ಚುನಾವಣಾ ಆಯೋಗ
azadi ka amrit mahotsav

ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖಬೀರ್ ಸಿಂಗ್ ಸಂಧು ಅವರಿಂದ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕಾರ

प्रविष्टि तिथि: 15 MAR 2024 1:53PM by PIB Bengaluru

ಶ್ರೀ ಜ್ಞಾನೇಶ್ ಕುಮಾರ್ ಮತ್ತು ಡಾ. ಸುಖಬೀರ್ ಸಿಂಗ್ ಸಂಧು ಅವರು ಇಂದು ಭಾರತ ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.

 


ನಿರ್ವಚನ ಸದನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರು ನೂತನವಾಗಿ ನೇಮಕಗೊಂಡ ಚುನಾವಣಾ ಆಯುಕ್ತರನ್ನು ಮುಂಬರುವ ಹನ್ನೆರಡು ವಾರಗಳ ಬಿಡುವಿಲ್ಲದ ಕಾರ್ಯನಿರ್ವಹಣೆಗೆ ಸ್ವಾಗತಿಸಿದರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 2024 ರ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ತಂಡ ಭಾರತ ಚುನಾವಣಾ ಆಯೋಗ ಸಿದ್ಧವಾಗಿರುವ ಈ ಐತಿಹಾಸಿಕ ಹಂತದಲ್ಲಿ ನೂತನ ಚುನಾವಣಾ ಆಯುಕ್ತರು ಸೇರ್ಪಡೆಯಾಗುತ್ತಿರುವ ಮಹತ್ವವನ್ನು ಅವರು ಒತ್ತಿ ಹೇಳಿದರು.

 

 


ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಮಾರ್ಚ್ 14, 2024 ರಂದು ಗೆಜೆಟ್‌ ನಲ್ಲಿ ಪ್ರಕಟಿಸಲಾಗಿದೆ. ಶ್ರೀ ಜ್ಞಾನೇಶ್ ಕುಮಾರ್ ಮತ್ತು ಡಾ. ಸುಖಬೀರ್ ಸಿಂಗ್ ಸಂಧು ಅವರು ಕ್ರಮವಾಗಿ ಕೇರಳ ಮತ್ತು ಉತ್ತರಾಖಂಡ್ ಕೇಡರ್‌ ಗೆ ಸೇರಿದ ಭಾರತೀಯ ಆಡಳಿತ ಸೇವೆಯ 1988 ರ ಬ್ಯಾಚ್‌ ನ ಅಧಿಕಾರಿಗಳಾಗಿದ್ದಾರೆ.

*****


(रिलीज़ आईडी: 2014960) आगंतुक पटल : 392
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Gujarati , Tamil , Telugu