ಪ್ರಧಾನ ಮಂತ್ರಿಯವರ ಕಛೇರಿ

ಬಿಹಾರದ ಬೆಟ್ಟಿಯಾದಲ್ಲಿ “ವಿಕಸಿತ ಭಾರತ ವಿಕಸಿತ ಬಿಹಾರ” ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಬಿಹಾರದ ಬೆಟ್ಟಿಯಾದಲ್ಲಿ ಸುಮಾರು 12,800 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ದೇಶಕ್ಕೆ ಸಮರ್ಪಣೆ

109 ಕಿ.ಮೀ. ಉದ್ದದ ಇಂಡಿಯನ್ ಆಯಿಲ್‌ನ ಮುಜಾಫರ್‌ಪುರ - ಮೋತಿಹಾರಿ ಎಲ್‌ಪಿಜಿ ಪೈಪ್‌ಲೈನ್ ಉದ್ಘಾಟನೆ

ಮೋತಿಹಾರಿಯಲ್ಲಿರುವ ಇಂಡಿಯನ್ ಆಯಿಲ್‌ನ ಎಲ್‌ಪಿಜಿ ಬಾಟ್ಲಿಂಗ್ ಘಟಕ ಮತ್ತು ಸ್ಟೋರೇಜ್ ಟರ್ಮಿನಲ್ ರಾಷ್ಟ್ರಕ್ಕೆ ಸಮರ್ಪಣೆ

ಸಿಟಿ ಗ್ಯಾಸ್ ವಿತರಣಾ ಯೋಜನೆಗಳು ಮತ್ತು ಧಾನ್ಯ ಆಧಾರಿತ ಎಥೆನಾಲ್ ಯೋಜನೆಗಳಿಗೆ ಶಂಕುಸ್ಥಾಪನೆ

ಅನೇಕ ರೈಲು ಮತ್ತು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ದೇಶಕ್ಕೆ ಸಮರ್ಪಣೆ

ಬೆಟ್ಟಿಯಾ ರೈಲು ನಿಲ್ದಾಣದ ಮರುಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

ನರ್ಕಟಿಯಾಗಂಜ್ - ಗೌನಾಹಾ ಮತ್ತು ರಕ್ಸಾಲ್ - ಜೋಗ್ಬಾನಿ ನಡುವೆ 2 ಹೊಸ ರೈಲು ಸೇವೆಗಳಿಗೆ ಹಸಿರುನಿಶಾನೆ

"ಡಬಲ್ ಇಂಜಿನ್ ಸರ್ಕಾರದ ಅಡಿ, ಬಿಹಾರ ತನ್ನ ಗತ ವೈಭವ ಮರಳಿ ಪಡೆಯುವ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ"

"ವಿಕಸಿತ ಬಿಹಾರ ಮತ್ತು ವಿಕಸಿತ ಭಾರತದ ಸಂಕಲ್ಪ ಸ್ವೀಕರಿಸಲು ಬೆಟ್ಟಿಯಾ, ಚಂಪಾರಣ್‌ಗಿಂತ ಉತ್ತಮ ಸ್ಥಳ ಮತ್ತೊಂದಿಲ್ಲ"

“ಬಿಹಾರ ಯಾವಾಗ ಸಮೃದ್ಧವಾಗಿರುತ್ತದೋ, ಆಗ ಭಾರತ ಸಮೃದ್ಧವಾಗಿದೆ. ಆದ್ದರಿಂದ, ವಿಕಸಿತ ಭಾರತಕ್ಕೆ ವಿಕಸಿತ ಬಿಹಾರವೂ ಅಷ್ಟೇ ಮುಖ್ಯ”

