ಜಲ ಶಕ್ತಿ ಸಚಿವಾಲಯ

ಕೇಂದ್ರ ಜಲಶಕ್ತಿ ಸಚಿವರಾಗಿ ಶ್ರೀ ಸಿ.ಆರ್.ಪಾಟೀಲ್ ಅವರು ಅಧಿಕಾರ ವಹಿಸಿಕೊಂಡರು


ಜಲ ಸಂರಕ್ಷಣೆ, ನೈರ್ಮಲ್ಯ ಮತ್ತು ನಿರ್ವಹಣೆಯಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯವು ಹೊಸ ಮಾನದಂಡಗಳನ್ನು ಸ್ಥಾಪಿಸಲು ನಿರ್ಧರಿಸಿದೆ: ಸಚಿವ ಶ್ರೀ ಸಿ.ಆರ್.ಪಾಟೀಲ್

Posted On: 11 JUN 2024 6:39PM by PIB Bengaluru

ಶ್ರೀ ಚಂದ್ರಕಾಂತ ರಘುನಾಥ್ ಪಾಟೀಲ್ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲ ಶಕ್ತಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ನಂತರ ಸಚಿವರು ತಮ್ಮ ಮೇಲೆ ವಿಶ್ವಾಸವಿಟ್ಟು ಸಚಿವಾಲಯದ ಜವಾಬ್ದಾರಿಯನ್ನು ವಹಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಶ್ರೀ ಪಾಟೀಲ್ ಅವರು ಗುಜರಾತ್ ನ ನವಸಾರಿ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದಾರೆ.

 

 

"ಜಲ ಶಕ್ತಿ ಸಚಿವಾಲಯವು ನೀರಿನ ಸಂರಕ್ಷಣೆ, ನೈರ್ಮಲ್ಯ ಮತ್ತು ನಿರ್ವಹಣೆಯಲ್ಲಿ ಹೊಸ ಮಾನದಂಡಗಳನ್ನು ಹೊಂದುವಂತೆ ನಾವು ಮಾಡುತ್ತೇವೆ. ಈ ದಿಕ್ಕಿನಲ್ಲಿ ನಾವು ಸಾಮೂಹಿಕ ಪ್ರಯತ್ನಗಳನ್ನು ಉತ್ತೇಜಿಸುತ್ತೇವೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ನೀರಿನ ಸಂಪತ್ತುಗಳನ್ನು ಸಂರಕ್ಷಿಸುತ್ತೇವೆ.” ಎಂದು ಸಾಮಾಜಿಕ ಮಾಧ್ಯಮ ತಾಣ 'ಎಕ್ಸ್' ನಲ್ಲಿ ಹಾಕಿರುವ ತಮ್ಮ ಸಂದೇಶದಲ್ಲಿ ಸಚಿವ ಶ್ರೀ ಪಾಟೀಲ್ ಅವರು ತಿಳಿಸಿದ್ದಾರೆ.

ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಚಂದ್ರಕಾಂತ ರಘುನಾಥ್ ಪಾಟೀಲ್ , ಕೇಂದ್ರ ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಮತ್ತು ಡಾ. ರಾಜ್ ಭೂಷಣ್ ಚೌಧರಿ ಅವರಿಗೆ ಸಚಿವಾಲಯದ ಹಿರಿಯ ಅಧಿಕಾರಿಗಳು ದೇಶದ ನೀರಿನ ಸ್ಥಿತಿ ಮತ್ತು ಸಚಿವಾಲಯದ ವಿವಿಧ ಇಲಾಖೆಗಳ ಕಾರ್ಯಗಳ ಬಗ್ಗೆ ವಿವರಿಸಿದರು.

 

 

ಈ ಸಂದರ್ಭದಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯದರ್ಶಿ ಶ್ರೀಮತಿ ವಿನಿ ಮಹಾಜನ್, ಕೇಂದ್ರ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ದೇಬಶ್ರೀ ಮುಖರ್ಜಿ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
 
*****



(Release ID: 2024934) Visitor Counter : 19