ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ವಿಶ್ವ ಆರೋಗ್ಯ ಸಂಸ್ಥೆಯಿಂದ 2024 ರ ಆರೋಗ್ಯ ಪ್ರಚಾರಕ್ಕಾಗಿ ನೀಡುವ ಪ್ರತಿಷ್ಠಿತ “ನೆಲ್ಸನ್ ಮಂಡೇಲಾ ಪ್ರಶಸ್ತಿ”ಯನ್ನು “ನಿಮ್ಹಾನ್ಸ್” ಪಡೆದುಕೊಂಡಿದೆ


ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ, “ನಿಮ್ಹಾನ್ಸ್” ಅನ್ನು ಅಭಿನಂದಿಸಿದ್ದಾರೆ  ಮತ್ತು " ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ ಎಲ್ಲರನ್ನು ಒಳಗೊಂಡಿರುವ ಭಾರತದ ಪ್ರಯತ್ನಗಳಿಗೆ ದೊರಕಿದ ಮನ್ನಣೆಯಾಗಿದೆ" ಎಂದು ಸಚಿವರು ಹೇಳಿದ್ದಾರೆ

ಆರೋಗ್ಯ ಪ್ರಚಾರಕ್ಕಾಗಿ 2019 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿಸಿದ “ನೆಲ್ಸನ್ ಮಂಡೇಲಾ ಪ್ರಶಸ್ತಿ”, ಆರೋಗ್ಯ ಪ್ರಚಾರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳು, ಸಂಸ್ಥೆಗಳು ಮತ್ತು/ಅಥವಾ ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳನ್ನು ಗುರುತಿಸಿ ಪ್ರದಾನಿಸುತ್ತದೆ

ನಿಮ್ಹಾನ್ಸ್‌ ಸಂಸ್ಥೆಯ ಸಮರ್ಪಣೆ ಮತ್ತು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಅತ್ಯುತ್ತಮ ಕೊಡುಗೆಗಳಿಗೆ ಈ ಪ್ರಶಸ್ತಿಯು ಸಾಕ್ಷಿಯಾಗಿದೆ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರದ ಸೇವೆಯಲ್ಲಿ ನಿಮ್ಹಾನ್ಸ್ ಮುಂಚೂಣಿಯಲ್ಲಿದೆ

 ಸಂಶೋಧನೆ, ಶಿಕ್ಷಣ ಮತ್ತು ರೋಗಿಗಳ ಆರೈಕೆಗೆ ನವೀನ ವಿಧಾನಗಳನ್ನು ಅನುಷ್ಠಾನಗೊಳಿಸುವಲ್ಲಿ ನಿಮ್ಹಾನ್ಸ್ ಸಂಸ್ಥೆ ಚಾಂಪಿಯನ್ ಸ್ಥಾನಗಳಿಸಿದೆ

Posted On: 31 MAY 2024 4:22PM by PIB Bengaluru

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೋ ಸೈನ್ಸಸ್ (ನಿಮ್ಹಾನ್ಸ್), ಬೆಂಗಳೂರು, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು 2024 ರ ಆರೋಗ್ಯ ಪ್ರಚಾರಕ್ಕಾಗಿ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ .

 

2019 ರಲ್ಲಿ ಆರೋಗ್ಯ ಪ್ರಚಾರಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿಸಿದ “ನೆಲ್ಸನ್ ಮಂಡೇಲಾ ಪ್ರಶಸ್ತಿ”, ಆರೋಗ್ಯ ಪ್ರಚಾರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳು, ಸಂಸ್ಥೆಗಳು ಮತ್ತು/ಅಥವಾ ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳನ್ನು ಗುರುತಿಸಿ ಪ್ರದಾನಿಸುತ್ತದೆ.

ನಿಮ್ಹಾನ್ಸ್‌ ಗೆ ಈ ಪ್ರಶಸ್ತಿಯನ್ನು ನೀಡಿರುವುದಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ಅಭಿನಂದಿಸಿದ್ದಾರೆ. ಇದು " ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ ಎಲ್ಲರೂ ಒಳಗೊಳ್ಳುವ ಭಾರತದ ಪ್ರಯತ್ನಗಳಿಗೆ ದೊರಕಿದ ಮನ್ನಣೆ" ಎಂದು ಸಚಿವರು ಹೇಳಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು “ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಭಾರತದ ಪ್ರಯತ್ನಗಳು ಮತ್ತು ಪ್ರವರ್ತಕ ಕೆಲಸವನ್ನು ಗುರುತಿಸಿದ್ದಕ್ಕಾಗಿ” ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಈ ಸಾಧನೆಗಾಗಿ ನಿಮ್ಹಾನ್ಸ್‌  ಅನ್ನು ಅವರು ಅಭಿನಂದಿಸಿದ್ದಾರೆ.