Posted On: 06 MAR 2024 5:05PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾದಲ್ಲಿಂದು ಸುಮಾರು 12,800 ಕೋಟಿ ರೂಪಾಯಿ ಮೌಲ್ಯದ ರೈಲು, ರಸ್ತೆ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಕ್ಕೆ ಸಂಬಂಧಿಸಿದ ಬಹು ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಬೆಟ್ಟಿಯಾ ನಾಡು ಸ್ವಾತಂತ್ರ್ಯ ಹೋರಾಟವನ್ನು ಪುನರುಜ್ಜೀವನಗೊಳಿಸಿತು, ಜನರಲ್ಲಿ ಹೊಸ ಪ್ರಜ್ಞೆಯನ್ನು ತುಂಬಿತು. "ಈ ಭೂಮಿಯೇ ಮೋಹನ್ ದಾಸ್ ಜಿ ಅವರಿಂದ ಮಹಾತ್ಮ ಗಾಂಧಿ ಅವರನ್ನು ಸೃಷ್ಟಿಸಿತು". ವಿಕ್ಷಿತ್ ಬಿಹಾರ ಮತ್ತು ವಿಕ್ಷಿತ್ ಭಾರತ್‌ನ ಸಂಕಲ್ಪ ಸ್ವೀಕರಿಸಲು  ಬೆಟ್ಟಿಯಾ, ಚಂಪಾರಣ್‌ಗಿಂತ ಉತ್ತಮವಾದ ಸ್ಥಳ ಮತ್ತೊಂದಿಲ್ಲ. ರಾಜ್ಯದ ವಿವಿಧ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಂದ ವಿಕ್ಷಿತ್ ಬಿಹಾರ ಕಾರ್ಯಕ್ರಮಕ್ಕೆ  ಆಗಮಿಸಿರುವ ಜನರ ಉಪಸ್ಥಿತಿಯನ್ನು ಸ್ವಾಗತಿಸಿದ ಪ್ರಧಾನಿ, ಇಂದಿನ ಅಭಿವೃದ್ಧಿ ಯೋಜನೆಗಳಿಗೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು.

"ಬಿಹಾರದ ಭೂಮಿ ಶತಮಾನಗಳಿಂದ ದೇಶಕ್ಕೆ ಪ್ರಚಂಡ ನಾಯಕತ್ವವನ್ನು ತೋರಿಸಿದೆ ಮತ್ತು ರಾಷ್ಟ್ರಕ್ಕೆ ಅನೇಕ ಮಹಾನ್ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ". ಬಿಹಾರದ ಸಮೃದ್ಧಿಯೊಂದಿಗೆ ಭಾರತವು ಸಮೃದ್ಧವಾಗಿದ. ರಾಜ್ಯದ ಅಭಿವೃದ್ಧಿಯು ಅಷ್ಟೇ ಸಮಾನವಾಗಿ ಮುಖ್ಯವಾಗಿದೆ. ವಿಕ್ಷಿತ್ ಭಾರತದ ಗುರಿ ಸಾಧಿಸಿಲು, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದ ರಚನೆಯೊಂದಿಗೆ ವಿಕ್ಷಿತ್ ಬಿಹಾರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳು ಹೊಸ ವೇಗ ಕಂಡುಕೊಂಡಿವೆ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು. ರೈಲು, ರಸ್ತೆ, ಎಥೆನಾಲ್ ಸ್ಥಾವರಗಳು, ನಗರ ಅನಿಲ ಪೂರೈಕೆ ಮತ್ತು ಎಲ್‌ಪಿಜಿ ಗ್ಯಾಸ್ ಸೇರಿದಂತೆ ಇಂದು ಉದ್ಘಾಟನೆಯಾದ ಯೋಜನೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ವಿಕ್ಷಿತ್ ಬಿಹಾರದ ಸಂಕಲ್ಪ ಸಾಧಿಸಲು ಅಭಿವೃದ್ಧಿಯ ಈ ವೇಗವನ್ನು ಕಾಪಾಡಿಕೊಳ್ಳಬೇಕು ಎಂದರು.

ಬಿಹಾರದ ತೀವ್ರ ಸಮಸ್ಯೆಗಳಲ್ಲಿ ಒಂದಾದ ಕಳಪೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಮತ್ತು ವಂಶ ಪಾರಂಪರ್ಯ ರಾಜಕಾರಣದಿಂದಾಗಿ ರಾಜ್ಯದಿಂದ ಯುವಕರು ವಲಸೆ ಹೋಗುತ್ತಿದ್ದರು. ಆದರೆ "ಬಿಹಾರದ ಡಬಲ್ ಸರ್ಕಾರದ ಪ್ರಯತ್ನವು ಬಿಹಾರದಲ್ಲಿಯೇ ರಾಜ್ಯದ ಯುವಕರಿಗೆ ಉದ್ಯೋಗಗಳನ್ನು ಒದಗಿಸುತ್ತಿದೆ". ಇಂದಿನ ಯೋಜನೆಗಳ ಹೆಚ್ಚಿನ ಫಲಾನುಭವಿಗಳು ಉದ್ಯೋಗವನ್ನು ಹುಡುಕುತ್ತಿರುವ ಯುವಕರಾಗಿದ್ದಾರೆ.  ಗಂಗಾ ನದಿಯ ಮೇಲೆ ಪಾಟ್ನಾದಲ್ಲಿ ದಿಘಾ-ಸೋನೆಪುರ್ ರೈಲು ಮಾರ್ಗ ಮತ್ತು ರಸ್ತೆ ಇರುವ ಸೇತುವೆಗೆ ಸಮಾನಾಂತರವಾಗಿ ಗಂಗಾ ನದಿಯ ಮೇಲೆ 6 ಲೇನ್ ಕೇಬಲ್ ಸೇತುವೆಯ ಉದ್ಘಾಟನೆ ಪ್ರಸ್ತಾಪಿಸಿದ ಪ್ರಧಾನಿ, ಬಿಹಾರದಲ್ಲಿ 22,000 ಕೋಟಿ ರೂ.ಗಳ ಹಂಚಿಕೆಯೊಂದಿಗೆ 12 ಸೇತುವೆಗಳ ಕಾಮಗಾರಿ ನಡೆಯುತ್ತಿದೆ. ಗಂಗಾ ನದಿಯ ಮೇಲೆ 5 ಸೇತುವೆಗಳು ಇದರಲ್ಲಿ ಸೇರಿವೆ. "ಈ ಸೇತುವೆಗಳು ಮತ್ತು ವಿಶಾಲವಾದ ರಸ್ತೆಗಳು ಅಭಿವೃದ್ಧಿಯ ಹಾದಿಯನ್ನು ಸುಗಮಗೊಳಿಸುತ್ತವೆ". ಆಧುನಿಕ ಮೂಲಸೌಕರ್ಯವು ಉದ್ಯೋಗದ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

 

ದೇಶದಲ್ಲಿ ಹಾಕಲಾಗುತ್ತಿರುವ ಎಲ್ಲಾ ರೈಲು ಮಾರ್ಗಗಳು ಅಥವಾ ಹಸಿರುನಿಶಾನೆ ತೋರಲಾಗಿರುವ ರೈಲುಗಳು ಸಂಪೂರ್ಣ ಮೇಡ್ ಇನ್ ಇಂಡಿಯಾ ಆಗಿದ್ದು, ಆ ಮೂಲಕ ನಾಗರಿಕರಿಗೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಬಿಹಾರದಲ್ಲಿ ಆಧುನಿಕ ರೈಲು ಎಂಜಿನ್ ಉತ್ಪಾದನಾ ಕಾರ್ಖಾನೆಗಳನ್ನು ಪ್ರಸ್ತುತ ಸರ್ಕಾರವೇ ಪ್ರಾರಂಭಿಸಿದೆ.  ಡಿಜಿಟಲ್ ಇಂಡಿಯಾ ಉಪಕ್ರಮ ಪ್ರಸ್ತಾಪಿಸಿದ ಅವರು, ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇಂತಹ ಡಿಜಿಟಲ್ ಸೌಲಭ್ಯಗಳನ್ನು ಹೊಂದಿಲ್ಲ. ಏಕೆಂದರೆ ಡಿಜಿಟಲ್ ಸೇವೆಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಭಾರತದ ಯುವಕರಿಗೆ ಮನ್ನಣೆ ನೀಡಲಾಗಿದೆ. "ಪ್ರತಿ ಹೆಜ್ಜೆಯಲ್ಲೂ ಭಾರತದ ಯುವಕರ ಬೆಂಬಲಕ್ಕೆ ನಿಲ್ಲುವ ಭರವಸೆಯನ್ನು ಮೋದಿ ನೀಡಿದ್ದಾರೆ". "ಇಂದು ನಾನು ಈ ಭರವಸೆಯನ್ನು ಬಿಹಾರದ ಯುವಕರಿಗೆ ನೀಡುತ್ತಿದ್ದೇನೆ". ಮೋದಿ ಅವರ ಗ್ಯಾರಂಟಿ ಎಂದರೆ ಈಡೇರಿಸುವ ಗ್ಯಾರಂಟಿ ಎಂದರು.

ಟೆರೇಸ್‌ ಅಥವಾ ಮನೆ ಮೇಲ್ಛಾವಣಿ ಮೇಲೆ ಸೌರ ಸ್ಥಾವರಗಳ ಮೂಲಕ ವಿದ್ಯುತ್ ಉತ್ಪಾದಿಸಬಹುದು, ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ನಾಗರಿಕರಿಗೆ ಹೆಚ್ಚುವರಿ ಆದಾಯ ಸೃಷ್ಟಿಸುವ ಮೂಲಕ ಸರ್ಕಾರಕ್ಕೆ ಮಾರಾಟ ಮಾಡಬಹುದು. ಭಾರತದಲ್ಲಿನ ಪ್ರತಿ ಮನೆಯನ್ನು ಸೂರ್ಯ ಘರ್ ಮಾಡಲು ಸರ್ಕಾರವು ಒತ್ತು ನೀಡಿದೆ. ವಂಶ ಪಾರಂಪರ್ಯ ರಾಜಕಾರಣದ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ಪ್ರಧಾನಿ, ಜನ್ ನಾಯಕ್ ಕರ್ಪೂರಿ ಠಾಕೂರ್, ಜೈ ಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ನೆನಪಿಸಿಕೊಂಡರು.

ಉಚಿತ ಪಡಿತರ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ, ಪಕ್ಕಾ ಮನೆಗಳು, ಶೌಚಾಲಯಗಳು, ವಿದ್ಯುತ್, ಅನಿಲ ಮತ್ತು ನಲ್ಲಿ ನೀರಿನ ಸಂಪರ್ಕ, ಏಮ್ಸ್ ಸ್ಥಾಪನೆ, ಬಡವರು, ಮಹಿಳೆಯರು, ಯುವಕರು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಐಐಟಿಗಳು, ಐಐಎಂಗಳು ಮತ್ತು ಇತರ ವೈದ್ಯಕೀಯ ಕಾಲೇಜುಗಳು ದಾಖಲೆ ಸಂಖ್ಯೆಯಲ್ಲಿ ಸ್ಥಾಪಿಸಲಾಗಿದೆ. ಕಬ್ಬು ಮತ್ತು ಭತ್ತ ಬೆಳೆಗಾರರು ಉಪ ಉತ್ಪನ್ನಗಳನ್ನು ಬಳಸಲು ಎಥೆನಾಲ್ ಸ್ಥಾವರಗಳನ್ನು ಸ್ಥಾಪಿಸುತ್ತವೆ. ಇತ್ತೀಚೆಗೆ, ಕಬ್ಬಿನ ಖರೀದಿ ಬೆಲೆಯನ್ನು ಕ್ವಿಂಟಲ್‌ಗೆ 340 ರೂ.ಗೆ ಹೆಚ್ಚಿಸಲಾಗಿದೆ. ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆ ಪ್ರಾರಂಭಿಸಲಾಗಿದೆ. ದೇಶ ವಿವಿಧೆಡೆ ಮತ್ತು ಬಿಹಾರದಲ್ಲಿ ಸಾವಿರಾರು ಗೋದಾಮುಗಳನ್ನು ನಿರ್ಮಿಸಲಾಗುವುದು. ರೈತರಿಗೆ ಸಾವಿರಾರು ಕೋಟಿ ರೂ.ಗಳ ಆರ್ಥಿಕ ಸಹಾಯಕ್ಕಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸ್ಥಾಪಿಸಲಾಗಿದೆ. ಬೆಟ್ಟಿಯಾ ರೈತರಿಗೆ ಈ ಯೋಜನೆಯಡಿ ಇದುವರೆಗೆ 800 ಕೋಟಿ ರೂ. ಒದಗಿಸಲಾಗಿದೆ. ಬರೌನಿಯಲ್ಲಿ ಬಹಳ ದಿನಗಳಿಂದ ಮುಚ್ಚಿದ್ದ ರಸಗೊಬ್ಬರ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲಾಗಿದೆ. ಅದಕ್ಕೆ ಮತ್ತೆ ಚಾಲನೆ ಮಾಡುವ ಭರವಸೆಯನ್ನು ಮೋದಿ ಅವರೇ ನೀಡಿದ್ದರು. “ಇಂದು ಈ ರಸಗೊಬ್ಬರ ಕಾರ್ಖಾನೆಯು ತನ್ನ ಸೇವೆಯನ್ನು ಒದಗಿಸುತ್ತಿದೆ, ಉದ್ಯೋಗ ಸೃಷ್ಟಿಸುತ್ತಿದೆ. ಅದಕ್ಕಾಗಿಯೇ ಜನರು ಹೇಳುತ್ತಿದ್ದಾರೆ – ಮೋದಿ ಅವರ ಗ್ಯಾರಂಟಿ ಎಂದರೆ ಈಡೇರಿಸುವ ಭರವಸೆ ಎಂದರು.

