ಉಪರಾಷ್ಟ್ರಪತಿಗಳ ಕಾರ್ಯಾಲಯ
ಜುಲೈ 6 ರಿಂದ ಎರಡು ದಿನಗಳ ಕಾಲ ಉಪರಾಷ್ಟ್ರಪತಿ ಕೇರಳ ಪ್ರವಾಸ
ತಿರುವನಂತಪುರಂನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್, ಸೈನ್ಸ್ & ಟೆಕ್ನಾಲಜಿ (IIST) ಯ 12 ನೇ ಘಟಿಕೋತ್ಸವವನ್ನು ಉದ್ದೇಶಿಸಿ ಉಪ ರಾಷ್ಟ್ರಪತಿ ಭಾಷಣ
Posted On:
04 JUL 2024 2:32PM by PIB Bengaluru
ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಮತ್ತು ಡಾ. ಸುದೇಶ್ ಧನಕರ್ ಅವರು ಜುಲೈ 6 ಮತ್ತು 7, 2024 ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ.
ತಮ್ಮ ಪ್ರವಾಸದ ಮೊದಲ ದಿನದಂದು, ಶ್ರೀ ಧನಕರ್ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಸ್ಪೇಸ್, ಸೈನ್ಸ್ & ಟೆಕ್ನಾಲಜಿ (IIST) 12 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದಾರೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್‌ಸ್ಟಿಟ್ಯೂಟ್‌ನ ಮೆಡಲ್ ಆಫ್ ಎಕ್ಸಲೆನ್ಸ್ ಅನ್ನು ಪ್ರದಾನ ಮಾಡಲಿದ್ದಾರೆ. ಮರುದಿನ, ಉಪರಾಷ್ಟ್ರಪತಿಗಳು ಕೊಲ್ಲಂ ಮತ್ತು ಅಷ್ಟಮುಡಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
*****
(Release ID: 2030940)
Visitor Counter : 50