್ಲಿ ಡಿಜಿಟಲ್ ಹಣಕಾಸು ಸಾಧನಗಳ ನಿರಂತರ ಅಳವಡಿಕೆ.
3. ಉತ್ತರ-ದಕ್ಷಿಣ ಅಂತರರಾಷ್ಟ್ರೀಯ ಸಾರಿಗೆ ಕಾರಿಡಾರ್, ಉತ್ತರ ಸಮುದ್ರ ಮಾರ್ಗ ಮತ್ತು ಚೆನ್ನೈ-ವ್ಲಾಡಿವೋಸ್ಟಾಕ್ ಸಮುದ್ರ ಮಾರ್ಗದ ಹೊಸ ಮಾರ್ಗಗಳನ್ನು ಪ್ರಾರಂಭಿಸುವ ಮೂಲಕ ಭಾರತದೊಂದಿಗೆ ಸರಕು ವಹಿವಾಟು ಹೆಚ್ಚಳ. ಸರಕುಗಳ ಅಡೆತಡೆಯಿಲ್ಲದ ಮುಕ್ತ ಚಲನೆಗೆ/ರವಾನೆಗೆ ಕೃತಕ ಬುದ್ಧಿಮತ್ತೆಯ ಡಿಜಿಟಲ್ ವ್ಯವಸ್ಥೆಗಳ ಬಳಕೆ ಮೂಲಕ ಕಸ್ಟಮ್ಸ್ ಕಾರ್ಯವಿಧಾನಗಳ ಆಪ್ಟಿಮೈಸೇಶನ್
4. ಕೃಷಿ ಉತ್ಪನ್ನಗಳು, ಆಹಾರ ಮತ್ತು ರಸಗೊಬ್ಬರಗಳ ದ್ವಿಪಕ್ಷೀಯ ವ್ಯಾಪಾರದ ಪ್ರಮಾಣವನ್ನು ಹೆಚ್ಚಿಸುವುದು. ಪಶುವೈದ್ಯಕೀಯ, ನೈರ್ಮಲ್ಯ ಮತ್ತು ಫೈಟೊಸಾನಿಟರಿ ನಿರ್ಬಂಧಗಳು ಮತ್ತು ನಿಷೇಧಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿರುವ ನಿಟ್ಟಿನಲ್ಲಿ ತೀವ್ರವಾದ ಸಂವಾದದ ನಿರ್ವಹಣೆ.
5. ಪರಮಾಣು ಶಕ್ತಿ, ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ಸೇರಿದಂತೆ ಪ್ರಮುಖ ಇಂಧನ ಕ್ಷೇತ್ರಗಳಲ್ಲಿ ಸಹಕಾರದ ಅಭಿವೃದ್ಧಿ ಮತ್ತು ಇಂಧನ ಮೂಲಸೌಕರ್ಯ, ತಂತ್ರಜ್ಞಾನಗಳು ಮತ್ತು ಸಲಕರಣೆಗಳ ಕ್ಷೇತ್ರದಲ್ಲಿ ಸಹಕಾರ ಮತ್ತು ಸಹಭಾಗಿತ್ವದ ವಿಸ್ತೃತ ರೂಪಗಳ ಅಭಿವೃದ್ಧಿ. ಪರಸ್ಪರ ಮತ್ತು ಅಂತರರಾಷ್ಟ್ರೀಯ ಇಂಧನ ಭದ್ರತೆಯನ್ನು ಸುಗಮಗೊಳಿಸುವುದು, ಅಂದರೆ ಜಾಗತಿಕ ಇಂಧನ ಪರಿವರ್ತನೆಯ ಸಾಧ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳುವುದು.
6. ಮೂಲಸೌಕರ್ಯ ಅಭಿವೃದ್ಧಿ, ಸಾರಿಗೆ ಎಂಜಿನಿಯರಿಂಗ್, ಆಟೋಮೊಬೈಲ್ ಉತ್ಪಾದನೆ ಮತ್ತು ಹಡಗು ನಿರ್ಮಾಣ, ಬಾಹ್ಯಾಕಾಶ ಮತ್ತು ಇತರ ಕೈಗಾರಿಕಾ ಕ್ಷೇತ್ರಗಳಲ್ಲಿ ಸಂವಹನವನ್ನು ಬಲಪಡಿಸುವುದು. ಅಂಗಸಂಸ್ಥೆಗಳು ಮತ್ತು ಕೈಗಾರಿಕಾ ಕ್ಲಸ್ಟರ್ ಗಳನ್ನು ನಿರ್ಮಿಸುವ ಮೂಲಕ ಭಾರತೀಯ ಮತ್ತು ರಷ್ಯಾದ ಕಂಪನಿಗಳು ಪರಸ್ಪರ ಮಾರುಕಟ್ಟೆಗಳಲ್ಲಿ ಪ್ರವೇಶಿಸಲು ಅನುಕೂಲ ಕಲ್ಪಿಸುವುದು. ಪ್ರಮಾಣೀಕರಣ, ಮಾಪನಶಾಸ್ತ್ರ ಮತ್ತು ಅನುಸರಣೆ ಮೌಲ್ಯಮಾಪನ ಕ್ಷೇತ್ರಗಳಲ್ಲಿ ಪಕ್ಷಗಳ ವಿಧಾನಗಳ ಸಂಯೋಜನೆ.
