ಚುನಾವಣಾ ಆಯೋಗ

2ನೇ ಹಂತದ ಚುನಾವಣೆಗೆ ನಿಯೋಜನೆಗೊಂಡ 250ಕ್ಕೂ ಹೆಚ್ಚು ವೀಕ್ಷಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಚುನಾವಣಾ ಆಯೋಗವು ಸುಗಮ, ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ಕಾಯ್ದುಕೊಳ್ಳಲು ಸೂಚಿಸಿತು


12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಸಂಸತ್ ಕ್ಷೇತ್ರಗಳಲ್ಲಿ 2024ರ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ

ಮತದಾನ ಕೇಂದ್ರಗಳಲ್ಲಿ ಸಕಲ ಸೌಲಭ್ಯಗಳಿಗಾಗಿ, ವಿಶೇಷವಾಗಿ ತಾಪಮಾನವನ್ನು ಎದುರಿಸಲು  ಕ್ರಮ ಕೈಗೊಳ್ಳುವಂತೆ ಆಯೋಗದಿಂದ ನಿರ್ದೇಶನ

Posted On: 18 APR 2024 5:16PM by PIB Bengaluru

12 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26, 2024ರಂದು ಮತದಾನ ನಡೆಯಲಿದ್ದು, ಇದಕ್ಕಾಗಿ 89 ಸಾಮಾನ್ಯ ವೀಕ್ಷಕರು, 53 ಪೊಲೀಸ್ ವೀಕ್ಷಕರು ಹಾಗೂ 109 ವೆಚ್ಚ ವೀಕ್ಷಕರನ್ನು ನಿಯೋಜಿಸಲಾಗಿದೆ. ಇವರೆಲ್ಲರೂ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದ ಮೊದಲು ಅಂದರೆ 2024ರ ಏಪ್ರಿಲ್ 3ಕ್ಕೆ ಮುಂಚಿತವಾಗಿ ತಮ್ಮ ನಿಯೋಜಿತ ಕ್ಷೇತ್ರಗಳಲ್ಲಿ ಹಾಜರಾಗಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಅವರು ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖ್ಬೀರ್ ಸಿಂಗ್ ಸಂಧು ಅವರೊಂದಿಗೆ ಎಲ್ಲಾ ವೀಕ್ಷಕರಿಗೆ ಸಭೆ ನಡೆಸಿ, ಮತದಾನ ಕೇಂದ್ರಗಳಲ್ಲಿ ಮತದಾರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಂತೆ ಅದರಲ್ಲೂ ವಿಶೇಷವಾಗಿ ಬಿಸಿಲನ್ನು ಎದುರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಖಾತರಿಪಡಿಸುವಂತೆ ಮನವಿ ಮಾಡಿದರು. ಎರಡನೇ ಹಂತದ ಮತದಾನ ಸಮೀಪಿಸಿದಾಗ ಮತದಾರರಿಗೆ ಯಾವುದೇ ರೀತಿಯ ಆಮಿಷಗಳನ್ನು ಒಡ್ಡದಂತೆ ತಡೆಯಲು, ಪಡೆಗಳನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

 

  


 
ಕೇಂದ್ರ ವೀಕ್ಷಕರಿಗೆ ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಲಾಯಿತು: 

 

I. ಎಲ್ಲಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳುವುದು ಮತ್ತು ಎಲ್ಲಾ ಪಾಲುದಾರರಿಗೆ ಅಂದರೆ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಮಾನ ಅವಕಾಶವನ್ನು ಖಾತರಿಪಡಿಸುವುದು.

II.    ಚುನಾವಣಾ ಪ್ರಕ್ರಿಯೆ ವೇಳೆ, ತಮ್ಮನ್ನು ನಿಯೋಜಿಸಲಾದ ಸಂಸದೀಯ ಕ್ಷೇತ್ರದಲ್ಲಿ ಭೌತಿಕವಾಗಿ ಉಪಸ್ಥಿತರಿರುವುದು.

III.    ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ವೀಕ್ಷಕರು ತಮ್ಮ ಮೊಬೈಲ್ / ಲ್ಯಾಂಡ್ ಲೈನ್ / ಇಮೇಲ್ / ವಾಸ್ತವ್ಯದ ಸ್ಥಳವನ್ನು ತಿಳಿಸುವುದು ಮತ್ತು ಈ ಬಗ್ಗೆ ವ್ಯಾಪಕವಾಗಿ ಪ್ರಸಾರ ಮಾಡುವುದು. ಆ ಮೂಲಕ ಸಾಮಾನ್ಯ ಜನರು / ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಪ್ರತಿದಿನ ಗೊತ್ತುಪಡಿಸಿದ ಸಂಖ್ಯೆಗಳು / ವಿಳಾಸಗಳಲ್ಲಿ ವೀಕ್ಷಕರು ಲಭ್ಯವಾಗುವಂತೆ ಕಾಯ್ದುಕೊಳ್ಳುವುದು.

IV.    ವೀಕ್ಷಕರು ತಮ್ಮ ಉಪಸ್ಥಿತಿಯಲ್ಲಿ ಯಾದೃಚ್ಛಿಕವಾಗಿ ಪಡೆಗಳನ್ನು ನಿಯೋಜಿಸುವುದು.

V.    ಕೇಂದ್ರ ಪಡೆಗಳು / ರಾಜ್ಯ ಪೊಲೀಸ್ ಪಡೆಗಳ ನ್ಯಾಯಯುತ ಬಳಕೆಯನ್ನು ಕಾಯ್ದುಕೊಳ್ಳುವುದು ಮತ್ತು ಪಡೆಗಳ ಬಳಕೆಯಲ್ಲಿ ತಟಸ್ಥತೆಯನ್ನು ಕಾಪಾಡಿಕೊಳ್ಳುವುದು, ಪಡೆಗಳ ನಿಯೋಜನೆಯು ಯಾವುದೇ ಒಂದು ರಾಜಕೀಯ ಪಕ್ಷ / ಒಬ್ಬ ಅಭ್ಯರ್ಥಿಗೆ ಮಾತ್ರ ಅನುಕೂಲಕರವಾಗಿಲ್ಲದಂತೆ ನೋಡಿಕೊಳ್ಳುವುದು.

VI.  ಇವಿಎಂಗಳು/ ವಿವಿಪ್ಯಾಟ್ಗಳು ಮತ್ತು ಮತದಾನ ಸಿಬ್ಬಂದಿಯನ್ನು ವೀಕ್ಷಕರು ತಮ್ಮ ಉಪಸ್ಥಿತಿಯಲ್ಲಿ ಯಾದೃಚ್ಛಿಕವಾಗಿ ನಿಯೋಜಿಸುವುದು.

VII. ಚುನಾವಣಾ ಕರ್ತವ್ಯ, ಅಗತ್ಯ ಕರ್ತವ್ಯ ಮತ್ತು ಸೇವಾ ಮತದಾರರಿಗೆ ಅಂಚೆ ಮತಪತ್ರ ಹಾಗೂ 85+ ವಯೋಮಾನದವರಿಗೆ ಮತ್ತು ಅಂಗವಿಕಲರಿಗೆ ಮನೆ ಮತದಾನ ಪ್ರಕ್ರಿಯೆಯನ್ನು ಸುಗಮಗೊಳಿಸುವುದು.

