ಚುನಾವಣಾ ಆಯೋಗ
ಚುನಾವಣಾ ಆಯೋಗದ ಸಿ-ವಿಜಿಲ್ ಅಪ್ಲಿಕೇಶನ್ ಮತದಾರರಲ್ಲಿದೊಡ್ಡ ಯಶಸ್ಸನ್ನು ಗಳಿಸಿದೆ: ಸಾರ್ವತ್ರಿಕ ಚುನಾವಣೆ ಘೋಷಣೆಯಾದಾಗಿನಿಂದ ದೂರು ಅಪ್ಲಿಕೇಶನ್ ಮೂಲಕ ಇದುವರೆಗೆ 79,000 ಕ್ಕೂ ಹೆಚ್ಚು ಉಲ್ಲಂಘನೆಗಳು ವರದಿಯಾಗಿವೆ; ಶೇ.99ರಷ್ಟು ಪ್ರಕರಣಗಳು ಇತ್ಯರ್ಥ
ಮುಕ್ತ, ನ್ಯಾಯಸಮ್ಮತ ಮತ್ತು ಪ್ರಚೋದನೆ ಮುಕ್ತ ಮತದಾನವನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಚುನಾವಣಾ ಆಯೋಗದ ಕ್ರಮಗಳ ಭಾಗವಾಗಿ ಸಿ-ವಿಜಿಲ್ ಕಾರ್ಯನಿರ್ವಹಿಸುತ್ತಿದೆ
Posted On:
29 MAR 2024 1:52PM by PIB Bengaluru
ಭಾರತದ ಚುನಾವಣಾ ಆಯೋಗದ ಸಿವಿಜಿಲ್ ಅಪ್ಲಿಕೇಶನ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯನ್ನು ಗುರುತಿಸಲು ಜನರ ಕೈಯಲ್ಲಿ ಪರಿಣಾಮಕಾರಿ ಸಾಧನವಾಗಿದೆ. ಸಾರ್ವತ್ರಿಕ ಚುನಾವಣೆ 2024ರ ಘೋಷಣೆಯಾದಾಗಿನಿಂದ, ಇಂದಿನವರೆಗೆ 79,000 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ. ಶೇ.99ರಷ್ಟು ದೂರುಗಳನ್ನು 100 ನಿಮಿಷಗಳಲ್ಲಿ ಪರಿಹರಿಸಲಾಗಿದೆ. ವೇಗ ಮತ್ತು ಪಾರದರ್ಶಕತೆ ಸಿವಿಜಿಲ್ ಅಪ್ಲಿಕೇಶನ್ ನ ಮೂಲಾಧಾರವಾಗಿದೆ.
58,500 ಕ್ಕೂ ಹೆಚ್ಚು ದೂರುಗಳು (ಒಟ್ಟು ಶೇ.73) ಅಕ್ರಮ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳ ವಿರುದ್ಧ ಬಂದಿವೆ. ಹಣ, ಉಡುಗೊರೆ ಮತ್ತು ಮದ್ಯ ವಿತರಣೆಗೆ ಸಂಬಂಧಿಸಿದಂತೆ 1400 ಕ್ಕೂ ಹೆಚ್ಚು ದೂರುಗಳು ಬಂದಿವೆ. ಶೇ.3ರಷ್ಟು ದೂರುಗಳು (2454) ಆಸ್ತಿ ವಿರೂಪಕ್ಕೆ ಸಂಬಂಧಿಸಿವೆ. ಬಂದೂಕು ಪ್ರದರ್ಶನ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ ಸ್ವೀಕರಿಸಲಾದ 535 ದೂರುಗಳಲ್ಲಿ529 ದೂರುಗಳನ್ನು ಈಗಾಗಲೇ ಪರಿಹರಿಸಲಾಗಿದೆ. ಅನುಮತಿಸಲಾದ ಸಮಯವನ್ನು ಮೀರಿ ಸ್ಪೀಕರ್‌ಗಳನ್ನು ಬಳಸುವುದು ಸೇರಿದಂತೆ ನಿಷೇಧಿತ ಅವಧಿಯನ್ನು ಮೀರಿ ಪ್ರಚಾರ ಮಾಡಿದ್ದಕ್ಕಾಗಿ 1000 ದೂರುಗಳು ವರದಿಯಾಗಿವೆ.
ಸಿವಿಜಿಲ್ ಅಪ್ಲಿಕೇಶನ್ ಚುನಾವಣಾ ಮೇಲ್ವಿಚಾರಣೆಯಲ್ಲಿಮತ್ತು ಪ್ರಚಾರದ ಗೊಂದಲವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಮುನ್ನಡೆಯನ್ನು ಸೂಚಿಸುತ್ತದೆ. ಸಾರ್ವತ್ರಿಕ ಚುನಾವಣೆ 2024ರ ಘೋಷಣೆಗಾಗಿ ಪತ್ರಿಕಾಗೋಷ್ಠಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರು ನಾಗರಿಕರು ಜಾಗರೂಕರಾಗಿರಬೇಕು ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಮತದಾರರಿಗೆ ಯಾವುದೇ ರೀತಿಯ ಪ್ರಚೋದನೆಗಳನ್ನು ವಿತರಿಸುವುದನ್ನು ವರದಿ ಮಾಡಲು ಅಪ್ಲಿಕೇಶನ್‌ಅನ್ನು ಬಳಸುವಂತೆ ಒತ್ತಾಯಿಸಿದ್ದರು.
ಸಿವಿಜಿಲ್ ಬಳಕೆದಾರ ಸ್ನೇಹಿ ಮತ್ತು ನಿರ್ವಹಿಸಲು ಸುಲಭವಾದ ಅಪ್ಲಿಕೇಶನ್ ಆಗಿದ್ದು, ಇದು ಜಾಗೃತ ನಾಗರಿಕರನ್ನು ಜಿಲ್ಲಾ ನಿಯಂತ್ರಣ ಕೊಠಡಿ, ರಿಟರ್ನಿಂಗ್ ಅಧಿಕಾರಿ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡಗಳೊಂದಿಗೆ ಸಂಪರ್ಕಿಸುತ್ತದೆ. ಈ ಅಪ್ಲಿಕೇಶನ್ ಬಳಸುವ ಮೂಲಕ, ನಾಗರಿಕರು ರಾಜಕೀಯ ದುಷ್ಕೃತ್ಯದ ಘಟನೆಗಳ ಬಗ್ಗೆ ನಿಮಿಷಗಳಲ್ಲಿಮತ್ತು ರಿಟರ್ನಿಂಗ್ ಅಧಿಕಾರಿಯ ಕಚೇರಿಗೆ ಧಾವಿಸದೆ ತಕ್ಷ ಣ ವರದಿ ಮಾಡಬಹುದು. ಸಿವಿಜಿಲ್ ಅಪ್ಲಿಕೇಶ್‌ನಲ್ಲಿದೂರನ್ನು ಕಳುಹಿಸಿದ ತಕ್ಷ ಣ, ದೂರುದಾರರು ವಿಶಿಷ್ಟ ಐಡಿಯನ್ನು ಪಡೆಯುತ್ತಾರೆ, ಅದರ ಮೂಲಕ ವ್ಯಕ್ತಿಯು ತಮ್ಮ ಮೊಬೈಲ್‌ನಲ್ಲಿ ದೂರನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
ಏಕಕಾಲದಲ್ಲಿ ಕೆಲಸ ಮಾಡುವ ಮೂರು ಅಂಶಗಳು ಸಿವಿಜಿಲ್‌ಅನ್ನು ಯಶಸ್ವಿಗೊಳಿಸುತ್ತವೆ. ಬಳಕೆದಾರರು ಆಡಿಯೊಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ನೈಜ ಸಮಯದಲ್ಲಿ ಸೆರೆಹಿಡಿಯುತ್ತಾರೆ ಮತ್ತು ದೂರುಗಳಿಗೆ ಸಮಯ ಮಿತಿಯ ಪ್ರತಿಕ್ರಿಯೆಗಾಗಿ 100 ನಿಮಿಷಗಳ ಕ್ಷ ಣಗಣನೆಯನ್ನು ಖಚಿತಪಡಿಸಲಾಗುತ್ತದೆ.
ಉಲ್ಲಂಘನೆಯನ್ನು ವರದಿ ಮಾಡಲು ಬಳಕೆದಾರರು ಸಿವಿಜಿಲ್‌ನಲ್ಲಿತಮ್ಮ ಕ್ಯಾಮೆರಾವನ್ನು ಆನ್ ಮಾಡಿದ ತಕ್ಷ ಣ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಜಿಯೋ-ಟ್ಯಾಗಿಂಗ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುತ್ತದೆ. ಇದರರ್ಥ ಫ್ಲೈಯಿಂಗ್ ಸ್ಕ್ವಾಡ್‌ಗಳು ವರದಿಯಾದ ಉಲ್ಲಂಘನೆಯ ನಿಖರವಾದ ಸ್ಥಳವನ್ನು ತಿಳಿದುಕೊಳ್ಳಬಹುದು ಮತ್ತು ನಾಗರಿಕರು ಸೆರೆಹಿಡಿದ ಚಿತ್ರವನ್ನು ನ್ಯಾಯಾಲಯದಲ್ಲಿ ಸಾಕ್ಷ ್ಯವಾಗಿ ಬಳಸಬಹುದು. ನಾಗರಿಕರು ಅನಾಮಧೇಯವಾಗಿ ದೂರುಗಳನ್ನು ವರದಿ ಮಾಡಬಹುದು.
ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮತ್ತು ಮತದಾರರು ಮತ್ತು ರಾಜಕೀಯ ಪಕ್ಷ ಗಳಿಗೆ ಅನುಕೂಲವಾಗುವಂತೆ ಆಯೋಗವು ನಿರ್ಮಿಸಿದ ಅಪ್ಲಿಕೇಶನ್‌ಗಳ ಶಸ್ತ್ರಾಗಾರಗಳಲ್ಲಿಈ ಅಪ್ಲಿಕೇಶನ್ ಒಂದಾಗಿದೆ.
*****
(Release ID: 2016683)
Visitor Counter : 130
Read this release in:
English
,
Gujarati
,
Urdu
,
Hindi
,
Marathi
,
Bengali
,
Assamese
,
Punjabi
,
Odia
,
Tamil
,
Malayalam