ಪ್ರಧಾನ ಮಂತ್ರಿಯವರ ಕಛೇರಿ

ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ 35,700 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


​​​​​​​ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ (HURL) ಸಿಂಡ್ರಿ ರಸಗೊಬ್ಬರ ಸ್ಥಾವರ ರಾಷ್ಟ್ರಕ್ಕೆ ಸಮರ್ಪಣೆ

ಜಾರ್ಖಂಡ್‌ನಲ್ಲಿ 17,600 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಹಲವಾರು ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ

3 ರೈಲುಗಳಾದ ದಿಯೋಘರ್ - ದಿಬ್ರುಗಢ ರೈಲು ಸೇವೆ, ಟಾಟಾನಗರ ಮತ್ತು ಬಾದಂಪಹಾರ್ ನಡುವಿನ ಮೆಮು ರೈಲು ಸೇವೆ (ದೈನಂದಿನ) ಮತ್ತು ಶಿವಪುರ ನಿಲ್ದಾಣದಿಂದ ದೀರ್ಘಾವಧಿಯ ಸರಕು ಸಾಗಣೆ ರೈಲುಗಳಿಗೆ ಹಸಿರುನಿಶಾನೆ

ಉತ್ತರ ಕರಣಪುರ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ (STPP) ಘಟಕ 1 (660 MW) ರಾಷ್ಟ್ರಕ್ಕೆ ಸಮರ್ಪಣೆ

ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳ ಸಮರ್ಪಣೆ

"ಸಿಂದ್ರಿ ಪ್ಲಾಂಟ್ ಮೋದಿ ಕಿ ಗ್ಯಾರಂಟಿ ಮತ್ತು ಇಂದು ಈ ಭರವಸೆ ಈಡೇರಿದೆ"

"5 ಸ್ಥಾವರಗಳನ್ನು ಪುನರುಜ್ಜೀವನಗೊಳಿಸಲಾಗಿ, ಇವುಗಳ ಪುನರುಜ್ಜೀವನದಿಂದ 60 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದಿಸುತ್ತದೆ, ಈ ನಿರ್ಣಾಯಕ ಪ್ರದೇಶವು ಭಾರತವನ್ನು ಆತ್ಮನಿರ್ಭರ್ ಕಡೆಗೆ ವೇಗವಾಗಿ ಕೊಂಡೊಯ್ಯುತ್ತದೆ"

"ಕಳೆದ 10 ವರ್ಷಗಳಲ್ಲಿ ಬುಡಕಟ್ಟು ಸಮುದಾಯ, ಬಡವರು, ಯುವಕರು ಮತ್ತು ಮಹಿಳೆಯರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಸರ್ಕಾರವು ಜಾರ್ಖಂಡ್‌ಗಾಗಿ ಕೆಲಸ ಮಾಡಿದೆ"

"ಭಗವಾನ್ ಬಿರ್ಸಾ ಮುಂಡಾ ಭೂಮಿ ವಿಕಸಿತ ಭಾರತದ ನಿರ್ಣಯಗಳಿಗೆ ಶಕ್ತಿಯ ಸೆಲೆಯಾಗುತ್ತದೆ"

