ಗೃಹ ವ್ಯವಹಾರಗಳ ಸಚಿವಾಲಯ

ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್‌ನ ಪರ್ವತಾ ಪಾರುಗಾಣಿಕಾ ತಂಡ ಲಾಹೌಲ್ ಮತ್ತು ಸ್ಪಿತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಶ್ಲಾಘನೆ


ನಮ್ಮ ಹಿಮ ವೀರರ ಬಗ್ಗೆ ಹೆಮ್ಮೆಯಾಗುತ್ತದೆ – ಗೃಹ ಸಚಿವ  

ಐಟಿಬಿಪಿ ತಂಡದ ಸದಸ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪರ್ವತಗಳಲ್ಲಿ 14,800 ಅಡಿ ಎತ್ತರಕ್ಕೆ ಏರಿದ್ದು, ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಅಮೆರಿಕನ್ ಪ್ರಜೆಯ ಮೃತದೇಹವನ್ನು ಪಡೆಯಲು ಮಾನವೀಯ ಕಾರಣಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದೆ

ಐಟಿಬಿಪಿ ತಂಡದ ಮಾನವೀಯತೆಯ ಸಮರ್ಪಣೆಯ ಕಾರ್ಯ ಶ್ಲಾಘನೀಯ – ಅಮಿತ್ ಶಾ

Posted On: 18 JUN 2024 1:32PM by PIB Bengaluru

ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್‌ನ ಪರ್ವತಾ ಪಾರುಗಾಣಿಕಾ ತಂಡ ಲಾಹೌಲ್ ಮತ್ತು ಸ್ಪಿತಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದುನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಶ್ಲಾಘಿಸಿದ್ದಾರೆ.

ಎಕ್ ವೇದಿಕೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಶ್ರೀ ಅಮಿತ್ ಶಾ ಅವರು, “ನಮ್ಮ ಹಿಮ ವೀರರ ಬಗ್ಗೆ ನಮಗೆ ಹಮ್ಮೆಯಾಗುತ್ತಿದೆ.  ಐಟಿಬಿಪಿ ಪರ್ವತಾ ರಕ್ಷಣಾ ತಂಡ ಇತ್ತೀಚೆಗೆ ಇತ್ತೀಚೆಗೆ ಪ್ಯಾರಾ ಗ್ಲೈಡಿಂಗ್ ಸಂದರ್ಭದಲ್ಲಿ ಮೃತಪಟ್ಟ ಅಮೆರಿಕ ನಾಗರಿಕನ ಮೃತದೇಶಹವನ್ನು ವಶಕ್ಕೆ ಪಡೆಯಲು ಪರ್ವತದ ತುದಿಯಲ್ಲಿರುವ ಬಂಡೆ ಪ್ರದೇಶವಾದ ಲಹೌಲ್ ಮತ್ತು ಸ್ಪಿತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಐಟಿಬಿಪಿ ತಂಡದ ಸದಸ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪರ್ವತಗಳಲ್ಲಿ 14,800 ಅಡಿ ಎತ್ತರಕ್ಕೆ ಏರಿದ್ದು, ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಅಮೆರಿಕನ್ ಪ್ರಜೆಯ ಮೃತದೇಹವನ್ನು ಪಡೆಯಲು ಮಾನವೀಯ ಕಾರಣಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದೆ. ಐಟಿಬಿಪಿ ತಂಡದ ಮಾನವೀಯತೆಯ ಸಮರ್ಪಣಾ ಭಾವ ಶ್ಲಾಘನೀಯ” ಎಂದು ಹೇಳಿದ್ದಾರೆ.

 

*****



(Release ID: 2026347) Visitor Counter : 15