ಪ್ರಧಾನ ಮಂತ್ರಿಯವರ ಕಛೇರಿ

ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವಂತೆ ಪ್ರತಿಯೊಬ್ಬರಿಗೂ ಮನವಿ ಮಾಡಿದ ಪ್ರಧಾನಿ 


ವಿವಿಧ ಆಸನಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಮಾರ್ಗದರ್ಶನ ನೀಡುವ ವೀಡಿಯೊಗಳ ಗುಚ್ಛವನ್ನು ಸಹ ಅವರು ಹಂಚಿಕೊಂಡಿದ್ದಾರೆ

Posted On: 11 JUN 2024 11:03AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವಂತೆ ಪ್ರತಿಯೊಬ್ಬರಿಗೂ ಮನವಿ ಮಾಡಿದ್ದಾರೆ. ಯೋಗವು ಪ್ರಶಾಂತತೆಯನ್ನು ಒದಗಿಸುತ್ತದೆ, ಜೀವನದ ಸವಾಲುಗಳನ್ನು ಶಾಂತವಾಗಿ ಮತ್ತು ಧೈರ್ಯವಾಗಿ ನಿಭಾಯಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ಮುಂಬರುವ ಯೋಗ ದಿನದ ಹಿನ್ನೆಲೆಯಲ್ಲಿ, ಶ್ರೀ ಮೋದಿ ಅವರು ವಿವಿಧ ಆಸನಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಮಾರ್ಗದರ್ಶನ ನೀಡುವ ವೀಡಿಯೊಗಳ ಗುಚ್ಛವನ್ನು ಹಂಚಿಕೊಂಡಿದ್ದಾರೆ.

ʻಎಕ್ಸ್ʼ ಪೋಸ್ಟ್‌ಗಳ ಸರಣಿಯಲ್ಲಿ, ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

"ಇಂದಿನಿಂದ ಇನ್ನು ಹತ್ತು ದಿನಗಳಲ್ಲಿ, ಜಗತ್ತು 10ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಿದೆ. ಏಕತೆ ಮತ್ತು ಸಾಮರಸ್ಯವನ್ನು ಆಚರಿಸುವ ಕಾಲಾತೀತ ಅಭ್ಯಾಸವನ್ನು ಜಗತ್ತು ಆಚರಿಸಲಿದೆ. ಯೋಗವು ಸಾಂಸ್ಕೃತಿಕ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದೆ, ಸಮಗ್ರ ಯೋಗಕ್ಷೇಮದ ಅನ್ವೇಷಣೆಯಲ್ಲಿ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಒಂದುಗೂಡಿಸಿದೆ.

"ನಾವು ಈ ವರ್ಷದ ಯೋಗ ದಿನವನ್ನು ಸಮೀಪಿಸುತ್ತಿರುವಂತೆಯೇ, ಯೋಗವನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳವ ಮತ್ತು ಇತರರನ್ನು ಸಹ ಹಾಗೆ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವುದು ಅತ್ಯಗತ್ಯ. ಯೋಗವು ಪ್ರಶಾಂತತೆಯನ್ನು ನೀಡುತ್ತದೆ, ಜೀವನದ ಸವಾಲುಗಳನ್ನು ಶಾಂತವಾಗಿ ಮತ್ತು ಧೈರ್ಯದಿಂದ ನಿಭಾಯಿಸಲು ನಮಗೆ ಅನುವು ಮಾಡಿಕೊಡುತ್ತದೆ.

"ಯೋಗ ದಿನ ಸಮೀಪಿಸುತ್ತಿದ್ದಂತೆ, ನಾನು ವಿವಿಧ ಆಸನಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಮಾರ್ಗದರ್ಶನ ನೀಡುವ ವೀಡಿಯೊಗಳ ಗುಚ್ಛವನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ನಿಮ್ಮೆಲ್ಲರಿಗೂ ನಿಯಮಿತವಾಗಿ ಯೋಗಾಭ್ಯಾಸ ಮಾಡಲು ಪ್ರೇರಣೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.

 


*****



(Release ID: 2024012) Visitor Counter : 43