Posted On: 01 MAR 2024 12:46PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಾರ್ಖಂಡ್‌ನ ಸಿಂದ್ರಿ, ಧನ್‌ಬಾದ್‌ನಲ್ಲಿ 35,700 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ರಸಗೊಬ್ಬರ, ರೈಲು, ವಿದ್ಯುತ್ ಮತ್ತು ಕಲ್ಲಿದ್ದಲು ಕ್ಷೇತ್ರಗಳನ್ನು ಒಳಗೊಂಡಿವೆ. ಶ್ರೀ ಮೋದಿ ಅವರು ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ (HURL) ಸಿಂಡ್ರಿ ರಸಗೊಬ್ಬರ ಸ್ಥಾವರ ಮಾದರಿಯನ್ನು ಪರಿಶೀಲಿಸಿದರು ಮತ್ತು ಸಿಂದ್ರಿ ಪ್ಲಾಂಟ್ ಕಂಟ್ರೋಲ್ ರೂಮ್‌ ವೀಕ್ಷಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಇಂದು ಜಾರ್ಖಂಡ್‌ನಲ್ಲಿ 35,700 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ ರಾಜ್ಯದ ರೈತರು, ಬುಡಕಟ್ಟು ಜನಾಂಗದವರು ಮತ್ತು ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಸಿಂದ್ರಿ ರಸಗೊಬ್ಬರ ಸ್ಥಾವರ ಪ್ರಾರಂಭಿಸುವ ತಮ್ಮ ನಿರ್ಣಯವನ್ನು ಪ್ರಧಾನಿ ನೆನಪಿಸಿಕೊಂಡರು, "ಇದು ಮೋದಿ ಕಿ ಗ್ಯಾರಂಟಿ, ಇಂದು ಈ ಭರವಸೆ ಈಡೇರಿದೆ" 2018ರಲ್ಲಿ ರಸಗೊಬ್ಬರ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಘಟಕದ ಆರಂಭದೊಂದಿಗೆ ಸ್ಥಳೀಯ ಯುವಕರ ಉದ್ಯೋಗಕ್ಕೆ ಹೊಸ ಮಾರ್ಗಗಳನ್ನು ತೆರೆಯಲಾಗಿದೆ. ಆತ್ಮನಿರ್ಭರ್ ಭಾರತ್ ಪಯಣದಲ್ಲಿ ಇಂದಿನ ಉಪಕ್ರಮದ ಮಹತ್ವವನ್ನು ಪ್ರಧಾನ ಮಂತ್ರಿ ಎತ್ತಿ ಹಿಡಿದರು. ಪ್ರತಿ ವರ್ಷ ಭಾರತಕ್ಕೆ 360 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದ್ದು, 2014ರಲ್ಲಿ ಭಾರತ ಕೇವಲ 225 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದಿಸುತ್ತಿತ್ತು. ಉತ್ಪಾದನೆಯ ಬೃಹತ್ ಅಂತರವು ದೊಡ್ಡ ಆಮದುಗಳನ್ನು ಅಂತ್ಯಗೊಳಿಸಿತು. ನಮ್ಮ ಸರ್ಕಾರದ ಪ್ರಯತ್ನದಿಂದಾಗಿ ಕಳೆದ 10 ವರ್ಷಗಳಲ್ಲಿ ಯೂರಿಯಾ ಉತ್ಪಾದನೆ 310 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಏರಿಕೆಯಾಗಿದೆ. ರಾಮಗುಂಡಂ, ಗೋರಖ್‌ಪುರ ಮತ್ತು ಬರೌನಿ ರಸಗೊಬ್ಬರ ಘಟಕಗಳ ಪುನರುಜ್ಜೀವನ ಮಾಡಲಾಗಿದೆ. ಈ ಪಟ್ಟಿಗೆ ಸಿಂದ್ರಿ ಸೇರ್ಪಡೆಯಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ ತಾಲ್ಚರ್ ರಸಗೊಬ್ಬರ ಘಟಕವೂ ಆರಂಭವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಆ ಸ್ಥಾವರವನ್ನು ಸಹ ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ, ಈ 5 ಸ್ಥಾವರಗಳು 60 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ಉತ್ಪಾದಿಸಲಿದ್ದು, ಈ ನಿರ್ಣಾಯಕ ಪ್ರದೇಶದಲ್ಲಿ ಭಾರತವನ್ನು ಶೀಘ್ರವಾಗಿ ಆತ್ಮನಿರ್ಭರದತ್ತ ಕೊಂಡೊಯ್ಯಲಿವೆ ಎಂದು ತಿಳಿಸಿದರು.