7. ಡಿಜಿಟಲ್ ಆರ್ಥಿಕತೆ, ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿ ಹೂಡಿಕೆ ಉತ್ತೇಜನ ಹಾಗು ಜಂಟಿ ಯೋಜನೆಗಳಿಗೆ ಉತ್ತೇಜನ, ಶೈಕ್ಷಣಿಕ ವಿನಿಮಯ ಮತ್ತು ಹೈಟೆಕ್ ಕಂಪನಿಗಳ ಉದ್ಯೋಗಿಗಳಿಗೆ ಇಂಟರ್ನ್ ಶಿಪ್ ಗೆ ಉತ್ತೇಜನ. ಅನುಕೂಲಕರ ಹಣಕಾಸಿನ ಆಡಳಿತಗಳನ್ನು ಒದಗಿಸುವ ಮೂಲಕ ಹೊಸ ಜಂಟಿ (ಅಂಗಸಂಸ್ಥೆ) ಕಂಪನಿಗಳ ರಚನೆಗೆ ಅನುಕೂಲ ಕಲ್ಪಿಸುವುದು.
8. ಔಷಧಿಗಳು ಮತ್ತು ಸುಧಾರಿತ/ಆಧುನಿಕ ವೈದ್ಯಕೀಯ ಸಲಕರಣೆಗಳ ಅಭಿವೃದ್ಧಿ ಮತ್ತು ಪೂರೈಕೆಯಲ್ಲಿ ವ್ಯವಸ್ಥಿತ ಸಹಕಾರವನ್ನು ಉತ್ತೇಜಿಸುವುದು. ರಷ್ಯಾದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಗಳ ಶಾಖೆಗಳನ್ನು ತೆರೆಯುವ ಮತ್ತು ಅರ್ಹ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡುವ ಸಾಧ್ಯತೆಯ ಬಗ್ಗೆ ಅಧ್ಯಯನ ಮಾಡುವುದು ಮತ್ತು ಅದರ ಜೊತೆಗೆ ವೈದ್ಯಕೀಯ ಹಾಗು ಜೈವಿಕ ಸುರಕ್ಷತೆ ಕ್ಷೇತ್ರದಲ್ಲಿ ಸಮನ್ವಯವನ್ನು ಬಲಪಡಿಸುವುದು.
9. ಮಾನವೀಯ ಸಹಕಾರದ ಅಭಿವೃದ್ಧಿ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ, ಪ್ರವಾಸೋದ್ಯಮ, ಕ್ರೀಡೆ, ಆರೋಗ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಸಂವಹನದ ನಿರಂತರ ವಿಸ್ತರಣೆ.
ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಹಕಾರದ ರಷ್ಯಾ-ಭಾರತೀಯ ಅಂತರ ಸರ್ಕಾರೀಯ ಆಯೋಗಕ್ಕೆ ಗುರುತಿಸಲಾದ ಆದ್ಯತೆಯ ಕ್ಷೇತ್ರಗಳನ್ನು ಅಧ್ಯಯನ ಮಾಡಲು ಮತ್ತು ಮುಂದಿನ ಸಭೆಯಲ್ಲಿ ಅದರ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ರಷ್ಯಾ ಒಕ್ಕೂಟದ ಅಧ್ಯಕ್ಷರು ಮತ್ತು ಭಾರತ ಗಣರಾಜ್ಯದ ಪ್ರಧಾನ ಮಂತ್ರಿಗಳು ಸೂಚನೆ ನೀಡಿದರು.
*****
(Release ID: 2032101)
Visitor Counter : 41
Read this release in:
Marathi
,
Tamil
,
Telugu
,
Malayalam
,
Assamese
,
Manipuri
,
Bengali
,
Odia
,
English
,
Urdu
,
Hindi
,
Punjabi
,
Gujarati