ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಶ್ರೀ ಅಮರನಾಥ ಯಾತ್ರೆಯ ಭದ್ರತೆ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಸಿದರು


ಜಾಗರೂಕರಾಗಿರುವಂತೆ ಮತ್ತು ಯಾತ್ರೆಗೆ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಭದ್ರತಾ ಸಂಸ್ಥೆಗಳಿಗೆ ಕೇಂದ್ರ ಗೃಹ ಸಚಿವರು ಸೂಚನೆ ನೀಡಿದರು

ಸುಸ್ಥಾಪಿತ ಗುಣಮಟ್ಟದ ಕಾರ್ಯಾಚರಣೆ ಪ್ರತಿಕ್ರಿಯೆ ವ್ಯವಸ್ಥೆ ಸೇರಿದಂತೆ ಪರಿಣಾಮಕಾರಿ ಭದ್ರತಾ ವ್ಯವಸ್ಥೆಗಳಿಗಾಗಿ ಪರಿಪೂರ್ಣ ಅಂತರ್‌ ಸಂಸ್ಥೆ ಸಮನ್ವಯವನ್ನು ಗೃಹ ಸಚಿವರು ಒತ್ತಿ ಹೇಳಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಕ್ತರಿಗೆ ಅನುಕೂಲಕರ ಮತ್ತು ತೊಂದರೆ-ಮುಕ್ತ ಅನುಭವವನ್ನು ಖಚಿತಪಡಿಸಿಕೊಳ್ಳಲು ಮತ್ತು ಶ್ರೀ ಅಮರನಾಥ ಯಾತ್ರೆಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು

ಅಮರನಾಥ ಯಾತ್ರೆಯು ಜೂನ್ 29 ರಂದು ಪ್ರಾರಂಭವಾಗಲಿದ್ದು, ಜಮ್ಮು ಮತ್ತು ಕಾಶ್ಮೀರ ಆಡಳಿತವು ಯಾತ್ರೆಯನ್ನು ಸುಗಮವಾಗಿ ನಡೆಸಲು ವಿಸ್ತೃತವಾದ  ವ್ಯವಸ್ಥೆಗಳನ್ನು ಮಾಡಿದೆ

ಶ್ರೀ ಅಮರನಾಥ ಯಾತ್ರೆಯ ಭಕ್ತರು ಸರಾಗವಾಗಿ ಪವಿತ್ರ ದರ್ಶನವನ್ನು ಮಾಡುವಂತೆ ಮತ್ತು ಅವರು ಯಾವುದೇ ತೊಂದರೆಯನ್ನು ಎದುರಿಸದಂತೆ ಖಚಿತಪಡಿಸಿಕೊಳ್ಳುವುದು ಮೋದಿ ಸರ್ಕಾರದ ಆದ್ಯತೆಯಾಗಿದೆ

Posted On: 16 JUN 2024 8:21PM by PIB Bengaluru

ಇಂದು ನವದೆಹಲಿಯಲ್ಲಿ ಶ್ರೀ ಅಮರನಾಥ ಯಾತ್ರೆಯ ಭದ್ರತೆ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಸಂಸ್ಥೆಯ ನಿರ್ದೇಶಕರು, ಸೇನಾ ಮುಖ್ಯಸ್ಥ (ನಿಯೋಜಿತ) ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಸೇರಿದಂತೆ ಹಿರಿಯ ಸೇನಾ ಅಧಿಕಾರಿಗಳು, ಸಿಎಪಿಎಫ್‌ ಗಳ ಮಹಾನಿರ್ದೇಶಕರು, ಜಮ್ಮು ಮತ್ತರು ಕಾಶ್ಮೀರದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

C:\Users\admin\Desktop\HM\16.06.2024\1.JPG

ಪರಿಶೀಲನಾ ಸಭೆಯಲ್ಲಿ, ಅಮರನಾಥ ಯಾತ್ರೆಯ ಬಗ್ಗೆ  ಜಾಗರೂಕರಾಗಿರುವಂತೆ ಮತ್ತು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಭದ್ರತಾ ಏಜೆನ್ಸಿಗಳಿಗೆ ಕೇಂದ್ರ ಗೃಹ ಸಚಿವರು ಸೂಚಿಸಿದರು. ಸುಸ್ಥಾಪಿತ ಗುಣಮಟ್ಟದ ಕಾರ್ಯಾಚರಣಾ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಒಳಗೊಂಡಂತೆ ಪರಿಣಾಮಕಾರಿ ಭದ್ರತಾ ವ್ಯವಸ್ಥೆಗಳಿಗಾಗಿ ಪರಿಪೂರ್ಣ ಅಂತರ-ಸಂಸ್ಥೆ ಸಮನ್ವಯವನ್ನು ಸ್ಥಾಪಿಸಲು ಅವರು ಸೂಚನೆ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಕ್ತರಿಗೆ ಅನುಕೂಲಕರ ಮತ್ತು ತೊಂದರೆ-ಮುಕ್ತ ಅನುಭವವನ್ನು ಖಚಿತಪಡಿಸಿಕೊಳ್ಳಲು ಮತ್ತು ಶ್ರೀ ಅಮರನಾಥ ಯಾತ್ರೆಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಶ್ರೀ ಅಮರನಾಥ ಯಾತ್ರೆಯ ಭಕ್ತರು ಸರಾಗವಾಗಿ ಪವಿತ್ರ ದರ್ಶನವನ್ನು ಮಾಡುವಂತೆ ಮತ್ತು ಅವರು ಯಾವುದೇ ತೊಂದರೆಯನ್ನು ಎದುರಿಸದಂತೆ ಖಚಿತಪಡಿಸಿಕೊಳ್ಳುವುದು ಮೋದಿ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

C:\Users\admin\Desktop\HM\16.06.2024\2.JPG

ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು ಅಮರನಾಥ ಯಾತ್ರೆಯನ್ನು ಸುರಕ್ಷಿತ ಮತ್ತು ಭಕ್ತರಿಗೆ ಆರಾಮದಾಯಕವಾಗಿಸಲು ಮಹತ್ವದ ಉಪಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ದರ್ಶನ ಪಡೆದರು. ಈ ವರ್ಷ ಯಾತ್ರೆಯು ಜೂನ್ 29 ರಂದು ಪ್ರಾರಂಭವಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು ತಡೆರಹಿತ ನೋಂದಣಿ, ಬೆಂಗಾವಲು ಸಂಚಾರ, ಕ್ಯಾಂಪಿಂಗ್ ಸೌಲಭ್ಯಗಳು, ವೈದ್ಯಕೀಯ ಸೌಲಭ್ಯಗಳು, ಪಥಗಳನ್ನು ನವೀಕರಿಸುವುದು, ವಿದ್ಯುತ್ ಮತ್ತು ನೀರು ಸರಬರಾಜು ಮತ್ತು ಮೊಬೈಲ್ ಫೋನ್ ಸಂಪರ್ಕವನ್ನು ಒದಗಿಸುವುದು ಸೇರಿದಂತೆ ಯಾತ್ರೆಯನ್ನು ಸುಗಮವಾಗಿ ನಡೆಸಲು ವಿಸ್ತೃತವಾದ ವ್ಯವಸ್ಥೆಗಳನ್ನು ಮಾಡಿದೆ.

*****

 



(Release ID: 2025820) Visitor Counter : 18