ಗೃಹ ವ್ಯವಹಾರಗಳ ಸಚಿವಾಲಯ
ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆ ನಂತರ ಪೌರತ್ವ ಪ್ರಮಾಣಪತ್ರಗಳ ಮೊದಲ ಸಂಗ್ರಹ ಹಂಚಿಕೆ
ಕೇಂದ್ರ ಗೃಹ ಕಾರ್ಯದರ್ಶಿಗಳಿಂದ ಇಂದು ದೆಹಲಿಯಲ್ಲಿ ಕೆಲವು ಅರ್ಜಿದಾರರಿಗೆ ಪೌರತ್ವ ಪ್ರಮಾಣ ಪತ್ರಗಳ ಹಸ್ತಾಂತರ
Posted On:
15 MAY 2024 5:19PM by PIB Bengaluru
ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆ ನಂತರ ಪೌರತ್ವ ಪ್ರಮಾಣಪತ್ರಗಳ ಮೊದಲ ಸಂಗ್ರಹವನ್ನು ಇಂದು ಹಂಚಿಕೆ ಮಾಡಲಾಯಿತು. ಕೇಂದ್ರ ಗೃಹ ಕಾರ್ಯದರ್ಶಿಗಳಾದ ಶ್ರೀ ಅಜಯ್ ಕುಮಾರ್ ಭಲ್ಲಾ ಅವರು ಇಂದು ದೆಹಲಿಯಲ್ಲಿ ಕೆಲವು ಅರ್ಜಿದಾರರಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿ ಅಭಿನಂದಿಸಿದರು. ನಂತರ ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಪ್ರಮುಖ ಲಕ್ಷಣಗಳನ್ನು ಉಲ್ಲೇಖಿಸಿದರು. ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಗಳು, ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಹಿರಿಯ ಅಧಿಕಾರಿಗಳು ಈ ಸಂವಾದಾತ್ಮಕ ಅಧಿವೇಶನದಲ್ಲಿ ಉಪಸ್ಥಿತರಿದ್ದರು.
ಭಾರತ ಸರ್ಕಾರವು ಮಾರ್ಚ್ 11, 2024 ರಂದು ಪೌರತ್ವ (ತಿದ್ದುಪಡಿ) ನಿಯಮಗಳು, 2024ಕ್ಕೆ ಅಧಿಸೂಚನೆ ಹೊರಡಿಸಿತು. ನಿಯಮಗಳು ಅರ್ಜಿ ನಮೂನೆಯ ವಿಧಾನ, ಜಿಲ್ಲಾ ಮಟ್ಟದ ಸಮಿತಿ (DLC) ಮೂಲಕ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವ ವಿಧಾನ ಮತ್ತು ರಾಜ್ಯ ಮಟ್ಟದ ಅಧಿಕಾರ ಸಮಿತಿಯಿಂದ (EC) ಪರಿಶೀಲನೆ ಮತ್ತು ಪೌರತ್ವವನ್ನು ನೀಡುತ್ತವೆ.
ಈ ನಿಯಮಗಳ ಅನುಸಾರವಾಗಿ 31.12.2014ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಂದ ಧರ್ಮದ ಆಧಾರದ ಮೇಲೆ ಕಿರುಕುಳ ಅಥವಾ ಇತರ ರೀತಿಯಲ್ಲಿ ಕಿರುಕುಳದ ಭಯದ ಕಾರಣದಿಂದಾಗಿ ಅರ್ಜಿ ಸಲ್ಲಿಸಿದವರಿಗೆ ನೀಡಲಾಗಿದೆ.
ಹಿರಿಯ ಅಂಚೆ ಅಧೀಕ್ಷಕರು/ಪೋಸ್ಟ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಗಳು (DLCs) ದಾಖಲೆಗಳ ಯಶಸ್ವಿ ಪರಿಶೀಲನೆಯ ಮೇಲೆ ಅರ್ಜಿದಾರರಿಗೆ ನಿಷ್ಠೆಯ ಪ್ರಮಾಣ ವಚನ ಬೋಧಿಸಿದರು. ನಿಯಮಗಳ ಪ್ರಕಾರ ಪ್ರಕ್ರಿಯೆಗೊಳಿಸಿದ ನಂತರ, ಡಿಎಲ್‌ಸಿಗಳು ಅರ್ಜಿಗಳನ್ನು ನಿರ್ದೇಶಕರ (ಜನಗಣತಿ ಕಾರ್ಯಾಚರಣೆ) ನೇತೃತ್ವದ ರಾಜ್ಯ ಮಟ್ಟದ ಅಧಿಕಾರ ಸಮಿತಿಗೆ ರವಾನಿಸಿದ್ದಾರೆ. ಅರ್ಜಿಯ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಪೋರ್ಟಲ್ ಮೂಲಕ ಮಾಡಲಾಗುತ್ತದೆ.
ದೆಹಲಿಯ ನಿರ್ದೇಶಕರ (ಜನಗಣತಿ ಕಾರ್ಯಾಚರಣೆ) ನೇತೃತ್ವದ ಸಶಕ್ತ ಸಮಿತಿಯು ಸೂಕ್ತ ಪರಿಶೀಲನೆ ಮಾಡಿದ ನಂತರ 14 ಅರ್ಜಿದಾರರಿಗೆ ಪೌರತ್ವ ನೀಡಲು ನಿರ್ಧರಿಸಿದೆ. ಅದರಂತೆ, ನಿರ್ದೇಶಕರು (ಜನಗಣತಿ ಕಾರ್ಯಾಚರಣೆ) ಈ ಅರ್ಜಿದಾರರಿಗೆ ಪ್ರಮಾಣಪತ್ರಗಳನ್ನು ನೀಡಿದರು.
*****
(Release ID: 2020721)
Visitor Counter : 136
Read this release in:
English
,
Urdu
,
Marathi
,
Hindi
,
Hindi_MP
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam