ಚುನಾವಣಾ ಆಯೋಗ

3ನೇ ಹಂತದ ಮತದಾನದಲ್ಲಿ ರಾತ್ರಿ 11:40 ಗಂಟೆಯವರೆಗಿನ ಅಂದಾಜಿನಂತೆ ಶೇ.64.4 ಮತದಾನ

Posted On: 07 MAY 2024 11:58PM by PIB Bengaluru

ಸಾರ್ವತ್ರಿಕ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ರಾತ್ರಿ 11:40 ಗಂಟೆಯವರೆಗಿನ ಅಂದಾಜಿನಂತೆ ಶೇ.64.4 ರಷ್ಟು ಮತದಾನವಾಗಿದೆ. ಮತಗಟ್ಟೆಯಿಂದ ಅಧಿಕಾರಿಗಳು ಹಿಂತಿರುಗುತ್ತಿರುವ ಕಾರಣ ಕ್ಷೇತ್ರ ಮಟ್ಟದ ಅಧಿಕಾರಿಗಳು ಅದನ್ನು ನವೀಕರಿಸುವುದನ್ನು ಮುಂದುವರಿಸುತ್ತಾರೆ ಮತ್ತು ಹಂತ 1 ಮತ್ತು ಹಂತ 2 ರಲ್ಲಿ ಇದ್ದಂತೆ ವಿಟಿಆರ್ ಆ್ಯಪ್‌‌ ನಲ್ಲಿ ಲೋಕಸಭಾ ಕ್ಷೇತ್ರವಾರು (ಆಯಾ ವಿಧಾನಸಭಾ ಕ್ಷೇತ್ರಗಳೊಂದಿಗೆ) ಲಭ್ಯವಿರುತ್ತದೆ.

 

ರಾತ್ರಿ 11:40 ರವರೆಗೆ ರಾಜ್ಯವಾರು ಅಂದಾಜು ಮತದಾನದ ಪ್ರಮಾಣ ಈ ಕೆಳಗಿನಂತಿದೆ:

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಲೋಕಸಭಾ ಕ್ಷೇತ್ರಗಳ ಸಂಖ್ಯೆ

ಅಂದಾಜು ಶೇಕಡಾವಾರು ಮತದಾನ

ಅಸ್ಸಾಂ

4

81.61

ಬಿಹಾರ

5

58.18

ಛತ್ತೀಸಗಢ

7

71.06

ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು

2

69.87

ಗೋವಾ

2

70.41

ಗುಜರಾತ್

25

58.98‌

ಕರ್ನಾಟಕ

14

70.41

ಮಧ್ಯಪ್ರದೇಶ

9

66.05

ಮಹಾರಾಷ್ಟ್ರ

11

61.44

ಉತ್ತರ ಪ್ರದೇಶ

10

57.34

ಪಶ್ಚಿಮ ಬಂಗಾಳ

4

75.79

11 ರಾಜ್ಯಗಳು

(93 ಲೋಕಸಭಾ ಕ್ಷೇತ್ರಗಳು)

93

64.40

 

ಇಲ್ಲಿ ಪ್ರದರ್ಶಿಸಲಾದ ಅಂಕಿಅಂಶವು ಕ್ಷೇತ್ರ ಅಧಿಕಾರಿಯು ಸಿಸ್ಟಂಗಳಲ್ಲಿನ ಮಾಹಿತಿಯ ಪ್ರಕಾರ ಇದೆ. ಇದು ಅಂದಾಜು ಅಂಕಿಅಂಶವಾಗಿದೆ, ಏಕೆಂದರೆ ಕೆಲವು ಮತದಾನ ಕೇಂದ್ರಗಳಿಂದ (PS) ಡೇಟಾ ಪಡೆಯಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಈ ಅಂಕಿಅಂಶವು ಪೋಸ್ಟಲ್ ಬ್ಯಾಲೆಟ್ ಅನ್ನು ಒಳಗೊಂಡಿಲ್ಲ. ಪ್ರತಿ ಮತಗಟ್ಟೆಯಲ್ಲಿ ದಾಖಲಾದ ಮತಗಳ ಅಂತಿಮ ವಾಸ್ತವಿಕ ಲೆಕ್ಕವನ್ನು ಫಾರ್ಮ್ 17 ಸಿ ಯಲ್ಲಿ ಎಲ್ಲಾ ಪೋಲಿಂಗ್ ಏಜೆಂಟ್‌ ಗಳೊಂದಿಗೆ ಮತದಾನದ ಕೊನೆಯಲ್ಲಿ ಹಂಚಿಕೊಳ್ಳಲಾಗುತ್ತದೆ.

*****



(Release ID: 2019945) Visitor Counter : 38