ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಮಹಾವೀರ ಜಯಂತಿಯ ಮುನ್ನಾ ದಿನದಂದು ಭಾರತದ ರಾಷ್ಟ್ರಪತಿ ಅವರ ಶುಭಾಶಯಗಳು

Posted On: 20 APR 2024 7:52PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮಹಾವೀರ ಜಯಂತಿಯ ಮುನ್ನಾದಿನದಂದು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ:-

"ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ, ನಾನು ಎಲ್ಲಾ ಸಹ ನಾಗರಿಕರಿಗೆ, ವಿಶೇಷವಾಗಿ ಜೈನ ಸಮುದಾಯಕ್ಕೆ ಹಾರ್ದಿಕ ಶುಭಾಶಯಗಳನ್ನು ಮತ್ತು ಶುಭಾಹಾರೈಕೆಗಳನ್ನು ಸಲ್ಲಿಸುತ್ತೇನೆ.

ಮಹಾವೀರ ಜಯಂತಿಯು ಭಗವಾನ್ ಮಹಾವೀರ ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ - ಇದು "ಅಹಿಂಸೆ ಮತ್ತು ಸಹಾನುಭೂತಿಯ" ಸಾರಾಂಶವಾಗಿದೆ. ಈ ಹಬ್ಬವು ನಮಗೆ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ನೀಡುತ್ತದೆ. ಭಗವಾನ್ ಮಹಾವೀರರು ಆದರ್ಶ ಮತ್ತು ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ಅಹಿಂಸೆ, ಬ್ರಹ್ಮಚರ್ಯ, ಸತ್ಯ ಮತ್ತು ತ್ಯಾಗದ ಮಾರ್ಗವನ್ನು ತೋರಿಸಿದರು. ಅವರ ಬೋಧನೆಗಳು ಮಾನವಕುಲದ ಕಲ್ಯಾಣಕ್ಕಾಗಿ ಯಾವಾಗಲೂ ಪ್ರಸ್ತುತವಾಗಿರುತ್ತವೆ.

ಈ ಸಂದರ್ಭದಲ್ಲಿ, ಸಮಾಜದಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಹರಡಲು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಸಮರ್ಪಣೆಯಿಂದ ಕೆಲಸ ಮಾಡಲು ಪ್ರತಿಜ್ಞೆ ಮಾಡೋಣ," ಎಂದು ಅವರು ಹೇಳಿದರು.

Please click here to see the President's message - 

 


(Release ID: 2018404) Visitor Counter : 52