ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಪರೀಕ್ಷೆಗಳನ್ನು ಪಾರದರ್ಶಕ, ಸುಗಮ ಮತ್ತು ನ್ಯಾಯಸಮ್ಮತವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವಾಲಯದಿಂದ ಉನ್ನತ ಮಟ್ಟದ ತಜ್ಞರ ಸಮಿತಿ ರಚನೆ


ಪರೀಕ್ಷಾ ಪ್ರಕ್ರಿಯೆಯ ಕಾರ್ಯವಿಧಾನದಲ್ಲಿ ಸುಧಾರಣೆ, ಡೇಟಾ ಭದ್ರತಾ ಪ್ರೋಟೋಕಾಲ್ ಗಳ (ಶಿಷ್ಟಾಚಾರ) ಸುಧಾರಣೆ ಮತ್ತು ಎನ್. ಟಿ.ಎ. ಸಾಂಸ್ಥಿಕ ರಚನೆ ಹಾಗು ಕಾರ್ಯನಿರ್ವಹಣೆಯ ಬಗ್ಗೆ ಸಮಿತಿ ಶಿಫಾರಸುಗಳನ್ನು ಮಾಡಲಿದೆ

ಸಮಿತಿಯು ತನ್ನ ವರದಿಯನ್ನು 2 ತಿಂಗಳೊಳಗೆ ಸಚಿವಾಲಯಕ್ಕೆ ಸಲ್ಲಿಸಲಿದೆ

Posted On: 22 JUN 2024 3:04PM by PIB Bengaluru

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಮೂಲಕ ಪರೀಕ್ಷೆಗಳನ್ನು ಪಾರದರ್ಶಕ, ಸುಗಮ ಮತ್ತು ನ್ಯಾಯಸಮ್ಮತವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು, ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ಕೆಳಗಿನ ಶಿಫಾರಸುಗಳನ್ನು ಮಾಡಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ:

• ಪರೀಕ್ಷಾ ಪ್ರಕ್ರಿಯೆಯ ಕಾರ್ಯವಿಧಾನದಲ್ಲಿ ಸುಧಾರಣೆ,

• ಡೇಟಾ ಭದ್ರತಾ ಪ್ರೋಟೋಕಾಲ್ (ಶಿಷ್ಟಾಚಾರ) ಗಳಲ್ಲಿ ಸುಧಾರಣೆ.

• ರಾಷ್ಟ್ರೀಯ ಪರೀಕ್ಷಾ ಸಂಸ್ಥೆ/ ಏಜೆನ್ಸಿಯ(ಎನ್.ಟಿ.ಎ.)  ರಚನೆ ಮತ್ತು ಕಾರ್ಯನಿರ್ವಹಣೆ

ಕೆಳಗಿನ ಪಟ್ಟಿಯಲ್ಲಿರುವವರು ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಾಗಿರುತ್ತಾರೆ.

1

ಡಾ. ಕೆ. ರಾಧಾಕೃಷ್ಣನ್,

ಇಸ್ರೋ ಮಾಜಿ ಅಧ್ಯಕ್ಷರು ಮತ್ತು ಐಐಟಿ ಕಾನ್ಪುರದ ಬಿ.ಒ.ಜಿ. ಅಧ್ಯಕ್ಷರು

ಅಧ್ಯಕ್ಷರು

2

ಡಾ. ರಣದೀಪ್ ಗುಲೇರಿಯಾ,

ಮಾಜಿ ನಿರ್ದೇಶಕರು, ಎ.ಐ.ಐ.ಎಂ.ಎಸ್. ದಿಲ್ಲಿ.

ಸದಸ್ಯರು

3

ಪ್ರೊ. ಬಿ.ಜೆ.ರಾವ್,

ಉಪಕುಲಪತಿ, ಕೇಂದ್ರೀಯ ವಿಶ್ವವಿದ್ಯಾನಿಲಯ, ಹೈದರಾಬಾದ್

ಸದಸ್ಯರು

4

 ಪ್ರೊ. ರಾಮಮೂರ್ತಿ ಕೆ ,

ಪ್ರೊಫೆಸರ್ ಎಮಿರಿಟಸ್, ಸಿವಿಲ್ ಇಂಜಿನಿಯರಿಂಗ್ ವಿಭಾಗ, ಐ.ಐ.ಟಿ. ಮದ್ರಾಸ್

ಸದಸ್ಯರು

5

ಶ್ರೀ ಪಂಕಜ್ ಬನ್ಸಾಲ್,

ಸಹ-ಸ್ಥಾಪಕರು, ಪೀಪಲ್ ಸ್ಟ್ರಾಂಗ್ ಮತ್ತು ಕರ್ಮಯೋಗಿ ಭಾರತ್ -ಮಂಡಳಿ ಸದಸ್ಯರು.

ಸದಸ್ಯರು

6

ಪ್ರೊ. ಆದಿತ್ಯ ಮಿತ್ತಲ್ ,

ಡೀನ್ , ವಿದ್ಯಾರ್ಥಿ ವ್ಯವಹಾರಗಳು, ಐ.ಐ.ಟಿ. ದಿಲ್ಲಿ.

ಸದಸ್ಯರು

7

ಶ್ರೀ ಗೋವಿಂದ ಜೈಸ್ವಾಲ್,

ಜಂಟಿ ಕಾರ್ಯದರ್ಶಿ, ಶಿಕ್ಷಣ ಸಚಿವಾಲಯ, ಭಾರತ ಸರಕಾರ.

ಸದಸ್ಯ ಕಾರ್ಯದರ್ಶಿ

 

ಸಮಿತಿಯ ಉಲ್ಲೇಖದ ನಿಯಮಗಳು/ಕರಾರುಗಳು ಕೆಳಗಿನಂತಿವೆ;

(i) ಪರೀಕ್ಷಾ ಪ್ರಕ್ರಿಯೆಯ ಕಾರ್ಯವಿಧಾನದಲ್ಲಿ ಸುಧಾರಣೆ

(ಎ) ಆರಂಭದಿಂದ ಕೊನೆಯವರೆಗೆ ಎಂಡ್-ಟು-ಎಂಡ್ ಪರೀಕ್ಷಾ ಪ್ರಕ್ರಿಯೆಯನ್ನು ವಿಶ್ಲೇಷಿಸುವುದು ಮತ್ತು ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಯಾವುದೇ ಸಂಭಾವ್ಯ ಉಲ್ಲಂಘನೆಯನ್ನು ತಡೆಗಟ್ಟಲು ಕ್ರಮಗಳನ್ನು ಸೂಚಿಸುವುದು.

(ಬಿ) ಎನ್.ಟಿ.ಎ.ಯ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ಒಪಿಗಳು) / ಪ್ರೋಟೋಕಾಲ್ ಗಳ ಸಮಗ್ರ ಪರಿಶೀಲನೆಯನ್ನು ನಡೆಸುವುದು ಮತ್ತು ಪ್ರತಿ ಹಂತದಲ್ಲೂ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣಾ ಕಾರ್ಯವಿಧಾನದೊಂದಿಗೆ ಕಾರ್ಯವಿಧಾನಗಳು / ಪ್ರೋಟೋಕಾಲ್ ಗಳನ್ನು ಬಲಪಡಿಸುವ ಕ್ರಮಗಳನ್ನು ಸೂಚಿಸುವುದು.

(ii) ಡೇಟಾ ಭದ್ರತಾ ಪ್ರೋಟೋಕಾಲ್ ಗಳಲ್ಲಿ ಸುಧಾರಣೆ

(ಎ) ಎನ್ ಟಿಎಯ ಅಸ್ತಿತ್ವದಲ್ಲಿರುವ/ಈಗಿನ ಡೇಟಾ ಭದ್ರತಾ ಪ್ರಕ್ರಿಯೆಗಳು ಮತ್ತು ಪ್ರೋಟೋಕಾಲ್ ಗಳನ್ನು ಮೌಲ್ಯಮಾಪನ ಮಾಡುವುದು ಮತ್ತು ಅದರ ಸುಧಾರಣೆಗೆ ಕ್ರಮಗಳನ್ನು ಶಿಫಾರಸು ಮಾಡುವುದು.

(ಬಿ) ವಿವಿಧ ಪರೀಕ್ಷೆಗಳಿಗೆ ಪೇಪರ್ ಸೆಟ್ಟಿಂಗ್ ಮತ್ತು ಇತರ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಭದ್ರತಾ ಪ್ರೋಟೋಕಾಲ್ ಗಳನ್ನು ಪರಿಶೀಲಿಸುವುದು ಮತ್ತು ವ್ಯವಸ್ಥೆಯ ದೃಢತೆಯನ್ನು ಹೆಚ್ಚಿಸಲು ಶಿಫಾರಸುಗಳನ್ನು ಮಾಡುವುದು.

(iii) ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ರಚನೆ ಮತ್ತು ಕಾರ್ಯನಿರ್ವಹಣೆ

(ಎ) ಪಾಯಿಂಟ್ (i) ಮತ್ತು (ii) ಅಡಿಯಲ್ಲಿ ನೀಡಲಾದ ಶಿಫಾರಸುಗಳ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್ ಟಿಎ) ಸಾಂಸ್ಥಿಕ ರಚನೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಶಿಫಾರಸುಗಳನ್ನು ಮಾಡುವುದು ಮತ್ತು ಪ್ರತಿ ಹಂತದಲ್ಲೂ ಕಾರ್ಯಕರ್ತರ/ಸಿಬ್ಬಂದಿಗಳ  ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವುದು.

(ಬಿ) ಎನ್ ಟಿಎಯ ಪ್ರಸ್ತುತ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಮೌಲ್ಯಮಾಪನ ಮಾಡುವುದು, ಸುಧಾರಣೆಯ ಕ್ಷೇತ್ರಗಳನ್ನು ಗುರುತಿಸುವುದು ಮತ್ತು ಅದರ ದಕ್ಷತೆಯನ್ನು ಹೆಚ್ಚಿಸಲು ಶಿಫಾರಸುಗಳನ್ನು ಮಾಡುವುದು.

ಆದೇಶ ಹೊರಡಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಸಮಿತಿಯು ತನ್ನ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಬೇಕು.

ಸಮಿತಿಯು ತನಗೆ ಸಹಾಯ ಮಾಡಲು ಯಾವುದೇ ವಿಷಯ ತಜ್ಞರನ್ನು ಆಯ್ಕೆ ಮಾಡಬಹುದು./ಸೇರಿಸಿಕೊಳ್ಳಬಹುದು.

 

*****



(Release ID: 2027956) Visitor Counter : 46