ಇಂದಿನ ಸಂದರ್ಭವು ಜಾರ್ಖಂಡ್‌ನಲ್ಲಿ ಹೊಸ ರೈಲು ಮಾರ್ಗಗಳ ಪ್ರಾರಂಭ, ಅಸ್ತಿತ್ವದಲ್ಲಿರುವ ರೈಲು ಮಾರ್ಗಗಳನ್ನು ಜೋಡಿ ಮಾರ್ಗಗಳಾಗಿ ಅಭಿವೃದ್ಧಿ ಮತ್ತು ಇತರೆ ಹಲವಾರು ರೈಲ್ವೆ ಯೋಜನೆಗಳ ಪ್ರಾರಂಭದೊಂದಿಗೆ ಹೊಸ ಅಧ್ಯಾಯ ಆರಂಭವಾಗಿದೆ. ಈ ಪ್ರದೇಶಕ್ಕೆ ಹೊಸ ರೂಪ ನೀಡುವ ಧನ್‌ಬಾದ್-ಚಂದ್ರಾಪುರ ರೈಲು ಮಾರ್ಗ ಮತ್ತು ಬಾಬಾ ಬೈದ್ಯನಾಥ ದೇವಸ್ಥಾನ ಮತ್ತು ಮಾ ಕಾಮಾಖ್ಯ ಶಕ್ತಿ ಪೀಠ ಸಂಪರ್ಕಿಸುವ ದಿಯೋಘರ್-ದಿಬ್ರುಗಢ ರೈಲು ಸೇವೆ ಆರಂಭಿಸಲಾಗಿದೆ.  ವಾರಾಣಸಿ - ಕೋಲ್ಕತ್ತಾ - ರಾಂಚಿ ಎಕ್ಸ್‌ಪ್ರೆಸ್‌ವೇಗೆ ವಾರಣಾಸಿಯಲ್ಲಿ ಶಂಕುಸ್ಥಾಪನೆ ಮಾಡಿರುವುದನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು. ಇದು ಛತ್ರ, ಹಜಾರಿಬಾಗ್, ರಾಮಗಢ ಮತ್ತು ಬೊಕಾರೊದಂತಹ ಸ್ಥಳಗಳ ಸಂಪರ್ಕ ಹೆಚ್ಚಿಸುತ್ತದೆ, ಇಡೀ ಜಾರ್ಖಂಡ್‌ಗೆ ಪ್ರಯಾಣದ ಸಮಯ ಕಡಿಮೆ ಮಾಡುತ್ತದೆ ಮತ್ತು ಇಡೀ ಪೂರ್ವ ಭಾರತಕ್ಕೆ ಸರಕು ಸಂಪರ್ಕ ಹೆಚ್ಚಿಸುತ್ತದೆ. ಈ ಯೋಜನೆಗಳು ಜಾರ್ಖಂಡ್‌ಗೆ ಪ್ರಾದೇಶಿಕ ಸಂಪರ್ಕ ಹೆಚ್ಚಿಸುತ್ತವೆ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡುತ್ತವೆ ಎಂದರು.