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದಿಂದ ಬಿಹಾರದ ಜನರ ಸಂತೋಷ ಹೆಚ್ಚಾಗಿದೆ. ಇಂದು ಭಾರತ ತನ್ನ ಪರಂಪರೆ ಮತ್ತು ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಿದೆ ಎಂದರು.

ಈ ಪ್ರದೇಶದಲ್ಲಿ ಪ್ರಕೃತಿಯನ್ನು ಪ್ರೀತಿಸುವ ಥಾರು ಬುಡಕಟ್ಟು ಜನಾಂಗದ ಜನರು ಇಲ್ಲಿಗೆ ಆಗಮಿಸಿದ್ದಾರೆ. ಪ್ರತಿಯೊಬ್ಬರು ಥಾರು ಸಮುದಾಯದಿಂದ ಸ್ಫೂರ್ತಿ ಪಡೆಯಬೇಕು. “ಇಂದು ಭಾರತವು ಪ್ರಕೃತಿಯನ್ನು ರಕ್ಷಿಸುತ್ತಾ, ಥಾರು ಅವರಂತಹ ಬುಡಕಟ್ಟು ಜನಾಂಗದವರಿಂದ ಸ್ಫೂರ್ತಿ ಪಡೆದು ಅಭಿವೃದ್ಧಿ ಹೊಂದುತ್ತಿದೆ. ಅದಕ್ಕಾಗಿಯೇ ನಾನು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಪ್ರತಿಯೊಬ್ಬರ ಪ್ರಯತ್ನಗಳು, ಪ್ರತಿಯೊಬ್ಬರ ಸ್ಫೂರ್ತಿ ಮತ್ತು ಪ್ರತಿಯೊಬ್ಬರ ಕಲಿಕೆಯ ಅಗತ್ಯವಿದೆ ಎಂದು ನಾನು ಹೇಳುತ್ತೇನೆ ಎಂದರು.

