ರಾಷ್ಟ್ರಪತಿಗಳ ಕಾರ್ಯಾಲಯ

ಚೈತ್ರ ಸುಕ್ಲಾದಿ, ಯುಗಾದಿ, ಗುಡಿ ಪಡ್ವಾ, ಚೇಟಿ ಚಂದ್, ನವ್ರೆಹ ಮತ್ತು ಸಾಜಿಬು ಚೈರಾಬಾ ಹಬ್ಬಗಳ  ಮುನ್ನಾದಿನದಂದು  ಶುಭಾಶಯ ಕೋರಿದ ರಾಷ್ಟ್ರಪತಿ

Posted On: 08 APR 2024 4:31PM by PIB Bengaluru

ಚೈತ್ರ ಸುಕ್ಲಾದಿ, ಯುಗಾದಿ, ಗುಡಿ ಪಡ್ವಾ, ಚೇಟಿ ಚಂದ್, ನವ್ರೆಹ ಮತ್ತು ಸಾಜಿಬು ಚೈರಾಬಾ ಹಬ್ಬಗಳ  ಮುನ್ನಾದಿನದಂದು  ದೇಶದ ನಾಗರಿಕರಿಗೆ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ತಮ್ಮ ಶುಭಾಶಯಗಳನ್ನು ಕೋರಿದ್ದಾರೆ.

“ಚೈತ್ರ ಸುಕ್ಲಾದಿ, ಯುಗಾದಿ, ಗುಡಿ ಪಡ್ವಾ, ಚೇಟಿ ಚಂದ್, ನವ್ರೆಹ ಮತ್ತು ಸಾಜಿಬು ಚೈರಾಬಾ ಹಬ್ಬಗಳ  ಶುಭ ಸಂದರ್ಭದಲ್ಲಿ ನಾನು ಎಲ್ಲಾ ಸಹ ನಾಗರಿಕರಿಗೆ ನನ್ನ ಶುಭಾಶಯ ಕೋರುತ್ತೇನೆ  ಹಾಗೂ ಶುಭ ಹಾರೈಸುತ್ತೇನೆ.” ಎಂದು ರಾಷ್ಟ್ರಪತಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ಹಬ್ಬಗಳು, ವಸಂತ ಋತು ಮತ್ತು ಭಾರತೀಯ ಹೊಸ ವರ್ಷವನ್ನು ಸ್ವಾಗತಿಸುವ ಶುಭ ಸಂದರ್ಭಗಳಾಗಿವೆ. ನಮ್ಮ ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಈ ಹಬ್ಬಗಳು ಶಾಂತಿ, ಸೌಹಾರ್ದತೆ ಮತ್ತು ಸಹಿಷ್ಣುತೆಯ ಸಂದೇಶವನ್ನು ಸಾರುತ್ತವೆ. ಈ ಹಬ್ಬಗಳು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕಗಳಾಗಿವೆ. ಈ ಶುಭ ಸಂದರ್ಭಗಳಲ್ಲಿ ನಾವು ಪ್ರಕೃತಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ.

ಈ ವಿಶೇಷ ಹಬ್ಬಗಳು ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರದ ಅಭಿವೃದ್ಧಿಗಾಗಿ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸಲಿ.

ರಾಷ್ಟ್ರಪತಿಯವರ ಹಬ್ಬದ ಸಂದೇಶವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

****



(Release ID: 2017430) Visitor Counter : 45