ಚುನಾವಣಾ ಆಯೋಗ

ನಾಳೆ 2ನೇ ಹಂತದ ಮತದಾನಕ್ಕೆ ಸಕಲ ಸಿದ್ಧತೆ


ವ್ಯಾಪ್ತಿ: 88 ಲೋಕಸಭಾ ಸ್ಥಾನಗಳು, ~ 16 ಕೋಟಿ ಮತದಾರರು, 1.67 ಲಕ್ಷ ಮತದಾನ ಕೇಂದ್ರಗಳು, 13 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು

2ನೇ ಹಂತದ ಮತದಾನದ ದಿನದಂದು ಹವಾಮಾನ ಮುನ್ಸೂಚನೆ -ಸಾಮಾನ್ಯ ಹವಾಮಾನ

ಮತದಾರರ ಭಾಗವಹಿಸುವಿಕೆಗೆ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ

ಬಿಹಾರದ ನಾಲ್ಕು ಕ್ಷೇತ್ರಗಳಲ್ಲಿ ಮತದಾನದ ಅವಧಿ ವಿಸ್ತರಣೆ

ಮತದಾರರು ಹೊರಗೆ ಬಂದು ಮತ ಚಲಾಯಿಸುವಂತೆ ಆಯೋಗದ ಕರೆ

Posted On: 25 APR 2024 5:38PM by PIB Bengaluru

ನಾಳೆಯಿಂದ ಆರಂಭವಾಗಲಿರುವ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೆ ಚುನಾವಣಾ ಆಯೋಗ ಸಜ್ಜಾಗಿದೆ. ಹವಾಮಾನ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ ಎಂದು ಊಹಿಸಲಾಗಿದ್ದು, ಮತದಾರರು ತಮ್ಮ ಮತಗಳನ್ನು ಆರಾಮವಾಗಿ ಚಲಾಯಿಸಬಹುದು. ಮತದಾರರ ಅನುಕೂಲಕ್ಕಾಗಿ, ಬಿಸಿ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಸೌಲಭ್ಯಗಳು ಸೇರಿದಂತೆ ಎಲ್ಲಾ ಮತಗಟ್ಟೆಗಳಲ್ಲಿ ನಿಖರವಾದ ವ್ಯವಸ್ಥೆಗಳನ್ನು ಮಾಡಲಾಗಿದೆ.

13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯ ನಿಧನದಿಂದಾಗಿ ಮಧ್ಯಪ್ರದೇಶದ 29-ಬೆತುಲ್ ಪಿಸಿಯ ಮತದಾನವನ್ನು ಮೂರನೇ ಹಂತಕ್ಕೆ ಮರು ನಿಗದಿಪಡಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಉಳಿದ 5 ಹಂತಗಳ ಮತದಾನ ಜೂನ್ 1 ರವರೆಗೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದಲ್ಲಿ 102 ಸ್ಥಾನಗಳಿಗೆ ಏಪ್ರಿಲ್ 19 ರಂದು ಮತದಾನ ಸುಗಮವಾಗಿ ಮತ್ತು ಶಾಂತಿಯುತವಾಗಿ ಪೂರ್ಣಗೊಂಡಿದೆ.

ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡುವಂತೆ ಮತ್ತು ಜವಾಬ್ದಾರಿ ಹಾಗು ಹೆಮ್ಮೆಯಿಂದ ಮತ ಚಲಾಯಿಸುವಂತೆ ಚುನಾವಣಾ ಆಯೋಗವು ಮತದಾರರಿಗೆ ಕರೆ ನೀಡಿದೆ.

ಹಂತ 2ಕ್ಕೆ ಸಂಬಂಧಿಸಿದ ವಸ್ತು ಸ್ಥಿತಿಗಳು:  

