ಪರಿಸರ ಮತ್ತು ಅರಣ್ಯ ಸಚಿವಾಲಯ
ವಿಶ್ವ ಪರಿಸರ ದಿನದಂದು, ದೆಹಲಿಯ ಬುದ್ಧ ಜಯಂತಿ ಪಾರ್ಕ್‌ನಲ್ಲಿ ಅಶ್ವತ್ಥ ಸಸಿಗಳನ್ನು ನೆಟ್ಟ ಪ್ರಧಾನಿ: #ಏಕ್_ಪೆಡ್_ಮಾಂ_ಕೆ_ನಾಮ್ #Plant4Mother ಅಭಿಯಾನಕ್ಕೆ ಚಾಲನೆ
ಭೂಮಾತೆ ಪ್ರಕೃತಿಯ ಪೋಷಣೆ ಮತ್ತು ನಮ್ಮ ತಾಯಂದಿರಿಂದ ಮಾನವ ಜೀವನದ ಪೋಷಣೆಯ ನಡುವೆ ಸಾಮ್ಯತೆಯನ್ನು ನೀಡಿದ ಪ್ರಧಾನಿ ಮೋದಿ, ತಾಯಿ ಮೇಲಿನ ಪ್ರೀತಿ, ಗೌರವದ ಸಂಕೇತವಾಗಿ ಗಿಡ ನೆಡಲು ಸಲಹೆ
ಗಿಡ ನೆಡುವ ಅಭಿಯಾನಕ್ಕೆ ಸಹಾಯ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಂದ ಸಾರ್ವಜನಿಕ ಸ್ಥಳಗಳ ಗುರುತಿಸುವಿಕೆ
ಅಭಿಯಾನದ ಜೊತೆಗೆ, ಸೆಪ್ಟೆಂಬರ್ 2024 ರೊಳಗೆ 80 ಕೋಟಿ ಮತ್ತು ಮಾರ್ಚ್, 2025 ರ ವೇಳೆಗೆ 140 ಕೋಟಿ ಗಿಡಗಳನ್ನು ನೆಡಲು "ಸಂಪೂರ್ಣ ಸರ್ಕಾರ" ಮತ್ತು "ಸಂಪೂರ್ಣ ಸಮಾಜ ವಿಧಾನ" ಅನುಸರಿಸಲು ಯೋಜನೆ
Posted On:
05 JUN 2024 3:34PM by PIB Bengaluru
ವಿಶ್ವ ಪರಿಸರ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಬುದ್ಧ ಜಯಂತಿ ಪಾರ್ಕ್‌ನಲ್ಲಿ ಅಶ್ವತ್ಥ ಸಸಿಯನ್ನು ನೆಡುವ ಮೂಲಕ #ಏಕ್_ಪೆಡ್_ಮಾಂ_ಕೆ_ನಾಮ್(ತಾಯಿಯ ಹೆಸರಿನಲ್ಲಿ ಒಂದು ಗಿಡ) #Plant4Mother ಅಭಿಯಾನಕ್ಕೆ ಚಾಲನೆ ನೀಡಿದರು.
ಭೂಮಿ ತಾಯಿಯಿಂದ ಪ್ರಕೃತಿಯ ಪೋಷಣೆ ಮತ್ತು ನಮ್ಮ ತಾಯಂದಿರಿಂದ ಮಾನವ ಜೀವನದ ಪೋಷಣೆ ಸಮಾನಾಂತರವಾಗಿರುತ್ತದೆ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ತಮ್ಮ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಗಿಡ ನೆಡಲು ಪ್ರಪಂಚದಾದ್ಯಂತದ ಜನರಿಗೆ ಸಲಹೆ ನೀಡಿದರು. ಗಿಡ ಮತ್ತು ಭೂತಾಯಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡಿ ಎಂದು ಕೇಳಿಕೊಂಡರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳು #ಏಕ್_ಪೆಡ್_ಮಾ_ಕೆ_ನಾಮ್ #Plant4Mother ಅಭಿಯಾನಕ್ಕೆ ಸಹಾಯ ಮಾಡಲು ಸಾರ್ವಜನಿಕ ಸ್ಥಳಗಳನ್ನು ಗುರುತಿಸುತ್ತವೆ.