VIII.    ಮತದಾರರ ಪಟ್ಟಿಗಳನ್ನು ರಾಜಕೀಯ ಪಕ್ಷಗಳಿಗೆ ಮತ್ತು ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಒದಗಿಸುವುದು.

IX.    ಜಿಲ್ಲಾಡಳಿತದಿಂದ ನ್ಯಾಯಯುತವಾಗಿ ʻದುರ್ಬಲ ಮತಗಟ್ಟೆʼಗಳ ಗುರುತಿಸುವಿಕೆ ಹಾಗೂ ಅದಕ್ಕೆ ಅನುಗುಣವಾಗಿ ಸಾರಿಗೆ ಮತ್ತು ಸಂವಹನ ಯೋಜನೆಯನ್ನು ಸಜ್ಜುಗೊಳಿಸುವುದು.

X.    ಸೂಕ್ಷ್ಮ ವೀಕ್ಷಕರ ನಿಯೋಜನೆ

XI.    ಎಲ್ಲಾ ಅಭ್ಯರ್ಥಿಗಳು / ಅವರ ಪ್ರತಿನಿಧಿಗಳ ಮುಂದೆ ಇವಿಎಂ / ವಿವಿಪ್ಯಾಟ್ ಅನ್ನು ನಿಯೋಜಿಸುವುದು.

XII.    ಇವಿಎಂ ಸ್ಟ್ರಾಂಗ್ ರೂಮ್ಗಳಲ್ಲಿ ದೃಢವಾದ ಭದ್ರತಾ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಎಲ್ಲಾ ಅಭ್ಯರ್ಥಿಗಳ ಅಧಿಕೃತ ಏಜೆಂಟರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳುವುದು.

XIII.    ಎಲ್ಲಾ ದೂರು ಪರಿಹಾರ ಕಾರ್ಯವಿಧಾನಗಳು ಜಾರಿಯಲ್ಲಿರುವಂತೆ ಕಾಯ್ದುಕೊಳ್ಳುವುದು.

XIV.    ಸಕಾಲಿಕವಾಗಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರ ಹೊಂದಿರುವ ಅಧಿಕಾರಿಯೊಬ್ಬರ ಉಸ್ತುವಾರಿ ಅಡಿಯಲ್ಲಿ  ಜಿಲ್ಲೆಗಳಲ್ಲಿ ಸಮಗ್ರ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸುವುದು.

XV.    ಮತದಾನದ ದಿನಕ್ಕಿಂತ ಮುಂಚಿತವಾಗಿ ಮತದಾರರ ಮಾಹಿತಿ ಚೀಟಿಗಳನ್ನು 100% ವಿತರಿಸುವುದು.

XVI.    ಸಿ-ವಿಜಿಲ್, ಮತದಾರರ ಸಹಾಯವಾಣಿ ಆ್ಯಪ್, ಸಕ್ಷಮ್ ಆ್ಯಪ್, ಎನ್ಕೋರ್, ಸುವಿಧಾ ಆ್ಯಪ್ ಮುಂತಾದ ಎಲ್ಲಾ ಐಟಿ ತಂತ್ರಾಂಶಗಳನ್ನು ಚುನಾವಣಾ ಸಿಬ್ಬಂದಿ ಬಳಸುತ್ತಿದ್ದಾರೆ ಮತ್ತು ಈ ತಂತ್ರಾಂಶಗಳನ್ನು ಬಳಸಲು ಅವರಿಗೆ ಸೂಕ್ತ ತರಬೇತಿಯನ್ನು ಖಚಿತಪಡಿಸಿಕೊಳ್ಳುವುದು.

XVII.    ಎಣಿಕೆ ಸಿಬ್ಬಂದಿ, ಸೂಕ್ಷ್ಮ ವೀಕ್ಷಕರು ಸೇರಿದಂತೆ ಎಲ್ಲಾ ಮತಗಟ್ಟೆ ಸಿಬ್ಬಂದಿಗೆ ಕ್ರಮಬದ್ಧವಾದ ತರಬೇತಿ ಶಿಬಿರಗಳ ಆಯೋಜನೆ

XVIII.    ಕ್ಷೇತ್ರದ ಮತಗಟ್ಟೆಗಳಿಗೆ ಭೇಟಿ ನೀಡುವುದು ಮತ್ತು ಎಲ್ಲಾ ಮತಗಟ್ಟೆಗಳಲ್ಲಿ ಆಶ್ವಾಸನೆ ನೀಡಿದ ಕನಿಷ್ಠ ಸೌಲಭ್ಯಗಳು ಇರುವುದನ್ನು ಖಚಿತಪಡಿಸಿಕೊಳ್ಳುವುದು