  1. ಸಾರ್ವತ್ರಿಕ ಚುನಾವಣೆ 2024 ರ ಎರಡನೇ ಹಂತದ ಮತದಾನವು 2024 ರ ಏಪ್ರಿಲ್ 26 ರಂದು ನಡೆಯಲಿದೆ. 13 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 88 ಸಂಸದೀಯ ಕ್ಷೇತ್ರಗಳಿಗೆ (ಸಾಮಾನ್ಯ – 73; ಎಸ್ಟಿ- 6; ಎಸ್ಸಿ -9). ಮತದಾನವು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6 ಗಂಟೆಗೆ ಕೊನೆಗೊಳ್ಳುತ್ತದೆ (ಮತದಾನದ ಮುಕ್ತಾಯದ ಸಮಯವು ಪಿ.ಸಿ.ವಾರು ಭಿನ್ನವಾಗಿರಬಹುದು)
  2.  ಬಿಹಾರದ ಬಂಕಾ, ಮಾಧೇಪುರ, ಖಗರಿಯಾ ಮತ್ತು ಮುಂಗೇರ್ ಕ್ಷೇತ್ರಗಳ ಅನೇಕ ಮತಗಟ್ಟೆಗಳಲ್ಲಿ ಮತದಾನದ ಸಮಯವನ್ನು ಬಿಸಿ ಹವಾಮಾನದ ಕಾರಣಕ್ಕಾಗಿ ಸಂಜೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ನೋಡಿ:

https://www.eci.gov.in/eci-backend/public/api/download?url=LMAhAK6sOPBp%2FNFF0iRfXbEB1EVSLT41NNLRjYNJJP1KivrUxbfqkDatmHy12e%2Fzye%2BFD1PRcKxhOuiYZ2Ra38yzz3o0TY4laMGELkYwTaffXNh1flPiunL2kQsXmpWxyKzGsKzKlbBW8rJeM%2FfYFA%3D%3D