ಗಿಡಗಳನ್ನು ನೆಡುವುದು 2024 ರ ವಿಶ್ವ ಪರಿಸರ ದಿನದ ಧ್ಯೇಯವಾಕ್ಯದ ಕೇಂದ್ರಬಿಂದುವಾಗಿದೆ. ಭೂ ಅವನತಿಯನ್ನು ನಿಲ್ಲಿಸಿ ಭೂಮಿಯ ಸ್ಥಿತಿಸ್ಥಾಪಕತ್ವವನ್ನು, ಬರ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು ಮತ್ತು ಭೂಮಿ ಬರಡಾಗುವುದನ್ನು ತಡೆಯುವುದಾಗಿದೆ.ಎಕ್_ಪೇಡ್_ಮಾ_ಕೆ_ನಾಮ್ #Plant4Mother ಅಭಿಯಾನದ ಜೊತೆಗೆ, ಸೆಪ್ಟೆಂಬರ್ ವೇಳೆಗೆ 80 ಕೋಟಿ ಗಿಡಗಳನ್ನು ಮತ್ತು ಮಾರ್ಚ್, 2025 ರ ವೇಳೆಗೆ 140 ಕೋಟಿ ಗಿಡಗಳನ್ನು ನೆಡಲು "ಸಂಪೂರ್ಣ ಸರ್ಕಾರ" ಮತ್ತು "ಸಂಪೂರ್ಣ ಸಮಾಜದ ವಿಧಾನ" ಅನುಸರಿಸಲು ಯೋಜಿಸಲಾಗಿದೆ. ವ್ಯಕ್ತಿಗಳು, ಘಟಕಗಳು, ಸಮುದಾಯ ಆಧಾರಿತ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಂದ ದೇಶಾದ್ಯಂತ ಗಿಡಗಳನ್ನು ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ನೆಡಲಾಗುತ್ತದೆ.
ಭಾರತ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ 7.5 ಲಕ್ಷ ಶಾಲೆಗಳಲ್ಲಿ ಇಕೋ-ಕ್ಲಬ್‌ಗಳನ್ನು #ಏಕ್_ಪೆಡ್_ಮಾ_ಕೆ_ನಾಮ್ ಸಂದೇಶವನ್ನು ಮುಂದಕ್ಕೆ ಸಾಗಿಸಲು ಮತ್ತು ಪ್ರಚಾರ ಮಾಡಲು ಪ್ರೇರೇಪಿಸಿದೆ. ಶಾಲೆಗಳಲ್ಲಿನ ಬೇಸಿಗೆ ಶಿಬಿರಗಳು ಹೊಸ ಶಿಕ್ಷಣ ನೀತಿಯ ಪ್ರಮುಖ ನಿಯಮಗಳಲ್ಲಿ ಒಂದಾದ ಅನುಭವದ ಕಲಿಕೆಯೊಂದಿಗಿನ ಸಂಯೋಜಿಸುವಿಕೆ ಪರಿಸರ ದಿನದ ಧ್ಯೇಯವಾಕ್ಯದ ಮೇಲೆ ಕೇಂದ್ರೀಕರಿಸುತ್ತವೆ.
ಮನುಷ್ಯರು ಸೇರಿದಂತೆ ಭೂಮಿಯಾದ್ಯಂತ ಎಲ್ಲಾ ಜೀವಿಗಳನ್ನು ಪೋಷಿಸುವ ಗಿಡಗಳನ್ನು ನೆಡುವುದರ ಪ್ರಾಮುಖ್ಯತೆ, ಮರ, ತಾಯಿ ಮತ್ತು ಭೂತಾಯಿಯ ನಡುವಿನ ಪರಸ್ಪರ ಸಂಬಂಧವನ್ನು ವಿಶೇಷವಾಗಿ Plant4Mother ಕಲ್ಪನೆಯ ಮೂಲಕ ಒತ್ತಿ ಹೇಳಲಾಗುತ್ತದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಎಲ್ಲಾ ಪರಿಸರ ಮಾಹಿತಿ, ಜಾಗೃತಿ, ಸಾಮರ್ಥ್ಯ ನಿರ್ಮಾಣ ಮತ್ತು ಜೀವನೋಪಾಯ ಕಾರ್ಯಕ್ರಮ (EIACP) ಕೇಂದ್ರಗಳು, ಹಾಗೆಯೇ ಅದರ ಸಂಸ್ಥೆಗಳಾದ ಬಿಎಸ್ ಐ, ಝಡ್ ಎಸ್ ಐ, ಐಸಿಎಫ್ ಆರ್ ಇ,ಎನ್ ಎಂಎನ್ ಹೆಚ್ ಇತ್ಯಾದಿಗಳ ಬಗ್ಗೆ ಜಾಗೃತಿಯನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
#ಏಕ್_ಪೇಡ್_ಮಾ_ಕೆ_ನಾಮ್ ಎಂಬ ಧ್ಯೇಯವಾಕ್ಯದಡಿ ಗಿಡ ನೆಡುವ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು. ಇತರ ಸಚಿವಾಲಯಗಳು ಮತ್ತು ಇಲಾಖೆಗಳು #ಏಕ್_ಪೆಡ್_ಮಾ_ಕೆ_ನಾಮ್ ವಿಷಯವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಯುವ ವ್ಯವಹಾರಗಳ ಸಚಿವಾಲಯದ ಮೈ ಭಾರತ್(MY Bharat) ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಸಂದೇಶವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ ಮತ್ತು #Plant4Mother ನ ಮೂಲ ಸೂತ್ರದೊಂದಿಗೆ ಈ ಬೃಹತ್ ಮರ ನೆಡುವ ಅಭಿಯಾನದಲ್ಲಿ ಕೈಜೋಡಿಸುವಂತೆ ಇತರ ದೇಶಗಳ ನಾಗರಿಕರನ್ನು ಉತ್ತೇಜಿಸಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*****
(Release ID: 2023089)
Visitor Counter : 100