"ಕಳೆದ 10 ವರ್ಷಗಳಲ್ಲಿ ಬುಡಕಟ್ಟು ಸಮುದಾಯ, ಬಡವರು, ಯುವಕರು ಮತ್ತು ಮಹಿಳೆಯರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಸರ್ಕಾರವು ಜಾರ್ಖಂಡ್‌ಗಾಗಿ ಕೆಲಸ ಮಾಡಿದೆ". 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ, ಭಾರತವು ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ನಿನ್ನೆ ಹೊರಹೊಮ್ಮಿದ ಇತ್ತೀಚಿನ ತ್ರೈಮಾಸಿಕದ ಆರ್ಥಿಕ ಅಂಕಿಅಂಶಗಳನ್ನು ಅವರು ಪ್ರಸ್ತಾಪಿಸಿದರು. 2023 ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಹಣಕಾಸು ತ್ರೈಮಾಸಿಕದಲ್ಲಿ ದಾಖಲಾದ ಶೇಕಡ 8.4 ಬೆಳವಣಿಗೆ ದರವು ವಿಕ್ಷಿತ್ ಭಾರತ್‌ ಗುರಿ ಸಾಧಿಸುವತ್ತ ಭಾರತದ ಬೆಳೆಯುತ್ತಿರುವ ಸಾಮರ್ಥ್ಯ ಮತ್ತು ವೇಗದ ಅಭಿವೃದ್ಧಿಯನ್ನು ತೋರಿಸುತ್ತಿದೆ. "ವಿಕ್ಷಿತ್ ಭಾರತ್ ನಿರ್ಮಾಣಕ್ಕೆ ವಿಕ್ಷಿತ್ ಜಾರ್ಖಂಡ್ ಮಾಡುವುದು ಅಷ್ಟೇ ಮುಖ್ಯ". ಈ ರಾಜ್ಯವನ್ನು ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ಸರ್ಕಾರದ ಸರ್ವತೋಮುಖ ಬೆಂಬಲ ನೀಡುತ್ತಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಪುಣ್ಯ ಭೂಮಿ ವಿಕ್ಷಿತ್ ಭಾರತದ ಸಂಕಲ್ಪಗಳಿಗೆ ಶಕ್ತಿಯ ಮೂಲವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಧನ್‌ಬಾದ್‌ಗೆ ತೆರಳಬೇಕಾಗಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಭಾಷಣವನ್ನು ಮೊಟಕು  ಮಾಡಿದರು. ಕನಸುಗಳು ಮತ್ತು ನಿರ್ಣಯಗಳು ಮತ್ತಷ್ಟು ಬಲಗೊಳ್ಳುತ್ತವೆ. ಈ ನಿಟ್ಟಿನಲ್ಲಿ, ಜಾರ್ಖಂಡ್ ಜನರಿಗೆ ಶುಭ ಹಾರೈಕೆಗಳು ಮತ್ತು ಅಭಿನಂದನೆಗಳು ಎಂದು ಹೇಳಿ, ಪ್ರಧಾನಿ ಭಾಷಣ ಮುಕ್ತಾಯಗೊಳಿಸಿದರು.
ಜಾರ್ಖಂಡ್ ರಾಜ್ಯಪಾಲ ಶ್ರೀ ಸಿ ಪಿ ರಾಧಾಕೃಷ್ಣನ್, ಜಾರ್ಖಂಡ್ ಮುಖ್ಯಮಂತ್ರಿ ಶ್ರೀ ಚಂಪೈ ಸೊರೆನ್ ಮತ್ತು ಕೇಂದ್ರ ಸಚಿವರಾದ ಶ್ರೀ ಅರ್ಜುನ್ ಮುಂಡಾ ಮತ್ತು ಇತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ ಲಿಮಿಟೆಡ್ (HURL) ಸಿಂದ್ರಿ ರಸಗೊಬ್ಬರ ಸ್ಥಾವರವನ್ನು ಪ್ರಧಾನ ಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಿದರು. 8,900 ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ರಸಗೊಬ್ಬರ ಘಟಕವು ಯೂರಿಯಾ ವಲಯದಲ್ಲಿ ಸ್ವಾವಲಂಬನೆ ಸ್ಥಆಪಿಸುವ ಒಂದು ದಿಟ್ಟ ಹೆಜ್ಜೆಯಾಗಿದೆ. ಇದು ದೇಶದ ರೈತರಿಗೆ ಅನುಕೂಲವಾಗುವಂತೆ ದೇಶದಲ್ಲಿ ವಾರ್ಷಿಕ 12.7 LMT ಸ್ಥಳೀಯ ಯೂರಿಯಾ ಉತ್ಪಾದನೆ ಉತ್ಪಾದಿಸುತ್ತದೆ. 2021 ಡಿಸೆಂಬರ್ ಮತ್ತು 2022 ನವೆಂಬರ್ ನಡುವೆ ಕ್ರಮವಾಗಿ ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಾದ ಗೋರಖ್‌ಪುರ ಮತ್ತು ರಾಮಗುಂಡಂನಲ್ಲಿ ರಸಗೊಬ್ಬರ ಘಟಕಗಳ ಪುನರುಜ್ಜೀವನದ ನಂತರ ದೇಶದಲ್ಲಿ ಪುನರುಜ್ಜೀವನಗೊಂಡ 2ರನೇ ರಸಗೊಬ್ಬರ ಸ್ಥಾವರ ಇದಾಗಿದೆ.

