ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಕಾಶಿಯ ಶಿವಪುರ-ಫುಲ್ವಾರಿಯಾ-ಲಹರ್ತಾರಾ ಮಾರ್ಗವನ್ನು ಪ್ರಧಾನಮಂತ್ರಿ ಪರಿಶೀಲಿಸಿದರು

Posted On: 23 FEB 2024 8:39AM by PIB Bengaluru

ಗುಜರಾತ್‌ನಲ್ಲಿ ತಮ್ಮ ಒಂದು  ದಿನದ ಬಿಡುವಿಲ್ಲದ ಪ್ರವಾಸದ‌ ನಂತರ ವಾರಣಾಸಿಗೆ ಆಗಮಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ 11 ಗಂಟೆಗೆ ಶಿವಪುರ-ಫುಲ್ವಾರಿಯಾ-ಲಹರ್ತಾರಾ ಮಾರ್ಗವನ್ನು ಪರಿಶೀಲಿಸಲು ತೆರಳಿದರು.

 ಇತ್ತೀಚೆಗೆ ಉದ್ಘಾಟಿಸಲಾಗಿರುವ ಈ ಮಾರ್ಗವು ವಿಮಾನ ನಿಲ್ದಾಣ, ಲಖನೌ, ಅಜಂಗಢ್ ಮತ್ತು ಘಾಜಿಪುರದ ಕಡೆಗೆ ಹೋಗಲು ಬಯಸುವ ದಕ್ಷಿಣ ಭಾಗ, BHU, BLW, ಇತ್ಯಾದಿಗಳ ಸುತ್ತಮುತ್ತ ವಾಸಿಸುವ ಸುಮಾರು 5 ಲಕ್ಷ ಜನರಿಗೆ ಅನುಕೂಲಕರವಾಗಲಿದೆ.

360 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಮಾರ್ಗವು ವಾರಾಣಸಿಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿದೆ. ಇದರಿಂದಾಗಿ BHU ನಿಂದ ವಿಮಾನ ನಿಲ್ದಾಣದ ನಡುವಿನ ಪ್ರಯಾಣದ ಸಮಯವನ್ನು 75 ನಿಮಿಷಗಳಿಂದ 45 ನಿಮಿಷಗಳಿಗೆ ಕಡಿಮೆ ಮಾಡಿದೆ. ಅದೇ ರೀತಿ ಲಹರ್ತಾರಾದಿಂದ ಕಚಹ್ರಿ ನಡುವಿನ‌ ಪ್ರಯಾಣದ ಸಮಯವನ್ನು 30 ನಿಮಿಷದಿಂದ 15 ನಿಮಿಷಗಳಿಗೆ ಇಳಿದಿದೆ.

ಈ ಯೋಜನೆಯು ವಾರಣಾಸಿಯ ನಾಗರಿಕರಿಗೆ ಜೀವನ ಸೌಕರ್ಯವನ್ನು ಹೆಚ್ಚಿಸಲು ರೈಲ್ವೆ ಮತ್ತು ರಕ್ಷಣಾ ಸೇರಿದಂತೆ ಅಂತರ-ಸಚಿವಾಲಯದ ಸಮನ್ವಯವನ್ನು ಕಂಡಿತು.

ಪ್ರಧಾನ ಮಂತ್ರಿ X ನಲ್ಲಿ ಪೋಸ್ಟ್ ಮಾಡಿದ್ದಾರೆ:

ಕಾಶಿಯಲ್ಲಿ ಇಳಿದ ನಂತರ ಶಿವಪುರ-ಫುಲ್ವಾರಿಯಾ-ಲಹರ್ತಾರಾ ಮಾರ್ಗವನ್ನು ಪರಿಶೀಲಿಸಿದರು. ಈ ಯೋಜನೆಯು ಇತ್ತೀಚೆಗೆ ಉದ್ಘಾಟನೆಗೊಂಡಿತು ಮತ್ತು ನಗರದ ದಕ್ಷಿಣ ಭಾಗದ ಜನರಿಗೆ ಹೆಚ್ಚು ಸಹಾಯಕವಾಗಿದೆ. pic.twitter.com/9W0YkaBdLX

***

 


(Release ID: 2008400) Visitor Counter : 72