ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ನವ ಮತ್ತು ನವೀಕೃತ ಇಂಧನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಪ್ರಹ್ಲಾದ್ ಜೋಶಿ


ರಾಜ್ಯ ಸಚಿವರಾಗಿ ಪದಗ್ರಹಣ ಮಾಡಿದ ಶ್ರೀ ಶ್ರೀಪಾದ್ ಯಸ್ಸೋ ನಾಯಕ್ 

प्रविष्टि तिथि: 11 JUN 2024 2:54PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಹೊಂದಿರುವ ಶ್ರೀ ಪ್ರಹ್ಲಾದ್ ಜೋಶಿ ಅವರು ಇಂದು ಅಟಲ್ ಅಕ್ಷಾ ಊರ್ಜಾ ಭವನದಲ್ಲಿ ಕೇಂದ್ರ ನವ ಮತ್ತು ನವೀಕೃತ ಇಂಧನ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.  ನವ ಮತ್ತು ನವೀಕೃತ ಇಂಧನ ಖಾತೆ ರಾಜ್ಯ ಸಚಿವರಾಗಿ ಶ್ರೀ ಶ್ರೀಪಾದ್ ಯಸ್ಸೋ ನಾಯಕ್ ಅವರು ಸಹ ಪದಗ್ರಹಣ ಮಾಡಿದರು. 

 


ನೂತನ ಸಚಿವರನ್ನು ನವ ಮತ್ತು ನವೀಕೃತ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಭೂಪಿಂದ್ರ ಸಿಂಗ್ ಭಲ್ಲಾ ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. 

 


 

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನವೀಕರಿಸಬಹುದಾದ ಇಂಧನ ಕ್ಷೇತ್ರದ ನಿರ್ಣಾಯಕ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು ಮತ್ತು ಈ ಕ್ಷೇತ್ರದಲ್ಲಿನ ಬೆಳವಣಿಗೆಗೆ ಇರುವ ವ್ಯಾಪಕ ಸಾಮರ್ಥ್ಯದ ಕುರಿತು  ವಿವರ ನೀಡಿದರು. 

ನಂತರ ಇಂಧನ ಸಚಿವಾಲಯದ ಹಿರಿಯ ಅಧಿಕಾರಿಗಳು ಕೇಂದ್ರ ಸಚಿವರಿಗೆ ಸಚಿವಾಲಯದ ಕಾರ್ಯ ಚಟುವಟಿಕಗಳ ಕುರಿತು ಮಾಹಿತಿ ನೀಡಿದರು ಮತ್ತು ಬಳಿಕ ಸಚಿವರು ಸಭೆ ನಡೆಸಿದರು.  
 

*****


(रिलीज़ आईडी: 2024126) आगंतुक पटल : 132
इस विज्ञप्ति को इन भाषाओं में पढ़ें: English , Urdu , Marathi , हिन्दी , Hindi_MP , Punjabi , Gujarati , Odia , Tamil , Telugu , Malayalam