  1. 16 ಲಕ್ಷಕ್ಕೂ ಹೆಚ್ಚು ಮತಗಟ್ಟೆ ಅಧಿಕಾರಿಗಳು 1.67 ಲಕ್ಷ ಮತಗಟ್ಟೆಗಳಲ್ಲಿ 15.88 ಕೋಟಿ ಮತದಾರರನ್ನು ಸ್ವಾಗತಿಸಲಿದ್ದಾರೆ.
  2.  ಮತದಾರರಲ್ಲಿ 8.08 ಕೋಟಿ ಪುರುಷರು; 7.8 ಕೋಟಿ ಮಹಿಳೆಯರು ಮತ್ತು 5929 ತೃತೀಯ ಲಿಂಗಿ ಮತದಾರರು ಇದ್ದಾರೆ.
  3.  34.8 ಲಕ್ಷ ಮಂದಿ ಮೊದಲ ಬಾರಿಗೆ ಮತ ಚಲಾಯಿಸುವ ಮತದಾರರು ಇದ್ದಾರೆ. ಅವರು ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. ಇದಲ್ಲದೆ, 20-29 ವರ್ಷ ವಯೋಗುಂಪಿನ 3.28 ಕೋಟಿ ಯುವ ಮತದಾರರಿದ್ದಾರೆ.
  4.  1202 ಅಭ್ಯರ್ಥಿಗಳು (ಪುರುಷರು - 1098; ಸ್ತ್ರೀಯರು-102; ತೃತೀಯ ಲಿಂಗಿಗಳು - 02) ಕಣದಲ್ಲಿದ್ದಾರೆ.
  5.  ಎರಡನೇ ಹಂತದಲ್ಲಿ ನಡೆಯುವ ಮತದಾನದಲ್ಲಿ  85+ ವರ್ಷ ವಯಸ್ಸಿನ 14.78 ಲಕ್ಷ ನೋಂದಾಯಿತ ಮತದಾರರು, 100 ವರ್ಷಕ್ಕಿಂತ ಮೇಲ್ಪಟ್ಟ 42,226 ಮತದಾರರು ಮತ್ತು 14.7 ಲಕ್ಷ ದೈಹಿಕ ಅಂಗವಿಕಲ ಮತದಾರರಿದ್ದು, ಅವರಿಗೆ ತಮ್ಮ ಮನೆಯಿಂದಲೇ ಮತ ಚಲಾಯಿಸುವ ಅವಕಾಶದ ಆಯ್ಕೆಯನ್ನು ನೀಡಲಾಗಿದೆ. ಈ ಐಚ್ಛಿಕವಾದ ಆಯ್ಕೆಯಾದ  ಮನೆಯಿಂದಲೇ ಮತದಾನ ಮಾಡುವ (ಹೋಮ್ ವೋಟಿಂಗ್)  ಸೌಲಭ್ಯವು ಈಗಾಗಲೇ ಅಪಾರ ಮೆಚ್ಚುಗೆ ಮತ್ತು ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.
  6. . ಮತದಾನ ಮತ್ತು ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯಲು 3 ಹೆಲಿಕಾಪ್ಟರ್ ಗಳು, 4 ವಿಶೇಷ ರೈಲುಗಳು ಮತ್ತು ಸುಮಾರು 80,000 ವಾಹನಗಳನ್ನು ನಿಯೋಜಿಸಲಾಗಿದೆ.
  7. . ಎಲ್ಲಾ ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರನ್ನು ನಿಯೋಜಿಸುವುದರ ಜೊತೆಗೆ 50% ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. 1 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ.
  8.  251 ವೀಕ್ಷಕರು (89 ಸಾಮಾನ್ಯ ವೀಕ್ಷಕರು, 53 ಪೊಲೀಸ್ ವೀಕ್ಷಕರು, 109 ವೆಚ್ಚ ವೀಕ್ಷಕರು) ಮತದಾನಕ್ಕೆ ಕೆಲವು ದಿನಗಳ ಮೊದಲು ಈಗಾಗಲೇ ತಮ್ಮ ಕ್ಷೇತ್ರಗಳನ್ನು ತಲುಪಿದ್ದಾರೆ. ಅವರು ಅತ್ಯಂತ ಜಾಗರೂಕತೆಯನ್ನು ವಹಿಸಲು ಆಯೋಗದ ಕಣ್ಣು ಮತ್ತು ಕಿವಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಹೆಚ್ಚುವರಿಯಾಗಿ, ಕೆಲವು ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನು ನಿಯೋಜಿಸಲಾಗಿದೆ.
  9. ಮತದಾರರ ಯಾವುದೇ ರೀತಿಯ ಪ್ರಚೋದನೆಯನ್ನು ಕಟ್ಟುನಿಟ್ಟಾಗಿ ಮತ್ತು ತ್ವರಿತವಾಗಿ ಎದುರಿಸಲು ಒಟ್ಟು 4553 ಫ್ಲೈಯಿಂಗ್ ಸ್ಕ್ವಾಡ್ಗಳು, 5731 ಸ್ಥಿರ ಕಣ್ಗಾವಲು ತಂಡಗಳು, 1462 ವಿಡಿಯೋ ಕಣ್ಗಾವಲು ತಂಡಗಳು ಮತ್ತು 844 ವೀಡಿಯೊ ವೀಕ್ಷಣೆ/ನಿಗಾ ತಂಡಗಳು ದಿನದ 24 ಗಂಟೆಯೂ ಕಣ್ಗಾವಲು ಇಡುತ್ತಿವೆ.
