ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಶ್ರೀ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು ಸಂವಹನ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ
Posted On:
11 JUN 2024 5:06PM by PIB Bengaluru
ಶ್ರೀ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು ಇಂದು ಸಂವಹನ ಸಚಿವರಾಗಿ ಅಧಿಕಾರ ವಹಿಸಿಕೊಂಡರು
ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ದಿನ ಮತ್ತು ಯುಗದಲ್ಲಿ ಭಾರತದ ಉದ್ದ ಮತ್ತು ಅಗಲವನ್ನು ಸಂಪರ್ಕಿಸುವಲ್ಲಿ ದೂರಸಂಪರ್ಕ ಇಲಾಖೆ (DoT) ಮತ್ತು ಭಾರತ ಅಂಚೆ ಪ್ರಮುಖ ಖಾತೆ ವಹಿಸುತ್ತಿದೆ ಎಂದರು. "ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನನಗೆ ಸಂವಹನ ಸಚಿವಾಲಯದ ಉಸ್ತುವಾರಿ ನೀಡಿರುವುದು ನನಗೆ ಗೌರವ ತಂದಿದೆ. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸರ್ಕಾರವು ಈ ಕ್ಷೇತ್ರವನ್ನು ಮಾರ್ಪಡಿಸಿದೆ ಮತ್ತು ಇಂದು ನಾನು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ನನ್ನ ಅಚಲ ಬದ್ಧತೆ ತೋರುತ್ತೇನೆ" ಎಂದು ಅವರು ಹೇಳಿದರು.
ದೂರಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯ ಶ್ರೇಯಸ್ಸು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಸಲ್ಲುತ್ತದೆ ಮತ್ತು 140 ಕೋಟಿ ನಾಗರಿಕರ ಆಕಾಂಕ್ಷೆಗಳ ಪ್ರಕಾರ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪರಿಶ್ರಮ ಮತ್ತು ಅತ್ಯುತ್ತಮ ಪ್ರಯತ್ನ ಮಾಡುವುದಾಗಿ ಸಚಿವರು ತಿಳಿಸಿದರು.
ಸಚಿವಾಲಯದ ಅಧಿಕಾರಿಗಳು ಶ್ರೀ ಸಿಂಧಿಯಾ ಅವರಿಗೆ ಆತ್ಮೀಯ ಸ್ವಾಗತವನ್ನು ನೀಡಿದರು ಮತ್ತು ಸಚಿವಾಲಯದ ಗುರಿಗಳನ್ನು ಸಾಧಿಸುವಲ್ಲಿ ಅವರ ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಅವರ ವ್ಯಾಪಕ ಅನುಭವ ಮತ್ತು ಕ್ರಿಯಾತ್ಮಕ ನಾಯಕತ್ವವು ಸಂವಹನ ಸಚಿವಾಲಯಕ್ಕೆ ಹೊಸ ದೃಷ್ಟಿಕೋನ ಮತ್ತು ನವೀಕೃತ ಚೈತನ್ಯವನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರ ಟ್ವೀಟ್ ಲಿಂಕ್: https://twitter.com/JM_Scindia/status/1800433070413152579?t=lSd2E36lAoARrmhijo1zkA&s=19
ಹೆಚ್ಚಿನ ಫೋಟೋಗಳು ಮತ್ತು ವೀಡಿಯೊಗಳ ಲಿಂಕ್: https://drive.google.com/drive/folders/1nP-n5_cv21jSF7TjJnFvoHOCBJZ3JC_o
*****
(Release ID: 2024958)
Visitor Counter : 45