ಭಾರತವು 3ನೇ ಅತಿದೊಡ್ಡ ಆರ್ಥಿಕತೆ  ಆಗುವುದರ ಮಹತ್ವವನ್ನು ಪುನರುಚ್ಚರಿಸಿದ ಪ್ರಧಾನಿ, ಜನರನ್ನು ಬಡತನದಿಂದ ಹೊರತರುವುದು, ಯುವಕರಿಗೆ ಉದ್ಯೋಗಗಳು, ಬಡವರಿಗೆ ಪಕ್ಕಾ ಮನೆಗಳು, 1 ಕೋಟಿ ಮನೆಗಳಿಗೆ ಸೌರ ಫಲಕಗಳು, 3 ಕೋಟಿ ಲಖ್ಪತಿ ದೀದಿಗಳು ಮತ್ತು ವಂದೇ ಭಾರತ್ ನಂತಹ ಆಧುನಿಕ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಪ್ರಧಾನಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ಬಿಹಾರದ ರಾಜ್ಯಪಾಲ ಶ್ರೀ ಆರ್ ವಿ ಅರ್ಲೇಕರ್, ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಬಿಹಾರದ ಉಪಮುಖ್ಯಮಂತ್ರಿಗಳಾದ ಶ್ರೀ ಸಾಮ್ರಾಟ್ ಚೌಧರಿ ಮತ್ತು ಶ್ರೀ ವಿಜಯ್ ಕುಮಾರ್ ಸಿನ್ಹಾ, ಕೇಂದ್ರ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ ಮತ್ತು ಸಂಸದ ಶ್ರೀ ಸಂಜಯ್ ಜೈಸ್ವಾಲ್ ಉಪಸ್ಥಿತರಿದ್ದರು.

 

ಹಿನ್ನೆಲೆ

ಪ್ರಧಾನ  ಮಂತ್ರಿ ಅವರು 109 ಕಿ.ಮೀ. ಉದ್ದದ ಇಂಡಿಯನ್ ಆಯಿಲ್‌ನ ಮುಜಾಫರ್‌ಪುರ - ಮೋತಿಹಾರಿ ಎಲ್‌ಪಿಜಿ ಪೈಪ್‌ಲೈನ್ ಉದ್ಘಾಟಿಸಿದರು, ಇದು ಬಿಹಾರ ರಾಜ್ಯ ಮತ್ತು ನೆರೆಯ ರಾಷ್ಟ್ರ ನೇಪಾಳಕ್ಕೆ ಸ್ವಚ್ಛ ಶುದ್ಧ ಅಡುಗೆ ಅನಿಲ ಒದಗಿಸುತ್ತದೆ. ಮೋತಿಹಾರಿಯಲ್ಲಿ ಇಂಡಿಯನ್ ಆಯಿಲ್‌ನ ಎಲ್‌ಪಿಜಿ ಬಾಟ್ಲಿಂಗ್ ಘಟಕ ಮತ್ತು ಸ್ಟೋರೇಜ್ ಟರ್ಮಿನಲ್ ಅನ್ನು ಪ್ರಧಾನಿ ಅವರು ದೇಶಕ್ಕೆ ಸಮರ್ಪಿಸಿದರು. ಹೊಸ ಪೈಪ್‌ಲೈನ್ ಟರ್ಮಿನಲ್ ನೇಪಾಳಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ರಫ್ತಿಗೆ ಕಾರ್ಯತಂತ್ರದ ಪೂರೈಕೆ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಇದು ಉತ್ತರ ಬಿಹಾರದ 8 ಜಿಲ್ಲೆಗಳಿಗೆ ಅಂದರೆ ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಸಿವಾನ್, ಮುಜಾಫರ್‌ಪುರ್, ಶಿಯೋಹರ್, ಸೀತಾಮರ್ಹಿ ಮತ್ತು ಮಧುಬನಿಗಳಿಗೆ ಸೇವೆ ಒದಗಿಸುತ್ತದೆ. ಮೋತಿಹಾರಿಯಲ್ಲಿರುವ ಹೊಸ ಬಾಟ್ಲಿಂಗ್ ಘಟಕವು ಮೋತಿಹಾರಿ ಘಟಕಕ್ಕೆ ಸಂಪರ್ಕ ಕಲ್ಪಿಸಲಾದ ಆಹಾರ ಮಾರುಕಟ್ಟೆಗಳಲ್ಲಿ ಪೂರೈಕೆ ಸರಪಳಿಯನ್ನು ಸುಗಮಗೊಳಿಸುತ್ತದೆ.

ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಸಿವಾನ್ ಮತ್ತು ಡಿಯೋರಿಯಾದಲ್ಲಿ ಸಿಟಿ ಗ್ಯಾಸ್ ವಿತರಣಾ ಯೋಜನೆ ಮತ್ತು ಎಚ್‌ಬಿಎಲ್‌ನ ಸುಗೌಲಿ ಮತ್ತು ಲೌರಿಯಾದಲ್ಲಿ ಧಾನ್ಯ ಆಧಾರಿತ ಎಥೆನಾಲ್ ಯೋಜನೆಗಳಿಗೆ ಪ್ರಧಾನ ಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಪಿಪ್ರಕೋಥಿ - ಮೋತಿಹಾರಿ - ಎನ್‌ಎಚ್ - 28ಎ ರಕ್ಸಾಲ್ ವಿಭಾಗದ 2 ಲೇನಿಂಗ್ ಸೇರಿದಂತೆ ಸುಸಜ್ಜಿತ ರಸ್ತೆ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಎನ್ಎಚ್-104ರ ಶಿಯೋಹರ್-ಸೀತಾಮರ್ಹಿ-ವಿಭಾಗದ 2 ಲೇನಿಂಗ್ ಇದರಲ್ಲಿ ಸೇರಿದೆ. ಗಂಗಾ ನದಿಯ ಮೇಲೆ ಪಾಟ್ನಾದಲ್ಲಿ ದಿಘಾ-ಸೋನೆಪುರ್ ರೈಲ್-ಕಮ್-ರೋಡ್ ಸೇತುವೆಗೆ ಸಮಾನಾಂತರವಾಗಿ ಗಂಗಾ ನದಿಯ ಮೇಲೆ 6 ಲೇನ್ ಕೇಬಲ್ ಸೇತುವೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಎನ್ಎಚ್-19 ಬೈಪಾಸ್‌ನ ಬಕರ್‌ಪುರ್ ಹ್ಯಾಟ್-ಮಾಣಿಕ್‌ಪುರ ವಿಭಾಗ 4 ಲೇನಿಂಗ್ ಒಳಗೊಂಡಿದೆ.

ಪ್ರಧಾನ ಮಂತ್ರಿ ಅವರು ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು, ಬಾಪುಧಾಮ್ ಮೋತಿಹಾರಿಯಿಂದ 62 ಕಿಮೀ ಜೋಡಿ ರೈಲು ಮಾರ್ಗ, ಪಿಪ್ರಹಾನ್ ಮತ್ತು ನರ್ಕಟಿಯಾಗಂಜ್-ಗೌನಾಹಾ ಗೇಜ್ ಪರಿವರ್ತನೆ, 96 ಕಿ.ಮೀ ಉದ್ದದ ಗೋರಖ್‌ಪುರ ಕ್ಯಾಂಟ್-ವಾಲ್ಮೀಕಿ ನಗರ ಜೋಡಿ ರೈಲು ಮಾರ್ಗ ಮತ್ತು ವಿದ್ಯುದೀಕರಣ, ಬೆಟ್ಟಿಯಾ ರೈಲು ನಿಲ್ದಾಣದ ಮರುಅಭಿವೃದ್ಧಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು.  ನರ್ಕಟಿಯಾಗಂಜ್-ಗೌನಾಹಾ ಮತ್ತು ರಕ್ಸಾಲ್-ಜೋಗ್ಬಾನಿ ನಡುವೆ 2 ಹೊಸ ರೈಲು ಸೇವೆಗಳಿಗೆ ಪ್ರಧಾನ ಮಂತ್ರಿ ಹಸಿರುನಿಶಾನೆ ತೋರಿದರು.

***



(Release ID: 2012616) Visitor Counter : 58