ಜಾರ್ಖಂಡ್‌ನಲ್ಲಿ 17,600 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಹಲವಾರು ರೈಲು ಯೋಜನೆಗಳಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಈ  ಯೋಜನೆಗಳು ಸೋನೆ ನಗರ-ಆಂಡಾಲ್ ಅನ್ನು ಸಂಪರ್ಕಿಸುವ 3ನೇ ಮತ್ತು 4ನೇ ಹಂತಗಳನ್ನು ಒಳಗೊಂಡಿವೆ; ತೋರಿ- ಶಿವಪುರ ಮೊದಲ ಮತ್ತು 2ನೇ ಮತ್ತು ಬಿರಟೋಲಿ- ಶಿವಪುರ 3ನೇ ರೈಲು ಮಾರ್ಗ (ತೋರಿ- ಶಿವಪುರ ಯೋಜನೆಯ ಭಾಗ), ಮೋಹನಪುರ - ಹಂಸ್ದಿಹಾ ಹೊಸ ರೈಲು ಮಾರ್ಗ, ಧನ್ಬಾದ್-ಚಂದ್ರಾಪುರ ರೈಲು ಮಾರ್ಗ ಇದರಲ್ಲಿ ಸೇರಿವೆ. ಈ ಯೋಜನೆಗಳು ರಾಜ್ಯದಲ್ಲಿ ರೈಲು ಸೇವೆಗಳನ್ನು ವಿಸ್ತರಿಸುತ್ತವೆ, ಈ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತವೆ. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು 3 ರೈಲುಗಳಿಗೆ ಹಸಿರುನಿಶಾನೆ ತೋರಿದರು. ಇದು ದಿಯೋಘರ್ - ದಿಬ್ರುಗಢ್ ರೈಲು ಸೇವೆ, ಟಾಟಾನಗರ ಮತ್ತು ಬಾದಂಪಹಾರ್ ನಡುವಿನ ಮೆಮು ರೈಲು ಸೇವೆ (ದೈನಂದಿನ) ಮತ್ತು ಶಿವಪುರ ನಿಲ್ದಾಣದಿಂದ ದೀರ್ಘಾವಧಿಯ ಸರಕು ಸಾಗಣೆ ರೈಲು ಸೇರಿದೆ.

ಉತ್ತರ ಕರಣಪುರ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ (STPP) ಘಟಕ 1 (660 MW) ಸೇರಿದಂತೆ ಜಾರ್ಖಂಡ್‌ನಲ್ಲಿನ ಪ್ರಮುಖ ವಿದ್ಯುತ್ ಯೋಜನೆಗಳನ್ನು ಪ್ರಧಾನ ಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಿದರು. 7500 ಕೋಟಿ ರೂ. ಗಿಂತ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಈ ಪ್ರದೇಶದಲ್ಲಿ ಸುಧಾರಿತ ವಿದ್ಯುತ್ ಪೂರೈಕೆಗೆ ಕಾರಣವಾಗುತ್ತದೆ. ಇದು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಮತ್ತು ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಪ್ರಧಾನಿ ಅವರು ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ಕ್ಷೇತ್ರದ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

 

***



(Release ID: 2010623) Visitor Counter : 58