  10.  ಒಟ್ಟು 1237 ಅಂತರರಾಜ್ಯ ಮತ್ತು 263 ಅಂತರರಾಷ್ಟ್ರೀಯ ಗಡಿ ಚೆಕ್ ಪೋಸ್ಟ್ ಗಳು ಮದ್ಯ, ಮಾದಕವಸ್ತುಗಳು, ನಗದು ಮತ್ತು ಉಚಿತ ವಸ್ತುಗಳ ಅಕ್ರಮ ಹರಿವಿನ ಮೇಲೆ ಕಟ್ಟುನಿಟ್ಟಿನ ನಿಗಾವನ್ನು ಹೊಂದಿವೆ. ಸಮುದ್ರ ಮತ್ತು ವಾಯು ಮಾರ್ಗಗಳಲ್ಲಿ ಕಟ್ಟುನಿಟ್ಟಾದ ಕಣ್ಗಾವಲು ಇಡಲಾಗಿದೆ.
  11.  ಮತದಾರರು  ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡುವುದಕ್ಕಾಗಿ ಮತದಾರರ ಜಾಗೃತಿ ಮತ್ತು ಸೌಲಭ್ಯ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
  12. ವೃದ್ಧರು/ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸೇರಿದಂತೆ ಪ್ರತಿಯೊಬ್ಬ ಮತದಾರರು ಸುಲಭವಾಗಿ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು ನೀರು, ಶೆಡ್, ಶೌಚಾಲಯಗಳು, ಇಳಿಜಾರಿನಂತಹ ಸೌಲಭ್ಯಗಳು, ಸ್ವಯಂಸೇವಕರು, ಗಾಲಿಕುರ್ಚಿಗಳು ಮತ್ತು ವಿದ್ಯುತ್ ನಂತಹ ಕನಿಷ್ಠ ಸೌಲಭ್ಯಗಳನ್ನು ಖಚಿತಪಡಿಸಲಾಗಿದೆ. ಬಿಸಿ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ವಿಶೇಷ ಗಮನ ನೀಡಲಾಗಿದೆ.
  13. ಸ್ಥಳೀಯ ವಿಷಯಗಳೊಂದಿಗೆ 88 ಪಿಸಿಗಳಲ್ಲಿ ಸುಮಾರು 4195 ಮಾದರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 4100 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಭದ್ರತಾ ಸಿಬ್ಬಂದಿ ಸೇರಿದಂತೆ ಮಹಿಳೆಯರು ಮತ್ತು 640 ಕ್ಕೂ ಹೆಚ್ಚು ಮತಗಟ್ಟೆಗಳನ್ನು ದೈಹಿಕ ವಿಕಲಚೇತನರು (ಪಿಡಬ್ಲ್ಯೂಡಿ) ನಿರ್ವಹಿಸಲಿದ್ದಾರೆ.
  14. ಬಿಹಾರ ಮತ್ತು ಕೇರಳ ಹೊರತುಪಡಿಸಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮತದಾನ ಕೇಂದ್ರಗಳಲ್ಲಿ ಪ್ರತಿ ಮತಗಟ್ಟೆಗೆ ಸರಾಸರಿ 1000 ಕ್ಕಿಂತ ಕಡಿಮೆ ಮತದಾರರಿದ್ದಾರೆ. ಪ್ರತೀ ಮತಗಟ್ಟೆಗಳಲ್ಲಿ ಬಿಹಾರದಲ್ಲಿ 1008 ಮತ್ತು ಕೇರಳದಲ್ಲಿ 1102 ಮತದಾರರಿದ್ದಾರೆ.
  15.  ಎಲ್ಲಾ ನೋಂದಾಯಿತ ಮತದಾರರಿಗೆ ಮತದಾರರ ಮಾಹಿತಿ ಚೀಟಿಗಳನ್ನು ವಿತರಿಸಲಾಗಿದೆ. ಈ ಚೀಟಿಗಳು ಅನುಕೂಲಕರ ಕ್ರಮವಾಗಿ ಮತ್ತು ಮತಗಟ್ಟೆಗೆ  ಬಂದು ಮತ ಚಲಾಯಿಸಲು  ಆಯೋಗದ ಆಹ್ವಾನವಾಗಿ ಕಾರ್ಯನಿರ್ವಹಿಸುತ್ತವೆ.
  16.  ಮತದಾರರು ತಮ್ಮ ಮತದಾನ ಕೇಂದ್ರದ ವಿವರಗಳು ಮತ್ತು ಮತದಾನದ ದಿನಾಂಕವನ್ನು ಲಿಂಕ್ ಮೂಲಕ ಪರಿಶೀಲಿಸಬಹುದು https://electoralsearch.eci.gov.in/
  17. ಮತದಾನ ಕೇಂದ್ರಗಳಲ್ಲಿ ಗುರುತಿನ ಪರಿಶೀಲನೆಗಾಗಿ ಮತದಾರರ ಗುರುತಿನ ಚೀಟಿ (ಎಪಿಕ್) ಹೊರತುಪಡಿಸಿ 12 ಪರ್ಯಾಯ ದಾಖಲೆಗಳನ್ನು ಆಯೋಗ ಗುರುತಿನ ದಾಖಲೆಯಾ ಪರಿಗಣಿಸುವ ಅವಕಾಶವನ್ನು ಒದಗಿಸಿದೆ. ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದ್ದರೆ, ಈ ಯಾವುದೇ ದಾಖಲೆಗಳನ್ನು ತೋರಿಸುವ ಮೂಲಕ ಮತದಾನ ಮಾಡಬಹುದು. ಪರ್ಯಾಯ ಗುರುತಿನ ದಾಖಲೆಗಳಿಗಾಗಿ ಇಸಿಐ ಆದೇಶಕ್ಕೆ ಲಿಂಕ್:                                 

https://www.eci.gov.in/eci-backend/public/api/download?

*****



(Release ID: 2019065) Visitor Counter : 38