XIX.    ಮತದಾರರ ಅನುಕೂಲಕ್ಕಾಗಿ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಸಹಾಯ ಬೂತ್ ಸ್ಥಾಪನೆ ಮಾಡುವುದು; ವಿಕಲಚೇತನರು,  ಮಹಿಳೆಯರು, ವೃದ್ಧರು ಮತ್ತು ಕುಷ್ಠರೋಗ ಪೀಡಿತ ಮತದಾರರು ಮುಂತಾದವರಿಗೆ ವಿಶೇಷ ಸೌಕರ್ಯಗಳನ್ನು ಒದಗಿಸುವುದು.

XX.    ಸರತಿ ಸಾಲಿನಲ್ಲಿ ಕಾಯುತ್ತಿರುವ ಮತದಾರರಿಗೆ ಕುಡಿಯುವ ನೀರು, ಶೆಡ್ಗಳು/ ಶಾಮಿಯಾನಗಳ ಸೌಲಭ್ಯ  ಹಾಗೂ ಮತದಾನದ ಸಮಯದಲ್ಲಿ ಮತಗಟ್ಟೆಗಳ ಹೊರಗೆ ಕುಳಿತುಕೊಳ್ಳಲು ಸೂಕ್ತ ಆಸನ ವ್ಯವಸ್ಥೆ ಮಾಡುವುದು.

XXI.  ಫ್ಲೈಯಿಂಗ್ ಸ್ಕ್ವಾಡ್, ಅಂಕಿ-ಅಂಶ ವಿಚಕ್ಷಷಣಾ ತಂಡಗಳು, ವಿಡಿಯೋ ವೀಕ್ಷಣಾ ತಂಡಗಳು, ಗಡಿ ಚೆಕ್ ಪೋಸ್ಟ್ಗಳು, ನಾಕಾಗಳು ಇತ್ಯಾದಿಗಳು ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಿವೆ ಹಾಗೂ ನಗದು, ಮದ್ಯ, ಉಚಿತ ವಸ್ತುಗಳು, ಮಾದಕವಸ್ತುಗಳ ಸಾಗಾಟ ಮತ್ತು ವಿತರಣೆಯನ್ನು ತಡೆಯಲು ಪ್ರಯತ್ನ ಮಾಡುತ್ತಿವೆ ಎಂದು ಖಾತರಿಪಡಿಸಿಕೊಳ್ಳುವುದು..

XXII.  ರಾಜಕೀಯ ಜಾಹೀರಾತು ಮತ್ತು ಪಾವತಿ ಸುದ್ದಿಗಳ ಪೂರ್ವ ಪ್ರಮಾಣೀಕರಣಕ್ಕಾಗಿ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಗಳ ಸೂಕ್ತ ಕಾರ್ಯನಿರ್ವಹಣೆ
XXIII. ನಕಲಿ ಸುದ್ದಿ/ ತಪ್ಪು ಮಾಹಿತಿಯನ್ನು ಸಮಯೋಚಿತವಾಗಿ ನಿಗ್ರಹಿಸುವುದು ಮತ್ತು ಸಕಾರಾತ್ಮಕ ನಿರೂಪಣೆಯನ್ನು ಕಾಯ್ದುಕೊಳ್ಳಲು ಮಾಹಿತಿಯನ್ನು ಸಕ್ರಿಯವಾಗಿ ಪ್ರಸಾರ ಮಾಡುವುದು.

***



(Release ID: 2018210) Visitor Counter : 69