 

"ನಮ್ಮ ಸಾಂಸ್ಥಿಕ ಯಶಸ್ಸಿನ ಪ್ರಯಾಣದ ಈ ಹಂತದಲ್ಲಿ ಆರೋಗ್ಯ ಪ್ರಚಾರಕ್ಕಾಗಿ ಪ್ರತಿಷ್ಠಿತ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ಸ್ವೀಕರಿಸಲು ನಮಗೆ ಅಪಾರ ಹೆಮ್ಮೆಯಿದೆ" ಎಂದು ನಿಮ್ಹಾನ್ಸ್‌ ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಹೇಳಿದರು. “ಈ ಪ್ರಶಸ್ತಿಯು ನಮ್ಮ ಹಿಂದಿನ ಮತ್ತು ಪ್ರಸ್ತುತ ಸಾಧನೆಗಳ ಮನ್ನಣೆ ಮಾತ್ರವಲ್ಲದೆ ಅದರ ಆರಂಭದಿಂದಲೂ ನಿಮ್ಹಾನ್ಸ್‌ ಗೆ ಮಾರ್ಗದರ್ಶನ ನೀಡಿದ ನಿರಂತರ ಪರಂಪರೆ ಮತ್ತು ದೃಷ್ಟಿಕೋನಕ್ಕೆ ದೊರಕಿದ ಮಾನ್ಯತೆಯಾಗಿದೆ. ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ನಮ್ಮ ಧ್ಯೇಯವನ್ನು ಮುಂದುವರಿಸುವ ನಮ್ಮ ಸಂಕಲ್ಪವನ್ನು ಇದು ಬಲಪಡಿಸುತ್ತದೆ ಹಾಗೂ  ಸೇವೆ ಸಲ್ಲಿಸುವವರ ಜೀವನದಲ್ಲಿ ಸ್ಪಷ್ಟವಾದ ವ್ಯತ್ಯಾಸವನ್ನು ಉಂಟುಮಾಡುತ್ತದೆ ”ಎಂದು ಅವರು ಹೇಳಿದರು.

 

 

 

ಈ ಪ್ರಶಸ್ತಿಯು ನಿಮ್ಹಾನ್ಸ್‌ ನ ಸಮರ್ಪಣೆ ಮತ್ತು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಸೇವಾ ಕಾರ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅತ್ಯುತ್ತಮ ಕೊಡುಗೆಯಾಗಿದೆ. ವೈವಿಧ್ಯಮಯ ಜನಸಂಖ್ಯೆಯ ಅಗತ್ಯಗಳನ್ನು ತಿಳಿಸುವ ಅವಂತ್-ಗಾರ್ಡ್ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು ಮತ್ತು ಅನುಷ್ಠಾನಗೊಳಿಸುವುದು. ಮಾನಸಿಕ ಆರೋಗ್ಯ ರಕ್ಷಣೆಯನ್ನು ಸಾಮಾನ್ಯ ಆರೋಗ್ಯ ರಕ್ಷಣೆಗೆ ಸಂಯೋಜಿಸುವಲ್ಲಿ ಅದರ ಪ್ರಯತ್ನಗಳು, ಸಮುದಾಯ-ಆಧಾರಿತ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಡಿಜಿಟಲ್ ಆರೋಗ್ಯ ಮಧ್ಯಸ್ಥಿಕೆಗಳ ಪ್ರವರ್ತಕತೆಯನ್ನು ಜಾಗತಿಕವಾಗಿ ಗುರುತಿಸಲಾಗಿದೆ.

ಸಂಸ್ಥೆಯು ತನ್ನ ಸ್ಥಾಪನೆ-ರಚನೆಯ 50 ವರ್ಷಗಳನ್ನು ಮತ್ತು ಅದರ ಪೂರ್ವಗಾಮಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ನ 70 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ನಿಮ್ಹಾನ್ಸ್‌ ಗೆ ಈ ಪುರಸ್ಕಾರ ದೊರಕಿರುವುದು ವಿಶೇಷವಾಗಿ ಮಹತ್ವದ ವಿಷಯವಾಗಿದೆ. ಪ್ರಶಸ್ತಿಯು ವಿಶೇಷ ಮಹತ್ವವನ್ನು ಹೊಂದಿದೆ, ಈ ಮೂಲಕ ನಿಮ್ಹಾನ್ಸ್ ಮತ್ತೊಂದು ಮಹತ್ತರ ಮೈಲಿಗಲ್ಲನ್ನು ಗುರುತಿಸಿಕೊಂಡಿದೆ. ಇದು ಸಂಸ್ಥೆಯ ಶ್ರೀಮಂತ ಪರಂಪರೆ ಮತ್ತು ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರದಲ್ಲಿ ನಿರಂತರ ವಿಕಾಸವನ್ನು ಕೂಡಾ ಎತ್ತಿ ತೋರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಭಾರತವು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ದಾಪುಗಾಲುಗಳನ್ನು ಇಟ್ಟಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಕ ಇಂದು ದೇಶದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ಆರೋಗ್ಯ ಘಟಕಗಳನ್ನು ಬೆಂಬಲಿಸಲಾಗುತ್ತದೆ. 10ನೇ ಅಕ್ಟೋಬರ್ 2022 ರಂದು ಪ್ರಾರಂಭವಾದ ಭಾರತದ ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಹೆಲ್ಪ್‌ಲೈನ್, ಟೆಲಿ ಮನಸ್ ಕೂಡ ಇತ್ತೀಚೆಗೆ 10 ಲಕ್ಷ ಕರೆಗಳನ್ನು ನಿರ್ವಹಿಸಿ, ಸಂಸ್ಥೆಯು ಮಹತ್ತರ ಹೆಗ್ಗುರುತನ್ನು ಸಾಧಿಸಿದೆ.

 

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ (ಹೆಚ್ಚುವರಿ) ಶ್ರೀಮತಿ ಹೆಕಲಿಝಿಮೊಮಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*****


(Release ID: 2022336) Visitor Counter : 104